Pages

ಕಡಲಿಂದೊಂದು ಮುತ್ತು - ತಿಂಗಳುಗಳಿಗೆ ಹೆಸರು ಬಂದದ್ದು ಹೇಗೆ



ಜನವರಿ -  ಮೊದಲ ತಿಂಗಳು. ರೋಮನ್ ದೇವ ‘ಜನಸ್’ನ ಹೆಸರು.
ಫೆಬ್ರವರಿ – ರೋಮನ್ ಹಬ್ಬ ‘ಫೆಬ್ರವಾ’
ಮಾರ್ಚ್ – ‘ಮಾರ್ಸ್’, ರೋಮನ್ನರ ಯುದ್ಧ ದೇವ
ಏಪ್ರಿಲ್ - ಲ್ಯಾಟಿನ್ ಪದ ‘ಎಪಿರರ್’ ಎಂದರೆ ತೆರೆಯುವುದು ಎಂದರ್ಥ. ವಸಂತಕಾಲ ಈ ತಿಂಗಳಲ್ಲಿ ಬರುತ್ತದೆ ಮತ್ತು ಗಿಡಮರಗಳು ಅರಳುತ್ತವೆ. 
ಮೇ – ರೋಮನ್ ದೇವತೆ ‘ಮೈಮಾ’ ಹೆಸರು.
ಜೂನ್ – ‘ಜುನೋ’ - ಸ್ವರ್ಗದ ದೇವತೆ
ಜುಲೈ – ‘ಜೂಲಿಯಸ್ ಸೀಸರ್’ ಹುಟ್ಟಿದ್ದು ಈ ತಿಂಗಳಲ್ಲಿ. ಆಧುನಿಕ ಕ್ಯಾಲೆಂಡರ್‍ನ ಬೆಳವಣಿಗೆಯಲ್ಲಿ ಈತನ ಕೊಡುಗೆ ದೊಡ್ಡದು.
ಆಗಸ್ಟ್ – ರೋಮ್‍ನ ರಾಜ ‘ಅಗಸ್ಟಸ್’ ಈ ತಿಂಗಳಲ್ಲಿ ಬಹಳ ವಿಜಯಗಳನ್ನು ಸಾಧಿಸಿದ.
ಸೆಪ್ಟೆಂಬರ್ - ಲ್ಯಾಟಿನ ಪದ ‘ಸೆಪ್ಟಂ’ ಎಂದರೆ ಏಳು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಏಳನೇ ತಿಂಗಳಾಗಿತ್ತು.
ಅಕ್ಟೋಬರ್- ರೋಮನ್ ಪದ ‘ಅಕ್ಟೋ’ ಎಂದರೆ ಎಂಟು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಎಂಟನೇ ತಿಂಗಳಾಗಿತ್ತು.
ನವೆಂಬರ್- ಲ್ಯಾಟಿನ ಪದ ‘ನವೆಂ’ ಎಂದರೆ ಒಂಬತ್ತು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಒಂಬತ್ತನೇ ತಿಂಗಳಾಗಿತ್ತು.
ಡಿಸೆಂಬರ್ - ಲ್ಯಾಟಿನ ಪದ ‘ಡಿಸೆಂ’ ಎಂದರೆ ಹತ್ತು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಹತ್ತನೇ ತಿಂಗಳಾಗಿತ್ತು.
- ಸುಧಾ ಜಿ
ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ  

ಕಾಮೆಂಟ್‌ಗಳಿಲ್ಲ: