Pages

ಅನುವಾದಿತ ಕವಿತೆ - ಕೋರಿಕೊಳ್ಳುವೆ ಪುನರ್ಜನ್ಮವನ್ನೇ

[ಹುತಾತ್ಮ ಅಶ್ಫಾಕುಲ್ಲಾ ಖಾನ್, ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಕವಿಯ ಕವನದ ಅನುವಾದ]
ಅಶ್ಫಾಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ 

ಹೋಗುತ್ತಿದ್ದೇನೆ ಬರಿಗೈಯೊಂದಿಗೆ
ಆದರೆ ನೋವಿನೊಂದಿಗೆ,
ಹಿಂದೂಸ್ತಾನವನೆಂದು
ಸ್ವತಂತ್ರ ದೇಶವೆಂದು  
ಕರೆಯಲಾಗುತ್ತದೆಂಬುದ ತಿಳಿಯದ  
ನೋವಿನೊಂದಿಗೆ ಹೋಗುತ್ತಿದ್ದೇನೆ

ಬಿಸ್ಮಿಲ್ ಹಿಂದೂ,
ಹೇಳುತ್ತಾನದರಿಂದ - 
ಬರುವೆ ಮರಳಿ, ಬರುವೆ ಮತ್ತೆ
ಬಂದು ಮರಳಿ ಭಾರತ ಮಾತೆ
ನಿನ್ನನ್ನು ಸ್ವತಂತ್ರಗೊಳಿಸುತ್ತೇನೆಂದು.

ಹೇಳಬೇಕೆನಿಸುತ್ತದೆ 
ನನಗೂ ಹಾಗೆಯೇ
ಆದರೆ ನಂಬಿಕೆಗೆ ಬದ್ಧ ನಾನು
ನಾನು ಮುಸಲ್ಮಾನ, 
ಆಡಲಾರೆ ಪುನರ್ಜನ್ಮದ ಮಾತನ್ನ

ಹಾ, ಒಂದು ವೇಳೆ 
ಸಿಕ್ಕರೆ ದೇವರು
ಅವನೆದುರು 
ನನ್ನ ಜೋಳಿಗೆಯೊಡ್ಡುವೆ
ಸ್ವರ್ಗದ ಬದಲಿಗೆ
ಕೋರಿಕೊಳ್ಳುವೆ
ಪುನರ್ಜನ್ಮವನ್ನೇ!!


(ಅನುವಾದ - ಸುಧಾ ಜಿ)

ಕಾಮೆಂಟ್‌ಗಳಿಲ್ಲ: