[ಮೀ ಟೂ ಚಳುವಳಿಯ ಬಗ್ಗೆ ಹಲವರ ಕವನಗಳು]
ಮೀ ಟೂ ಚಳುವಳಿ
ನನ್ನಂತರಂಗದಿ ಪುಟಿದೆದ್ದ ಮನಸೊಂದು
ಕೆದುಕಿತು ಹಿಂದಿನ ಕಹಿ ನೆನಪೂಂದನ
ಬರಿಸಲಾಗದೆ ಹುದಿಗಿತ್ತದು
ಸುಪ್ತ ಮನಸ್ಸಿನಾಳದಲ್ಲಿ
ಹೊರ ಹಾಕಲಾರದೆ
ನಲುಗಿತ್ತು ಪ್ರತಿನಿತ್ಯವೂ
ಏನೂ ತಿಳಿಯದ ಸಮಯದಲ್ಲಿ
ಎರಗಿತ್ತೂಂದು ಮೃಗವು ನನ್ನೆದೆಯ ಮೇಲೆ
ಕಸಿವಿಸಿಯಿಂದ, ಗಾಬರಿಯಿಂದ ಬಿಡಿಸಿಕೊಳ್ಳಲು
ಯತ್ನಿಸಿದರೂ ಆಗದೆ, ಬದುಕಲೂ ಆಗದೆ ಉಸಿರುಗಟ್ಟಿತ್ತು
ಯತ್ನಿಸಿದರೂ ಆಗದೆ, ಬದುಕಲೂ ಆಗದೆ ಉಸಿರುಗಟ್ಟಿತ್ತು
ವರುಷಗಳುರುಳಿದರೂ ಮಾಸದ ನೆನಪು
ಮತ್ತೆ ಮತ್ತೆ ಬಂದು ಕಾಡುತ್ತದೆ
ಕುಕ್ಕುತ್ತದೆ
ನಾ ಅಪರಾಧಿ ಎಂದು
ತಪ್ಪು ಮಾಡಿದವ ಏನೂ ಅರಿಯದಂತೆ
ನನ್ನ ಕಣ್ಣಮುಂದೆ ಹಾದುಹೋದಾಗ
ನನ್ನ ಕಣ್ಣಮುಂದೆ ಹಾದುಹೋದಾಗ
ಅಸಹಾಯಕತೆಯ ಕಣ್ಣೀರು ಹರಿಯಿತು
ಆದರೆ, ನಾನಿಂದು ಎದ್ದು ನಿಂತಿರುವೆ
ನನ್ನಂತಿರುವವರು ಎತ್ತಿದ ದನಿಯಿಂದ
ನನ್ನ ಮನದಾಳದ ತುಡಿತ ಹೊರಹಾಕಲು
ನಾ ಅಪರಾಧಿ ಅಲ್ಲ ಎಂದು
ನಾ ತಪ್ಪು ಎಸಗಿಲ್ಲವೆಂದು
ತಪ್ಪು ಮಾಡಿದಾತನಿಗೆ ಆಗಲಿ ಶಿಕ್ಷೆ ಎಂದು
ದನಿ ಎತ್ತಿರುವೆ
ದನಿ ಎತ್ತಿರುವೆ
- ಗಿರಿಜಾ ಕೆ ಎಸ್
#Me Too ಅಭಿಯಾನ
#Me Too ಎಂಬ ರಹಸ್ಯ ಗ್ರಂಥವು
ಸಾವಿರಾರು ನೋವಿನ ಕಥೆಗಳ ಸಂಕಲನ,
ಯಾವ ಪುಟದಲಿ ಯಾರ ಕಥೆಗಳು
ತಿಳಿಯುತಲಿದೆ ಈಗ ದಿನೇ ದಿನ,
ಮನದಲ್ಲೇ ಬಚ್ಚಿಟ್ಟ ಸತ್ಯ
ಎಳೆಎಳೆಯಾಗಿ ಬಿಚ್ಚಿಡುತ ಈ ದಿನ,
ಆದ ಅನ್ಯಾಯದ ವಿರುದ್ಧ ಸಿಡಿದೆದ್ದು
ನಿಂತಿಹರು ಬನ್ನಿ ಎಲ್ಲಾ ಒಟ್ಟುಗೂಡೋಣ,
ಧ್ವನಿಗೆ ಧ್ವನಿಗೂಡಿ ಹೋರಾಟದ ಕಾವೇರಿರಲು
ತಪ್ಮಾಡಿ ಮೆರದವರ ಎದೆಯಲ್ಲಿ ತಲ್ಲಣ,
ನೋವುಂಡ ಹೆಣ್ಮಕ್ಕಳ ಮೌನ ಮಾತಾಗಲು
ಬರಲೆಬೇಕಾಯಿತು ಈ #Me Too ಅಭಿಯಾನ....
- ಹರ್ಷಿತ.
ಒಂದು ಹೆಣ್ಣಿನ ವ್ಯಥೆ
ಮುಚ್ಚುಮರೆಯಿಲ್ಲದೆ
ಎಲ್ಲವನು ಬಿಚ್ಚಿಟ್ಟ ಮೇಲೆಯೂ
ನನ್ನ ಮೇಲೆಯೇ ಸಂದೇಹವೇಕೆ?
ಈ ಅನುಮಾನಗಳೇಕೆ?
ಹೃದಯ ಹಿಂಡುವಂತಹ
ನೋವುಗಳು ಮಿಥ್ಯವೇ?
ಅನುಭವಿಸಿದಂತಹ
ವೇದನೆ ಅಸತ್ಯವೇ?
ಮನಕೆ ಕೊಳ್ಳಿಯಿಟ್ಟಂತಹ
ಸಂಕಟಗಳು ಅಸಹಜವೇ?
ಪ್ರಶ್ನೆಗಳು ಮೂಡಿದ್ದಾದರೂ
ಹೇಗೆ? ಏಕೆ?
ಚಿಕ್ಕಂದಿನಲಿ ಓದಿದ
ಅಜ್ಜಿ ವೇಷ ಧರಿಸಿ ಬಂದ
ತೋಳದ ಕಥೆ ನೆನಪಿಲ್ಲವೇ?
ಪದೇಪದೇ ಕಿವಿಗೆ ಬಿದ್ದ
ಸನ್ಯಾಸಿಯ ವೇಷ ತೊಟ್ಟು ಬಂದ
ರಾವಣನ ಕತೆ ಮರೆತುಬಿಟ್ಟಿರೆ?
ಪತ್ರಿಕೆಗಳಲ್ಲಿ ದಿನವೂ ಓದಿದ
ತಂದೆ, ಅಣ್ಣನ ರೂಪ ಧರಿಸಿದ
ಗೋಮುಖವ್ಯಾಘ್ರರ ಕತೆ ಕೇಳಿಲ್ಲವೇ?
ಮುಖವಾಡ ಹೊತ್ತಂತವರ ಮುಂದೆ
ಮುಖವಾಡ ಕಳಚಿದವರ ನೋವು
ಕಾಣುವುದು ಕಡಿಮೆಯೇ?
ಈ ಕಾರಣಕ್ಕೆ ಇರಬಹುದು
ನಾವೆಲ್ಲರೂ ಮುಖವಾಡ ತೊಟ್ಟೇ
ಬದುಕುವುದು! !
ನೋವ ಹುದುಗಿಸಿ
ನಗುವ ಚೆಲ್ಲುತಾ
ಬದುಕಬಯಸುವುದು!!
- ಸುಧಾ ಜಿ
#ಮೀ ಟೂ
ದಿನದ ಬೆಳಗದು
ಮತ್ತೆ ಮೂಡಲು
ಮಬ್ಬು ಕವಿದಿದೆ ಅವಳಲೂ!
ಮನೆಯ ಮಂದಿಯ
ಬೇಕು,ಬೇಡ
ಗಿರಿಕಿ ಅವಳ ಸುತ್ತಲು!!
ಬಂಧಿಯಲ್ಲ
ಎನುವ ಮನಕೆ
ಕೊಡವಿ ನಿಲುವ ಹಂಬಲ
ಒಳಗೆ ,ಹೊರಗೆ
ದುಡಿತದಲ್ಲಿ
ಅವಳ ಸುತ್ತ ತಳಮಳ!!
ಮನದ ಕದವ ತೆರೆದ
#ಮೀ ಟೂ
ಅವಳ ಕತ್ತಲ ನೀಗಿತು
ಮನೆ-ಜಗತ್ತು ದುಡಿವ ಜೀವ
ಹೊಸದು ಬೆಳಕು ನೋಡಿತು
- ಸಂಧ್ಯಾ ಪಿ ಯಸ್
ಶುರುವಾಗಿದೆ
ಮೀ ಟೂ ಅಭಿಯಾನ....
ಮೀ ಟೂ ಅಭಿಯಾನ....
ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನೀಡಲು
ನ್ಯಾಯದ ದರುಶನ....
ನ್ಯಾಯದ ದರುಶನ....
ಎಷ್ಟೋ ಮಹಿಳೆಯರು ಹೇಳಲಾಗದೆ ಎದುರಿಸಿದ
ನೋವಿನ ಅವಮಾನ....
ನೋವಿನ ಅವಮಾನ....
ಮೀ ಟೂ ಇಂದ ತೀರಿತು
ನೊಂದ ಮಹಿಳೆ ಒಬ್ಬಂಟಿಯಾಗಿ ಹೋರಾಡುವ ದಿನ....
ಈಗ ನಾವು ನಿಮ್ಮ ಜೊತೆ ಇರುವೆವು ಎಂದು
ಹೇಳುತಿದೆ ಸಾಂತ್ವನ.....
ಇದರಿಂದ ಇನ್ನಷ್ಟು ಗಟ್ಟಿಗೂಂಡಿದೆ
ನೊಂದ ಮಹಿಳೆಯರ ಮನ.....
ನೊಂದ ಮಹಿಳೆಯರ ಮನ.....
ನ್ಯಾಯದ ಪರವಾಗಿ ಒಗ್ಗೂಡಿ
ಕೈ ಜೋಡಿಸುತ್ತಿರುವ ಮಹಿಳೆಯರ ಸಂಖ್ಯೆ
ಶರವೇಗದಲ್ಲೇರುತ್ತಿದೆ ದಿನೇ ದಿನಾ.....
ಕೈ ಜೋಡಿಸುತ್ತಿರುವ ಮಹಿಳೆಯರ ಸಂಖ್ಯೆ
ಶರವೇಗದಲ್ಲೇರುತ್ತಿದೆ ದಿನೇ ದಿನಾ.....
ಇದಕ್ಕೆ ಬೆಂಬಲಿಸಿ ಮಾನವೀಯ ದೃಷ್ಟಿಯಿಂದ ಪುರುಷರು ಮಾಡಿದರೆ ಅನುರಣನ.....
ನಡೆಯುತ್ತಿರುವ ಅತ್ಯಾಚಾರಗಳು ಆದಷ್ಟು
ಕ್ಷೀಣಿಸುವುದು ಕ್ರಮೇಣ......
ಕ್ಷೀಣಿಸುವುದು ಕ್ರಮೇಣ......
- ಮೇನಕಾ ಎಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ