Pages

ಕವನ - ಬದುಕಬೇಕಿದೆ ನನ್ನ ನಾಳಿನ ಕನಸುಗಳಿಗಾಗಿ



ನಿಮ್ಮ ಮೊನಚಾದ ಮಾತುಗಳಿಂದ 
ನನ್ನ ಕಾಡಬಹುದು
ನಿಮ್ಮ ತಿರುಚಿದ ಆಪಾದನೆಗಳಿಂದ 
ನನ್ನ ತಿವಿಯಬಹುದು
ನಿಮ್ಮ ಕೊಂಕು ಮಾತುಗಳಿಂದ
ನನ್ನ ಚುಚ್ಚಬಹುದು
ನಿಮ್ಮ ತಿರಸ್ಕಾರಭರಿತ ಹೇಳನಗಳಿಂದ
ನನ್ನ ರೆಕ್ಕೆಗಳ ಮುರಿಯಲೆತ್ನಿಸಬಹುದು  
ನಿಮ್ಮ ನಿರುತ್ಸಾಹದ ಮಾತುಗಳಿಂದ
ನನ್ನ ಉತ್ಸಾಹವ ಕೊಲ್ಲಲೆತ್ನಿಸಬಹುದು
ನಾ ಬಿದ್ದರೆ ನಗಬಹುದು
ಅತ್ತರೆ ಸಂತಸ ಪಡಬಹುದು
ನನ್ನ ಭಾವನೆಗಳ ಹೊಸಕುವ 
ಪ್ರಯತ್ನ ನಡೆಸಬಹುದು

ಆದರೂ
ನನಗೆ ಬದುಕುವಾಸೆಯಿದೆ
ನನಗಾಗಿ, ನನ್ನವರಿಗಾಗಿ
ನಾ ನಂಬಿದ ಪ್ರೀತಿಗಾಗಿ
ಬಿದ್ದಾಗ ಮೇಲೆತ್ತಿದವರಿಗಾಗಿ
ನೊಂದಾಗ ಸಂತ್ಯೆಸಿದವರಿಗಾಗಿ
ಪ್ರೀತಿಯ ಒಂದೆರಡು ಹನಿ ನೀಡಿದವರಿಗಾಗಿ
ನನ್ನ ನಾ ಕಂಡುಕೊಳ್ಳಲು 
ನೆರವಾದವರಿಗಾಗಿ
ನಾ ಬದುಕಬೇಕಿದೆ ಇಂದು
ನನ್ನ ನಾಳಿನ ಕನಸುಗಳಿಗಾಗಿ

- ಗಿರಿಜಾ ಕೆ ಎಸ್

1 ಕಾಮೆಂಟ್‌:

RAJIV N. MAGAL ಹೇಳಿದರು...

ಅರ್ಥವತ್ತಾದ ಕವನ...ಪ್ರಾಸದಿ೦ದ ಕೂಡಿದ ಕವನ.....ಜೀವನಕ್ಕೆ ಸ೦ದೇಶ ನೀದಿದ ಕವನ!ಶುಭವಾಗಲಿ!