Pages

ಕವನ: "ಪ್ರಕೃತಿಯೇ, ನೀನೂ ನನ್ನಂತೆ ಪೆಣ್ಣಲ್ತೆ!?"



ಮೋಹ ಕಾಮದ 
ಕಿಚ್ ನಮ್ಮೊಳತ್ತಿಸಿ,
ನಮಗೆ ಪ್ರೀತಿ ಪ್ರೇಮದ
ದಾಹವಿತ್ತಿ, ಕೌತುಕದ 
ಶೋಧಕ್ಕಿಕ್ಕಿದೆ!

ನಮ್ಮಿಬ್ತನುಗಳು ಸೇರಿ
ಸಂಧಿಸಿ ಸಂಮೋಹಿಸಲು,
ಯಾರೇ ಈಡುಮಾಡಿದರೂ 
ಕುರುಹುಳಿವುದು - ನಾ ಮಾತ್ರ
ಕೌಮಾರ್ಯ ಕಳೆದುಕೊಂಬಂತೆ!

ಮೂರ್ಲೋಕದೊಳೂ ಕೇಳ್ದೆ
 ಯಾವ ನ್ಯಾಯವಿದು?
ಲೋಕಗಳ್ ಕಳುಹಿದವು
ಇಗೋ ನಿನ್ನೆಡೆಗೆ -
ನೀನವರ ತಾಯನ್ತೆ!

ಇದೆಲ್ಲಿಯ ನ್ಯಾಯವೋ
ಅರಿಯದೀ ಪೆಣ್ತಲೆ.
ಪೇಳ್ ಪ್ರಕೃತಿಯೇ,
ನೀನೂ ನನ್ನಂತೆ
ಪೆಣ್ಣಲ್ತೆ!?

- ಎ ಎನ್ ಮಂಜುನಾಥ್