Pages

ಕಥೆ: "ನಿರ್ಧಾರ"

 ಹಾಲ್ ನಲ್ಲಿ ಟಿವಿ ನೋಡುತ್ತ ಕುಳಿತಿದ್ದ ಪವಿತ್ರ ಭಾವಿ ಪತಿ ಗಿರೀಶ್ ಬಂದದ್ದನ್ನು ಕಂಡು "ಬನ್ನಿ, ಬನ್ನಿ" ಎಂದು ಒಳಗೆ ಕರೆದು, "ಅಮ್ಮಾ ಗಿರೀಶ್ ಬಂದಿದ್ದಾರೆ" ಎಂದು ಕೂಗಿಕೊಂಡಳು. ಹೊರಗೆ ಬಂದ ಮೀನಾಕ್ಷಿ "ಬಾಪ್ಪ, ಚೆನ್ನಾಗಿದ್ದೀಯ? ಕುಳಿತುಕೊ, ಜ್ಯೂಸ್ ತರುತ್ತೇನೆ" ಎಂದು ಒಳ ನಡೆದರು. ಗಿರೀಶ್ ಪವಿತ್ರಳಿಗೆ "ನಾನು ನಿಮ್ಮ ಜೊತೆ ಮಾತನಾಡಬೇಕು" ಎಂದ. "ಏನು ಗಿರೀಶ್ ಏನು ವಿಷಯ? ಹೇಳಿ" ಎಂದಳು. "ನನಗೆ ಹೇಗೆ ಹೇಳಬೇಕು ಅಂತ ಗೊತ್ತಾಗ್ತಾಯಿಲ್ಲ" ಎಂದು ತಡವರಿಸಿದಾಗ ಪವಿತ್ರ "ಪರವಾಗಿಲ್ಲ ಹೇಳಿ" ಎಂದಳು. "ತಪ್ಪು ತಿಳಿಯಬೇಡಿ. ನನಗೆ ಈ ಮದುವೆ ಇಷ್ಟವಿಲ್ಲ" ಎಂದ. ಕೇಳಿದ ಪವಿತ್ರ ಶಾಕ್ ಆಗಿ ಕುಳಿತಳು. ಸಾವರಿಸಿಕೊಂಡು "ಏಕೆ? ಏನಾಯಿತು?" ಎಂದು ಕೇಳಿದಳು. ಗಿರೀಶ್ ತನ್ನ ಪ್ರೀತಿಯ ವಿಷಯವನ್ನು ಹೇಳುತ್ತಿದ್ದಾಗ ಜ್ಯೂಸ್ ತಂದ ಮೀನಾಕ್ಷಿಯವರು ಕೇಳಿಸಿಕೊಂಡು, "ಏನಪ್ಪ ಮದುವೆಯೆಂದರೆ ಹುಡುಗರಾಟನಾ? ನಿಶ್ಚಿತಾರ್ಥವಾಗುವಾಗ ಸುಮ್ಮನಿದ್ದು ಈವಾಗ ಹೇಳುತ್ತಿರುವೆಯಲ್ಲ" ಎಂದು ಕೋಪದಿಂದ ಕೇಳಿದರು. "ಹೇಳಬೇಕು ಅಂತಾನೆಯಿದ್ದೆ, ಆದರೆ ಅಪ್ಪ,ಅಮ್ಮ ತಾವಿಬ್ಬರು ಸಾಯುತ್ತೇವೆಂದು ನನ್ನ ಬಾಯಿಮುಚ್ಚಿಸಿದರು. ಆದರೂ ಮನಸ್ಸಿಗೆ ವಿರುದ್ಧವಾಗಿ ನಡೆಯಲು ಸಾಧ್ಯವಾಗಲಿಲ್ಲ, ನಮ್ಮೆಲ್ಲರ ಬದುಕು ಹಾಳಾಗುತ್ತದೆಂದು ನನಗೆ ಈಗ ಬಲವಾಗಿ ಅನಿಸುತ್ತಿದೆ. ಹಾಗಾಗಿ ಈಗ ಹೇಳುತ್ತಿದ್ದೇನೆ. ನನ್ನನ್ನ ಕ್ಷಮಿಸಿ" ಎಂದು ತಲೆತಗ್ಗಿಸಿದ. "ನಿನ್ನನ್ನು ಅಂದು ಪ್ರಯೋಜನವೇನು? ನಿನ್ನ ಅಪ್ಪ ಅಮ್ಮನನ್ನ ಕರೆಯಿಸಿ ಮಾತನಾಡಬೇಕು" ಎನ್ನುತ್ತಾ ಪತಿಗೆ ಫೋನು ಮಾಡಿದರು. ನಂತರ ಬೀಗರಿಗೂ ಫೋನ್ ಮಾಡಿ "ಏನು,ಬೀಗರೆ ಮದುವೆಯೆಂದರೆ ತಮಾಷೆನಾ? ಇನ್ನೊಂದು ವಾರವಿರಬೇಕಾದರೆ ಈಗ ನಿಮ್ಮಗ ಬಂದು ಮದುವೆಯಾಗಲ್ಲ ಎಂದರೆ ಹೇಗೆ? ನಿಮ್ಮ ಮಗ ನಮ್ಮನೆಯಲ್ಲೆ ಇದ್ದಾನೆ. ಮನೆಗೆ ಬನ್ನಿ ಮಾತಾಡೋಣ" ಎಂದು ಫೋನ್ ಇಟ್ಟರು. ಮನೆಗೆ ಬಂದವರೆ ಮೂರ್ತಿಗಳು ಗಿರೀಶನನ್ನು ಹೀಗೇಕೆ ಮಾಡಿದನೆಂದು ಕೋಪದಿಂದ ಕೇಳುತ್ತಿರುವಾಗಲೆ ಗಿರೀಶನ ಅಪ್ಪ,ಅಮ್ಮ ಬಂದರು. ಎಲ್ಲರೂ ಜೋರು ದನಿಯಲ್ಲಿ ಕೂಗಾಡುತ್ತಿರುವಾಗಲೆ ಅಲ್ಲಿಗೆ ಬಂದ ಪವಿತ್ರ "ದಯವಿಟ್ಟು ಒಂದು ನಿಮಿಷ ಎಲ್ಲರೂ ಮಾತು ನಿಲ್ಲಿಸಿ, ನನ್ನ ಮಾತನ್ನು ಕೇಳಿ" ಎಂದಳು. ಮೌನವಾದರು ಎಲ್ಲರು. "ಗಿರೀಶ್ ಗೆ ನಾನು ಧನ್ಯವಾದಗಳನ್ನು ತಿಳಿಸಲಿಚ್ಛಿಸುತ್ತೇನೆ. ಏಕೆಂದರೆ, ನನಗೆ ಮೊದಲೇ ವಿಷಯ ತಿಳಿಸಿ ಒಳ್ಳೆಯದನ್ನೆ ಮಾಡಿದ್ದಾರೆ. ಒಂದು ವೇಳೆ ಮದುವೆಯಾದ ಮೇಲೆ ತಿಳಿಸಿದ್ದರೆ ನನ್ನ ಬದುಕು ಹಾಳಾಗುತ್ತಿತ್ತು. ಅಪ್ಪ ಅಮ್ಮನಿಗೆ ಶಾಶ್ವತ ನೋವು ಕಾಡುತ್ತಿರುತ್ತಿತ್ತು. ನನ್ನ ಬದುಕೇನೂ ಇಲ್ಲಿಗೆ ನಿಂತುಹೋಗುವುದಿಲ್ಲ. ಪ್ರೀತಿಯಿಲ್ಲದ ಸಂಬಂಧದಿಂದ ಎಲ್ಲರಿಗೂ ನೋವಷ್ಟೇ ಉಳಿಯುವುದು. ಗಿರೀಶ್ ನೀವೇಕೆ ಇದೇ ಮುಹೂರ್ತದಲ್ಲಿ ನಿಮ್ಮ ಹುಡುಗಿಯನ್ನು ಮದುವೆಯಾಗಬಾರದು. ನಾನೂ ಬರುತ್ತೇನೆ. ಆಗ ನಿಮಗೆ ಎಲ್ಲರಿಗೂ ಉತ್ತರ ಹೇಳುವ ತಲೆನೋವೂ ಸಹ ಇರುವುದಿಲ್ಲ." ಎಲ್ಲರೂ ಸ್ಥಂಭಿಭೂತರಾದರು. ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರವಾಗುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ. "ಆದರೆ ಗಿರೀಶ್ ನನ್ನದೊಂದು ಶರತ್ತಿದೆ" ಎಂದಳು. ಪ್ರಶ್ನಾರ್ಥಕವಾಗಿ ನೋಡಿದ ಅವನಿಗೆ "ನಮ್ಮ ತಂದೆ ಖರ್ಚು ಮಾಡಿರುವ ಅಷ್ಟೂ ಹಣವನ್ನು ಹಿಂತಿರುಗಿಸಬೇಕಷ್ಟೇ" ಎಂದಳು. ಬೆಟ್ಟದಂತೆ ಕಾಣಿಸಿದ ಸಮಸ್ಯೆ ಮಂಜಿನಂತೆ ಕರಗಿದ್ದು ಕಂಡು ಗಿರೀಶ ಖುಷಿಯಿಂದ ತಲೆಯಾಡಿಸಿ, ಪವಿತ್ರಳಿಗೆ ಎರಡೂ ಕೈಜೋಡಿಸಿ ನಮಸ್ಕರಿಸಿದ!!

 - ವಿಜಯಲಕ್ಷ್ಮಿ ಎಂ ಎಸ್

ಪುಸ್ತಕ ಪ್ರೀತಿ: "ತ್ರಿವೇಣಿಯವರ ಮೂರು ಕಾದಂಬರಿಗಳು"



ವಸಂತಗಾನ 

ಸರಳ ಮತ್ತು ವಾಸು ಮದುವೆಯಾದ ನಾಲ್ಕು ವರ್ಷಗಳ ನಂತರ ಪ್ರವಾಸಕ್ಕೆ ಹೊರಟಿದ್ದರು. ಯಾವಾಗಲೂ ತಿನ್ನುತ್ತಲೆ ಇರುವ ಮಡದಿಯನ್ನು ಕೀಟಲೆ ಮಾಡುತ್ತಿದ್ದ ವಾಸು. ಗಂಡನಿಗೆ ಸರಿಯಾದ ಉತ್ತರವನ್ನ ನೀಡುತ್ತಿದ್ದಳು ಸರಳಾ. ಊರಿಂದ ಬಂದ ಅಮ್ಮನಿಗೆ ವಾಸು "ಸರಳಾ ಗರ್ಭಿಣಿಯಾಗಿದ್ದಾಳೆ, ನಮ್ಮ ಪ್ರವಾಸ ರದ್ದಾಯಿತು" ಎಂದು ತಿಳಿಸಿದ. ವಿಷಯ ತಿಳಿದ ರಂಗಮ್ಮ ಸಂತಸದಿಂದ ಸೊಸೆಗೆ ಊಟಉಪಚಾರಗಳನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಅತ್ತೆಯ ಉಪಚಾರದಿಂದ ಗುಂಡು ಗುಂಡಾದ ಮಡದಿಗೆ ಹೆಣ್ಣಾದರೆ ಪೂತನಿ, ಗಂಡಾದರೆ ಬಕಾಸುರನೆಂದು ಹೆಸರಿಡಬಹುದು ಎಂದು ಕೀಟಲೆ ಮಾಡುತ್ತಿದ್ದನು. ಡಾಕ್ಟರ್ ಕೊಟ್ಟ ಅವಧಿ ಮುಗಿದರೂ ಹೆರಿಗೆ ನೋವು ಬರಲಿಲ್ಲ. ಅತ್ತೆ ಊಟಕ್ಕೆ ಕರೆದಾಗ "ಊಟ ಮಾಡುವುದಿಲ್ಲ ಅತ್ತೆ, ನಿಮ್ಮ ಮೊಮ್ಮಗನಿಗೆ ಉಪವಾಸ ಹಾಕುತ್ತೀನಿ. ಆಗ ಆಚೆ ಬರುತ್ತಾನೆ, ಹೊರಗೆ ಬರಲಿ ಅವನು, ಚೆನ್ನಾಗಿ ಕಿರುಗುಟ್ಟಿಸ್ತೀನಿ" ಎನ್ನುತ್ತಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿತು. ಗಂಡುಮಗುವಿಗೆ ಜನ್ನವಿತ್ತಳು ಸರಳಾ. ಮಗು ಅಳಲು ಮಡದಿಗೆ "ಈಗ ಹಾಲು ಕೊಡಬೇಡ ನೆನ್ನೆ ಹೇಳಿದೆ ಅಲ್ವಾ? ಅದಕ್ಕೆ ಜ್ಞಾಪಿಸಿದೆ" ಎಂದನು. ಅದಕ್ಕೆ ಸರಳಾ "ಹಾಲುಕಂದನಿಗೆ ಹಾಗೆಲ್ಲಾ ಹಿಂಸೆ ಕೊಡಕ್ಕೆಆಗುತ್ತೇನ್ರಿ?" ಎಂದು ಗಂಡನನ್ನು ಸುಮ್ಮನಿರಿಸಿದಳು. 

 ಮೊದಲ ಹೆಜ್ಜೆ 

"ಮಗು ಅಳ್ತಾಯಿದೆ, ಎತ್ಕೋಬಾರದಾ, ಶ್ಯಾಮಲ?" ಎಂದು ಸಿಸ್ಟರ್ ಹೇಳಿದಾಗ ಎಚ್ಚರಗೊಂಡಳು. "ನಿನ್ನ ಗಂಡ ಮಗುವನ್ನು ನೋಡಲು ಇನ್ನು ಏಕೆ ಬಂದಿಲ" ಲ ಎಂದಾಗ ಅವಳ ಮನಸ್ಸು ಹಿಂದಕ್ಕೆ ಓಡಿತು. ನೋಡಲು ತಾನು ಕಪ್ಪಾಗಿದ್ದು, ಸುಂದರವಾಗಿದ್ದ ತಂಗಿಗೆ ಮೊದಲು ಮದುವೆಯಾಗಿ ಅವಳ ಬಾಣಂತನಕ್ಕೆ ಬಂದಾಗ ಎದುರು ಮನೆಯ ಶಿವಸ್ವಾಮಿಯ ಬಣ್ಣದ ಮಾತಿಗೆ ಮರುಳಾಗಿ ಅವನಿಂದ ತಾನು ಗರ್ಭಿಣಿಯಾಗಿದ್ದೆನೆಂದು ತಿಳಿದಾಗ ಅವನು ಮನೆ ಖಾಲಿ ಮಾಡಿ ಹೋಗಿದ್ದು ಎಲ್ಲವು ನೆನಪಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಸಿಸ್ಟರ್ ಅವಳಿಗೆ " ನೋಡು ತಪ್ಪು ನಿನ್ನದು, ಮಗುವಿನದಲ್ಲ. ಅದನ್ನು ಸರಿಯಾಗಿ ಬೆಳೆಸು" ಎಂದು ಹೇಳಿದಳು. ಮಾರನೆ ದಿನಪತ್ರಿಕೆಯಲ್ಲಿ ಶಿಶುಹತ್ಯೆ ಸುದ್ದಿ ಬಂದಿತ್ತು. ಮಗುವನ್ನು ಕೊಂದ ಶ್ಯಾಮಲಳನ್ನು ಪೋಲೀಸರು ಬಂಧಿಸಿ ವಿಚಾರಿಸಿದಾಗ ಅವಳು "ಮಗುವಿಗೆ ನನ್ನಿಂದ ಏನು ಕೊಡಲು ಸಾಧ್ಯ? ಬೆಚ್ಚನೆಯ ಮನೆಯೆ? ವಿದ್ಯಾಭ್ಯಾಸವೆ? ಹೊಟ್ಟೆ ತುಂಬ ಅನ್ನವೆ? ನಾನೆ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದೆ ನನ್ನ ಮಗಳು ನನ್ನಂತೆ ಆಗಬಾರದೆಂದು ಕೊಂದೆ" ಎಂದು ಉತ್ತರಿಸಿದಳು. ಜೈಲಿನಲ್ಲಿದ್ದಾಗ ತನ್ನನ್ನು ನೋಡಲು ಬಂದ ಅಪ್ಪನನ್ನು ಭೇಟಿಯಾಗಲು ನಿರಾಕರಿಸಿದಳು. ಕಾರಣ ಅವರು ತನ್ನಲ್ಲಿ ಇಟ್ಟಿದ್ದ ನಂಬಿಕೆಯನ್ನು ತಾನು ಚೂರು ಮಾಡಿದ್ದೆ ಎಂದು. ಬಿಡುಗಡೆಯ ದಿನದಂದು ಸಾಹೇಬರ ರೂಮಿನ ಮುಂದೆ ಬಂದು ನಿಂತಾಗ ಯಾರೋ "ನನ್ನ ಹೆಸರು ಶಿವಸ್ವಾಮಿ, ನಾನು ಹತ್ತು ವರ್ಷದ ಹುಡುಗಿಯನ್ನ ಅತ್ಯಾಚಾರ ಮಾಡಲು ಹೋದಾಗ ಹುಡುಗಿಗೆ ಆಘಾತದಿಂದ ಪ್ರಾಣ ಹೋಯಿತು" ಎಂದಿದ್ದು ಇವಳ ಕಿವಿಗೆ ತಲುಪಿತು. ಶ್ಯಾಮಲಳನ್ನು ಕಂಡ ಸಾಹೇಬರು ಬಿಡುಗಡೆಯಾದ ನಂತರ "ನೀನು ತಂದೆ ಮನೆಗೆ ಹೋಗುವೆಯ?" ಕೇಳಿದರು. ಅದಕ್ಕೆ ಅವಳು "ಇಲ್ಲ ಸರ್ ನಾನು ಅವರ ವಂಶಕ್ಕೆ ಮಸಿ ಬಳಿದಿದ್ದೇನೆ " ಎಂದು ಅವರು ತಿಳಿದುಕೊಂಡಿದ್ದಾರೆ. ಆದ್ದರಿಂದ ನಾನು ಅಲ್ಲಿಗೆ ಹೋಗುವುದಿಲ್ಲ" ಎಂದು ಹೇಳಿ ಹೊರಬಂದಾಗ ಜೋರಾದ ಮಳೆ ಬರುತ್ತಿತ್ತು. "ಶ್ಯಾಮಲ" ಎಂದು ಕರೆದಾಗ ಬೆಚ್ಚಿದ ಅವಳನ್ನು "ಯಾಕಮ್ಮ ನನ್ನ ಗುರುತು ಸಿಗಲಿಲ್ಲವೆ ? ನಾನು ನಿನ್ನ ತಂದೆ" ಎಂದರು. "ಅಪ್ಪ ಎಷ್ಟು ವಯಸ್ಸಾದವರ ಹಾಗೆ ಕಾಣುತ್ತೀರ?" ಎಂದಾಗ "ಹೌದಮ್ಮ ಮುದುಕ ಆಗ್ಬೀಟ್ಟಿದ್ದೀನಿ. ನಡೆಯಮ್ಮ ಹೋಗೋಣ" ಎಂದಾಗ "ಎಲ್ಲಿಗಪ್ಪ?" ಎಂದು ಕೇಳಿದಳು. "ನಮ್ಮ ಮನೆಗೆ ತಾಯಿ" ಉತ್ತರಿಸಿದರವರು. 

ಕಾಶಿಯಾತ್ರೆ 

10ನೇ ವಯಸ್ಸಿಗೆ ಮದುವೆಯಾಗಿ 13ನೆ ವಯಸ್ಸಿಗೆ ವಿಧವೆಯಾದ ಪಾತಮ್ಮ ದಿನವೂ ಕಪಿಲ ನದಿಯಲ್ಲಿ ಸ್ನಾನಮಾಡಿ ದೇವರ ದರ್ಶನ ಮಾಡುತಿದ್ದರು. ಕಾಶಿಗೆ ಹೋಗಿ ಗಂಗೇಲಿ ಸ್ನಾನಮಾಡಿ ಮುಕ್ತಿ ಹೊಂದಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು. ಪರೋಪಕಾರಿಯಾಗಿದ್ದ ಪಾತಮ್ಮ ಎಲ್ಲರಿಗೂ ತಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಡುತಿದ್ದರು. ತಾವೆ ಸಾಕಿ ಬೆಳೆಸಿದ್ದ ಶ್ಯಾಮಲಳು ಹೆರಿಗೆಗೆಂದು ಬಂದಿದ್ದಳು. ಪಾತಮ್ಮನೊಂದಿಗೆ ಅಜ್ಜಿ "ನಾನು ಸತ್ತರೆ ನನ್ನ ಮಗಳನ್ನು ನೀವೆ ಸಾಕಬೇಕೆಂದು" ಆಣೆ ಮಾಡಿಸಿಕೊಂಡಳು. ಹೆರಿಗೆಯಾದ ನಂತರ ಶ್ಯಾಮಲ ತೀರಿಹೋದಳು. ಪಾತಮ್ಮ ಮಗುವಿಗೆ ಮಂಗಳ ಎಂದು ಹೆಸರಿಟ್ಟಳು. ಮಂಗಳ ತಾತನ ಹತ್ತಿರ ಹೋಗದೆ ಸದಾ ಇವರ ಬಳಿಯೆ ಇರುತ್ತಿದ್ದಳು. ಮುದ್ದಾಗಿದ್ದ ಮಂಗಳ ಮದುವೆಯ ವಯಸ್ಸಿಗೆ ಬಂದಾಗ ಊರಿನ ವೈದ್ಯನಾದ ನರಹರಿಯು ಅವಳನ್ನು ಮೆಚ್ಚಿದನು. ಆದರೆ ನರಹರಿಯ ತಂದೆ "ನಿನ್ನ ಕ್ಲಿನಿಕ್ಕಿಗಾಗಿ ಮಾಡಿರುವ 2000ರೂಗಳನ್ನು ಅವರ ಹತ್ತಿರ ತೆಗೆದುಕೊ, ನಂತರ ಮದುವೆ" ಎಂದರು. ಇದನ್ನು ನರಹರಿಯು ಮಂಗಳಾಳಿಗೆ ಹೇಳಿದನು. ಮಂಗಳ ತಾತನ ಹತ್ತಿರ ಹೇಳಿದಳು. ಆದರೆ ಅವರಿಗೆ ಹಣವನ್ನು ಹೊಂದಿಸಲಾಗಲಿಲ್ಲ. ಇದನ್ನು ರಾಮಣ್ಣ ಪಾತಮ್ಮನಿಗೆ ಹೇಳಿದಾಗ ಆಕೆ ಮನೆಗೆ ಹೋಗಿ 2000ರೂಗಳನ್ನು ಕೊಟ್ಟು "ಮದುವೆಯನ್ನು ಮಾಡು" ಎಂದರು. ಆಗ ಮಂಗಳ "ಅಜ್ಜಿ ನೀನು ಬೇರೆಯವರ ಕೆಲಸ ಮಾಡಿ ಕಾಶಿಯಾತ್ರೆಗೆಂದು ಕೂಡಿಟ್ಟುಕೊಂಡ ಹಣ. ನನಗೆ ಬೇಡ ನಿನ್ನ ಆಸೆಯಂತೆ ಯಾತ್ರೆಗೆ ಹೋಗು" ಎಂದಳು. ಆಗ ಪಾತಮ್ಮ "ಕನ್ಯಾದಾನದ ಪುಣ್ಯ, ಕಾಶಿಯಾತ್ರೆಯ ಪುಣ್ಯಕ್ಕಿಂತ ದೊಡ್ಡದು" ಎಂದು ಅವಳನ್ನು ಸಮಾಧಾನಿಸಿ, ಹಣವನ್ನು ನೀಡಿದರು 

ತ್ರಿವೇಣಿಯವರ ಬರಹವು ಸರಳವಾಗಿದ್ದು ವಾಸ್ತವಿಕ ಜೀವನದ ಕೈಗನ್ನಡಿಯಂತಿರುತ್ತದೆ. ಅವರ ಒಂದೊಂದು ಕತೆಗಳಲ್ಲೂ ಬರುವ ವಸ್ತುವಿಷಯಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆದಿರುವಂತಹ , ನೋಡಿರುವಂತಹ ಘಟನೆಗಳೇ ಆಗಿರುತ್ತವೆ. "ಮೊದಲ ಹೆಜ್ಜೆ" ಕತೆಯಲ್ಲಿ, ಅವರು "ಒಬ್ಬ ಹೆಣ್ಣುಮಗಳು ಬಡಕುಟುಂಬದಲ್ಲಿ ಜನಿಸಿ , ಹೇಗೆ ಒಬ್ಬ ಗಂಡಿನ ಬಣ್ಣದ ಮಾತಿಗೆ ಮರುಳಾಗಿ ತನ್ನ ಜೀವನವನ್ನೇ ಹಾಳುಮಾಡಿಕೊಂಡಳು ಎಂಬುದನ್ನು ಮನಮುಟ್ಟುವಂತೆ ಹೇಳಿದ್ದಾರೆ. 

"ವಸಂತಗಾನ" ದಲ್ಲಿ ಅವರು ಗಂಡಹೆಂಡತಿಯ ನಡುವೆ ನಡೆಯುವ ಸರಸವಿರಸಗಳನ್ನು , ಹೆಣ್ಣು ತಾಯಿಯಾದಾಗ, ಅವಳಲ್ಲಾಗುವ ಬದಲಾವಣೆಗಳನ್ನು ಓದುಗರಿಗೆ ತಿಳಿಸುತ್ತಾರೆ. "ಕಾಶೀಯಾತ್ರೆ" ಯಂತೂ ಬಹಳ ಅರ್ಥಪೂರ್ಣವಾದ ಕತೆಯಾಗಿದೆ. ಯಾತ್ರೆ ಮಾಡುವುದರಿಂದ ನಮಗೆ ಮುಕ್ತಿ ಸಿಗುವುದಿಲ್ಲ. ನಾವು ನಮ್ಮ ಸುತ್ತಮುತ್ತಲಿನವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಮಗೆ ಮುಕ್ತಿ ಸಿಗುವುದು ಎಂಬುದನ್ನು ಬಹಳ ಸೊಗಸಾಗಿ ಮನಮುಟ್ಟುವಂತೆ ಬರೆದಿದ್ದಾರೆ. 

ಹೀಗೆ "ತ್ರಿವೇಣಿ" ಯವರ ಒಂದೊಂದು ಕತೆಗಳು ವಿಭಿನ್ನವಾದ ಕಥಾವಸ್ತುವಿನಿಂದ ಕೂಡಿದ್ದು ಓದುಗರ ಮನಸ್ಸಿಗೆ ನಾಟುತ್ತವೆ. 

- ಕೆ ಗೀತಾ

ಇಷ್ಟೇ.‌‌...ನಾ..‌‌‌ಬದುಕು...!!??


 ನನಗಾಗಿ ಆಸ್ತಿ ಮಾಡದ ಅಪ್ಪನ ಶಪಿಸುತ್ತಾ ಕೂತಿರುವಾಗ, ಸಿಕ್ಕಿದ ಅವರ ಹಳೆಯ ಗೆಳೆಯರೊಬ್ಬರು "ಏನೋ ನೀನು ನಮ್ಮ ಕರೀಮನ ಮಗನಲ್ಲವೆ, ಬಹಳ ಚನ್ನಾಗಿ ಓದುತ್ತಿದ್ದಂತೆ, ಕೆಲಸಕ್ಕೂ ಹೋದಂತೆ, ನಿಮ್ಮಪ್ಪ ಹೇಳುತ್ತಿದ್ದ. ನಮ್ಮ ಮಕ್ಕಳು ಇದ್ದಾರೆ, ನಾ ಕಷ್ಪಪಟ್ಟು ದುಡಿದ ಆಸ್ತಿಯನ್ನು ಹಾಳು ಮಾಡುತ್ತಿದ್ದಾರೆ. ಇರಲಿ ಬಿಡು ನಿಮ್ಮಪ್ಪನಾದರು ಸತ್ತು ಹೋದ, ನಾನಿನ್ನು ಬದುಕಿದ್ದೇನೆ ಈ ಕರ್ಮವನ್ನೆಲ್ಲ ನೋಡಲು. ಆಟೋಗೆ ಹೋಗಲು ಹತ್ತು ರೂಪಾಯಿ ಇದ್ದರೆ ಕೊಡಪ್ಪ. ಸಂಬಳದ ದಿನ ಕೊಡ್ತೆನೆ" ಎಂದಾಗ ನನ್ನ ಕಣ್ಣು ಓದ್ದೆಯಾಯಿತು. ಅಪ್ಪನ ನೆನಪಾಯಿತು. ಅವರು ಹೋಗಿ ಅರ್ಧಗಂಟೆಯಾದರು ನಾನು ಅಲ್ಲೆ ಸ್ತಬ್ದನಾಗಿದ್ದೆ. 

 - ದಾದಾ ಪೀರ.

ಕಥೆ: "ಪ್ರಾಯಶ್ಚಿತ್ತ "


ಮಗಳು ಕೈಗೊಂಡ ಮೂರ್ಖ ನಿರ್ಧಾರಕ್ಕೆ ಗಂಗಾ ನೆಮ್ಮದಿಯಿಂದ ದೂರಾಗಿದ್ದಳು. ಎರಡನೇ ಮಗುವೂ ಹೆಣ್ಣೆಂದು ಗೊತ್ತಾಗಿ ಅದನ್ನ ತೆಗೆಸಲು ಮುಂದಾಗಿದ್ದಳು ವನಜ ಕೇಳಿದರೆ, ತನ ಗಂಡನಿಗೆ ಎರಡನೇದು ವಾರಸುದಾರನೇ ಆಗಬೇಕೆಂದು ಪೀಡಿಸ್ತಾ ಇರ್ತಾನೆ ಜೊತೆಗೆ ಹೆಣ್ಣಿಗೆ ನರಕದಂತಿರುವ ಈ ಕಾಲದಲ್ಲಿ ಇನ್ನೊಂದು ಹೆಣ್ಣನ್ನು ಸಾಕುವ ಧೈರ್ಯ ನನಗೂ ಇಲ್ಲ ಎಂದು ಅಬಾರ್ಷನ್ ಗೆ ಧೈರ್ಯ ಮಾಡಿಬಿಟ್ಟಿದ್ದಳು ಅವಳು ಅದೂ ಐದನೇ ತಿಂಗಳಲ್ಲಿ. ಇವಳಿಗೆ ಒಂದೇ ಚಡಪಡಿಕೆ. ಓದಿದ ಮಗಳು ಎಂಥಾ ಅನಾಹುತಕ್ಕೆ ಕೈ ಹಾಕಿದ್ದಾಳೆ ,ತನ್ನ ಕರುಳ ಕುಡಿಯನ್ನು ನಿರ್ದಯೆಯಿಂದ ಕೊಂದು ಹಾಕಲು ಮುನ್ನುಗ್ಗಿದ್ದಾಳಲ್ಲ. ಆ ಮಹಾ ಪಾಪ ಜನ್ಮದುದ್ದಕ್ಕೂ ಬೆಂಬೂತವಾಗಿ ಕಾಡುತ್ತದಲ್ವ ಆ ಗೋಳನ್ನು ನಾನೇ ನೋಡಬೇಕಲ್ವ ಎಂದು ಎಷ್ಟು ಒಪ್ಪಿಸಿದರೂ ಮಗಳು ಕೇಳಲಿಲ್ಲ. ಪಾಪಕ್ಕೆ ಗುಡಿ ಗೋಪುರ ತಿರುಗಿ ಹೋಮ ನೇಮ ಮಾಡಿ ಶಾಂತಿ ಮಾಡಿಸುವೆ ಎಂದು ಪಟ್ಟು ಹಿಡಿದಳು ಮಗಳು. ಅವಳ ಬಂಡ ಧೈರ್ಯ ಬಿಸಿರಕ್ತದ ಉನ್ಮಾದ ನೋಡಿ ತಣ್ಣಗೆ ನಡುಗಿದಳು ಗಂಗಾ. ಗರ್ಭಪಾತ ಪಿಂಡ ರಕ್ತ ಇವೆಲ್ಲ ನೆನಪಾಗಿ ಅವಳ ಕರುಳಿಗೆ ಕೊಳ್ಳಿಯಿಂದ ಚುಚ್ಚಿದಂತಾಗಿ ಸೋತು ಕುಸಿದಳು. ಮುಚ್ಚಿದ ಕಣ್ಣೆವೆಗಳಿಂದ ನೀರು ಮೆಲ್ಲ ಇಳಿಯತೊಡಗಿದಂತೆ ಹಿಂದೆ ಪಟ್ಟಿದ್ದ ವೇದನೆಯ ಕರಾಳ ನೆರಳು ಅವಳ ಮುಖದ ಮೇಲೆ ಹಾದುಹೋಗತೊಡಗಿದವು. ಮದುವೆಯಾಗಿ ಗಂಡನ ಮನೆ ಸೇರಿದ ಗಂಗಾ ಹೊಸ ಸಂಸಾರದ ಸಂತೋಷದ ಅಣು ಅಣುವನ್ನು ಆಸ್ವಾದಿಸುತ್ತಿರುವಾಗಲೇ ಮೂರುತಿಂಗಳಿಗೆ ನೀರು ಹಾಕಿಕೊಂಡ ಮತ್ತೊಂದು ಸಂತಸದ ಸುದ್ದಿ. ಎಲ್ಲರೂ ಸಂತಸದಿಂದಿರುವಾಗ ಅವಳ ಸಂಸಾರದಲ್ಲಿ ಒಂದು ಬಿರುಗಾಳಿಯೆದ್ದಿತು. ತನ್ನ ವಂಶದಲ್ಲಿ ದೊಡ್ಡ ಮಗನಿಗೆ ಮೊದಲ ಮಗು ಗಂಡೇ ಆಗುವುದೆಂದು ಕೊಚ್ಚುತ್ತಿದ್ದ ಗಂಡನಿಗೆ ಒಂದು ಅನುಮಾನ ಸುರುವಾಯಿತು . ಗಂಡೋ ಹೆಣ್ಣೋ ಎಂದು ತಿಳಿಯಲು ಉತ್ಸುಕನಾದನು. ಪ್ರತಿದಿನ ಗಂಗಾಳೊಂದಿಗೆ ಈ ವಿಷಯದಲ್ಲಿ ತಗಾದೆ ತೆಗೆದು ಉಣ್ಣದೆ ಮಲಗಿ ಇವಳನ್ನು ಅಳಿಸುತ್ತಿದ್ದನು. ಬರುಬರುತ್ತಾ ಮಾತನ್ನೆ ಬಿಟ್ಟನು. ಅವನ ಹಟಕ್ಕೆ ಗಂಗಾ ಭಯಗೊಂಡು ಕೊನೆಗೂ ಭ್ರೂಣಲಿಂಗ ಪತ್ತೆಗೆ ಸಿದ್ಧಳಾದಳು. ದುಡ್ಡು ಸುರಿದು ಪತ್ತೆ ಮಾಡಿದಾಗ ಬಂದ ಫಲಿತಾಂಶ ಆ ಮಗು ಹೆಣ್ಣೆಂದು. ಅಂದಿನಿಂದ ಅವಳ ಗಂಡನ ಹುಚ್ಚು ಹೆಚ್ಚಾಯಿತು. ವಂಶದ ಮರ್ಯಾದೆ ಕಳೆದೆನೆಂದು ಏನೇನೊ ತಡಬಡಿಸತೊಡಗಿದನು. ಕ್ರಮೇಣ ಕುಡಿತಕ್ಕೆ ದಾಸನಾದನು. ಅವಳ ಜೀವನ ಇಷ್ಟು ಬೇಗ ಬರಡಾಗುವುದೆಂದು ಅವಳು ಕನಸಲೂ ಎಣಿಸಿರಲಿಲ್ಲ. ಇವಳನ್ನು ಕಂಡರೆ ಉರಿದುರಿದು ಬೀಳುತ್ತಿದ್ದ ಗಂಡನಿಂದ ಸೊರಗಿ ಸುಣ್ಣವಾದಳು. ಗಂಡನೇ ಸರ್ವಸ್ವ ವೆಂದು ನಂಬಿದ್ದ ಇವಳು ಅಂತಿಮವಾಗಿ ಒಂದು ಕಟು ನಿರ್ಧಾರಕ್ಕೆ ಬರುವಳು. ಅದನ್ನು ಗಂಡನಿಗೂ ಹೇಳಿದಳು. ರೋಗಿ ಬಯಸಿದ್ದು ಹಾಲನ್ನ ಎಂಬಂತೆ ಅವನೂ ತಕ್ಷಣವೇ ಸಿದ್ಧನಾದನು ಮನುಷ್ಯತ್ವವನ್ನೆ ಮರೆತುಹೋಗಿದ್ದನು. ದುಡ್ಡು ಸುರಿದು ಆ ಸಣ್ಣ ಪಾಪುವಿನ ಬಲಿಯನ್ನು ಪಡೆದೇ ಬಿಟ್ಟರು. ಇವನ ಮೊಗದಲ್ಲಿ ನಿರಾಳ ಕಳೆ. ಅವಳಲ್ಲಿ ಪಾಪ ಪ್ರಜ್ಞೆ. ಹೀಗೆ ಎರಡು ತಿಂಗಳಾದವು. ಮತ್ತೆ ಮುಟ್ಟು ನಿಂತಿತು. ಇವಳಿಗೆ ಸಮಾಧಾನ ಅವನಿಗೆ ಸಂತಸ. ಅದು ಎರಡೇ ತಿಂಗಳು ಮಾತ್ರ. ಗರ್ಭ ಕರಗಿ ಹೋಯಿತು. ಆರು ತಿಂಗಳ ನಂತರ ಮತ್ತೆ ನಿಂತಿತು ಅದು ನಾಲ್ಕು ತಿಂಗಳಲ್ಲಿ ಪಾತವಾಯಿತು. ಸುಸ್ತಾಗಿ ಹೋದರು. ಗುಡಿ ದೇವರುಗಳಿಗೆ ಅಲೆದರು. ಹೋಮ ವ್ರತಗಳ ಮಾಡಿದರು. ನಾಟಿ ಔಷಧವಾಯಿತು ಎಲ್ಲ ವೈದ್ಯರುಗಳ ಭೇಟಿಯೂ ಆಯಿತು. ಹತ್ತು ವರ್ಷಗಳ ಕಾಲ ಮಾಡಿದ ಪಾಪಕ್ಕೆ ಕೊರಗಿ ಕೊರಗಿ ಅವಳ ಪತಿ ಕಾಲವಾದನು. ಕಂಗೆಟ್ಟ ಗಂಗಾ ಪಾಪಕ್ಕೆ ಪ್ತಾಯಶ್ಚಿತ್ತ ಮಾಡಿಕೊಳ್ಳಬಯಸಿದಳು. ಅನಾಥ ಹೆಣ್ಣು ಮಗುವನ್ನು ತಂದು ಮಗಳೆಂದು ಬೆಳೆಸಿದಳು ಚೆನ್ನಾಗಿ ಓದಿಸಿದಳು. ಮದುವೆಮಾಡಿದಳು. ಈಗ......ಅದೇ ಮಗಳು ಅಮ್ಮಾ ಅಮ್ಮಾ ಎಂದು ಅಲುಗಿಸಿದಳು. ಕಣ್ಣೀರ ತೇವ ಆರಿರಲಿಲ್ಲ. ಈ ಕಥೆಯನ್ನು ಹೇಳುವಿದೊಂದೆ ದಾರಿ ಎಂದು ಬಾಯ್ತೆರೆದಾಗ ವನಜಳ ಕಣ್ಣಲ್ಲೂ ನೀರು ಧಾರಾಕಾರ ಹರಿಯುತ್ತಿತ್ತು. ಅವಳ ಕೈಲಿ ಗಂಗಾಳ ಡೈರಿ ಇರುವುದನ್ನು ಕಂಡು ನಿಟ್ಟುಸಿರಿಟ್ಟಳು.

-  ಉಷಾಗಂಗೆ.ವಿ

ಕವನ: "ಹುಡುಕಾಟ"


 
ನನಗೆ ಗೊತ್ತು
ನೀವೆಲ್ಲ ನನ್ನನ್ನು 
ದುರ್ಬೀನು ಹಾಕಿಕೊಂಡು ಹುಡುಕುತ್ತೀರಿ! 
ಸಂಪುಟ-ಸ್ಮಾರಕ 
ಮಂದಿರ-ಮಸೀದಿ 
ಗಲ್ಲಿ-ಗಟಾರ 
ಗುಡಿಸಲು-ಮಹಲುಗಳಲ್ಲಿ! 

ಸೂರ್ಯ ಚಂದ್ರ ಚುಕ್ಕಿಗಳ 
ವಿಸ್ಮಯಗಳಲ್ಲಿ 
ಈ ನೆಲದ ಬೇರಿನ ನೀರವ ಮೌನಗಳಲ್ಲಿ 
ಚಿಗುರು ಹೂ ಹಣ್ಣುಗಳ ಸಂಭ್ರಮದಲ್ಲಿ... 

ತಪ್ಪದೇ ಕೆದಕುತ್ತಿರಿ 
ಹೆದ್ದಾರಿ ಬದಿಯ ಹುಡುಗಿಯರ 
ಕನವರಿಕೆಗಳಲ್ಲಿ 
'ಸುಖ'ಮಾರುವ ಅನಿವಾರ್ಯಕ್ಕೆ 
ಬದುಕನ್ನು ಬಿಕರಿಗಿಟ್ಟ ಕನ್ಯೆಯರಲ್ಲಿ... 

ಯಾರದೋ ಉಮ್ಮಳಿಕೆ 
ವಿಲಾಪಗಳು 
ಮತ್ತಾರದೋ ಪರಿವೇಷಗಳನ್ನು 
ಭರಪೂರ ಬಿಂಬಿಸುತ್ತೀರಿ... 

ಮೂರ್ತ ಅಮೂರ್ತಗಳಿಗೆಲ್ಲ 
ಚಾಲಾಕಿನಿಂದ ಬಣ್ಣ ಹಚ್ಚುವ ನಿಮಗೆ 
ಜಾತಿ,ಧರ್ಮ, ಪ್ರೀತಿ ಇತ್ಯಾದಿತ್ಯಾದಿಗಳು ಸೆಳೆಯುತ್ತವೆ... 

ನನ್ನನ್ನು ಹೆಕ್ಕುವಾಗ 
ನೀವೆಷ್ಟೊಂದು ನಾಜೂಕು! 
ಪೂರ್ವಾಗ್ರಹಗಳನ್ನು ಕಳಚಿ 
ಕಲ್ಲೆದೆ ಕರಗಿಸಿಕೊಂಡು ಕರುಣಾಳುಗಳು! 
ನನ್ನನ್ನು ಸಿಂಗರಿಸುವ ನಿಮ್ಮ ಸೂಕ್ಷ್ಮತೆ 
ಮೆಚ್ಚಬೇಕು ಬಿಡಿ 
ಪ್ರತಿಭೆಯ ರುಜುವಾತಿಗೆ 
ಹೆಣಗುವ ನಿಮ್ಮ ಸರ್ಕಸ್ಸಿಗೆ! 

ಅತ್ತಿತ್ತ ಎಳೆದಾಡಿ 
ನನಗೊಂದು ಚೌಕಟ್ಟು ಹಾಕಿಟ್ಟು 
ನೀವು ನಿಮ್ಮಂತವರದೇ ಸಂತೆಯಲ್ಲಿ 
ಭೇಷ್ ಎನಿಸಿಕೊಳ್ಳುವಾಗ 
ನಾನು ಮುಗುಮ್ಮಾಗಿ ಕುಳಿತಿರುತ್ತೇನೆ 
ಆಶ್ರಮದ ಹಾದಿ ಹಿಡಿದ 
ಅವ್ವಂದಿರ ಕಣ್ಣಾಲಿಗಳಲ್ಲಿ.....!! 
ಕಸದ ತೊಟ್ಟಿಯಲ್ಲಿ ಹೆಣವಾಗುವ 
ಪಾಪದ ಹೂವುಗಳಲ್ಲಿ........!! 

~ರಂಗಮ್ಮ ಹೊದೇಕಲ್

ಅನುವಾದ: "ಕಣ್ಣುಗಳು"


(ಓಲ್ಗಾರವರ ತೆಲುಗು ಕಥೆ)

ನನ್ನ ಕಣ್ಣುಗಳು ಸುಂದರವಾಗಿವೆ ಎನ್ನುತ್ತಾಳೆ ಅಮ್ಮ. ಕಣ್ಣ ತುಂಬ ಕಾಡಿಗೆ ಹಚ್ಚುತ್ತಾಳೆ. ಹಳದಿ ಕೆನ್ನೆಗಳ ಮೇಲೆ ಕಪ್ಪು ಕಾಡಿಗೆ, ಬಿಳಿ ಕಣ್ಣುಗಳಲ್ಲಿ ಕಪ್ಪು ಕಾಡಿಗೆ. ನಿನ್ನ ಕಣ್ಣುಗಳಲ್ಲಿ ಅದೆಷ್ಟು ಕಳೆ ಇದೆಯೇ ಎನ್ನುತ್ತಾಳೆ ಅತ್ತಿಗೆ ಕೂಡ.
ನಿಜ ನನ್ನ ಕಣ್ಣುಗಳು ದೊಡ್ಡವು. ಆದರೆ ಏನು ಲಾಭ. ಅವರ ರಾಮನದು ಹುಣಿಸೆ ಎಲೆಯಷ್ಟು ಕಣ್ಣುಗಳು. ನನಗೂ ಹತ್ತು ವರ್ಷಗಳೇ. ಅವನಿಗೂ ಹತ್ತು ವರ್ಷಗಳೇ. ಅವನಿಗಿಂತ ನಾನೇ ಹತ್ತು ದಿನ ದೊಡ್ಡವಳು. ಆದರೆ, ನಮ್ಮ ಊರಿನಲ್ಲಿ ಅವನು ನೋಡಿರುವ ವಿಚಿತ್ರಗಳಲ್ಲಿ ನೂರನೇ ಒಂದು ಭಾಗವನ್ನೂ ನಾನು ನೋಡಿಲ್ಲ.
ಮೊನ್ನೆ ಒಂದು ದಿನ ಮನೆ ಬಾಗಿಲಲ್ಲಿ ಒಂದು ದೊಡ್ಡ ಗಲಾಟೆ ನಡೆಯಿತು. ನಾನು ಹೊರಗಡೆ ಓಡಿ ಹೋಗಿ ಗುಂಪಿನಲ್ಲಿ ನಿಂತುಕೊಂಡೆ. ಎಲಿಂ್ಲದ ಬಂದನೊ ಏನೊ ನಮ್ಮ ಅಣ್ಣ ಭರಭರನೆ ಎಳೆದುಕೊಂಡು ಬಂದು ಮನೆಯಲ್ಲಿ ಹಾಕಿದ.
“ಹೆಣ್ಣು ಹುಡುಗಿ, ಭಯಭಕ್ತಿಯಿಲ್ಲದೆ ಅಲ್ಲಿ ಹೇಗೆ ನಿಂತುಕೊಂಡಿದ್ದೀಯೆ? ಆ ಅರಚಾಟ ಮನೆಯ ಒಳಗಿನಿಂದ ಕೇಳಿದರೇನೆ ಎದೆ ಡವಡವ ಎಂದು ಹೊಡೆದುಕೊಳ್ಳುತ್ತಿದ್ದರೆ” ಅಂದಳು ಅಮ್ಮ.
“ನನಗೆ ಭಯವಾಗಲಿಲ್ಲ” ಎಂದರೆ ಎಲ್ಲರೂ ಬೈದುಬಿಟ್ಟರು. ನಮ್ಮ ಅತ್ತಿಗೆಯ ಭಯ ನೋಡಿದರೆ ನಮ್ಮ ಅಣ್ಣನಿಗೆ ಎಷ್ಟು ಖುಷಿಯೊ. ಅತ್ತಿಗೆಯನ್ನು ಭಯಪಡಿಸಿ ಆಕೆ ಹೆದರಿಕೊಳ್ಳುತ್ತಿದ್ದರೆ ಅವನು ಕಿಲಕಿಲನೆ ನಗುತ್ತಾನೆ. ಅತ್ತಿಗೆಯೂ ಅಷ್ಟೇ – ಮಾತೆತ್ತಿದರೆ “ಅಮ್ಮೊ, ಭಯ” ಎನ್ನುತ್ತಾ ಕಣ್ಣು ಮುಚ್ಚಿಕೊಳ್ಳುತ್ತಾಳೆ. 
“ಕಣ್ಣು ತೆಗೆದು ನೋಡತ್ತಿಗೆ, ಏನೂ ಇಲ್ಲ” ಎಂದರೂ ಕಣ್ಣು ತೆರೆಯುವುದಿಲ್ಲ. ಅತ್ತಿಗೆಯ ಕಣ್ಣು ಕೂಡ ದೊಡ್ಡವೇ. ಆದರೆ ಏನು ಲಾಭ, ಅತ್ತಿಗೆಗೆ ಕಣ್ಣು ಮುಚ್ಚಿಕೊಳ್ಳುವುದೇ ಚೆನ್ನಾಗಿರುತ್ತದೆ. ರಸ್ತೆಗೆ ಬರುತ್ತಾರಾ – ಅಮ್ಮ, ಅತ್ತಿಗೆ ತಲೆ ಎತ್ತುವುದಿಲ್ಲ. ಅವರ ಕಣ್ಣುಗಳು ನೆಲದ ಮೇಲೆಯೇ. ನೆಲದ ಮೇಲೆ ಏನಿರುತ್ತದೆ, ಒಂದು ವೇಳೆ ಇದ್ದರೂ ಎಷ್ಟು ದಿನ ಅಂತಾ ಅವನ್ನೇ ನೋಡುತ್ತೇವೆ? ದಾರಿಯಲ್ಲಿ ಏನಿದೆಯೋ ಸರಿಯಾಗಿ ನೋಡುವುದೇ ಇಲ್ಲ. ಮೇಲೆ ಅಮ್ಮ ನನ್ನನ್ನೇ ಬಯ್ಯುತ್ತಾಳೆ.
“ಹಾಗೆ ಏನದು ದಿಕ್ಕುಗಳನ್ನು ನೋಡುವುದು? ತಲೆಬಗ್ಗಿಸಿ ನಡೆ. ನೆಲ ನೋಡು” ಅನ್ನುತ್ತಾ ತಲೆ ಮೇಲೆ ಮೊಟಕುತ್ತಾಳೆ.
ಅಮ್ಮೊ, ಖಂಡಿತ ನಾನು ಹಾಗೆ ನಡೆಯಲಾರೆ. ಬೀದಿಗೆ ಬಂದ ಮೇಲೆ ಆಕಡೆ, ಈಕಡೆ ನೋಡದಿದ್ದರೆ ನನಗೆ ಎಲ್ಲಾ ಹೇಗೆ ಗೊತ್ತಾಗುತ್ತೆ. ಇಪ್ಪತ್ನಾಲ್ಕು ಘಂಟೆಗಳ ಕಾಲ ಬೀದಿಯಲ್ಲಿ ತಿರುಗುವ ರಾಮ ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನಾ?
ಆದರೆ ಅವನಿಗೆ ಕೂಡ ಸಾಕಷ್ಟು ಗೊತ್ತಿಲ್ಲ. ಹೆಣ್ಣುಮಕ್ಕಳು ಕೆಲವನ್ನು ಮಾತ್ರ ನೋಡಿದರೆ ಸಾಕು ಎಂಬುದು ಅವನಿಗೆ ಗೊತ್ತಿಲ್ಲ. ಆದರೆ ಅಮ್ಮನಿಗೆ ಅದು ಚೆನ್ನಾಗಿ ಗೊತ್ತು.
ನಮ್ಮ ದೇಹವನ್ನು ಕೂಡ ನಾವು ಸರಿಯಾಗಿ ನೋಡಿಕೊಳ್ಳಕೂಡದು. ಅಮ್ಮ ಕಿರುಚಿಕೊಳ್ಳುತ್ತಾಳೆ. ‘ಏನದು ನೋಡಿಕೊಳ್ಳುವುದು’ ಎಂದು. ದೊಡ್ಡವರಾಗುತ್ತಿದ್ದಂತೆ ಗಂಡಸರನ್ನು ನೋಡಬಾರದು. ಈಗ ನಾನು ರಾಮನೊಂದಿಗೆ ಆಡಿಕೊಳ್ಳಬಹುದು. ಆದರೆ ಇನ್ನೆರಡು ದಿನಗಳಾದರೆ ಅವನೊಂದಿಗೆ ಆಡಬಾರದು. ರಾವi ಕಾಣಿಸಿದರೆ ಮನೆಯೊಳಗೆ ಬಂದು ಬಿಡಬೇಕು. ಮಾರ್ಕೆಟ್‍ನಲ್ಲಿ ಕಾಣಿಸಿದರೆ ತಲೆ ಮೇಲಕ್ಕೆತ್ತದೆ, ಕಣ್ಣು ಮಾತ್ರ ಮೇಲೆತ್ತಿ ನೋಡಬೇಕು. ನಮ್ಮ ಪಕ್ಕದ ಮನೆಯ ಪದ್ಮಕ್ಕ ಹಾಗೆ ನೋಡುತ್ತಾಳೆ. ‘ಯಾಕಕ್ಕ, ಹಾಗೆ ನೋಡುತ್ತೀಯ?’ ಅಂದರೆ ‘ಹಾಗೆ ನೋಡಿದರೇನೆ ಬಹಳ ಅಂದವಾಗಿರುತ್ತದೆ’ ಅನ್ನುತ್ತಾಳೆ. ನನಗಿನ್ನೂ ಹಾಗೆ ನೋಡುವುದು ಬರುತ್ತಿಲ್ಲ. ಯಾವಾಗ ಬರುತ್ತದೊ ಏನೋ. ರಾಮನಿಗಾದರೆ ಸತ್ತರೂ ಬರುವುದಿಲ್ಲ.
ಹೆಣ್ಣು ಮಕ್ಕಳ ಕಣ್ಣುಗಳಲ್ಲಿ ನೀರು ಬೇಗ ಬರಬೇಕಂತೆ. ಮೊನ್ನೆ ಅಮ್ಮ ಪಕ್ಕದ ಮನೆಯವರನ್ನು ಬೈದುಕೊಳ್ಳುತ್ತಿದ್ದಳು, “ಕಲ್ಲು ಮನಸ್ಸು, ಒಂದು ಹನಿ ಕಣ್ಣೀರು ಬರಲಿಲ್ಲ.” ಹೆಣ್ಣುಮಕ್ಕಳಿಗೆ ಸುಮ್ಮಸುಮ್ಮನೆ ಕಣ್ಣೀರು ಬರಬೇಕಂತೆ. ನನಗೇನೋ ಕೋಪ ಬರುತ್ತದೆಯೇ ಹೊರತು ಕಣ್ಣೀರು ಬರುವುದಿಲ್ಲ. ನನ್ನನ್ನು ಸುಮ್ಮಸುಮ್ಮನೆ ಬೈದರೆ ಕೋಪ ಬರುತ್ತದೆ. ಅತ್ತಿಗೆಗಾದರೆ ಅಳು ಬರುತ್ತೆ. ಆಗ ಅಣ್ಣನ ಕೋಪ ಕಡಿಮೆಯಾಗುತ್ತೆ.
“ಸಾಕು ಬಿಡು, ಆ ಅಳು ನಿಲ್ಲಿಸು,” ಅನ್ನುತ್ತಾನೆ. ಆದರೂ ಅತ್ತಿಗೆ ಬಿಕ್ಕಿಬಿಕ್ಕಿ ಅಳುತ್ತಾಳೆ. ಅಣ್ಣ ಅತ್ತಿಗೆ ಜಗಳವಾಡಿದರೆ ಯಾವಾಗಲೂ ಅತ್ತಿಗೆಯ ಅಳುವುದು. ಅಣ್ಣ ಒಂದು ಸಾರಿಯೂ ಅತ್ತಿಲ್ಲ. ಅಪ್ಪ, ಅಮ್ಮ ಆದರೂ ಅಷ್ಟೇ. ಯಾವಾಗಲೂ ಅಮ್ಮನೇ ಅಳಬೇಕು. ನನಗೆ ಅಳು ಅಂದ್ರೆ ಇಷ್ಟವಿಲ್ಲ. ಅತ್ತರೆ ನನ್ನ ಕಣ್ಣುಗಳು ಏನೂ ಚೆನ್ನಾಗಿರುವುದಿಲ್ಲ.  ಮುಖವೆಲ್ಲಾ ಕಪ್ಪಾಗುತ್ತದೆ. ನಾನ್ಯಾವಾಗಲೂ ಅಳುವುದಿಲ್ಲಪ್ಪ.
ನಮ್ಮ ಕಣ್ಣುಗಳಿಗೆ ಏನು ಕಂಡರೂ ಸರಿಯೇ ಏನೂ ಅನ್ನಬಾರದಂತೆ, ಏನೂ ಮಾಡಬಾರದಂತೆ. ನನಗೆ ಅಪ್ಪನ ಕೈಯಲ್ಲಿ ಮಾವಿನಹಣ್ಣಿನ ಬುಟ್ಟಿ ಕಾಣಿಸಿದರೆ – ‘ಓ ಮಾವಿನಹಣ್ಣು’ ಎಂದು ಎಗರಬೇಕೆಂದೆನಿಸುತ್ತೆ. ಆದರೆ ಎಗರಬಾರದಂತೆ. ಆ ಮಾವಿನಹಣ್ಣು ನಮ್ಮ ತಟ್ಟೆಯಲ್ಲಿ ಬರುವವರೆಗೆ ಕೂಗಬಾರದಂತೆ. ನಮ್ಮ ತಟ್ಟೆಗೆ ಬಂದ ನಂತರ ಸಮಾಧಾನವಾಗಿ ತಿನ್ನಬೇಕಂತೆ. ಮಾವಿನ ಹಣ್ಣು ನೋಡಿದ ತಕ್ಷಣ ಎಗರದಿದ್ದರೆ ನೋಡಿದ ಭಾಗ್ಯವೇನು? ಹಾಗೆಯೇ ಕೋಪ ಬಂದರೂ ಕಿರುಚಬಾರದಂತೆ.
ಒಮ್ಮೆ ಏನಾಯಿತೆಂದರೆ, ಕಲ್ಯಾಣಿ ಅಕ್ಕ ಕಾಲೇಜಿನಿಂದ ಬರುತ್ತಿದ್ದರೆ, ಒಂದು ಹುಡುಗ ಸೈಕೆಲ್ ಮೇಲಿನಿಂದ ಬಿದ್ದು ಹೋದನಂತೆ, ಕಾಲು ಉಳುಕಿ ಏಳಲಿಕ್ಕಾಗಲಿಲ್ಲವಂತೆ. ದಾರಿಯಲ್ಲಿ ಯಾರೂ ಇರಲಿಲ್ಲ. ಕಲ್ಯಾಣಿ ಅಕ್ಕ ಅವನನ್ನು ಎಬ್ಬಿಸಿ, ಸೈಕೆಲ್ ಎತ್ತಿ ಕಂಬಕ್ಕೆ ಒರಗಿಸಿ ನಿಲ್ಲಿಸಿದಳಂತೆ. ಆ ಹುಡುಗ ಕಾಲು ಸರಿಮಾಡಿಕೊಳ್ಳುತ್ತಿದ್ದಾಗ, ಬೀಳದಂತೆ ಹಿಡಿದುಕೊಂಡಳಂತೆ. ಇದೆಲ್ಲ ನಮ್ಮ ಎದುರ ಮನೆ ಅಂಕಲ್ ನೋಡಿ ಕಲ್ಯಾಣಿಯವರ ತಂದೆಯ ಹತ್ತಿರ ಹೇಳಿದರಂತೆ. ಅವರು ಕಲ್ಯಾಣಿ ಅಕ್ಕನನ್ನು ಚೆನ್ನಾಗಿ ಹೊಡೆದರಂತೆ.
‘ಪರಗಂಡಸನ್ನು ರೋಡಿನಲ್ಲಿ ತಬ್ಬಿಕೊಳ್ಳುತ್ತೀಯಾ’ ಅಂತಾ ಬೈಯ್ಯುತ್ತಾ ಹೊಡೆದರಂತೆ.
“ಬಿದ್ದ, ಅದಕ್ಕೆ ಎಬ್ಬಿಸಿದೆ” ಎಂದರೆ, “ನೋಡಿದರೆ ಏನಂತೆ, ನಿನ್ನ ಪಾಡಿಗೆ ನೀನು ಬರಬೇಕಾಗಿತ್ತು, ದೇಶಸೇವೆ ಮಾಡ್ತೀಯ” ಅಂತಾ ಬೈದರಂತೆ.
ಕಲ್ಯಾಣಿ ಅಕ್ಕನ ಅಪ್ಪ ನನಗೆ ಮಾವನೇ, ಆದರೆ ಇದಾದ ನಂತರ ನನಗೆ ಕೋಪ ಬಂದು, ನಾನು ಅವರನ್ನು ಮಾತಾಡುವುದನ್ನು ನಿಲ್ಲಿಸಿಬಿಟ್ಟಿದ್ದೀನಿ. ನೋಡಿದ ಮೇಲೆ ಏನಾದ್ರೂ ಮಾಡಬೇಕಲ್ಲವೇ? ಇಲ್ಲದಿದ್ದರೆ ನೋಡುವುದೇಕೆ? ನೋಡುವ ಮುನ್ನ, ನೋಡಿದ ನಂತರ ಒಂದೇ ರೀತಿ ಇದ್ದರೆ, ನೋಡುವುದೇಕೆ? ಅಂದರೆ ಅಮ್ಮನಿಗೆ ಅರ್ಥವಾಗುವುದಿಲ್ಲ. ಬಾಯ್ಮುಚ್ಚು ಎನ್ನುತ್ತಾಳೆ.
ಕಣ್ಣು ಮುಚ್ಚಿಕೊಳ್ಳಬೇಕು, ಬಾಯಿ ಮುಚ್ಚಿಕೊಳ್ಳಬೇಕು. ನಮ್ಮ ಅಣ್ಣ ಆಫಿûೀಸಲ್ಲಿ ಕೆಲಸ ಮಾಡುವಾಕೆ ಮನೆಗೆ ಬಂದಿದ್ದರು. ಆಕೆ ಎಷ್ಟು ಚೆನ್ನಾಗಿ ನಗುತ್ತಾರೊ. ಆದರೆ ವಿಚಿತ್ರ ಎಂದರೆ ಆಕೆ ಬೊಟ್ಟು ಇಟ್ಟುಕೊಂಡಿರಲಿಲ್ಲ. ಕಾಡಿಗೆ ಇಟ್ಟುಕೊಂಡಿರಲಿಲ್ಲ. ಆದರೂ ಎಷ್ಟು ಚೆನ್ನಾಗಿದ್ದರೊ. ಇರುವವರೆಗೂ ಚೆನ್ನಾಗಿ ನಗುತ್ತಿದ್ದರು. ಆದರೆ ಅವರು ಅಮ್ಮನಿಗೆ, ಅತ್ತಿಗೆಗೆ ಹಿಡಿಸಲಿಲ್ಲವಂತೆ. ಮುಖದಲ್ಲಿ ಬೊಟ್ಟು ಇಲ್ಲದಿದ್ದರೆ, ಕುತ್ತಿಗೆಯಲ್ಲಿ ಸರ ಹಾಕಿಕೊಳ್ಳದಿದ್ದರೆ, ಆಕೆಯ ಮುಖ ಚೆನ್ನಾಗಿಲ್ಲವಂತೆ.
“ನಿಜವಾಗಲೂ ಚೆನ್ನಾಗಿಲ್ಲವೇನಮ್ಮ” ಎಂದು ಎಷ್ಟು ಸಾರಿ ಕೇಳಿದೆನೊ?
“ನನ್ನ ಕಣ್ಣುಗಳಿಗೆ ಹಾಗೆ ಕಾಣಿಸಿತೆ. ಬೊಟ್ಟು ಇರದ ಮುಖವನ್ನು ನೋಡಲು ನನಗಂತೂ ಇಷ್ಟವಾಗಲಿಲ್ಲ” ಅಂದಳು ಅಮ್ಮ.
ಅಮ್ಮನಂತಾದರೆ ನನ್ನ ಕಣ್ಣುಗಳು ಅಮ್ಮನಂತೆ ಬದಲಾಗಿಬಿಡುತ್ತದಾ. ಅಮ್ಮೊ, ಆ ರೀತಿ ಬದಲಾಗಿಬಿಟ್ಟರೆ ನನ್ನ ಕಣ್ಣುಗಳಿಗೆ ಏನೂ ಕಾಣಿಸುವುದಿಲ್ಲ. ‘ಎಲ್ಲೆಲ್ಲಿಯವೊ ನಿನ್ನ ಕಣ್ಣಿಗೆ ಕಾಣಿಸುತ್ತವಲ್ಲೇ’ ಎಂದು ಅಮ್ಮ ಅಂತಿರ್ತಾಳೆ. ಅಮ್ಮನ ಕಣ್ಣಿಗೆ ಏನೂ ಕಾಣಿಸುವುದಿಲ್ಲ. ಕಾಣಿಸಿದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಣ್ಣುಮಕ್ಕಳ ಕಣ್ಣುಗಳು ಹೀಗೇಕೆ ಇರುತ್ತವೆ?

ಸುಧಾ ಜಿ

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 4

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

‘ಸೈಮನ್ ಹಿಂತಿರುಗು’ ಚಳುವಳಿ
ಭಾರತ ಇನ್ನಷ್ಟು ಸಂವಿಧಾನಾತ್ಮಕ ಸುಧಾರಣೆಗಳನ್ನು ಪಡೆಯಲು ಎಷ್ಟರ ಮಟ್ಟಿಗೆ ಅರ್ಹವಾಗಿದೆ ಎಂಬುದನ್ನು ತಿಳಿದುಬರಲು, 1928ರಲ್ಲಿ ಬ್ರಿಟಿಷ್ ಸಂಸತ್ತು, ಸರ್ ಜಾನ್ ಸೈಮನ್‍ರ ನೇತೃತ್ವದಲ್ಲಿ ಏಳು ಜನರ ಆಯೋಗವನ್ನು ರಚಿಸಿತು. 1919ರ ಭಾರತೀಯ ಕೌನ್ಸಿಲ್ ಕಾಯಿದೆಯಡಿಯಲ್ಲಿ (ಮಾಂಟೆಗೊ-ಚೆರ್ಮ್ಸ್‍ಫರ್ಡ್ ಸುಧಾರಣೆ), ಈ ಅಂಶವನ್ನು ಸೇರಿಸಲಾಗಿತ್ತು. ಈಗಾಗಲೇ ಕಾಂಗ್ರೆಸ್ಸ್ 1929ರ ಡಿಸೆಂಬರ್ 31ರ ಒಳಗೆ ಡೊಮಿನಿಯನ್ ಸ್ಟೇಟಸ್ (ಬ್ರಿಟಿಷ್ ಅಧೀನತೆಯಲ್ಲಿ0iÉುೀ ಭಾರತೀಯರು ಸರ್ಕಾರವನ್ನು ನಡೆಸುವುದು) ನೀಡದಿದ್ದರೆ, ಸಂಪೂರ್ಣ ಸ್ವಾತಂತ್ರ್ಯಕಾಗಿ ಚಳುವಳಿ ಆರಂಭಿಸಬೇಕಾಗುತ್ತದೆ ಎಂದು ಹೇಳಿತ್ತು. ಇಷ್ಟಾದರೂ ಬ್ರಿಟಿಷರ ಈ ನಡೆ ಗಾಂಧೀಜಿಯವರಿಗೆ ಆಘಾತವನ್ನುಂಟುಮಾಡಿತ್ತು. ಅವರು ಆಯೋಗವನ್ನು ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಂದು ರೂಪದಲ್ಲಿಯೂ ವಿರೋಧಿಸಬೇಕೆಂದು ದೇಶದ ಜನತೆಗೆ ಕರೆ ನೀಡಿದರು.

ಭಗತ್‍ಸಿಂಗ್ ಮತ್ತವರ ಸಂಗಾತಿಗಳು ಡೊಮಿನಿಯನ್ ಸ್ಟೇಟಸ್‍ಗೆ ವಿರುದ್ಧವಾಗಿದ್ದರು. ಅವರ ಬೇಡಿಕೆ ಸಂಪೂರ್ಣ ಸ್ವಾತಂತ್ರ್ಯವಾಗಿತ್ತು. ಆದರೂ ಸಹ ಅವರು ಈ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಜನತೆಯನ್ನು ಬಡಿದೆಬ್ಬಿಸಲು  ತೆಗೆದುಕೊಳ್ಳುವ ಯಾವುದೇ ಕ್ರಮ ಅವಶ್ಯಕ ಎಂದು ನಂಬಿದ್ದರು. ಕ್ರಾಂತಿಯ ಯಶಸ್ಸಿಗೆ ಕ್ರಿ0iÉು ಅವಶ್ಯಕ ಎಂದು ನಂಬಿದ್ದರವರು. ಎಲ್ಲಾ ರೀತಿಯಲ್ಲೂ ಸೈಮನ್ ಆಯೋಗವನ್ನು ಪ್ರತಿಭಟಿಸುವ ನಿರ್ಧಾರ ಕೈಗೊಂಡು ಚಳುವಳಿಗಳನ್ನು ಸಂಘಟಿಸಲಾರಂಭಿಸಿದರು.

1928ರ ಅಕ್ಟೋಬರ್ 3ರಂದು ಸುಮಾರು 5000ಕ್ಕೂ ಹೆಚ್ಚು ಪ್ರತಿಭಟನಾಕಾರರು ಲಾಹೋರಿನ ರೈಲ್ವೆ ಸ್ಟೇಷನ್ ಬಳಿ ಸೇರಿದ್ದರು. “ಸೈಮನ್ ಹಿಂತಿರುಗು” ಎನ್ನುವುದು ಅವರ ಘೋಷಣೆಯಾಗಿತ್ತು. ಈ ಪ್ರತಿಭಟನೆಯ ನೇತೃತ್ವವನ್ನು ‘ಪಂಜಾಬಿನ ಸಿಂಹ’ವೆಂದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ್‍ರಾ0iÀiïರವರು ವಹಿಸಿದ್ದರು. ಆಯೋಗದ ಸದಸ್ಯರು ರೈಲ್ವೆ ಸ್ಟೇಷನ್ನಿನಲ್ಲಿ ಇಳಿಯುತ್ತಿದ್ದಂತೆ0iÉುೀ ಜನತೆ “ಇಂಕ್ವಿಲಾಬ್ ಜಿಂದಾಬಾದ್” ಎನ್ನುವ ಘೋಷಣೆಯನ್ನು ಎತ್ತಿದರು. ಮೊಟ್ಟ ಮೊದಲ ಬಾರಿಗೆ “ಕ್ರಾಂತಿ ಚಿರಾಯುವಾಗಲಿ” ಎನ್ನುವ ಘೋಷಣೆಯನ್ನು ಕ್ರಾಂತಿಕಾರಿಗಳಲ್ಲದೆ ಸಾಮಾನ್ಯ ಜನತೆ ಸಹ ಕೂಗುವಂತಾಗಿತ್ತು. ಈ ಘೋಷಣೆಯನ್ನು ಜನಪ್ರಿಯಗೊಳಿಸಿದವರು ಭಗತ್‍ಸಿಂಗ್. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಅರ್ಥವನ್ನು ನೀಡಿತ್ತು ಈ ಘೋಷಣೆ.

ಪೆÇಲೀಸರು ಅಮಾನವೀಯತೆ
ನೆರೆದಿದ್ದ ಜನತೆ ಒಕ್ಕೊರಲಿನಿಂದ “ಸೈಮನ್ ಹಿಂತಿರುಗು,” “ಬ್ರಿಟಿಷರಿಗೆ ಧಿಕ್ಕಾರ”, ‘ನಾವು ಹಿಂದೂಸ್ಥಾನಿಯರು, ಹಿಂದುಸ್ಥಾನ ನಮ್ಮದು. ಹಿಂತಿರುಗು ಸೈಮನ್ ನಿನ್ನದಾದ ದೇಶಕ್ಕೆ,’ ಎಂದು ಕೂಗಿದರು. ಜನತೆ ಗೋಡೆಯಂತೆ ಸೈಮನ್ ಆಯೋಗದ  ಸದಸ್ಯರು ಮುಂದೆ ಸಾಗದಂತೆ ನಿಂತಿದ್ದರು. ಪೆÇಲೀಸರು ಅವರನ್ನು ಚದುರಿಸಲು ನೋಡಿದರು. ಆದರೆ ಜನ ವಜ್ರಕೋಟೆಯಂತೆ ನಿಂತಿದ್ದರು. ಲಾಲಾಜಿಯವರು, “ಸರ್ಕಾರಕ್ಕೆ ಆಯೋಗವು ಪ್ರತಿಭಟನಾಕಾರರನ್ನು ನೋಡುವುದು ಬೇಡವೆಂದರೆ, ಸದಸ್ಯರಿಗೆ ಕಣ್ಣು ಕಟ್ಟಿ ಸರ್ಕಾರಿ ಬಂಗಲೆಗೆ ಕರೆದೊಯ್ಯಿರಿ” ಎಂದು ಹೇಳಿದರು. ಪೆÇಲೀಸ್ ಸೂಪರಿನ್‍ಟೆಂಡೆಂಟ್ ಜೆ.ಎ ಸ್ಕಾಟ್ ಲಾಠಿ ಚಾರ್ಜ್‍ಗೆ ಆದೇಶಿಸಿದನು. ಪೆÇೀಲೀಸರ ಅಂದಿನ ದೌರ್ಜನ್ಯದಿಂದ ನೂರಾರು ಜನ ತೀವ್ರವಾಗಿ ಗಾಯಗೊಂಡರು. ಆದರೂ ಜನ ಚದರಲಿಲ್ಲ. ಬಹಳಷ್ಟು ಜನರನ್ನು ಬಂಧಿಸಲಾಯಿತು. ಸ್ಕಾಟ್ ಲಾಲಾಜಿಯವರನ್ನು ಗುರುತಿಸಿ ಅವರ ಮೇಲೆ ಏಟುಗಳ ಸುರಿಮಳೆಯನ್ನು ಸುರಿಸಿದನು. ಲಾಲಾಜಿಯವರು ನೆತ್ತರು ಸುರಿಸುತ್ತಿದ್ದರೂ, ಆತ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಲಾಲಾಜಿಯವರು ಪ್ರಜ್ಞಾಹೀನರಾಗಿ ಕೆಳಗೆ ಬಿದ್ದರು. ಬೀಳುವ ಮುನ್ನ “ಇಂದು ನನ್ನ ಮೇಲೆ ಬಿದ್ದ ಪ್ರತಿಯೊಂದು ಏಟೂ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಯ ಮೇಲಿನ ಮೊಳೆಗಳಾಗಿವೆ.” ಎಂದು ಘೋಷಿಸಿದರು. ಎಷ್ಟು ಸತ್ಯವದು! ಅದಾದ  18 ವರ್ಷಕ್ಕೆ ನಮಗೆ ಸ್ವಾತಂತ್ರ್ಯ ದೊರೆಯಿತು, ಬ್ರಿಟಿಷರು ಇಲ್ಲಿಂದ ಕಾಲ್ಕೀಳಬೇಕಾಯಿತು.

ಲಾಲಾಜಿಯವರು ಕೆಳಕ್ಕೆ ಬಿದ್ದದ್ದನ್ನು ಕಂಡು ಜನತೆಯಲ್ಲಿ ಆವೇಶ ತುಂಬಿತು. ಬ್ರಿಟಿಷನೊಬ್ಬ ಲಾಲಾಜಿಯವರಂತಹ ನಾಯಕರ ಮೈ ಮುಟ್ಟುವಷ್ಟು ಧೈರ್ಯ ಮಾಡುತ್ತಾನೆಂದು ಭಾವಿಸಿರಲಿಲ್ಲ. ಈ ಸುದ್ದಿ ಹರಡುತ್ತಿದ್ದಂತೆ ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ರೋಷ ಉಕ್ಕಿತು. ಈ ರಾಷ್ಟ್ರೀಯ ಅಪಮಾನಕ್ಕೆ ಪಶ್ಚಾತ್ತಾಪ ಪಡುವಂತೆ ಕಾಂಗ್ರೆಸ್ ಬ್ರಿಟನ್ ಸರ್ಕಾರವನ್ನು ಕೇಳಿಕೊಂಡಿತು. ಆದರೆ ಬ್ರಿಟಿಷ್ ಸರ್ಕಾರ ಅದನ್ನು ಪರಿಗಣಿಸಲಿಲ್ಲ.

ಹಿಂದೆ ಜಲಿಯನ್‍ವಾಲಾಬಾಗ್‍ನ ದುರಂತ ನೋಡಿ ಬಂದ ಮೇಲೆ ಭಗತ್‍ಸಿಂಗ್ ಇಷ್ಟೇ ಆವೇಶಭರಿತರಾಗಿದ್ದರು. ಆದರೆ ಅವರು ಆಗಿನ್ನು 12 ವರ್ಷದ ಬಾಲಕ. ಆದರೆ ಈಗವರು 21 ವರ್ಷದ ಯುವಕ, ಮಾತ್ರವಲ್ಲದೆ ಉತ್ತರ ಭಾರತದ ಪ್ರಮುಖ ನಾಯಕರಲ್ಲೋರ್ವರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವೆನೆಂದು ಶಪಥ ಕೈಗೊಂಡು ತಮ್ಮ ಸಹಚರರ ಜೊತೆ ಚರ್ಚಿಸಲು ಲಾಹೋರಿನ ಮೊಜಾಂಗ್ ರಸ್ತೆಯಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು. ಅವರ ಪ್ರಕಾರ “ಸಾವಿರಾರು ಕರಪತ್ರಗಳು ಸಾಧಿಸಲಾಗದಂತಹ ಪ್ರಚಾರವನ್ನು ಒಂದು ಧೀರ ಕೃತಿ ಸಾಧಿಸಬಲ್ಲದು. ಇಂತಹ ಒಂದು ಕೃತಿಯಿಂದ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಇಂದು ಇದರ ವಿರೋಧಿಗಳಾಗಿರುವವರೂ ನಾಳೆ ಇದರೊಟ್ಟಿಗೆ ಸೇರ್ಪಡೆ ಹೊಂದುತ್ತಾರೆ. ದಂಗೆಯ ವಾತಾವರಣ ಎಲ್ಲೆಲ್ಲೂ ಪಸರಿಸಿದಾಗ ಸರ್ಕಾರದಲ್ಲಿ ಗೊಂದಲ ಕಂಡುಬರುತ್ತದೆ. ಸರ್ಕಾರದ ಬಿರುಸಿನ ದಮನಕಾರಿ ಕೃತ್ಯಗಳು, ಸಂಘರ್ಷವನ್ನು ಹೆಚ್ಚಿಸಿದಾಗ ಕ್ರಾಂತಿಯ ಕಿಡಿಗಳು ಹಾರುತ್ತವೆ.” ಇತರ ಕ್ರಾಂತಿಕಾರಿಗಳ ಅಭಿಪ್ರಾಯವೂ ಇದೇ ಆಗಿತ್ತು.

ಲಾಲಾಜಿಯವರ ಮರಣ
ನವೆಂಬರ್ 17ರಂದು ಲಾಲಾಜಿಯವರು ಈ ಆಘಾತದಿಂದಲೇ ಮರಣ ಹೊಂದಿದರು. ದೇಶವಿಡೀ ಶೋಕಾಚರಣೆ ಆಚರಿಸಿದರೂ ಜನರಲ್ಲಿ ಅದಕ್ಕೆ ನೂರು ಪಟ್ಟು ಆಕ್ರೋಶ ಎಲ್ಲರಲ್ಲೂ ತುಂಬಿತ್ತು. ಪ್ರತೀಕಾರದ ಕಿಚ್ಚು ದೇಶವಿಡೀ ಆವರಿಸಿತ್ತು. ಸಾಯುವ ಮುನ್ನ ಲಾಲಾಜಿಯವರು, “ಲಾಹೋರಿನಲ್ಲಿ ನಡೆದ ಘಟನೆ ಪುನರಾವರ್ತಿತವಾಗುತ್ತಾ ಹೋದರೆ, ಯುವಜನರು ನಮ್ಮ ಕೈಮೀರಿ ಹೋಗುತ್ತಾರೆ ಮತ್ತು ಸ್ವಾತಂತ್ರ್ಯ ಗಳಿಸಲೋಸಗ ತಮಗೆ ಸರಿ ಎನಿಸಿದ ಮಾರ್ಗವನ್ನು ಅನುಸರಿಸುತ್ತಾರೆ,” ಎಂದು ಎಚ್ಚರಿಕೆ ನೀಡಿದ್ದರು. ಅದರಂತೆ0iÉುೀ ದೇಶವಿಡೀ ಕಾಂಗ್ರೆಸ್‍ನ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳಲಾರಂಭಿಸಿತು ಮತ್ತು ಕ್ರಾಂತಿಕಾರಿಗಳ ಚಟುವಟಿಕೆಗಳ ಬಗ್ಗೆ ಆಸಕ್ತಿವಹಿಸಿತು.

ರಾಷ್ಟ್ರೀಯ ಅಪಮಾನಕ್ಕೆ ಪ್ರತೀಕಾರ
ಡಿಸೆಂಬರ್ 10ರಂದು ಎಚ್.ಎಸ್.ಆರ್.ಎ ಸಭೆ ನಡೆಯಿತು. ಅಧ್ಯಕ್ಷತೆಯನ್ನು ದುರ್ಗಾಭಾಬಿ ಎಂದೇ ಕರೆಸಿಕೊಳ್ಳುತ್ತಿದ್ದ ದುರ್ಗಾದೇವಿಯವರು ವಹಿಸಿದ್ದರು. ಸಭೆಯಲ್ಲಿ ಆeóÁದ್ ನುಡಿದರು “ಸಂಗಾತಿಗಳೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಶತ್ರುವಿನ ಸೈನ್ಯ, ಆಯುಧಗಳೂ, ಯುದ್ಧಕ್ಕೆ ಬೇಕಾದ ಇತರೆ ಸಾಮಗ್ರಿಗಳು ವಿವರಿಸಲೂ ಸಾಧ್ಯವಿಲ್ಲದಷ್ಟು ಅಗಾಧವಾಗಿವೆ. ಇದನ್ನು ವಿರೋಧಿಸಲು ನಮ್ಮಲ್ಲಿರುವುದು ಕೇವಲ ತ್ಯಾಗಮಯ ಭಾವನೆ ಮತ್ತು ಸಾರ್ವಜನಿಕ ಬೆಂಬಲ.” ಸಭೆ ಸರ್ವಾನುಮತದಿಂದ ಸ್ಕಾಟ್‍ನನ್ನು ಕೊಲ್ಲಲು ತೀರ್ಮಾನಿಸಿತು. ಅದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಾಗಿರದೆ, ತಮ್ಮ ರಾಷ್ಟ್ರದ ಧೀಮಂತ ನಾಯಕನಿಗಾದ ಅಪಮಾನ, ದೇಶಕ್ಕಾದ ಅಪಮಾನಕ್ಕೆ ಪ್ರತಿಯಾಗಿ ಉತ್ತರವನ್ನು ನೀಡುವ ಉದ್ದೇಶವನ್ನು ಹೊಂದಿತ್ತು. ಈ ಹೋರಾಟದಲ್ಲಿ ತಮ್ಮ ಜೀವ ಹೋಗಬಹುದೆಂದು ಕ್ರಾಂತಿಕಾರಿಗಳಿಗೆ ತಿಳಿದಿದ್ದರೂ ಸಹ ದೇಶದ ಜನತೆಗೆ, ಮುಖ್ಯವಾಗಿ ಯುವಜನತೆಗೆ, ‘ಅಪಮಾನವನ್ನು ಮೌನವಾಗಿ ಸಹಿಸಬೇಡಿ’ ಎನ್ನುವ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಿತ್ತು.

ದುರ್ಗಾ ಭಾಬಿ ತಾನೇ ಈ ಕೆಲಸದಲ್ಲಿ ಭಾಗಿಯಾಗುವೆನೆಂದು ಹೇಳಿದರೂ, ಇತರರು ಈ ಅಪಾಯಕಾರಿ ಕೆಲಸವನ್ನು ಆಕೆಗೆ ಒಪ್ಪಿಸಲು ತಯಾರಿರಲಿಲ್ಲ. ಆಕೆ ಹೆಣ್ಣು ಮತ್ತು ಅಸಹಾಯಕಳೆಂದಲ್ಲ. ಕ್ರಾಂತಿಕಾರಿಗಳು ಸ್ತ್ರೀ  ಅಬಲೆ ಎಂಬ ತತ್ವವನ್ನು ವಿರೋಧಿಸುತ್ತಿದ್ದವರು. ದುರ್ಗಾದೇವಿ ಈಗಾಗಲೇ ಮೂರು ವರ್ಷ ಜೈಲು ಶಿಕ್ಷೆ  ಅನುಭವಿಸಿದ್ದವರು. ಆದರೆ ಆಕೆ ಅವರೆಲ್ಲರಿಗೂ ಗೌರವಾನ್ವಿತ ಅತ್ತಿಗೆಯಾಗಿದ್ದರು. ಆಕೆಗೊಂದು ಸಣ್ಣ ಮಗುವಿತ್ತು. ಆದ್ದರಿಂದಲೇ ಈ ಕಾರ್ಯಾಚರಣೆಯಿಂದ ಆಕೆಯನ್ನು ದೂರವಿಡಲು ನಿರ್ಧರಿಸಿದರು.
ಆ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದರೂ, ಆ0iÉ್ಕುಯಾದದ್ದು ಭಗತ್‍ಸಿಂಗ್, ರಾಜಗುರು, ಆeóÁದ್ ಮತ್ತು ಜಯಗೋಪಾಲ್. ಸುಖದೇವ್ ತಾನೇ ಕೆಲಸ ವಹಿಸಿಕೊಳ್ಳುತ್ತೇನೆಂದರೂ, ಆತ ಕಾರ್ಯಾಚರಣೆಯನ್ನು ರೂಪಿಸುವವರಾದ್ದರಿಂದ ಮತ್ತು ದೇಶದ ವಿವಿಧ ಭಾಗಗಳ ಕ್ರಾಂತಿಕಾರಿಗಳನ್ನು ಒಟ್ಟುಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದುದರಿಂದ ಅವರನ್ನು ಈ ಕಾರ್ಯದಿಂದ ಹೊರಗಿಡಲಾಯಿತು. ಜಯಗೋಪಾಲ್ ಪೆÇಲೀಸ್ ಠಾಣೆಯ ಹೊರನಿಂತು ಸ್ಕಾಟ್ ಬಂದ ತಕ್ಷಣ ಸೂಚನೆ ನೀಡಬೇಕಿತ್ತು. ಭಗತ್‍ಸಿಂಗ್ ಸ್ಕಾಟ್‍ನಿಗೆ ಗುಂಡಿಟ್ಟು ಕೊಲ್ಲಬೇಕಿತ್ತು. ರಾಜಗುರು ಭಗತ್‍ಸಿಂಗ್‍ರ  ಜೊತೆಗಿದ್ದು ಅವರಿಗೆ ರಕ್ಷಣೆ ನೀಡಬೇಕಿತ್ತು. ಆeóÁದ್ ಇವರ ತಪ್ಪಿಸಿಕೊಳ್ಳುವಿಕೆಗೆ ಸಹಾಯ ಮಾಡಬೇಕಿತ್ತು.


ಬ್ರಿಟಿಷ್ ವ್ಯವಸ್ಥೆಯ ಪ್ರತಿನಿಧಿಯ ಹತ್ಯೆ
ಡಿಸೆಂಬರ್ 17ರಂದು ಸ್ಕಾಟ್ ಪೆÇಲೀಸ್ ಠಾಣೆಗೆ ಬರಲಿಲ್ಲ. ಹೊರಗಡೆ ಬಂದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಜೆ.ಪಿ ಸ್ಯಾಂಡರ್ಸ್‍ನನ್ನೇ ಸ್ಕಾಟ್ ಎಂದು ತಪ್ಪಾಗಿ ಭಾವಿಸಿ ಜೈಗೋಪಾಲ್ ಸೂಚನೆ ನೀಡಿದ. ರಾಜಗುರು ತಕ್ಷಣವೇ ಗುಂಡು ಹಾರಿಸಿದರು. ಭಗತ್‍ಸಿಂಗ್ ‘ಅವನಲ್ಲ, ಅವನಲ್ಲ’ ಎನ್ನುವಷ್ಟರಲ್ಲಿ ಸ್ಯಾಂಡರ್ಸ್ ಸತ್ತು ಹೋಗಿದ್ದ. ಭಗತ್‍ಸಿಂಗ್‍ರಿಗೆ ಅದು ಸ್ಯಾಂಡರ್ಸ್ ಎಂದು ಗೊತ್ತಾದರೂ ಅದರ ಬಗ್ಗೆ ವಿಷಾದವೇನೂ ಇರಲಿಲ್ಲ ಏಕೆಂದರೆ ಸ್ಯಾಂಡರ್ಸ್ ಕೂಡ ಲಾಲಾಜಿಯವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದ. ಆತನ ಸಾವನ್ನು ಖಚಿತ ಪಡಿಸಿಕೊಳ್ಳಲು ಭಗತ್ ಗುಂಡು ಹಾರಿಸಿದರು.

ಭಗತ್‍ಸಿಂಗ್ ಮತ್ತು ರಾಜಗುರು ಅಲ್ಲಿಂದ ತಪ್ಪಿಸಿಕೊಂಡು ಡಿ.ಎ.ವಿ. ಕಾಲೇಜಿನತ್ತ ಓಡಿದರು. ಇವರ ರಕ್ಷಣೆಗೆ ಬಂದಿದ್ದ ಆeóÁದರು ಇವರೊಂದಿಗಿದ್ದರು. ಮೂವರೂ, ಏನೂ ನಡೆದೇ ಇಲ್ಲವೇನೋ ಎಂಬಂತೆ ಶಾಂತವಾಗಿ ತಾವು ಸೈಕಲ್ ನಿಲ್ಲಿಸಿದ ಕಡೆ ಹೋಗಿ ಅದನ್ನು ಹತ್ತಿಕೊಂಡು ತಮ್ಮ ಮನೆಗೆ ಹಿಂತಿರುಗಿದರು.

ಸ್ವಲ್ಪ ಹೊತ್ತಿನಲ್ಲಿ0iÉುೀ ನಗರದ ಎಲ್ಲೆಡೆಯಲ್ಲಿಯೂ ಎಚ್‍ಎಸ್‍ಆರ್‍ಎ ಭಿತ್ತಿಪತ್ರಗಳು ಕಾಣಿಸಿಕೊಂಡವು.
“ಜೆ.ಪಿ.ಸ್ಯಾಂಡರ್ಸ್ ಸಾವು: ಲಾಲಾಜಿಯವರ ಹತ್ಯೆಗೆ ಪ್ರತೀಕಾರ”
“ಸಾಮಾನ್ಯ ಪೆÇಲೀಸ್ ಅಧಿಕಾರಿಯೊಬ್ಬ ಹಿಂದೂಸ್ಥಾನದ ಮುನ್ನೂರು ಮಿಲಿಯನ್ ಜನರ ಪ್ರೀತಿಗೆ ಪಾತ್ರರಾದ, ಹಿರಿಯರಾದ ಲಾಲಾಜಿಯವರ ಮೈಮುಟ್ಟುವಷ್ಟು ಮತ್ತು ಅವರ ಸಾವಿಗೆ ಕಾರಣನಾಗುವಷ್ಟು ನೀಚತನಕ್ಕೆ ಇಳಿಯುತ್ತಾನೆಂದು ಊಹಿಸಿಕೊಳ್ಳುವುದೇ ಅಸಾಧ್ಯ. ರಾಷ್ಟ್ರದ ರಾಷ್ಟ್ರೀಯತೆಯ ಮೇಲೆ ಬಿದ್ದ ಹೊಡೆತಗಳು ನಮ್ಮ ದೇಶದ ಯುವಜನರ ಸ್ಥೈರ್ಯಕ್ಕೆ ಸವಾಲನ್ನೊಡ್ಡಿದೆ. ಇಡೀ ಪ್ರಪಂಚಕ್ಕೆ ತಿಳಿಯಲಿ. ಭಾರತವಿನ್ನೂ ಬದುಕಿದೆ, ಭಾರತೀಯ ಯುವಜನರ ರಕ್ತವಿನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ, ಈಗಲೂ ಸಹ ಅವರು ತಮ್ಮ ಜೀವವನ್ನು ಬಲಿದಾನ ಮಾಡಬಲ್ಲರು.

“ಎಚ್ಚರಿಕೆ ನಿರಂಕುಶ ಪ್ರಭುಗಳೇ ಎಚ್ಚರಿಕೆ”
“ಶೋಷಣೆ, ತುಳಿತಕ್ಕೊಳಪಟ್ಟ ಜನತೆಯ ಭಾವನೆಗಳನ್ನು ಘಾಸಿಗೊಳಿಸದಿರಿ. ಇಂತಹ ನೀಚ ಕೃತ್ಯಗಳನ್ನು ಎಸಗುವ ಮುನ್ನ ಮತ್ತೆ ಮತ್ತೆ ಯೋಚಿಸಿರಿ.... ಪರಕೀಯ ಸರ್ಕಾರದ ದಮನ ಮತ್ತು ದಬ್ಬಾಳಿಕೆಯಡಿಯಲ್ಲಿಯೂ ಸಹ ಯುವಜನರ ನಮ್ಮ ಪಕ್ಷ, ದುರಹಂಕಾರಿ ಆಳ್ವಿಕರಿಗೆ ಪಾಠ ಕಲಿಸಲು ಜೀವಂತವಾಗಿರುತ್ತದೆ. ಅವರು ಎಲ್ಲಾ ವಿರೋಧಗಳು ಮತ್ತು ದಮನದಡಿಯಲ್ಲಿಯೂ ಸಹ, ಗಲ್ಗಂಬದಲ್ಲಿಯೂ ಸಹ, ಇದನ್ನು ಪುನಃ ಪುನಃ ಸಾರಿಸಾರಿ ಹೇಳುತ್ತಾರೆ.”

“ಕ್ರಾಂತಿ ಚಿರಾಯುವಾಗಲಿ”
“ವ್ಯಕ್ತಿಯ ಸಾವಿಗಾಗಿ ನಮಗೆ ವಿಷಾದವಿದೆ. ಆದರೆ ವಿಶ್ವದ ಅತ್ಯಂತ ಅಮಾನವೀಯ ನಿರಂಕುಶ ಸರ್ಕಾರದ ಪ್ರತಿನಿಧಿಯಾದ ವ್ಯಕ್ತಿ ಸತ್ತಿದ್ದಾನೆ. ಅತ್ಯಂತ ಕ್ರೂರವಾದ, ಹೀನವಾದ ಮತ್ತು ತುಚ್ಛವಾದ ಸಂಸ್ಥೆಯೊಂದರ ಪ್ರತಿನಿಧಿ ಸತ್ತಿದ್ದಾನೆ. ಮಾನವನ ರಕ್ತಪಾತಕ್ಕಾಗಿ ವಿಷಾದವಿದೆ. ಆದರೆ ಕ್ರಾಂತಿಯಲ್ಲಿ ವ್ಯಕ್ತಿಯ ಬಲಿ ಅನಿವಾರ್ಯ.”
“ಕ್ರಾಂತಿ ಚಿರಾಯುವಾಗಲಿ.”

ಬ್ರಿಟಿಷರಿಗೆ ಆಘಾತ, ಜನತೆಯ ಮೆಚ್ಚುಗೆ
ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ದಿಗ್ಭ್ರಮೆಗೊಳಗಾಯಿತು. ಹತ್ಯೆ ಮಾಡಿದವರ ಹುಡುಕಾಟ ಆರಂಭಿಸಿರು. ನಗರದ ಎಲ್ಲೆಡೆ ಪೆÇಲೀಸ್ ಸಿಬ್ಬಂದಿಯನ್ನು ಹಾಕಲಾಯಿತು. ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಯಿತು. ದೇಶದ ಜನತೆ ಸಹ ಕ್ರಾಂತಿಕಾರಿಗಳ ಇಂತಹ ದಿಟ್ಟ ಕಾರ್ಯದಿಂದ ಒಂದೆಡೆ ಆಶ್ಚರ್ಯಚಕಿತರಾದರೂ ಇನ್ನೊಂದೆಡೆ ಲಾಲಾಜಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ಯುವಕರ ಬಗ್ಗೆ ಅಗಾಧವಾದ ಮೆಚ್ಚುಗೆಯನ್ನು ಬೆಳೆಸಿಕೊಂಡರು.  ನಂತರದ ದಿನಗಳಲ್ಲಿ ಸ್ಯಾಂಡರ್ಸ್ ಕೊಲೆಗೆ ಕಾರಣರು ಭಗತ್ ಮತ್ತು ಸಂಗಡಿಗರೆಂದು ತಿಳಿದಾಗ ಜನತೆ ಅವರನ್ನು ಭಯೋತ್ಪಾದಕರೆಂದು ಹೀಗಳೆಯಲಿಲ್ಲ. ಬದಲಿಗೆ ಭಾರತದ ಗೌರವವನ್ನು ರಕ್ಷಿಸಿದ ಧೀರ ಯುವಕರು ಎಂದು ಹಾಡಿಹೊಗಳಿತು. ಕೆಲವೇ ದಿನಗಳಲ್ಲಿ ಭಗತ್ ಪಂಜಾಬಿನ ಮನೆಮಾತಾದರು. ಹಳ್ಳಿಹಳ್ಳಿಗಳಲ್ಲೂ ಅವರ ಚಿತ್ರವಿದ್ದ ಕ್ಯಾಲೆಂಡರ್‍ಗಳು  ಭಿತ್ತಿ ಪತ್ರಗಳು ಕಾಣಿಸಿಕೊಂಡವು. ಅವರ ಕುರಿತ ಎಷ್ಟೋ ಹಾಡುಗಳನ್ನು ರಚಿಸಿ ಹಾಡಲಾಯಿತು. ಜನತೆ ಹೆಮ್ಮೆಯಿಂದ ಅವರನ್ನು “ಭಾರತದ ವೀರಪುತ್ರ” ಎಂದು ಕರೆದರು.

ಲಾಹೋರಿನಿಂದ ಸುರಕ್ಷಿತ ತಾಣದೆಡೆಗೆ
ಅವರು ನಡೆಸಿದ ಹತ್ಯೆಗೆ ಸಾಕ್ಷಿಗಳಾರೂ ಇಲ್ಲದಿದ್ದರೂ, ಲಾಹೋರಿನಿಂದ ಹೊರ ಹೋಗುವುದು ಸುರಕ್ಷಿತವೆಂದು ಎಲ್ಲರೂ ಭಾವಿಸಿದರು. ಆ ಯೋಜನೆಯನ್ನು ರೂಪಿಸಿದವರು ಸುಖದೇವ್. ಭಗತ್‍ಸಿಂಗ್ ಬ್ರಿಟಿಷ್ ಅಧಿಕಾರಿಯಂತೆ ವೇಷ ಧರಿಸಿ ದುರ್ಗಾಭಾಬಿಯವರ ಮನೆಗೆ ಹೋದರು. ಹಿಂಜರಿಕೆಯಿಂದಲೇ, “ಭಾಬಿ (ಅತ್ತಿಗೆ), ನನ್ನ ಪತ್ನಿಯಂತೆ ವೇಷ ಧರಿಸಿ ನನ್ನೊಂದಿಗೆ ಬರಲು ಸಿದ್ಧರಿರುವಿರಾ, ಇಲ್ಲಿಂದ ತಪ್ಪಿಸಿಕೊಳ್ಳಲು ಇದೇ ಉತ್ತಮ ಮಾರ್ಗ” ಎಂದರು. ಸಂಘಟನೆಯ ಶಿಸ್ತಿನ ಸಿಪಾಯಿಯಾಗಿದ್ದ ದುರ್ಗಾದೇವಿ ತಕ್ಷಣವೇ ಸಮ್ಮತಿಸಿದರು. ಇದು ಅವರ ಮನೋಸ್ಥೈರ್ಯ ಮತ್ತು ಹೋರಾಟದ ಬಗ್ಗೆ ಇದ್ದ ನಿಷ್ಠೆಗೆ ಮತ್ತು ಭಗತ್‍ರ ಬಗ್ಗೆ ಇದ್ದ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ. ಸೇವಕನಾಗಿ ರಾಜಗುರು ನಟಿಸುತ್ತಾ ಲಾಹೋರಿನ ರೈಲ್ವೆ ಸ್ಟೇಷನ್ನಿನಲ್ಲಿ ಪೆÇಲೀಸರ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಕಲ್ಕತ್ತಾಗೆ ರೈಲು ಹತ್ತಿದರು. ಆeóÁದ್ ಸಾಧುಗಳ ಗುಂಪಿನಲ್ಲಿ ಸೇರಿ ಪೆÇೀಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದರು.

ಆದರೆ ಮುಂಜಾಗರೂಕತೆಯ ಕ್ರಮವಾಗಿ ಕಾನ್ಪುರದಲ್ಲಿ ಇಳಿದು ಹೋಟೆಲ್ ಒಂದರಲ್ಲಿ ತಂಗಿದರು. ಮರುದಿನ ಕಲ್ಕತ್ತಾದ ಟ್ರೈನ್ ಹತ್ತಿದರು. ಮಾರ್ಗದಲ್ಲಿ ಭಗತ್‍ಸಿಂಗ್ ತಮ್ಮ ಬಹಳಷ್ಟು ವಿಷಯಗಳನ್ನು ದುರ್ಗಾಭಾಬಿಯವರಲ್ಲಿ ಹೇಳಿಕೊಂಡರು. ಅವರ ಬಗ್ಗೆ ತಿಳಿದ ಭಾಬಿಗೆ ಆಶ್ಚರ್ಯವಾಯಿತು. ಏಕೆಂದರೆ ಅವರು ಭಗತ್‍ಸಿಂಗ್‍ರವರು ಆಲೋಚನೆಯಿಂದ ಕೆಲಸ ಮಾಡುವ ಕ್ರಾಂತಿಕಾರಿಯೇ ಹೊರತು ಅಲ್ಲಿ ಭಾವುಕತೆಗೆ ಅವಕಾಶವಿಲ್ಲ ಎಂದುಕೊಂಡಿದ್ದರು. ಆದರೆ ಭಗತ್‍ಸಿಂಗ್‍ರೊಡನೆ ಮಾತನಾಡಿದ ಮೇಲೆ ಅವರು ವ್ಯಕ್ತಿಗಳಿಗೆ, ಜೀವನಕ್ಕೆ, ಭಾವನೆಗಳಿಗೆ ಎಷ್ಟು ಬೆಲೆ ಕೊಡುತ್ತಿದ್ದರು ಎಂಬುದನ್ನು ಅರಿತರು. ಅನಗತ್ಯವಾಗಿ ಯಾರಿಗೂ ಕೇಡು ಬಯಸದ, ಎಲ್ಲರಿಗೂ ಒಳಿತನ್ನೇ ಬಯಸುವ, ಉದಾತ್ತ ವ್ಯಕ್ತಿತ್ವ ಹೊಂದಿದ ಅಪರೂಪದ ವ್ಯಕ್ತಿ ಭಗತ್‍ಸಿಂಗ್ ಎಂಬುದನ್ನು ಅರಿತರು.
 

(ಮುಂದುವರೆಯುತ್ತದೆ)
ಸುಧಾ ಜಿ

ಇಳಿವಯಸ್ಸಿನಲ್ಲಿ ಏಕಾ೦ಗಿತನ, ಅನಿವಾರ್ಯವೆ?




ಧಾರವಾಡದ ಶಾಲೆಯಲ್ಲಿ ಹಲವು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದರೂ, ಪಿ೦ಚಣಿದಾರರ ಸ್ವರ್ಗವೆ೦ದೆ ಹೆಸರು ಗಳಿಸಿರುವ ನಗರಕ್ಕೆ ವರ್ಷಾನು-ವರ್ಷಗಳ ನ೦ತರ ಭೇಟಿ ನೀಡುತ್ತಿರುವ ಘಳಿಗೆ ಮನದಲ್ಲಿ ಒ೦ದು ರೀತಿಯ ಕುತೂಹಲವನ್ನೇ ಉ೦ಟುಮಾಡಿತ್ತು. ಓದಿದ ಶಾಲೆಗೆ ಭೇಟಿ, ವಾಸವಿದ್ದ ಮನೆಯತ್ತ ಒ೦ದು ನೋಟ, ಆಪ್ತ ಸ್ನೇಹಿತನ ಮನೆಯಲ್ಲಿ ವಾಸ್ತವ, ಪೇಟೆ-ಬೀದಿಗಳಲ್ಲಿ ಸುತ್ತಾಟ, ಇತ್ಯಾದಿಗಳು ಹೆಚ್ಚಿದ ಕಾತುರತೆಗೆ ಕಾರಣವಾಗಿತ್ತು.

ಸ್ನೇಹಿತನ ಮನೆ ಇದ್ದದ್ದು ಧಾರವಾಡದ ಮೂಲ ಬಡಾವಣೆಯಲ್ಲಿ. ಬಹಳ ವರ್ಷಗಳ ನ೦ತರದ ಭೇಟಿಯಾದ್ದರಿ೦ದ ಬದಲಾವಣೆಗಳ ಬಗ್ಗೆ ಹೇಳಬೇಕಿಲ್ಲ. ರಸ್ತೆಗಳು ಕಿರಿದಾಗಿರಲಿಲ್ಲವಾದರೂ ಎಲ್ಲಿ ನೋಡಿದರೂ ಎತ್ತರದ ಕಟ್ಟಡಗಳು, ರಸ್ತೆಯಲ್ಲಿ ವಾಹನ ದಟ್ಟಣೆ ಊಹಿಸಲೂ ಅಸಾಧ್ಯ. ಇವೆಲ್ಲದರ ನಡುವೆ ಸ್ನೇಹಿತನ ಮನೆಯ ಬೀದಿಗೆ ಬ೦ದಾಗ ಒ೦ದು ಅಚ್ಚರಿ ಮಾತ್ರ ಕಾದಿತ್ತು. ’ಇದೇನಾ ಹಿ೦ದೆ ಭೇಟಿ ಇತ್ತ ಮನೆ?’ ಎ೦ಬ ಮಟ್ಟಿಗೆ ವಿನ್ಯಾಸವೇ ಬದಲಾಗಿತ್ತು. ಮು೦ಬಾಗಿಲು ಎರಡಾಗಿತ್ತು, ಎರಡು ಬಾಗಿಲುಗಳ ನಡುವೆ ’ಕ೦ಪೌ೦ಡ್ ವಾಲ್’ - ತಬ್ಬಿಬ್ಬು ಆಗುವ ಹಾಗೆ ಮಾಡಿತ್ತು. ಯಾವ ಬಾಗಿಲನ್ನು ತಟ್ಟಬೇಕು ಎ೦ಬ ಬಗ್ಗೆ ಸಹಜ ಗೊ೦ದಲ. ಸ೦ದೇಹಕ್ಕೆ ಮನ ಒಡ್ದದೇ ಹಳೆಯ ಬಾಗಿಲನ್ನು ತಟ್ಟಿದೆ..... ಕಾದೆ..... ಸುಮಾರು ಹತ್ತು-ಹದಿನೈದು ನಿಮಿಷಗಳಾದರೂ ಬಾಗಿಲು ತೆರೆಯಲಿಲ್ಲ. ಬಹುಶ್: ಮನೆಯಲ್ಲಿ ಯಾರೂ ಇರಲಾರರೆ೦ಬ ಅನುಮಾನದಿ೦ದ ಮತ್ತೊ೦ದು ’ಮೇನ್ ಡೋರ್’ ತಟ್ಟಿದೆ. ಪರಿಚಯವಿಲ್ಲದ ವ್ಯಕ್ತಿ ಬಾಗಿಲು ತೆರೆದರು. ಒಬ್ಬರಿಗೊಬ್ಬರು ಪರಿಚಯವಿಲ್ಲ. ಭೇಟಿ ನೀಡುವ ಬಗ್ಗೆ ಸೂಚನೆ ಇದ್ದಿದ್ದರಿ೦ದ ಆ ವ್ಯಕ್ತಿಯ ಮುಖ ಚಹರೆಯ ಬದಲಾವಣೆ ಕಾಣಬಹುದಾಗಿತ್ತು. ಅಷ್ಟರಲ್ಲಿ ಕ೦ಡ ಸ್ನೇಹಿತನ ಮುಖದಿ೦ದ ನಿಟ್ಟುಸಿರು ಬಿಟ್ಟು ಒಳನಡೆದೆ. ಬಹಳವೇ ಆತ್ಮೀಯತೆಯ ಸ್ವಾಗತ ಸಿಕ್ಕರೂ, ಮನದಲ್ಲಿ ಪಕ್ಕದ ಇನ್ನೊ೦ದು ’ಬಾಗಿಲಿನ’ ಬಗ್ಗೆ ಕುತೂಹಲ ಮಾಸಿರಲಿಲ್ಲ. ಕೈಕಾಲು ತೊಳೆದು, ಕೊ೦ಚ ಆತಿಥ್ಯವನ್ನು ಸ್ವೀಕರಿಸಿ, ಧೀರ್ಘ ಹರಟೆಯ ನ೦ತರ, ಸ್ನೇಹಿತನೊಟ್ಟಿಗೆ ಅತ್ಯ೦ತ ಸಲಿಗೆ ಇದ್ದಿದ್ದರಿ೦ದ, ಪ್ರಶ್ನಿಸುವ ಧೈರ್ಯ ಮಾಡಿದೆ – ಅದೂ ಮೆಲುದ್ವನಿಯಲ್ಲಿ. ಆಗ ತಿಳಿದದ್ದು ವಿಸ್ಮಯಕಾರಿ ಸ೦ಗತಿ, ನೆನಪಾದದ್ದು ಹಳೆಯ ನಾಣ್ಣುಡಿ “ಮುಪ್ಪು ಬ೦ದೊರು....... ತಪ್ಪು ಮಾಡೋಲ್ವೆ?”



ಆ ಮನೆಯಲ್ಲಿರುವುದು ಸ್ನೇಹಿತನ ಖಾಸ ದೊಡ್ದಪ್ಪ; ನನಗೂ ವಯ್ಯುಕ್ತಿಕವಾಗಿ ಪರಿಚಿತ ವ್ಯಕ್ತಿ. ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿಯಾಗಿದ್ದಾರೆ; ಹಲವು ವರ್ಷಗಳ ಹಿ೦ದೆ ಪತ್ನಿಯ ವಿಯೋಗ; ಮಕ್ಕಳೆಲ್ಲ ವಿದ್ಯಾಭ್ಯಾಸ ಮುಗಿಸಿ, ಉತ್ತಮ ನೌಕರಿ ಹಿಡಿದು, ಸ೦ಸಾರಸ್ಥರಾಗಿ ವಿದೇಶದಲ್ಲಿ ನೆಲೆಸಿದ್ದಾರೆ; ಮನೆ ಪಿತ್ರಾರ್ಜಿತ ಆಸ್ತಿಯಾದ್ದರಿ೦ದ ಇಬ್ಭಾಗವಾಗಿದೆ; ಸಮಸ್ಯೆ ಇತ್ಯರ್ಥವಾಗಿಲ್ಲ; ಪ್ರಸ್ತುತ ಒ೦ಟಿ ಜೀವನ. ಪರಿಚಯದವರೊಬ್ಬರು ವರ್ತನೆಯ ರೀತ್ಯ ಮು೦ಜಾನೆಯ ತಿ೦ಡಿ, ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ವಿದೇಶದಲ್ಲಿರುವ ಮಕ್ಕಳಿ೦ದಲೇ ಆಗಿದೆ. ರಾತ್ರಿ ಸ್ವಲ್ಪ ಹಣ್ಣು-ಹ೦ಪಲು-ಹಾಲು ಸೇವನೆ, ತೋಟ ದೂರ, ಕಣ್ಣು ಮ೦ಜಾಗಿರುವ ಕಾರಣಕ್ಕೆ ಹೊರಗೆ ಸುತ್ತಾಡುವುದು ಅಪರೂಪ. ಇಷ್ಟೆಲ್ಲ ಬೆಳವಣಿಗೆಗಳು ಹಿರಿಯರನ್ನು ಭೇಟಿ ಮಾಡುವತ್ತ ಪ್ರೇರೇಪಿಸಿತು. ಎದ್ದು ಹೊರಟೆ, ಪಕ್ಕದ ಬಾಗಿಲಿನತ್ತ ಸುತ್ತಿ-ಬಳಸಿ ಬ೦ದೆ. ಸಾಕಷ್ಟು ಹೊತ್ತು ಬಾಗಿಲು ಬಡಿದ ನ೦ತರ ’ಅಜ್ಜ’ ಬ೦ದು ಕಿಟಕಿಯಿ೦ದ ನೋಡಿದರು, ನನ್ನ ಪರಿಚಯ ಮಾಡಿಕೊ೦ಡರೂ ನೆನಪಿಗೆ ಬಾರದ್ದರಿ೦ದ, ಮತ್ತೆ-ಮತ್ತೆ ಕೆಲವು ವಿವರಗಳನ್ನು ಕೇಳಿ, ನನ್ನ ವಿವರ ಖಾತ್ರಿಯಾದ್ದರಿ೦ದ ಬಾಗಿಲು ತೆರೆದು ಒಳಗೆ ಬರಮಾಡಿಕೊ೦ಡರು!

ಅವರೊಟ್ಟಿಗಿದ್ದ ಸುಮಾರು ಒ೦ದುವರೆ ತಾಸಿನ ಅವಧಿಯಲ್ಲಿ ಹಳೆಯ ನೆನಪನ್ನೆಲ್ಲ ಮೆಲುಕು ಹಾಕುತ್ತ, ಬಹುತೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯವಾಯಿತು. ಉತ್ತರ ಕರ್ನಾಟಕದ ಅಪ್ಪಟ ಆತ್ಮೀಯತೆಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಪರಿಚಯದ ವ್ಯಕ್ತಿಯಾದ್ದರಿ೦ದ, ನನ್ನ ಅಪರೂಪದ ಭೇಟಿ ’ದೊಡ್ದಪ್ಪನ’ (ಚಿಕ್ಕವರಿದ್ದಾಗ ನಾವುಗಳು ಹಾಗೆಯೇ ಕರೆಯುತ್ತಿದ್ದದ್ದು) ಮನದಲ್ಲಿ ಏನೋ ಒ೦ದು ರೀತಿಯ ಹೇಳಲಾರದ ಉಲ್ಲಾಸ ತ೦ದಿತ್ತು. ಹಲವು ಸ೦ಗತಿಗಳ ವಿಚಾರವಾಗಿ ಮಾತುಕತೆಯ ನ೦ತರ ಇಳಿವಯಸ್ಸಿನಲ್ಲಿನ ಒ೦ಟಿ ಜೀವನದ ಬಗ್ಗೆ ಪ್ರಸ್ತಾಪ ಅನಿವಾರ್ಯವಾಗಿತ್ತು. ಏಕಾ೦ಗಿಯಾಗಿ ಊಟ, ನಿದ್ರೆ, ವಿರಮಿಸುವುದು ಇನ್ನಿತರೆ ದೈನ೦ದಿನ ಚಟುವಟಿಕೆಗಳೂ ಅನಿವಾರ್ಯವಾದರೂ ಅವರ ಮಾತುಗಳು ಅತಿಶಯೋಕ್ತಿಯಾಗಿರಲಿಲ್ಲ, ದು:ಖಕರವೇ ಆಗಿತ್ತು; ಹಬ್ಬ-ಹರಿದಿನಗಳಿರಲಿ ದಿವ೦ಗತ ಮಡದಿಯ ವಾರ್ಷಿಕ ಕ್ರಿಯೆಯನ್ನೂ ಸಹ ಏಕಾ೦ಗಿಯಾಗಿ ನಡೆಸುವ ಬಗ್ಗೆ ಪ್ರಸ್ತಾಪಿಸಿದಾಗ ಏಕಾ೦ಗಿತನ ಒ೦ದು ರೀತಿಯ ಶಾಪವೇ ಎ೦ಬುದಾಗಿತ್ತು ನಮ್ಮಿಬ್ಬರ ಮನದಾಳದ ಅನಿಸಿಕೆ. ವಯ್ಯುಕ್ತಿಕ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ, ಕೌಟು೦ಬಿಕ ಸಮಸ್ಯೆಗಳನ್ನು ಮಕ್ಕಳಿ೦ದ ಮುಚ್ಚಿಟ್ಟು, ಸಾಕಿ, ಸಲುಹಿ, ಬೆಳೆಸಿ, ತಕ್ಕ ಮಟ್ಟಿಗೆ ಶಿಕ್ಷಣ ನೀಡಿ, ಕೈ-ಕಾಲು ಗಟ್ಟಿಯಿದ್ದಾಗ ಮೊಮ್ಮೊಕ್ಕಳೊಟ್ಟಿಗೆ ಕೊ೦ಚ ಸಮಯ ಸ೦ತಸದಿ೦ದ ಕಾಲಕಳೆಯುವ ಕನಸು ಹೊತ್ತಿದ್ದರೂ, ದೂರದ ದೇಶದಲ್ಲಿ ಮಕ್ಕಳ ಸ೦ಸಾರ ಸುಖವಾಗಿರುವ ಸ೦ಧರ್ಭದಲ್ಲಿ ನಮ್ಮ ಆಸೆಗಳು ಈಡೇರದಿದ್ದಾಗ ಆಗುವ ಸ೦ಕಟವನ್ನು ತಮ್ಮ ಮುಖ ಚಹರೆಯಲ್ಲಿಯೇ, ಭಾವನೆಗಳ ಮುಖೇನ ಹೊರಹಾಕಿದ್ದು ವಿಷಾದನೀಯವೇ. ಮಕ್ಕಳು-ಮೊಮ್ಮೊಕಳು ಖುದ್ದಾಗಿ ಭೇಟಿ ನೀಡುವುದಿರಲಿ, ದೂರವಾಣಿಯಲ್ಲಿ ದ್ವನಿ ಕೇಳುವುದೂ ಇತ್ತೀಚಿಗೆ ಅಪರೂಪವಾಗಿರುವ ಬಗ್ಗೆ ತಿಳಿದಾಗ ಪ್ರತಿಕ್ರಿಯೆ ನೀಡುವಷ್ಟು, ಸಮಾಧಾನ ಹೇಳುವಷ್ಟು ಧೈರ್ಯವಾಗಲಿಲ್ಲ ......! ಅವರ ಮನದಾಳದ ಮಾತುಗಳು ಕಣ್ಣ೦ಚನ್ನು ಒದ್ದೆಮಾಡಿತ್ತು. ಭಾರವಾದ ಮನಸ್ಸಿನಿ೦ದ ನಮಸ್ಕರಿಸಿ, ಆಶೀರ್ವಾದ ಪಡೆದು ಹೊರನಡೆಯಲು ಅನುಮತಿ ಬೇಡಿದಾಗ ’ದೊಡ್ದಪ್ಪನ’ ಮುಖದಲ್ಲಿ ಅಸಮ್ಮತಿ ಇದ್ದರೂ, ಆ೦ತರಿಕ ಸ೦ತೋಷಕ್ಕೆ, ಸಮಾಧಾನಕ್ಕೆ ಮಿತಿಯೇ ಇರಲಿಲ್ಲ. ನಾನೇನು ಅವರ ಮಗನಲ್ಲ, ನೆ೦ಟನಲ್ಲ, ಬ೦ಧುವಲ್ಲ. ಕೇವಲ ತಮ್ಮನ ಮಗನ ಸ್ನೇಹಿತ. ಅದೂ ಭೇಟಿಯಾಗುತ್ತಿರುವುದು ಹಲವಾರು ವರ್ಷಗಳ ನ೦ತರ, ಆಕಸ್ಮಿಕವಾಗಿ. ಮನದಲ್ಲಿ ಮೂಡಿದ ಒ೦ದು ಗ೦ಭೀರವಾದ ಚಿ೦ತನೆ – ಧಾರ್ಮಿಕ ಸ೦ಸ್ಕಾರಗಳಿಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ಒಟ್ಟು ಕುಟು೦ಬದಲ್ಲಿ ಹುಟ್ಟಿ-ಬೆಳೆದ ವ್ಯಕ್ತಿಗಳಿಗೇ ಈ ರೀತಿಯ ಅನಿವಾರ್ಯದ ಎಕಾ೦ಗಿತನ ಬಿಡದಿದ್ದಾಗ, ಇ೦ದಿನ ಪೀಳಿಗೆ ಬೆಳೆಯುವುದೇ ಒ೦ದೋ-ಎರಡೋ ಮಕ್ಕಳೊಟ್ಟಿಗೆ, ನೆ೦ಟರೊಡನೆ ಬಾ೦ಧವ್ಯ ಕೇವಲ ಎಸ್.ಎಮ್.ಎಸ್ ಇಲ್ಲವೇ ವಾಟ್ಸಪ್ಪ್ ಮೂಲಕ, ಮುಖಾ-ಮುಖಿ ಭೇಟಿಗೆ ಸಮಯವೂ ಇಲ್ಲ, ಅಗತ್ಯವೂ ಇಲ್ಲ, ಜೀವನ ಆರ೦ಭಿಸುವುದೇ ಏಕಾ೦ಗಿತನದಲ್ಲಿ, ಈ ಪೀಳಿಗೆಯೆ ಇಳಿವಯಸ್ಸಿನ ಜೀವನ ಹೇಗಿರಬಹುದೆ೦ಬುದನ್ನು ಊಹಿಸುವುದೂ ಕಠಿಣವೇ ಅಲ್ಲವೇ? ನಮ್ಮ ಪೂರ್ವಜರು ಬರೆದಿಟ್ಟ ಮತ್ತೊ೦ದು ನಾಣ್ಣುಡಿ “ಮಕ್ಕಳಿಲ್ಲದ ಮನೆ, ಕಾಳಿಲ್ಲದ ತೆನೆ ಎರಡೂ ಒ೦ದೇ” ನೆನಪಾಯಿತಾದರೂ.... ಪ್ರಸ್ತುತ ದಿನಗಳಲ್ಲಿ ಅಪ್ರಸ್ತುತವೇ? ಎ೦ಬ ಪ್ರಶ್ನೆ ಕಾಡುತ್ತಲೇ ಇತ್ತು. ಚಿ೦ತಿಸಬೇಕಾದವರು, ಯುವಕರಲ್ಲ ಮು೦ದೊ೦ದು ದಿನ ಇಳಿವಯಸ್ಸಿಗೆ ಕಾಲಿಡುವವರಲ್ಲವೇ?

ರಾಜೀವ್ ಎನ್. ಮಾಗಲ್
೯೧೬೪೩೯೮೭೫೭

ಸ್ತ್ರೀದನಿ - ಡಂಗನ್ಮಾಲ್ ನ ನೀರಿನ ಪತ್ನಿಯರು


ನ 


ಮುಂಬೈಯಿಂದ 106 ಕಿ,ಮೀ. ದೂರದಲ್ಲಿರುವ ಡೆಂಗನ್ಮಾಲ್ ಎಂಬ ಪುಟ್ಟ ಹಳ್ಳಿಯು ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದಿರದೆ, ಕಡು ಬಡವರು ನೆಲೆಸುವ ಕುಗ್ರಾಮವಾಗಿದ್ದರೂ, ಇತ್ತೀಚೆಗೆ ಹೆಚ್ಚು ಈ ಗ್ರಾಮದ ಬಗ್ಗೆ ಚರ್ಚೆಗಳಾಗುತ್ತಿವೆ. ಯಾವುದೋ ದೊಡ್ಡ ಪ್ರಮಾಣದ ಯೋಜನೆಗಳು ಬಂದು ಜನರು ನೆಮ್ಮದಿಯಿಂದ ಜೀವನ ನಡೆಸುವಂತ ವಿಚಾರಗಳಿಗೇನು ಇದು ಖ್ಯಾತಿ ಪಡೆಯುತ್ತಿಲ್ಲಾ, ಅಥವಾ ಮಂತ್ರಿಮಹೋದಯರು ಅಲ್ಲಿನ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆಂದು ನೀವು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದ್ಯಾವುದನ್ನೂ ಈ ಗ್ರಾಮದಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ. ಮುಂಬೈಯಿಂದ ಅನಿತು ದೂರದಲ್ಲೇ ಇದ್ದರೂ ಕುಡಿಯುವ ನೀರಿಗಾಗಿ ಇಲ್ಲಿಯ ಪುರುಷರು ಮರು ಮದುವೆಯಾಗಿ ಬಹುಪತ್ನಿತ್ವವನ್ನು ಒಪ್ಪಿಕೊಂಡು ನೀರಿನ ಹೆಂಡತಿಯರನ್ನು ಪಡೆಯುತ್ತಿದ್ದಾರೆ. ತಮ್ಮ ಮನೆಯ ನೀರಿನ ಬವಣೆ ನೀಗಬೇಕಾದರೆ, ದಿನ ಪೂರ್ತಿ ಮೈಲಿಗಟ್ಟಲೆ ದೂರ ನಡೆದು ನೀರನ್ನು ತರಬೇಕಾಗುತ್ತದೆ. 500 ಜನರಿರುವ ಈ ಗ್ರಾಮದಲ್ಲಿ ಪ್ರತಿ ನಿತ್ಯ ಹೆಂಗಳೆಯರು ಕ್ಯೂ ನಿಂತು ಇರುವ ಒಂದೆರಡು ಬಾವಿಗಳಿಂದಲೇ ಬಂದಿಗೆಗಳಲ್ಲಿ ನೀರು ತುಂಬಿಸಿಕೊಂಡು ಹೋಗುವರು. ಅದು ಬತ್ತಿ ಹೋದರೆ ಇವರ ಪಾಡು ಆ ದೇವರೇ ಬಲ್ಲ. ಹೀಗೆ ಕೇವಲ ಈ ಕೆಲಸಕ್ಕಾಗಿಯೇ ಮದುವೆಯಾದ ಇವರನ್ನೇ ನೀರ ಪತ್ನಿಯರು ಎಂದು ಕರೆಯುತ್ತಾರೆ. 66 ವರ್ಷದ ಸುಖಾರಾಮ್ ಭಗತ್ ಎಂಬುವವನು ಈವರೆಗೆ 03 ಮದುವೆಗಳಾಗಿದ್ದು, ಇವರಲ್ಲಿ ಯಾರು ಕಿರಿಯವಳೋ, ಅವಳ ಕೆಲಸವೇ ಈ ನೀರು ತರುವುದು. ಅದಕ್ಕೆಂದೇ ಅವಳನ್ನು ಮದುವೆಯೂ ಆಗಿರುವುದು. ಮನೆಗೆ ನೀರು ತರಲಿಕ್ಕೆ ಯಾರು ಇರಲಿಲ್ಲ. ಹಾಗಾಗಿ ಮದುವೆಯಾದೆ ಎಂದು ರಾಜಾರೋಷವಾಗಿ ಹೇಳುವನು. ಈ ಗ್ರಾಮದ ಸುಖಾರಾಮ್ ಭಗತ್‍ನೊಬ್ಬನೇ ಅಲ್ಲ ಹೀಗೆ ಮದುವೆಯಾಗಿರುವುದು, ಬಹುತೇಕರು ಬಹುಪತ್ನಿತ್ವವನ್ನು ಬೆಂಬಲಿಸುತ್ತಾರೆ. ಭಾರತದಲ್ಲಿ ಬಹುಪತ್ನಿತ್ವ ಕಾನೂನು ಬಾಹಿರವೆಂದು ತಿಳಿದಿದ್ದರೂ ಈ ಹಳ್ಳಿಯಲ್ಲಿ ಜಾರಿಯಲ್ಲಿದೆ. ಹೀಗೆ ಮದುವೆಯಾಗಿರುವ ಈ ಹೆಣ್ಣು ಮಕ್ಕಳಾದರೂ ಕಡು ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ. ಇವರಲ್ಲಿ ಕೆಲವರು ವಿಧವೆಯರು, ಅಥವಾ ಒಬ್ಬರೇ ಇರುವಂಥಹವರು, ಅಥವಾ ನಿರ್ಗತಿಕರೂ ಇರುವರು, ಹಾಗಾಗಿ ಎರಡನೇ / ಮೂರನೇ ಮದುವೆಯಾದರೂ ಯಾರು ತಲೆಕೆಡಿಸಿಕೊಂಡಿಲ್ಲ. ಇವರಿಗೊಂದು “ಬಾಳು ಸಿಗುವುದು” ಎನ್ನುವುದು ಅಲ್ಲಿನ ಜನರಲ್ಲಿರುವ ನಂಬಿಕೆ. ಆದ್ದರಿಂದ ಇಂತಹ ಮದುವೆಗೆ ಅಲ್ಲಿ ಬೆಂಬಲವಿದೆ.

ನೀರಿನ ಬವಣೆಯಲ್ಲಿ ಬೆಂದ ನಾರಿಯರು
ಇಂದಿನ ಆಧುನಿಕ ಯುಗದಲ್ಲೂ ನೀರಿನ (ಬವಣೆಗಾಗಿ) ಸಮಸ್ಯೆಯನ್ನು ನಿವಾರಿಸಲಿಕ್ಕಾಗಿ ಮದುವೆಗಳಾಗಿ ಅವರು ಕೇವಲ ನೀರು ತರುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುವುದು ಆಶ್ಚರ್ಯದ ಜೊತೆಗೆ ನೋವು ಕೊಡುವ ಸಂಗತಿಯೂ ಆಗಿದೆ. ಈ ಸಮಸ್ಯೆ ತಮಾಷೆ ತರುವ ದೋತ್ಯಕವಾದರೂ ನಮ್ಮ ದೇಶದ ವಸ್ತು ಸ್ಥಿತಿಯನ್ನು ತೋರಿಸುತ್ತದೆ. ನಗರ ಪ್ರದೇಶಗಳಲ್ಲಿ ಮೆಟ್ರೋಗಳು, ರೈಲು ಸಂಪರ್ಕ, ಆಧುನಿಕ ಮಾಲ್‍ಗಳು ಬಂದಾಕ್ಷಣವೇ ದೇಶದ ಅಭಿವೃದ್ಧಿಯಾಗಿದೆ. ಎಲ್ಲರೂ ಸುಖವಾಗಿದ್ದಾರೆ ಎಂಬ ಭ್ರಾಂತಿ ಒಂದೆಡೆಯಾದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಕ್ಕೂ ಕೊರತೆಯಿರುವುದು ಎದ್ದುಕಾಣುತ್ತದೆ. ವಿಜ್ಞಾನ, ತಂತ್ರಜ್ಞಾನ, ಜ್ಞಾನ ಭಂಡಾರವೆಲ್ಲವೂ ಎಲ್ಲಿ ಹೋದವು? ಒಂದು ಕೊಡ ನೀರು ತರಲಿಕ್ಕೆ ದಿನ ವಿಡೀ ಕಳೆಯಬೇಕಾದಂತಹ ಸಂದರ್ಭ ಬಂದಾಗ ಅದಕ್ಕಾಗಿ ಇನ್ನೊಬ್ಬ ಹೆಂಡತಿಯನ್ನು ಹೊಂದುವುದೂ ತಪ್ಪಲ್ಲ ಅನ್ನುವ ಮನೋಭಾವನೆಯ ಹಿಂದಿರುವ ಕಹಿ ಸತ್ಯವಾದರೂ ಯಾವುದು. ಮೂಲ ಸೌಕರ್ಯವನ್ನು ಒದಗಿಸುವುದು ರಾಜ್ಯದ ಧರ್ಮ ಎಂಬ ವಿಚಾರವನ್ನು ಸಂವಿಧಾನದಲ್ಲಿ ನಾವು ಒಪ್ಪಿರುವಾಗಲೂ ಇಂತಹ ಪರಿಸ್ಥಿತಿ ಉದ್ಭವವಾಗಿದೆಯೆಂದರೆ ನಾವು ದುಡಿಯುವ ಸಂಪತ್ತೆಲ್ಲವೂ ಹಾಗಾದರೆ ಎಲ್ಲಿ ಹೋಗುತ್ತದೆ? ಕತ್ತಲ ಬೇಗುದಿಯಲ್ಲಿ ಬೆಂದು ಜೀವನ ಸವೆಸುವ ಈ ಮಡದಿಯರಾದರೂ ನಿರ್ಜೀವಿಗಳಂತೆ ಬದುಕು ಸವೆಸುತ್ತಿರುವುದು ನಿಜಕ್ಕೂ ಶೋಚನೀಯ.
ಈ ಹೆಣ್ಣು ಮಕ್ಕಳಾದರೂ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲವರು ಮೂವತ್ತು ವರ್ಷಕ್ಕೆ 60ರ ವಯೋವೃದ್ದರಂತೆ ಕಾಣುವರು. ಕೆಲವರು ಬೆನ್ನು ನೋವು, ಕಾಲುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಸಮಸ್ಯೆ ಹೀಗೆ ಮುಂದುವರೆದರೆ ನಾಳೆಯ ಬೆಳಕನ್ನು ಕಾಣದೆಯೇ ಅವರ ಬದುಕು ನಿಂತು ಹೋಗುವುದು.
ಗುಜ್ಜರ್ ಮದುವೆಗಳು ಒಂದು ರೀತಿಯಾದ ಶೋಷಣೆಯಾದರೆ, ನೀರಿನ ಹೆಸರಿನಲ್ಲಿ ನಡೆಯುವುದು ಇನ್ನೊಂದು ರೀತಿಯ ಶೋಷಣೆಯ ಮುಖ. ಅಲ್ಲಿ ಹೆಣ್ಣು ಎಲ್ಲರ ಸ್ವತ್ತಾದರೆ, ಇಲ್ಲಿ ಅಧಿಕೃತವಾಗಿ ಮದುವೆಯಾಗುವ ಮನ್ನಣೆಯಿದೆ. ಆದರೆ ಎರಡೂ ಸಂದರ್ಭದಲ್ಲಿ ಈ ಶೋಷಣೆಯ ಸಂಕೀರ್ಣತೆಗಳನ್ನು ಎದುರಿಸುವವಳು ಹೆಣ್ಣು. ಅವಳ ಮನಸ್ಥಿತಿಯನ್ನು ಯಾರೂ ಅರಿಯಲಾರರು. ಬಯಸಿ ಬಯಸಿ ಆಕೆ ಇಂತಹ ಸ್ಥಿತಿಯಲ್ಲಿ ಜೀವಿಸಲು ಇಷ್ಟ ಪಡುವುದಿಲ್ಲ. ಬಡತನದ ಕ್ರೌರ್ಯ / ಅಸಹಾಯಕತೆ ಆಕೆಯನ್ನು ಈ ಸ್ಥಿತಿಗೆ ದೂಕಿವೆ.
ಹೆಣ್ಣು ಎದುರಿಸುವ ಹಲವು ಬಗೆಯ ಶೋಷಣೆಗಳಲ್ಲಿ ಇದೂ ಕೂಡ ಒಂದಾಗಿದ್ದು, ನಾಗರೀಕ ಸಮಾಜದ ವೈರುದ್ಯಗಳಿಗೆ ಕನ್ನಡಿಯಂತಿದೆ. ಈಗಾಲಾದರೂ ಆಡಳಿತ, ರಾಜ್ಯನಾಯಕರು ಎಚ್ಚೆತ್ತುಕೊಳ್ಳದಿದ್ದರೆ, ಇಡೀ ಮನುಕುಲವೇ ತಲೆ ತಗ್ಗಿಸಬೇಕಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮಗಳ ಕಡೆ ಗಮನಹರಿಸದೆ ಹೋದರೆ ಏನಾದೀತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಮತ್ತೊಂದಿಲ್ಲ.




ಗಿರಿಜಾ ಕೆ.ಎಸ್.
ಸಹಾಯಕ ಪ್ರಾಧ್ಯಾಪಕರು,
ರಾಜ್ಯಶಾಸ್ತ್ರ ವಿಭಾಗ,
ವಿಶ್ವವಿದ್ಯಾನಿಲಯ ಕಲಾ ಕಾಲೇಕು,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಪುಸ್ತಕ ಪ್ರೀತಿ: " ತ್ರಿವೇಣಿಯವರ ಮೂರು ಕಾದಂಬರಿಗಳು"


೧. ಬಾನು ಬೆಳಗಿತು

ಮದುವೆಯ ಸಮಾರಂಭದಲ್ಲಿ ಪರಿಚಯವಾದ ರಾಮನಾಥನೊಂದಿಗೆ ಕಲ್ಯಾಣಿಯ ವಿವಾಹವು ನಡೆಯಿತು.ಹೊಸತರಲ್ಲಿ ಕಲ್ಯಾಣಿಗೆ ಸಮಯ ಸರಿದಿದ್ದೆ ತಿಳಿಯುತ್ತಿರಲಿಲ್ಲ.ಆದರೆ ದಿನ ಕಳೆದಂತೆ ಸಮಯ ಕಳೆಯುವುದು ಕಷ್ಟವಾಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು.ಕೆಲಸದ ಒತ್ತಡದಿಂದ ಬೇಗನೆ ಆಯಾಸಗೊಂಡು ಮೊದಲಿನ ಹಾಗೆ ಗಂಡನ ಜೊತೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಕಾರಣದಿಂದಾಗಿ ಇಬ್ಬರಲ್ಲು ಜಗಳ ಪ್ರಾರಂಭವಾಗಿ ಅದು ತಾರಕಕ್ಕೇರಿ ಅವಳು ಮುನಿಸಿಕೊಂಡು ತವರಿಗೆ ಬಂದಳು.ತಿಂಗಳಾದರು ಇಬ್ಬರಿಗು ಮುನಿಸು ಇಳಿದಿರಲಿಲ್ಲ.ಒಂದು ದಿನ ರಾಮನಾಥನಿಗೆ ಟೆಲಿಗ್ರಾಂ ಬಂದಿತು ಕಲ್ಯಾಣಿಗೆ ಅನಾರೋಗ್ಯವೆಂದು. ತಕ್ಷಣ ರಾಮನಾಥ ಮೈಸೂರಿಗೆ ಹೊರಟನು.ಮನೆಗೆ ಬಂದಾಗ ಬಾಗಿಲು ತೆರೆದ ಅತ್ತೆ "ಕಲ್ಯಾಣಿಯು ನಿನ್ನನ್ನೆ ಕಾಣಲು ಹೊರಟಳು.ಗಾಬರಿಯಾಗಬೇಡ ಅವಳು ತಾಯಿಯಾಗುತ್ತಿದ್ದಾಳೆ.ಹೆರಿಗೆಯ ಸಮಯದಲ್ಲಿ ತಾನು ಸಾಯಬಹುದೆಂಬ ಭಯದಲ್ಲಿ ಬದುಕಿರುವ ಆರು ತಿಂಗಳು ನಿನ್ನ ಜೊತೆಯಲ್ಲಿಯೇ ಇರುತ್ತೇನೆಂದು ಹೊರಟಳು." ಸಂತೋಷಗೊಂಡ ರಾಮನಾಥ "ಅವಳನ್ನು ಸಾಯುವುದಕ್ಕೆ ಬಿಡುವರಾರು ಅತ್ತೆ??" ಎಂದು ಹೇಳಿ ತಕ್ಷಣವೇ ಹಿಂತಿರುಗುತ್ತಾನೆ.

೨. ಸೋತು ಗೆದ್ದವಳು

ಆನಂದನ ಜೊತೆ ಚೆಲುವೆ ಭಾರತಿಯ ಮದುವೆ ನಡೆಯಿತು. ಮದುವೆಗೆ ಬಾರದಿದ್ದ ಸೋದರಮಾವ ಚಂದು ಬಂದಾಗ ಮಡದಿಗೆ ಪರಿಚಯ ಮಾಡಿದನು.ಕಲಾವಿದನಾದ ಚಂದು ಸಹಜವಾಗಿ ಅವಳ ಸೌಂದರ್ಯಕ್ಕೆ ಮಾರುಹೋದನು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆನಂದನು ಇಂಗ್ಲೆಂಡ್  ಗೆ ಹೊರಟನು. ವರ್ಷದ ನಂತರ ಮನೆಗೆ ಬಂದ ಚಂದು ದೀಪ ಹಾಕುವ ನೆಪದಲ್ಲಿ ಅವಳನ್ನು ಸ್ಪರ್ಶಿಸಿದಾಗ ಒಂದು ಕ್ಷಣ ಮೈಮರೆತಳು. ವಯೋಸಹಜವಾದ ಆಕರ್ಷಣೆಯಿಂದ ಅವನೊಡನೆ ಸಹಕರಿಸಿದಳು. ನಂತರ ಭಾರತಿಗೆ ಚಂದು  "ನಾವಿಬ್ಬರು ದೂರ ಹೋಗಿ ಒಟ್ಟಾಗಿ ಬಾಳೋಣ" ಎಂದು ಹೇಳಿದನು. ಕ್ಷಣಿಕ ಸುಖಕ್ಕಾಗಿ ನಡೆದ ತಪ್ಪಿಗೆ ಗಂಡನಲ್ಲಿ ಕ್ಷಮೆ ಕೇಳಿ ಸಾಯುವೆನೆಂದು ಭಾರತಿ ನಿರ್ಧರಿಸಿದಳು. ಅನಿವಾರ್ಯ ಕಾರಣದಿಂದ ಆನಂದ ಹಿಂದಿರುಗಿದನು. ಬಂದ ಗಂಡನೊಡನೆ ನಡೆದಿದ್ದೆಲ್ಲವನ್ನು ಹೇಳಿ "ನನ್ನನ್ನು  ಕ್ಷಮಿಸಿ" ಎಂದಳು. ಆಗ ಆನಂದನು ಮಡದಿಯೊಡನೆ "ನಾನು ಲಂಡನ್ ನಲ್ಲಿದ್ದಾಗ ಇದೆ ತಪ್ಪನ್ನು ಮಾಡಿದ್ದೇನೆ ನಿನ್ನನ್ನು ಕ್ಷಮಿಸುವ ಹಕ್ಕು ನನಗಿಲ್ಲ, ನಮ್ಮಿಬ್ಬರ ಪ್ರೀತಿಯ ನಡುವೆ ನೀತಿಯ ಪ್ರಶ್ನೆ ಬೇಡ. ಇಬ್ಬರು ನವಜೀವನವನ್ನು ಪ್ರಾರಂಭಿಸೋಣ" ಎಂದನು.

೩. ದೂರದ ಬೆಟ್ಟ

ಸೀತಾರಾಮು ತನ್ನ ವಿಧವೆ ತಂಗಿ ಸುನಂದಳಿಗೆ ತನ್ನ ಗೆಳೆಯನೊಡನೆ ಮದುವೆ ಮಾಡುವ ಉದ್ದೇಶದಿಂದ   ಶ್ರೀಧರನನ್ನು ತಂಗಿಗೆ ಪರಿಚಯಿಸಿದನು. ಪರಸ್ಪರ  ಮಾತನಾಡಿಕೊಂಡ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ನಂತರ ಅವಳು ತನ್ನಲ್ಲಾಗುತ್ತಿದ್ದ ಮಾನಸಿಕ ಬದಲಾವಣೆಗಳನ್ನು ಗಮನಿಸಿ ಮನೋವೈದ್ಯರಲ್ಲಿಗೆ  ಬಂದಳು. ವಿವರವನ್ನು ಪಡೆದ ವೈದ್ಯರು "ನಿನ್ನ ಅಣ್ಣನನ್ನು ಕಳಿಸು" ಎಂದರು. ಬಂದ ಅಣ್ಣನೊಡನೆ ಸುನಂದಳ ವರ್ತನೆಯನ್ನು ಗಮನಿಸಿ "ನಾಳೆ ಅವಳೊಂದಿಗೆ  ಬಾ" ಎಂದು ಹೇಳಿ ಕಳಿಸಿದರು. ರಾತ್ರಿ ಸ್ವತಃ  ತಂಗಿಯೆ ಅವಳ ಕೆಲವು ವಸ್ತುಗಳನ್ನು ಬಾವಿಗೆ ಹಾಕುವುದನ್ನು ನೋಡಿದನು. ಮಾರನೆ ದಿನ ಅವಳೊಂದಿಗೆ ವೈದ್ಯರಲ್ಲಿಗೆ ಬಂದು ವಿಷಯವನ್ನು  ತಿಳಿಸಿದನು. ಅಲ್ಲೆಯಿದ್ದ ಅವಳು ನಾನು ಹೀಗೆಲ್ಲ ಮಾಡ್ಡಿದ್ದೀನ ಎಂದಳು. ಆಗ ವೈದ್ಯರು  ಸಂಪ್ರದಾಯ ಕುಟುಂಬದಲ್ಲೊ ಬೆಳೆದ ನಿನ್ನ ಮನದಲ್ಲಿ ವಿಧವಾ ವಿವಾಹವು ಧರ್ಮಬಾಹಿರ ಎಂಬ ಭಾವನೆ ಬೇರೂರಿದೆ.  ಇದನ್ನೆಲ್ಲಾ ನೀನು ಬೇರು ಸಹಿತ ಕಿತ್ತು ಹಾಕಿ ಹೊಸದೃಷ್ಟಿಯಿಂದ ಬಾಳ್ವೆ ನಡೆಸು ಎಂದು ಅವಳಲ್ಲಿ ಧೈರ್ಯ ತುಂಬಿದರು.

ತ್ರಿವೇಣಿಯವರು ಮೇಲ್ಕಂಡ ಮೂರು ಕಥೆಗಳಲ್ಲೂ ಸಂದರ್ಭ ಕ್ಕೆ ಸಿಲುಕಿ ಮಹಿಳೆಯಲ್ಲಾಗುವ ಮಾನಸಿಕ ಗೊಂದಲಗಳ ಬಗ್ಗೆ ವಿಭಿನ್ನವಾಗಿ ಚಿತ್ರಿಸಿದ್ದಾರೆ.ಈ ಎಲ್ಲಾ ಕಥೆಗಳಲ್ಲೂ ಮಹಿಳಾ ಸಮಸ್ಯೆಗಳೇ ಪ್ರಧಾನವಾಗಿದ್ದರೂ ಸಮಾಜದ ವಿರುದ್ಧವಾಗಿ ಇಲ್ಲ.
"ಭಾನು ಬೆಳಗಿತು" ಕಥೆಯಲ್ಲಿ ಉದ್ಯೋಗಸ್ಥ ಮಹಿಳೆಯು ಎದುರಿಸುವ ಸಮಸ್ಯೆ, ಅದರಿಂದ ಸಂಸಾರದಲ್ಲಾಗುವ ಏರುಪೇರುಗಳ ಬಗ್ಗೆ ಬರೆದಿದ್ದಾರೆ.
"ಸೋತು ಗೆದ್ದವಳು" ಕಥೆಯಲ್ಲಿ ವಿವಾಹವಾದ ಮಹಿಳೆ ಗಂಡನ ಅನುಪಸ್ಥಿತಿಯಲ್ಲಿ ವಯೋಸಹಜವಾದ ದೈಹಿಕ ಆಕರ್ಷಣೆಗೆ ಬಲಿಯಾಗಿ ನಂತರ ತಪ್ಪನ್ನರಿತು ಕ್ಷಣಿಕಸುಖಕ್ಕಿಂತ ಪ್ರೀತಿಯೇ ಶ್ರೇಷ್ಠ ವೆಂದು ಅರಿತು ಗಂಡನೊಂದಿಗೆ ನವಜೀವನ ವನ್ನು ಆರಂಬಿಸುತ್ತಾಳೆ.
"ದೂರದಬೆಟ್ಟ" ಕಥೆಯಲ್ಲಿ ವಿಧವಾ ವಿವಾಹವನ್ನು ಸಮಾಜ ಅಂಗೀಕರಿಸಿದ್ದರೂ ವಿವಾಹಕ್ಕೆ ಒಪ್ಪಿದ ಹೆಣ್ಣಿನ ಮನಸ್ಸಿನಲ್ಲಾಗುವ ಹೋರಾಟ ಮತ್ತು ತೊಳಲಾಟಗಳ ಬಗ್ಗೆ ಬಹಳ ಮನೋಜ್ಞವಾಗಿ ಬರೆದಿದ್ದಾರೆ.
 ಸಂಸಾರ,ದೈಹಿಕ ಆಕರ್ಷಣೆ,ವಿಧವಾವಿವಾಹ ಎಂಬ ವಸ್ತು ವಿಷಯಗಳನ್ನು  ಆಧರಿಸಿ ಮನಃಶಾಸ್ತ್ರಜ್ಞೆಯಾದ ತ್ರಿವೇಣಿಯವರು ಈ ಮೂರು ಕಥೆಗಳನ್ನು ಬಹಳ ಅದ್ಬುತ ವಾಗಿ ಬರೆದಿದ್ದಾರೆ. ಅವರ ಬರವಣಿಗೆಯ ಶೈಲಿ ಸರಳವಾಗಿದ್ದು, ಮಹಿಳೆಯರ ಸಮಸ್ಯೆಗಳನ್ನು ಓದುಗರ ಮನ ಮುಟ್ಟುವಂತೆ ಬರೆಯುವುದರಲ್ಲಿ ಅವರು ಅದ್ವಿತೀಯರೆನಿಸಿದ್ದಾರೆ.ಅವರು ರಚಿಸಿರುವ ಎಲ್ಲಾ ಕಾದಂಬರಿಗಳು ಇಂದಿಗೂ ಪ್ರಸ್ತುತವೆನಿಸಿವೆ.

- ಗೀತಾ ಕೆ

ಪ್ರಚಲಿತ : "ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?"



 "ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ವಧುವಿನ ಜೊತೆ ಕೊಡುವ ಹಣ ಅಥವಾ ಒಡವೆ ಅಥವಾ ಉಡುಗೊರೆ ಮೊದಲಾದವು." ಇದು ವೇದಗಳ ಕಾಲದಲ್ಲಿ ಬಂದುದಾಗಿದೆ. ವೇದಗಳ ಕಾಲಕ್ಕೂ ಮೊದಲು ಸಮಾಜದಲ್ಲಿ ಸ್ತ್ರೀಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಸ್ಥಾನವಿತ್ತು.ಹಾಗು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿತ್ತು. ವೇದಗಳ ಆರಂಭದ ಕಾಲದಲ್ಲೂ ಸಹ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನತೆಯಿತ್ತು ಸ್ತ್ರೀಯರಿಗೆ ಶಿಕ್ಷಣವನ್ನು ನೀಡುತ್ತಿದ್ದರು.ಹಾಗೆ ಎಲ್ಲಾ ಧಾರ್ಮಿಕ ಆಚರಣೆಗಳಲ್ಲೂ ಭಾಗವಹಿಸುತ್ತಿದ್ದರು. ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾದ ನಂತರವೆ ವಿವಾಹ ಮಾಡುತ್ತಿದ್ದರು.ಮುಖ್ಯವಾಗಿ ವಿವಾಹದ ಬಗ್ಗೆ ನಿರ್ಧಾರವನ್ನು ಸ್ವತಃ ಅವರೆ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಕಡೆ "ವಧುದಕ್ಷಿಣೆ"ಯನ್ನು ಅಂದರೆ ಹುಡುಗನ ತಂದೆ ಹುಡುಗಿಯ ತಂದೆಗೆ ಹಣ ನೀಡಿ ಮಗನಿಗೆ ವಿವಾಹ ಮಾಡಿಕೊಳ್ಳುತ್ತಿದ್ದರು ವೇದಗಳ ಕಾಲದ ಕೊನೆಯ ಭಾಗದಲ್ಲಿ ಸಮಾಜದಲ್ಲಿ ಸ್ತ್ರೀಯರ ಸ್ಥಾನ ಕಡಿಮೆಯಾಗತೊಡಗಿತು.ಶಿಕ್ಷಣ ಸೌಲಭ್ಯ ಮರೆಯಾಯಿತು. ಅವರ ವಿವಾಹದ ವಯಸ್ಸು ಕಡಿಮೆಯಾಯಿತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಹಾಗು ಹೆಣ್ಣುಮಕ್ಕಳು ರಜಸ್ವಲೆಯಾಗುವ ಮೊದಲೆ ಅವಳ ವಿವಾಹವನ್ನು ಮಾಡುತ್ತಿದ್ದರು. "ಕನ್ಯಾದಾನ"ದ ಮೂಲಕ ಮಗಳನ್ನು ಗಂಡಿಗೆ ದಾನ ಕೊಡುವ ಪದ್ಧತಿ ಆರಂಭವಾಯಿತು. ಹೆಣ್ಣುಮಗಳ ತಂದೆ ಮಗಳಿಗೆ ವಿವಾಹ ಮಾಡದೆ ಮರಣ ಹೊಂದಿದರೆ ಅಂತವರಿಗೆ ಸ್ವರ್ಗಪ್ರಾಪ್ತಿಯಿಲ್ಲ ಎಂಬ ಹಲವಾರು ನಂಬಿಕೆಗಳಿಂದ ಎಷ್ಟೇ ಕಷ್ಟವಾದರು ಹಣವನ್ನೂ ಕೊಟ್ಟಾದರೂ ವಿವಾಹ ಮಾಡುತ್ತಿದ್ದರು. ಆಗ ರೂಢಿಗೆ ಬಂದುದೆ ವರದಕ್ಷಿಣೆ. ಯಾವುದೇ ದಾನವನ್ನು ನೀಡಬೇಕಾದರೆ ದಾನದ ಜೊತೆ ದಕ್ಷಿಣೆಯನ್ನು ಕೊಡಬೇಕಾಗಿತ್ತು. ಹಾಗೆ ಕನ್ಯಾದಾನವೆಂದರೆ "ಹುಡುಗಿಯ ತಂದೆ ಮಗಳನ್ನು ಹುಡುಗನಿಗೆ ವಿವಾಹ ಮಾಡಿಕೊಡುವಾಗ ಮಗಳ ಜೊತೆಗೆ ದಕ್ಷಿಣೆಯನ್ನು ಕೊಡುವುದು." ಹೀಗೆ ರೂಢಿಗೆ ಬಂದ ಕನ್ಯಾದಾನದ ಜೊತೆಗಿನ ದಕ್ಷಿಣೆ ಮುಂದೆ "ವರದಕ್ಷಿಣೆ "ಯ ರೂಪವನ್ನು ತಾಳಿತು. ಹೀಗೆ ಕ್ರಮೇಣ ಸ್ತ್ರೀಯರ ಸ್ಥಾನವನ್ನು ಪುರುಷರು ಅವನತಗೊಳಿಸಿದರು. ಸಮಾಜ ಪುರುಷಪ್ರಧಾನ ಸಮಾಜವಾಗಿ ರೂಪುಗೊಂಡಿತು. ಇಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕು ಇರಲಿಲ್ಲ.ರಾಜರುಗಳು ಮತ್ತು ದೊಡ್ಡ ದೊಡ್ಡ ಶ್ರೀಮಂತರುಗಳು ತಮ್ಮ ಮಗಳನ್ನು ವಿವಾಹ ಮಾಡಿಕೊಡುವಾಗ ಜೊತೆಯಲ್ಲಿ ಹಣವನ್ನಾಗಲಿ ಅಥವಾ ಒಡವೆಯನ್ನಾಗಲಿ ಬಳುವಳಿಯಾಗಿ ಕೊಡುತ್ತಿದ್ದರು. ಮುಂದೆ ತಮ್ಮ ಮಗಳು ಸುಖವಾಗಿರಲಿ ಎಂಬುದೆ ಇದರ ಹಿಂದಿನ ಉದ್ದೇಶವಾಗಿತ್ತು. ಕಾಲಕ್ರಮೇಣ ಇದೊಂದು ರೂಢಿಯಾಗಿ ಬದಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸತಿಪದ್ಧತಿ, ಬಾಲ್ಯವಿವಾಹ ಮೊದಲಾದ ಸಮಸ್ಯಗಳಂತೆ ಈ ವರದಕ್ಷಿಣೆ ಎಂಬುದು ದೊಡ್ಡ ಪಿಡುಗಾಗಿ ಕಾಡತೊಡಗಿತು. ರಾಜರು ಮತ್ತು ಶ್ರೀಮಂತರಲ್ಲದೆ ಮಧ್ಯಮ ವರ್ಗದವರು ಸಹ ಇದನ್ನು ಅನುಸರಿಸತೊಡಗಿದರು. ನಂತರ ಬ್ರಿಟಿಷರ ಕಾಲದಲ್ಲೂ ಇದು ಮುಂದುವರಿಯಿತು. ಶಿಕ್ಷಣ ಸೌಲಭ್ಯ ಉತ್ತಮಗೊಂಡಿದ್ದರಿಂದ ಬಹಳಷ್ಟು ಜನ ವಿದ್ಯಾವಂತರಾದರು ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಅವರ ಸ್ಥಿತಿ ಉತ್ತಮಗೊಂಡಿತು. ವಿದ್ಯಾವಂತರಾದವರು ಈ ಸಮಸ್ಯೆಯನ್ನು ಹೋಗಲಾಡಿಸುವ ಬದಲಾಗಿ ಹೆಚ್ಚಲು ಕಾರಣರಾದರು. ಓದಿ ವಿದ್ಯಾವಂತರಾದಂತೆ ಹುಡುಗರಿಗೆ ಬೇಡಿಕೆ ಹೆಚ್ಚಾಯಿತು. ಎಷ್ಟು ಹಣವನ್ನು ಕೊಟ್ಟಾದರೂ ತಮ್ಮ ಮಗಳ ಮದುವೆಯನ್ನು ಮಾಡಲು ಹೆಣ್ಣುಮಕ್ಕಳ ಪೋಷಕರು ಸಿದ್ಧರಾದರು. ಹೀಗೆ ಸ್ವಾತಂತ್ರ್ಯ ಪೂರ್ವದಲ್ಲಿ ಕಂಡು ಬಂದ ಈ ಪಿಡುಗು ಸ್ವಾತಂತ್ರ್ಯ ನಂತರವೂ ಮುಂದುವರಿದು ಈಗಲೂ ಸಹ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಗಂಡು ಮತ್ತು ಹೆಣ್ಣಿನ ಕಡೆಯವರಿಬ್ಬರಿಗೂ ಇದೊಂದು ಪ್ರತಿಷ್ಠೆಯ ಕುರುಹಾಗಿದೆ. ಗಂಡು ಹಡೆದವರಿಗಂತು ಇದು ಸುಲಭವಾಗಿ ಹಣ ಸಂಪಾದಿಸುವ ಮಾರ್ಗವಾಗಿದೆ. ಅದರಲ್ಲೂ ಹುಡುಗ ಉನ್ನತ ಹುದ್ದೆಯಲ್ಲಿದ್ದರೆ ಅವರ ಬೇಡಿಕೆ ಹೆಚ್ಚಾಗಿರುತ್ತದೆ. ಹಾಗೆ ಹುಡುಗ ಡಾಕ್ಟರ್ , ಇಂಜನಿಯರ್ ಅಥವಾ ಸರ್ಕಾರಿ ನೌಕರನಾಗಿದ್ದರೆ ಹೆತ್ತವರೆ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ತಮ್ಮ ಮಕ್ಕಳ ಬೆಲೆಯನ್ನು ಅವರೆ ನಿರ್ಧರಿಸುತ್ತಾರೆ.ಇನ್ನು ಹೆಣ್ಣು ಹಡೆದವರು ಸಹ ಡಾಕ್ಟರ್, ಇಂಜಿನಿಯರ್ ವರಗಳನ್ನೆ ಹುಡುಕಿ ಸಾಲ ಮಾಡಿಯಾದರೂ ವರದಕ್ಷಿಣೆ ಕೊಟ್ಡು ಮದುವೆ ಮಾಡುತ್ತಾರೆ. ಕೆಲವರು ವರದಕ್ಷಿಣೆ ಜೊತೆಗೆ ಮನೆ, ವಾಹನ, ಒಡವೆ ಮೊದಲಾದವುಗಳನ್ನು ಕೊಡಬೇಕೆಂದು ಒತ್ತಾಯಿಸುತ್ತಾರೆ. ಮಗಳ ಸುಖವಾಗಿರುತ್ತಾಳೆ ಎಂಬ ನಂಬಿಕೆಯಿಂದ ಮತ್ತಷ್ಟು ಸಾಲ ಮಾಡಿ ಕೊಡಲು ಒಪ್ಪುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ಆ ಹೆಣ್ಣು ಮಗಳು ಸುಖವಾಗಿರುತ್ತಾಳಾ ಎಂಬುವುದು ಪ್ರಶ್ನಾರ್ಹ. ಹೀಗೆ ಮದುವೆ ಎಂಬುವುದು ಒಂದು ವ್ಯಾಪಾರದಂತಾಗಿದೆ. ಪರಿಣಾಮಗಳು ಸಂಸಾರ ಸಮಾಜದ ಒಂದು ಅಂಗ .ಈ ಸಂಸಾರದಲ್ಲೆ ಹೆಣ್ಣು ಮತ್ತು ಗಂಡು ಎಂದು ತಾರತಮ್ಯ ಮಾಡುತ್ತಿರುವುದರಿಂದ ಸಮಾಜದಲ್ಲೂ ಸಹ ಸ್ತ್ರೀಯರ ಸ್ಥಾನ ಕಡಿಮೆಯಾಗುತ್ತಿದೆ. ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಡಲಾಗುತ್ತಿದೆ. ವರದಕ್ಷಿಣೆಯ ಆಸೆಯಿಂದ ಕಿರುಕುಳ ನೀಡಿ ಎಷ್ಟೋ ಹೆಣ್ಣುಮಕ್ಕಳ ಕೊಲೆಯನ್ನು ಮಾಡಲಾಗುತ್ತಿದೆ. ಎಷ್ಟೋ ಹೆಣ್ಣುಮಕ್ಕಳು ಕಿರುಕುಳ ತಡೆಯಲಾರದೆ ತಾವೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಹೆಣ್ಣುಮಕ್ಕಳು ಪೋಷಕರಿಗೆ ಕಷ್ಟವೆಂದು ಮದುವೆಯನ್ನೆ ಮಾಡಿಕೊಳ್ಳುವುದಿಲ್ಲ. ವಿಚ್ಛೇದನೆಗಳು ಹೆಚ್ಚುತ್ತಿವೆ. ಇದರಿಂದ ವಿಚ್ಛೇದಿತರ ಮಕ್ಕಳು ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದುವರಿದ ತಂತ್ರಜ್ಞಾನದಿಂದ ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣುಭ್ರೂಣವನ್ನು ಹತ್ಯೆ ಮಾಡಲಾಗುತಿದೆ. ಇದರಿಂದ ಹೆಣ್ಣುಮಕ್ಕಳ ಜನನದ ಪ್ರಮಾಣ ಇಳಿಮುಖವಾಗುತ್ತಿದೆ. ಇಷ್ಟೆಲ್ಲಾ ದುಷ್ಪರಿಣಾಮ ಬೀರುವ ಈ ವರದಕ್ಷಿಣೆ ಎಂಬ ಪಿಡುಗನ್ನು ನಿರ್ಮೂಲನ ಮಾಡಲು ಆಗಿನಿಂದಲು ಪ್ರಯತ್ನಗಳು ನಡೆಯುತ್ತಲೆಯಿದೆ. ಅನೇಕ ಸಮಾಜ ಸುಧಾರಕರು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದರಾದರೂ ಸಾಧ್ಯವಾಗುತ್ತಿಲ್ಲ. ಸರ್ಕಾರ ವರದಕ್ಷಿಣೆ ನಿಷೇಧ ಕಾಯಿದೆ ತಂದಿದ್ದರೂ ಸಹ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ವರದಕ್ಷಿಣೆ ಕಾನೂನುಬಾಹಿರ ಎಂದು ಸರ್ಕಾರ ಅನುಮೋದಿಸುವುದರಿಂದ ಇದು ಉಡುಗೊರೆ ಎಂಬ ಇನ್ನೊಂದು ರೂಪವನ್ನು ತಾಳಿದೆ. ಹೀಗೆ ಈ ಅನಿಷ್ಟ ಪಿಡುಗನ್ನು ಹೋಗಲಾಡಿಸಲು ಏನೆಲ್ಲಾ ಪ್ರಯತ್ನ ಮಾಡಿದರು, ಏನೆಲ್ಲಾ ಕಾನೂನುಗಳನ್ನು ಜಾರಿಗೆ ತಂದರೂ ಸಹ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇಂದಿನ ಯುವಶಕ್ತಿ ಎಚ್ಚೆತ್ತುಕೊಂಡು ವರದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಮತ್ತು ಕೊಡುವುದನ್ನು ಪ್ರತಿಭಟಿಸದಲ್ಲಿ ಮಾತ್ರ ಈ ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡಬಹುದು. ವರದಕ್ಷಿಣೆಯನ್ನು ಕೇಳುವುದು ಎಷ್ಟು ಶಿಕ್ಷಾರ್ಹವೊ ಕೊಡುವುದು ಅಷ್ಟೇ ಶಿಕ್ಷಾರ್ಹವೆಂದು ಪೋಷಕರು ಅರಿಯಬೇಕು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಿ ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಡುವುದರಿಂದ ಉದ್ಯೋಗವನ್ನು ಮಾಡಲು ಮುಂದಾಗುವಳು ಹಾಗೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ವರದಕ್ಷಿಣೆ ಕೊಟ್ಟು ವಿವಾಹವಾಗಲು ಪ್ರತಿಭಟಿಸುವಳು ಸರ್ಕಾರ ಕಾನೂನುಗಳನ್ನು ಜಾರಿಗೆ ತರುವುದರೊಂದಿಗೆ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಸರ್ಕಾರದ ಜೊತೆಜೊತೆಯಲ್ಲಿ ಅನೇಕ ಸಂಘ,ಸಂಸ್ಥೆಗಳು ಕೈ ಜೋಡಿಸಿ ಜನರಲ್ಲಿ ಅರಿವು ಮೂಡಿಸಬೇಕು. ಮಾಧ್ಯಮಗಳು ಸಹಾ ಜಾಹೀರಾತಿನ ಮೂಲಕ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಹೀಗೆ ಸರ್ಕಾರದ ಜೊತೆ ಎಲ್ಲರು ಕೈ ಜೋಡಿಸಿದಾಗ ಈ " ವರದಕ್ಷಿಣೆ " ಎಂಬ ದೊಡ್ಡ ಪಿಡುಗನ್ನು ನಿರ್ಮೂಲನೆ ಮಾಡಬಹುದು. 

- ವಿಜಯಲಕ್ಷ್ಮಿ ಎಂ. ಎಸ್

ಅಭಿವ್ಯಕ್ತಿ


 ಕೆಲವು ಮುಖಗಳು ಎದುರಾದಾಗ ನಾವೂ ಹೂವಾಗುತ್ತೇವೆ... ಹಾಡಾಗುತ್ತೇವೆ! ಮತ್ತೆ ಹಲವು ಮುಖಗಳು ಎದುರಾಗುವುದೇ ಬೇಡವೆನಿಸುತ್ತದೆ. ಹಾಗೂ ಎದುರಾದರೆ ನಮ್ಮ ಮುಖದಲ್ಲು ಸಾವಿರ ಗಂಟುಗಳು! ಅಸಮಾಧಾನದ ವ್ಯಗ್ರತೆಯೊಂದು ಆವರಿಸುತ್ತದೆ. ಮುಷ್ಠಿ ಬಿಗಿಗೊಳ್ಳುತ್ತದೆ. ನಮ್ಮ ನಮ್ಮ ನಂಬಿಕೆಗಳನ್ನು ಹುಸಿಗೊಳಿಸಿದ, ಪ್ರೀತಿಯನ್ನು ನಿಷ್ಕಾರಣವಾಗಿ ಹಿಂಡಿದ, ಅವಮಾನಗಳಿಂದ ನಮ್ಮನ್ನ ಘಾಸಿಗೊಳಿಸಿದ, ಸಿನಿಕತನಗಳಿಂದ ನಮ್ಮ ಸಹಜತೆಗಳನ್ನು ಅಣಕವಾಡಿದ ಈ ಇಂಥವರ ಬಣ್ಣಗಳಿಂದ ಏನನ್ನು, ಯಾರನ್ನೂ ನಂಬಬಾರದು ಅಂತಲೇ ನಾವೂ ಕದವಿಕ್ಕಿಕೊಳ್ಳುತ್ತೇವೆ. ಆರ್ದ್ರತೆಗೆ, ಆರ್ತತೆಗೆ ಕಿವುಡರಾಗಬೇಕು ಅನಿಸುತ್ತದೆ. ಯಾವ ಜೀವದ ಸಂಕಟವೂ ನನ್ನ ಕದಡಬಾರದು, ಎದೆ ಕಲ್ಲಾಗಿಬಿಡಲಿ ಅಂದುಕೊಳ್ಳುತ್ತೇವೆ. ಬದುಕು ನಿಂತ ನೀರಲ್ಲವಲ್ಲ.... ಚಲನಶೀಲತೆ ಅದರ ಗುಣ ತಾನೆ! ಒಂದಷ್ಟು ಜನರಿತ್ತ ಸಂಕಟಗಳಿಗೆ ಮತ್ತಷ್ಟು ಮನುಷ್ಯರ ವಿಶ್ವಾಸವನ್ನು ತೊರೆದುಬಿಡಬಹುದಾ!? ದ್ರೋಹಬಗೆದವರ ಸಣ್ಣತನ ಬಯಲಾಗಲಿ.. ಆದರೆ ನನ್ನ ಅಂತಃಕರಣದ ಸಂಚಿ ಖಾಲಿಯಾಗಬೇಕೆ!? ಮುಚ್ಚಿದ ಬಾಗಿಲ ಹಿಂದಿನ ಕತ್ತಲಲ್ಲಿ ಬದುಕು ಕೊಳೆಯಬಾರದಲ್ಲ! ಓಹ್. ತೆರೆದ ಬಾಗಿಲಲ್ಲಿ ಮತ್ತಷ್ಟು ಮನುಷ್ಯರ ಸಾಲು... ನನ್ನ ಕೈಯ್ಯಲ್ಲೂ ಬೆಳದಿಂಗಳ ಎಷ್ಟೊಂದು ಬೀಜಗಳು..!! ದಾರಿ ದೀರ್ಘವಿದೆ...... ಸಹೃದಯ ಜೀವಗಳ ಸಹಪಯಣವೂ ಸಾಧ್ಯವಿದೆ... ನಮ್ಮ ನಮ್ಮ ನಿಲ್ದಾಣದವರೆಗೆ ಹಿಡಿ ಪ್ರೀತಿ,ಬೊಗಸೆ ನಗು ವನ್ನೇ ವಿನಿಮಯ ಮಾಡಿಕೊಳ್ಳೋಣ. ಅಂತೆಯೇ ದೋಷಪೂರಿತ ಅನ್ನಿಸಿದ್ದರ ಬಗ್ಗೆ "ನಿಗಾ" ಇಡೋಣ.. 

- ರಂಗಮ್ಮ ಹೊದೇಕಲ್

ಕಥೆ: "ಮನಸ್ಸಿನ ಆಳಗಳು"



 ದಿನಾ ನಡೆಯೋಕೆ ಹೋಗುವಾಗೆಲ್ಲಾ ಅರಳಿಕಟ್ಟೆಯಲ್ಲಿ ಕೂತಿರುವ ವಯಸ್ಸಾದ ಆ ಅಮ್ಮನ ನೋಡುವಾಗ, ಮತ್ತೆ ನನ್ನ ಯೋಚನೆಯೆಲ್ಲಾ ಅವರ ಸುತ್ತಾನೆ ಇರುತ್ತೆ. ನನ್ ಮನಸ್ಸಲ್ಲಿ ನಾನು ಅವರಿಗೆ ನನ್ನ ತಾಯಿಯ ಸ್ಥಾನ ಕೊಡೊದು. ಎಷ್ಟು ಕಷ್ಟಗಳು ನನ್ನ ಅಮ್ಮ ಅನುಭವಿಸಿದರು ಎಂದು ಹೇಳೋದಿಕ್ಕಿಂತ, ಜೀವನದಲ್ಲಿ ಏನು ಪಡೆಯೋಕೆ ಆಗದೆ ಹೋದ ಜನ್ಮ ಎನ್ನುವುದೆ ನಿಜ.ತುಂಬ ಮಕ್ಕಳಿರುವ, ಬಡತನದಲ್ಲು ಬೆಳೆದ ಅಮ್ಮನನ್ನು ತುಂಬ ಚಿಕ್ಕ ವಯಸ್ಸಲ್ಲಿ ಮದುವೆ ಎಂಬ ದಾರಿಯಲ್ಲಿ ಕಳಿಸಿಕೊಟ್ಟರು. ಮದುವೆ ಎನ್ನೋದು ಬರಿ ಜೀವನದ ಹೋರಾಟ ಎನ್ನುವುದ ಬಿಟ್ಟು ತನ್ನ ಮಗಳ ಕಷ್ಟಗಳನ್ನು ನೋಡಿ ಗೊತ್ತಾಗದೆ ಅಲ್ಲ, ಬದಲು ವಾಪಸ್ಸು ಕರಕೊಂಡು ಬಂದು ನೋಡಿಕೊಳ್ಳೋಕೆ ಮನೆಯಲ್ಲಿ ಯಾರು ಮುಂದೆ ಬಂದಿಲ್ಲ. ಎಲ್ಲವನ್ನು ಅವಳ ಹಣೆಬರಹ ಎಂದು ಹೇಳಿ ಮುಗಿಸಿದರು.ಕಾಲ ಯಾರಿಗೂ ಕಾಯದೆ ಮುಂದೆ ಹೋದಾಗ ಬರಿ ಕಷ್ಟಗಳು ಮಾತ್ರವಲ್ಲ ಅಮ್ಮನಿಗೆ, ಎರಡು ಮಕ್ಕಳು ಕೂಡ ಹುಟ್ಟಿದವು.ಬಾಳಬೇಕ, ಸಾಯಬೇಕ ಎನ್ನುವ ಪ್ರಶ್ನೆ ಅವರ ಮುಂದೆ ಇರಲಿಲ್ಲ... ಏಕೆಂದರೆ ಏನು ಕಷ್ಟ ಬರಲಿ,ತನ್ನ ಮಕ್ಕಳನ್ನು ಬೆಳೆಸಬೇಕು ಎನ್ನುವ ದೃಢ ನಿಶ್ಚಯವಿತ್ತು.ಅದರಿಂದ ತನ್ನ ಗಂಡ ಬಿಟ್ಟು ಹೋದ ಮೇಲೆ ಇನ್ನೊಬ್ಬರನ್ನು ತನ್ನ ಜೀವನದಲ್ಲಿ ಸ್ವೀಕರಿಸಿದರು.ಯಾರು ಬರಲಿ....ಏನೊ ಆಗಲಿ...... ತನ್ನ ಹಣೆಬರಹ ಯಾರಿಂದಲು ಬದಲಾಯಿಸೋಕೆ ಆಗಲ್ಲ ಎನ್ನುವ ಸತ್ಯ ಗೊತ್ತಾಗುವುದಕ್ಕೆ ಇನ್ನು ಎಷ್ಟು ವರ್ಷಗಳು ಬೇಕಾಗಿ ಬಂತು. ಆದರು ಮನಸ್ಸಲ್ಲಿ ತನ್ನ ಮಕ್ಕಳನ್ನು ಒಳ್ಳೆತನದಲ್ಲಿ ಬೆಳೆಸಬೇಕು ಎನ್ನವ ಆಸೆ ಅಮ್ಮನನ್ನ ಜೀವನದ ಗಾಡಿ ತಳ್ಳೋಕೆ ಪ್ರೋತ್ಸಾಹಿಸಿತು.ಅದನ್ನೆ ಒಂದು ಜೀವನದ ಗುರಿಯಾಗಿ ತೆಗೆದುಕೊಂಡರು. ಕಾಲ ಯಾರಿಗು ಏನು ಉಳಿಸಿಲ್ಲ ......ಬೆಳೆಯಬೇಕಾಗಿದ್ದು ಬೆಳೆಯಿತು...ಬಾಡಿಹೋಗಿರುವುದು ಬಾಡಿಹೋಗಿತ್ತು. ಬೆಳೆದವರು ತಮಗೆ ನೆರಳಾಗುತೆ ಎನ್ನುವ ಆಸೆ ಸುಮ್ಮನೆ ಹಾಗೇಯಿತ್ತು ಎಂದು ಅಮ್ಮನಿಗೆ ಗೊತ್ತಾಗಿರುವುದಕ್ಕೆ ಏನೋ ಆ ಮನಸಿನ ಮಾನಸಿಕ ತಾಳಾನೆ ತಪ್ಪೋಗಿತ್ತು.ಅದು ಏನಿಕೆ ಇಂದು ಎಷ್ಟು ಯೋಚನೆ ಮಾಡಿದರು ನನಗು ಕಂಡು ಹಿಡಿಯುವುದಕ್ಕೆ ಆಗಿಲಿಲಾ಼. ವಿಶಾಲವಾದ ವಿವೇಕಾನಂದ ಸರ್ಕಾಲ್ ಕಾನುವ ತುಂಬ ಚುರುಕು ಆಗಿರುವ ಯುವಕನನ್ನು,ಯಾವತ್ತು ಅಂದುಕೊಂಡಿರಲಿಲ್ಲ ಅವರಿಗೆ ಮಾನಸಿಕ ವಿಭ್ರಾಂತಿ ಎಂದು.ಯಾರೋ ಬಿಸಾಕಿದ ಹೆಲ್ಮೆಟ್,ಕೈಯಲ್ಲಿ ಎರಡಿ ಮೂರು ಪ್ಲಾಸ್ಟಿಕ್ ಬ್ಯಾಗಲ್ಲಿ ತುಂಬಿಸಿದ ಹಳೆ ವಸ್ತುಗಳು ...ಎಲ್ಲಾನು ಆ ರೂಪಕ್ಕೆ ಒಂದು ಚೂರು ಮ್ಯಾಚ್ ಆಗಿಲ್ಲ. ಯಾವುದೊ ದೋಟದನದಲಿ ಉಟಿದವನಾಗಿರಬಹುದು, ಇಲ್ಲ ತುಂಬಾ ಓದಿದಕ್ಕೆ ತಲೆ ಕೆಟ್ಟೋಗಿದೆಯೊ ಎಂದು ಜನ ಹೇಳುವ ಮಾತು......ಅದಕ್ಕೆ ಅವನನ್ನು ಒಬ್ಬ ಹುಚ್ಚನನ್ನಾಗಿ ಕಾಣುವುದಕ್ಕೆ ನನ್ನ ಮನಸು ಒಪ್ಪಿಕೊಂಡಿಲ್ಲ.ಆ ಮುಖದಲ್ಲಿ ಇರುವ ಭಾವ,ಅದು ಯಾವತ್ತು ಒಬ್ಬ ಅಬ್ ನಾರ್ಮಲ್ ಎಂದು ಕಾಣಲಿಲ್ಲ.ಉದ್ದಕ್ಕೆ ಬಿಟ್ಟಿದ್ದ ಗಡ್ಡವನ್ನು ಸವರುತ್ತ,ಆ ಕಣ್ಣಲ್ಲಿ ತುಂಬಿರುವ ಪ್ರಕಾಶವು ..ನನ್ನ ನೆನಪುಗಳು ನನ್ನ ಅಣ್ಣನ ಮೇಲೆ ಹೋಗುತ್ತೆ.ಬಾಲ್ಯದ ಯಾವ ತುಂಟಾಟಗಳನ್ನು ಮಿಸ್ ಮಾಡದೆ ಆಟವಾಡಿ ಬೆಳೆದವನು.ಅಪ್ಪನಿಗು ಅಮ್ಮನಿಗು ಮಧ್ಯ ದಿನ ಜಗಳಕ್ಕೆ ಕಾರಣವಾಗುವನು.ಯುವತ್ತು ಅವನಲ್ಲಿ ಮನೆಯಲ್ಲಿ ದುಡ್ಡು ಇಲ್ಲದ ಯೋಚನೆ ತುಂಬಿರುತ್ತಿತ್ತು.ಅದೆ ಕಾರಣ ಹೇಳಿ ಊರು ಬಿಟ್ಟಿ ಹೊರಗೆಲ್ಲೊ ಸುತ್ತಾಡುತ್ತ,ಅವನಿಗೇನೆ ಅವನ ವಿಳಾಸ ಗೊತ್ತಿಲ್ಲದೆ,ಎಲ್ಲೊ ಯಾವ ರೀತಿಯಲ್ಲು ತನ್ನ ಜೀವನದ ಗಮನ ಕೊಡದೆ...ಎಲ್ಲದಕ್ಕು ಕಾರಣ ಅಮ್ಮನೆ ಎಂದು ಕೊನೆಗೆ ಹೇಳಿದ ಆ ಸುಪುತ್ರ. ಆಮೇಲೆ ಎಲ್ಲಾ ಗೊತ್ತಾಗಿ ಬುದ್ಧಿ ಬರುವಷ್ಟರಲ್ಲಿ ನನ್ನ ಮನಸಿನ ತಾಳ ತಪ್ಪಾಗಿದು?ಅವನು ತುಂಬ ಒಳ್ಳೆಯ ಹೃದಯ ಎಂದು ನಮಗೆ ಮಾತ್ರ ಗೊತ್ತಿತ್ತು. ನನ್ನ ಯೋಚನೆ ಅತಿ ಆಯ್ತು. ತನ್ನ ಪಕ್ಕಕ್ಕೆ ಉರುಳಿ ಬಂದ ಕ್ರಿಕೆಟ್ ಬಾಲ್ ಅನ್ನು ಎತ್ತಿಕೊಳ್ಳುವುದಕ್ಕೆ ಓಡಿ ಬಂದ ಚಿಕ್ಕ ಹುಡುಗ, ನನ್ನ ಪಕ್ಕದಲ್ಲಿ ಇದ್ದ....ಬಿದ್ದ ಬಾಲನ್ನು ನಾನೆ ಎತ್ತು ಅವನಿಗೆ ಕೊಡುವುದಕ್ಕೆ ಕೈ ಹಾಕಿದಾಗ...ಜೊತೆಯಲ್ಲಿ ಗ್ರೌಂಡ್ ನಲ್ಲಿ ಆಟ ಆಡುವ ಹುಡುಗರು ಜೋರಾಗಿ ಕೂಗಿದರು ಬೇಡ ಕಣೊ..."ಅವಳೊಂದು ಹುಚ್ಚಿ..ಹತ್ತಿರಕ್ಕೆ ಹೋಗಬೇಡ".......ಅವನ ಕಣ್ಣಲ್ಲಿ ಆ ಪದಕ್ಕೆ ಅರ್ಥ ಹುಡುಕುವ ಥರ ಯೋಚನೆಯಿತ್ತು. ಅವನು ದಿನ ಕಾಣುವುದು ನನ್ನನ್ನು ಈ ಹುಣಸೆಮರದ ಕೆಳಗಡೆ ಮೂಟೇಗಳನನು ಇಟುಇರುವ ನನ್ನನ್ನು......ಯಾರಿಗು ಏನು ತೊಂದ್ರೆನು ಕೊಡದೆ......ಇರುವ ನನ್ನನ್ನು. ....ಒಬ್ಬ ಹುಚ್ಚಿಯೆಂದು ಅವನಿಗೆ ಯೋಚನೆ ಮಾಡುವುದಕ್ಕೆ ಆಗುವುದಿಲ್ಲ. ನನ್ನ ಮನಸು ಜೋರಾಗಿ ಹೇಳಬೇಕು ಅನಿಸಿತು..ಹೌದು ಮಗ ಯಾವುದನ್ನು ಕೆಟ್ಟದಾಗಿ ಕಾಣದೆ ಎಲ್ಲವನ್ನು ಒಳ್ಳೆಯತನವಾಗಿ...ನಿಜವಾಗಿ ನಂಬಿಕೊಂಡು..ಸತ್ಯವಾಗಿ ಇದ್ದಿದ್ದಕ್ಕೆ..ನನಗೆ ಈಗ ಹುಚ್ಚಿ ಎಂದು ನಾಮದಲ್ಲಿ ಬಾಳುತ್ತ ಇದ್ದೀನಿ ಇಂದು. ಹೋಗಲಿ ಬಿಡು...ನನ್ನ ಮನಸು ನನ್ನ ಕೈಯಿಂದ ಇನ್ನು ಜಾರಿ ಹೋಗುತ್ತ ಇದ್ದರೆ ನನ್ನ ರೋಗಕ್ಕೆ ಇನ್ನು ಅಪಾಯ.ಬಿಡು..ನಾನು ಈ ಮರದ ಕೆಳಗಡರ ಸ್ವಲ್ಪ ಸಮಯ ಮಲಕೊತ್ತೀನಿ ..ನನ್ನ ಮನಸಿನ ಅಲೆಗಳು ಶಾಂತವಾಗಲಿ. 

- ಶೀಬಾ

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ
ಶಹೀದ್–ಎ-ಅಜಮ್ ಭಗತ್‍ಸಿಂಗ್

ಭಾಗ - 3

ಭಗತ್‍ರ ಸಮಯಸ್ಫೂರ್ತಿ
ಒಮ್ಮೆ ದಸರಾ ಮೇಳದಲ್ಲಿ “ನನ್ನ ದೇಶದ ಜನಗಳೇ ಎದ್ದೇಳಿ!” ಎಂಬ ಕರಪತ್ರ ಹಂಚಲು ಇತರರೊಂದಿಗೆ ಭಗತ್ ಹೋಗಿದ್ದರು. ಕರಪತ್ರ ಹಂಚುತ್ತಿದ್ದಾಗ ಇಬ್ಬರು ಪೆÇೀಲೀಸರಿಗೆ ಸಿಕ್ಕಿಬಿದ್ದರು. ಭಗತ್ ಒಂದು ಉಪಾಯ ಮಾಡಿದರು ಪೆÇೀಲೀಸರ ಬಳಿ ಬಂದು “ಅಲ್ಲಿ ಯಾರೋ ಕರಪತ್ರ ಹಂಚುತ್ತಿದ್ದಾರೆ” ಎಂದರು. ಇಬ್ಬರು ಪೆÇೀಲೀಸರನ್ನು ಬಿಟ್ಟು ಉಳಿದವರೆಲ್ಲಾ ಆ ಕಡೆ ಹೋದರು. ಆ ಇಬ್ಬರನ್ನು ಕೆಳಗೆ ಬೀಳಿಸಿ ತಮ್ಮ ಸಹಚರರನ್ನು ಬಿಡಿಸಿಕೊಂಡು ಹೋದರು. ಇದು ಅವರ ಸಮಯಸ್ಫೂರ್ತಿ, ಚಾಕಚಕ್ಯತೆ ಮತ್ತು ಸಾಹಸಕ್ಕೆ ಸಾಕ್ಷಿ.

ನೌಜವಾನ್ ಭಾರತ್ ಸಭಾದ ರಚನೆ
ಕಾನ್‍ಪುರದಲ್ಲಿ0iÉುೀ ಭಗತ್ ಪರಿಪೂರ್ಣ ಕ್ರಾಂತಿಕಾರಿಯಾದದ್ದು. ಅವರೊಂದು ಹೊಸ ಹೆಸರೊಂದನ್ನು ಸಹ ಪಡೆದರು - ‘ಬಲವಂತ್’ ಎಂದು. ಬಹಳಷ್ಟು ಕ್ರಾಂತಿಕಾರಿ ಸಂಘಟನೆಗಳ ಜೊತೆ ಸಂಬಂಧವನ್ನು ಬೆಳೆಸಿಕೊಂಡರು. ಆಜಾದ್‍ರನ್ನು ಭೇಟಿಯಾದದ್ದು ಇಲ್ಲಿ0iÉುೀ. ಜೊತೆಗೆ ಜೆ.ಸಿ. ಚಟರ್ಜಿ, ವಿಜ0iÀiïಕುಮಾರ್ ಸಿನ್ಹಾ ಮುಂತಾದವರ ಪರಿಚಯವೂ ಆಯಿತು. ಇವರೆಲ್ಲರ ಸ್ನೇಹದಿಂದ ಅವರು ‘ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿ0iÉುೀಷನ್’ (ಎಚ್‍ಆರ್‍ಎ) ಬಗ್ಗೆ ಆಕರ್ಷಿತರಾದರು.
ಭಗತ್ ವಿದ್ಯಾರ್ಥಿ-ಯುವಜನರನ್ನು ಸೇರಿಸಿ ಸಂಘಟನೆಯೊಂದನ್ನು ಕಟ್ಟಲು ತೀರ್ಮಾನಿಸಿದರು. ಆ ಕಾರ್ಯಕ್ಕಾಗಿ0iÉುೀ ದೇಶಪ್ರೇಮಿ ವಿದ್ಯಾರ್ಥಿ-ಯುವಜನರನ್ನು ಭೇಟಿಮಾಡಿದರು. 1925ರಲ್ಲಿ ನೌಜವಾನ್ ಭಾರತ್ ಸಭಾದ ರಚನೆ ಮಾಡುವಾಗ ಭಗತ್‍ಸಿಂಗ್‍ರು ಈ ರೀತಿ ಹೇಳಿದ್ದರು. “ಪ್ರಪಂಚದೆಲ್ಲೆಡೆ ಸ್ವಾತಂತ್ರ್ಯಕ್ಕಾಗಿನ ಸಮರದಲ್ಲಿ ವಿದ್ಯಾರ್ಥಿಗಳು ಮುಂಚೂಣೆಯಲ್ಲಿದ್ದು ಬಲಿದಾನ ಮಾಡಿದ್ದಾರೆ. ನಮ್ಮ ದೇಶದ ಈ ಪರಿಸ್ಥಿತಿಯಲ್ಲಿ ಭಾರತೀಯ ಯುವಕರು ಅದೇ ದೃಢಸಂಕಲ್ಪವನ್ನು ಪ್ರದರ್ಶಿಸಲು ಹಿಂತೆಗೆಯುತ್ತಾರೆ0iÉುೀ? ಯಾವ ಕ್ರಾಂತಿ ಜನತೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟು, ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ಯುವಜನರು ದೇಶದ ಮೂಲೆಮೂಲೆಗೂ ಒಯ್ಯಬೇಕು, ಮಿಲಿಯಾಂತರ ಜನತೆಗೆ, ಕೈಗಾರಿಕೆ, ಕೊಳೆಗೇರಿ, ಹಳ್ಳಿಯ ಗುಡಿಸಲುಗಳಿಗೆ ತಲುಪಿಸಬೇಕು.”

ಭಗವತೀಚರಣ್‍ರವರಿಂದ ಬರೆಯಲ್ಪಟ್ಟ ನೌಜವಾನ್ ಭಾರತ್ ಸಭಾದ ಪ್ರಣಾಳಿಕೆಯಲ್ಲಿ ‘ಯುವಕರು ಮುಕ್ತವಾಗಿ, ಶಾಂತವಾಗಿ ಮತ್ತು ತಾಳ್ಮೆಯಿಂದ ಯೋಚಿಸಬೇಕೆಂದು ಮತ್ತು ತಮ್ಮ ಜೀವನದ ಏಕೈಕ ಗುರಿ ಭಾರತದ ಸ್ವಾತಂತ್ರ್ಯವೆಂದು ಭಾವಿಸಬೇಕೆಂದು’ ಬರೆಯಲಾಗಿತ್ತು. ಅಂತೆ0iÉುೀ ‘ಹಿಂದೂ-ಮುಸ್ಲಿಂ ಎಂದು ಹೊಡೆದಾಡುವುದು ತಪ್ಪು’ ಎಂದು ಹೇಳಲಾಗಿತ್ತು. ಪ್ರತಿಯೋರ್ವ ಸದಸ್ಯ ಸಹ ಸಮುದಾಯದ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ0iÉುೀ ಮುಖ್ಯವೆಂದು ಪ್ರಮಾಣ ಮಾಡಿ ಸಹಿ ಹಾಕಬೇಕಿತ್ತು. ಸಂಘಟನೆ ಅಸ್ತಿತ್ವಕ್ಕೆ ಬಂದ ತಕ್ಷಣವೇ ಸದಸ್ಯರು ಸ್ವಾತಂತ್ರ್ಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು, ಅವರಲ್ಲಿ ಹೋರಾಟದ ಉತ್ಸಾಹವನ್ನು ತುಂಬಲು ಚಟುವಟಿಕೆಗಳನ್ನು ಆರಂಭಿಸಿದರು.

ಪರಿಪಕ್ವ ಕ್ರಾಂತಿಕಾರಿ
ಕಾನ್ಪುರದಿಂದ ತಮ್ಮ ಕುಟುಂಬದವರನ್ನು ಭೇಟಿಯಾಗಲು ಹಿಂತಿರುಗಿ ಬಂದ ಭಗತ್‍ರು ಪರಿಪಕ್ವ ಕ್ರಾಂತಿಕಾರಿಯಾಗಿದ್ದರು. 1925ರಲ್ಲಿ ಅವರು ರೈತ ಜಾಥಾಕ್ಕೆ ಸಂಬಂಧಿಸಿದ ಏರ್ಪಾಡುಗಳನ್ನು ಮಾಡಿದ್ದು ಅದಕ್ಕೆ ಸಾಕ್ಷಿಯಾಗಿತ್ತು. ಆಗ ಪಂಜಾಬಿನ ಜನ ದೇವಾಲಯಗಳಿಗೆ ನೀಡಿದ್ದ ಅಪಾರ ಹಣ ದುರ್ವಿನಿಯೋಗ ಆಗುತ್ತಿದೆ ಎಂದು ತಿಳಿದು ರೊಚ್ಚಿಗೆದ್ದರು. ಆ ಹಣವನ್ನು ರಾಷ್ಟ ನಿರ್ಮಾಣ ಕಾರ್ಯಗಳಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಅವರ ಒತ್ತಾಯವಾಗಿತ್ತು. ಆ ದೃಷ್ಟಿಯಿಂದ ಗುರುನಾನಕ್‍ರ ಜನ್ಮ ಸ್ಥಳಕ್ಕೆ ಜಾಥಾಗಳಲ್ಲಿ ಹೊರಡಲು ಸಜ್ಜಾದರು. ಒಂದು ಜಾಥಾ ಭಗತ್‍ರ ಹಳ್ಳಿಯ ಮುಖಾಂತರ ಹೋಗುವುದಿತ್ತು. ಅದಕ್ಕೆ ಆಹಾರ-ವಸತಿ ಇತ್ಯಾದಿ ಏರ್ಪಾಡು ಮಾಡಲು ತಂದೆ ಭಗತ್‍ರಿಗೆ ಹೇಳಿದರು. ಪೆÇಲೀಸರಿಗೆ, ಸ್ಥಳೀ0iÀi ಬ್ರಿಟಿಷ್-ಬೆಂಬಲಿಗ ಜಮೀನುದಾರರಿಗೆ ಸೆಡ್ಡು ಹೊಡೆದು ಭಗತ್ ಆ ಕಾರ್ಯ ಪೂರೈಸಿದರು. ಆ ಜಾಥಾದ ಜನತೆಯ ಮುಂದೆ ತಮ್ಮ ಮೊದಲ ರಾಜಕೀಯ ಭಾಷಣ ಮಾಡಿದರು. ಯಾವುದೋ ನೆಪ ಒಡ್ಡಿ ಪೆÇಲೀಸರು ಬಂಧನದ ವಾರೆಂಟ್ ಹಿಡಿದು ಬರುವ ಮುನ್ನವೇ ಭಗತ್ ಅಲ್ಲಿಂದ ತಪ್ಪಿಸಿಕೊಂಡರು. ಮುಂದೆ ದೆಹಲಿಯಲ್ಲಿ ‘ವೀರ್ ಅರ್ಜುನ್’ ಪತ್ರಿಕೆಯ ವರದಿಗಾರರಾದರು. 

ಪ್ರಥಮ ಬಂಧನ
ಒಮ್ಮೆ 1927ರ ಮೇ ತಿಂಗಳಿನಲ್ಲಿ ಭಗತ್‍ಸಿಂಗ್‍ರವರು ಲಾಹೋರಿನ ತೋಟವೊಂದರಲ್ಲಿ ನಡೆಯುತ್ತಿದ್ದಾಗ ಅವರನ್ನು ಬಂಧಿಸಲಾಯಿತು. ಅಲ್ಲಿನ ರೈಲ್ವೆ ಪೆÇಲೀಸ್ ಠಾಣೆಗೆ ಕರೆದೊಯ್ದು ಯಾವುದೇ ವಿಚಾರಣೆಯಿಲ್ಲದೆ ಒಂದು ತಿಂಗಳು ಬಂಧನದಲ್ಲಿಡಲಾಯಿತು. ನಂತರ ಪೆÇಲೀಸರು “ದಸರಾ ಉತ್ಸವದ ಸಮಯದಲ್ಲಿ ಜನಗಳ ಮೇಲೆ ಬಾಂಬ್ ಎಸೆದಿದ್ದೀಯಾ” ಎಂದು ಆರೋಪಿಸಿದರು. “ಸರ್ಕಾರದ ಸಾಕ್ಷಿದಾರನಾದರೆ ಕ್ಷಮಿಸಿಬಿಡುತ್ತೇವೆ,” ಎಂದು ಹೇಳಿದರು. ಭಗತ್‍ಸಿಂಗ್ ನಕ್ಕುಬಿಟ್ಟರು. “ತಮ್ಮದೇ ದೇಶದ ಜನರ ಮೇಲೆ ಬಾಂಬ್ ಹಾಕುವಂತವರು ತಾವಲ್ಲ,” ಎಂದು ಹೇಳಿದರು. ಸರ್ಕಾರದ ಪರ ಸಾಕ್ಷಿದಾರರಾಗಲಿಲ್ಲವೆಂದು ಕೋಪಗೊಂಡ ಪೆÇಲೀಸರು ಅವರ ಮೇಲೆ ದಸರಾ ಬಾಂಬ್ ಆಪಾದನೆಯೊಂದಿಗೆ ಕಾಕೋರಿ ದರೋಡೆಯ ಕೇಸ್‍ನಲ್ಲೂ ಇವರ ಹೆಸರನ್ನು ಸೇರಿಸಿದರು. ಯಾವುದೇ ಸಾಕ್ಷಾಧಾರವಿಲ್ಲದಿದ್ದರೂ, ಪೆÇಲೀಸರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಭಗತ್‍ಸಿಂಗ್‍ರಿಗೆ ಅರ್ಥವಾಯಿತು. ಸಾಕ್ಷಾಧಾರವಿಲ್ಲದಿದ್ದರೂ ಜಡ್ಜ್, ಜಾಮೀನು ಪಡೆಯಲು 50,000 ರೂಗಳನ್ನು ವಿಧಿಸಿದರು. ಆ ಜಾಮೀನಿನ ಹಣವನ್ನು ಅವರ ತಂದೆಯ ಸ್ನೇಹಿತರು ಕಟ್ಟಿದರು. ಆದರೆ ನಂತರ ಜನರ ಒತ್ತಡದಿಂದ, ಯಾವುದೇ ಸಾಕ್ಷಾಧಾರಗಳಿಲ್ಲದ್ದರಿಂದ ಅದನ್ನು ಹಿಂದೆ ಪಡೆಯಲಾಯಿತು. ಜೈಲಿನಲ್ಲಿದ್ದ ಅಲ್ಪಕಾಲದಲ್ಲಿ0iÉುೀ ಅಲ್ಲಿ ರಾಜಕೀಯ ಖೈದಿಗಳನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದನ್ನು ವಿರೋಧಿಸಿ ಭಗತ್ ಪ್ರತಿಭಟಿಸಿದರು.

ಎಚ್ ಎಸ್ ಆರ್ ಎ ಯ ರಚನೆ
ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿ0iÉುೀಷನ್‍ನ ರಾಮ್‍ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ, ರಾಜೇಂದ್ರ ಲಾಹಿರಿ, ಸೋಹನ್‍ಸಿಂಗ್‍ರನ್ನು ಕಾಕೋರಿ ವಿಚಾರಣೆಯಲ್ಲಿ ಗಲ್ಲಿಗೇರಿಸಲಾಗಿತ್ತು ಮತ್ತು ಇತರರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆಜಾದ್ ಮಾತ್ರ ತಪ್ಪಿಸಿಕೊಂಡಿದ್ದರು. ಹಾಗಾಗಿ ಸಂಘಟನೆ ಬಲವಾಗಿರಲಿಲ್ಲ. ಆ ಸಂಘಟನೆಗೆ ಹೊಸ ರೂಪವನ್ನು ಕೊಡಲು ಭಗತ್ ಮತ್ತು ಅವರ ಸಂಗಾತಿಗಳು ನಿರ್ಧರಿಸಿದರು. ದೆಹಲಿಯ ಫಿರೋಜ್‍ಶಾಹ್ ಕೋಟ್ಲಾ ಮೈದಾನದಲ್ಲಿ  1928ರ ಸೆಪ್ಟೆಂಬರ್ 8-9ರಂದು ಸಭೆಯನ್ನು ಸಂಘಟಿಸಲಾಯಿತು. ಇಲ್ಲಿ ನಡೆದ ಸಭೆಗೆ ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮುಂತಾದ ಭಾಗಗಳಿಂದ ಬಂದಿದ್ದ ಕ್ರಾಂತಿಕಾರಿಗಳೆಲ್ಲಾ ಸೇರಿ ಎಚ್.ಆರ್.ಎ.ಗೆ ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿ0iÉುೀಷನ್ ಎಂದು ಪುನರ್-ನಾಮಕರಣ ಮಾಡಿದರು. üಕ್ರಾಂತಿಕಾರಿಗಳಲ್ಲಿ ಸಮಾಜವಾದದ ಬಗ್ಗೆ ಬೆಳೆದ ಒಲವನ್ನು ತೋರಿಸುತ್ತದೆ. ಸಂಘಟನೆಯ ಉದ್ದೇಶದ ಬಗ್ಗೆ ಸಭೆಯಲ್ಲಿ ಆಜಾದರು ಈ ರೀತಿ ನುಡಿದರು- “ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯುಂಟಾಗಿದೆ. ಇಡೀ ರಾಷ್ಟ್ರದಲ್ಲಿ ಬಿಗಡಾಯಿಸಿದ ವಾತಾವರಣವಿದೆ. ಏನಾದರೊಂದು ಕೃತ್ಯದಲ್ಲಿ ತೊಡಗಲು ಸಮಯ ಪಕ್ವವಾಗಿದೆ. ಕಾಂಗ್ರೆಸ್ ಪಕ್ಷದ ನೀತಿಯಿಂದ ರಾಷ್ಟವು ಸ್ವತಂತ್ರವಾಗಲಾರದು. ದಿನಬೆಳಗಾದರೆ ಒಂದಲ್ಲ ಒಂದು ಒಪ್ಪಂದ ಮಾಡಿಕೊಳ್ಳುವುದೇ ಅವರ ಪರಿಪಾಠವಾಗಿದೆ. ತೋಳು ಮಡಿಸಿ ಸಮರಕ್ಕಿಳಿಯಲು ಯುವಕರು ಇಂದು ಸನ್ನದ್ಧರಾಗಬೇಕು. ನಮ್ಮ ಸಂಘಟನೆಯನ್ನು ಈ ದೃಷ್ಟಿಯಿಂದ ಮಿಲಿಟರಿಯ ಪದ್ಧತಿಯಲ್ಲಿ ಬೆಳಸಬೇಕಾಗುತ್ತದೆ.”

ಕಾಂಗ್ರೆಸ್‍ನ ಬಗ್ಗೆ ಈ ಯುವಜನ ಎಷ್ಟು ಬೇಸತ್ತಿದ್ದಾರೆಂಬುದಕ್ಕೆ ಇದು ಸಾಕ್ಷಿಯಾಗಿದೆ.  ಬ್ರಿಟಿಷರ ವಿರುದ್ಧ ಯುದ್ಧ ಸಾರುವುದರಿಂದ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಳ್ಳಬಹುದು ಎಂಬುದು ಎಲ್ಲರ ಅಚಲವಾದ ನಂಬಿಕೆಯಾಗಿ ಬಿಟ್ಟಿತ್ತು. ರಷ್ಯಾದಲ್ಲಿ 1917ರಲ್ಲಿ ಲೆನಿನ್‍ರವರ ನೇತೃತ್ವದಲ್ಲಿ ನಡೆದಿದ್ದ ಕಾರ್ಮಿಕ ವರ್ಗದ ಕ್ರಾಂತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದ ಭಗತ್‍ಸಿಂಗ್ ಆ ಬಗ್ಗೆ ಸಾಕಷ್ಟು ಓದಿದ್ದರು. ಕಮ್ಯುನಿಸಂ ನೇತಾರರಾದ ಕಾರ್ಲ್‍ಮಾರ್ಕ್ಸ್ ಮತ್ತು ಲೆನಿನ್‍ರವರ ಬರಹಗಳನ್ನು ಅಧ್ಯಯನ ಮಾಡಿದ್ದರು. “ಸಾಮಾನ್ಯ ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಕೂಲಿಗಾರರಿಗೆ ಸ್ವಾತಂತ್ರ್ಯ ಬರದಿದ್ದರೆ ಏನು ಉಪಯೋಗ?  ಬ್ರಿಟಿಷರ ಆಳ್ವಿಕೆಯ ಬದಲಿಗೆ ಭಾರತೀಯರೇ ದಬ್ಬಾಳಿಕೆ ನಡೆಸಿದರೆ ಅದು ಸ್ವಾತಂತ್ರ್ಯವಾಗುವುದಿಲ್ಲ. ಆದ್ದರಿಂದ ನಿಜವಾದ ಕ್ರಾಂತಿ ಅಂದರೆ ಅಧಿಕಾರ ಕಾರ್ಮಿಕ–ರೈತ ವರ್ಗಕ್ಕೆ ಸಿಗಬೇಕು. ಹಸಿವು, ಬಡತನ, ಅನಕ್ಷರತೆ ಕಣ್ಮರೆಯಾಗಬೇಕು,” ಎಂಬುದು ಅವರ ನಿಲುವಾಗಿತ್ತು.  ಈ ಬಗ್ಗೆ ಮಾರ್ಕ್ಸ್‍ರವರ ನಿಲುವು ಭಗತ್‍ಸಿಂಗ್‍ರವರಿಗೆ ಸರಿ0iÉುನಿಸಿತ್ತು. “ಸ್ವಾತಂತ್ರ್ಯವನ್ನು ಕೇವಲ ಪರಕೀಯ ಬ್ರಿಟಿಷರಿಂದ ಮಾತ್ರವಲ್ಲದೆ ಸ್ಥಳೀಯ ಬಂಡವಾಳಗಾರರು-ಜಮೀನುದಾರರಿಂದಲೂ ಪಡೆಯಬೇಕು. ಅದಕ್ಕಾಗಿ ಕ್ರಾಂತಿ ಅಂದರೆ, ಮೂಲಭೂತ ಬದಲಾವಣೆ ಅನಿವಾರ್ಯ,” ಎಂಬ ಸಿದ್ಧಾಂತಕ್ಕೆ ಬದ್ಧರಾದರು. ಆದ್ದರಿಂದಲೇ ಎಚ್.ಎಸ್.ಆರ್.ಎ ಮೂಲಕ ಬ್ರಿಟಿಷರಲ್ಲಿ ಭಯವನ್ನು ಹುಟ್ಟಿಸಲೆತ್ನಿಸುತ್ತಿದ್ದರೆ, ನೌಜವಾನ್ ಭಾರತ್ ಸಭಾದ ಮೂಲಕ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಸಂಘಟಿಸಿ ಚಳುವಳಿಗಳನ್ನು ಬೆಳೆಸುತ್ತಿದ್ದರು.

ಆಜಾದ್‍ರೊಂದಿಗಿನ ಬಾಂಧವ್ಯ
ಈ ಹೋರಾಟದಲ್ಲಿ0iÉುೀ ಭಗತ್‍ಸಿಂಗ್ ಮತ್ತು ಆಜಾದರ ನಡುವೆ ನಿಕಟವಾದ ಬಾಂಧವ್ಯ ಬೆಳೆಯಿತು. ಕ್ರಾಂತಿಕಾರಿ ಚಳುವಳಿಯಲ್ಲಿ ಆeóÁದ್ ಭಗತ್‍ರಿಗಿಂತ ಹೆಚ್ಚು ಅನುಭವ ಹೊಂದಿದ್ದರೂ, ಆeóÁದ್‍ರಿಗೆ ಭಗತ್‍ರ ವಿಚಾರಶೀಲತೆಯ ಬಗ್ಗೆ ಅಪಾರವಾದ ಗೌರವವಿತ್ತು. ಆಜಾದ್ ಮತ್ತು ಭಗತ್‍ರ ನಡುವೆ ವಯಸ್ಸಿನ ಅಂತರ ಹೆಚ್ಚಿರದಿದ್ದರೂ, ಆeóÁದ್ ಒಂದು ರೀತಿಯಲ್ಲಿ ಭಗತ್‍ಸಿಂಗ್‍ರಿಗೆ ತಂದೆಯಂತಿದ್ದರು. ಇಬ್ಬರೂ ಕ್ರಾಂತಿಕಾರಿ ಚಳುವಳಿಗೆ ರೂಪು ನೀಡಲು ಒಟ್ಟಿಗೆ ಶ್ರಮಿಸಿದ್ದರು. ಸ್ವತಂತ್ರ ಭಾರತದ ಕನಸನ್ನು ಕಂಡಿದ್ದರು. ಭಾರತವು ಸಮಾಜವಾದಿ ವ್ಯವಸ್ಥೆಯಾಗಿ ಇತರೆ ದಾಸ್ಯ ರಾಷ್ಟಗಳ ವಿಮೋಚನೆಗಾಗಿ ಶ್ರಮಿಸಿ, ಜಗತ್ತಿನಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ತರುವ ಕನಸನ್ನು ಕಂಡಿದ್ದರು. ಇಬ್ಬರೂ ಅಸಾಮಾನ್ಯ ಕ್ರಾಂತಿಕಾರಿಗಳಾಗಿದ್ದರು.
“ಪಂಜಾಬಿನ ನೌಜವಾನ್ ಭಾರತ್ ಸಭಾ”
1928ರ ಏಪ್ರಿಲ್ 11ರಿಂದ 13ರವರೆಗೆ ಯುವಜನ ಸಮ್ಮೇಳನ ನಡೆಸಲು “ಕೀರ್ತಿ” ಪತ್ರಿಕೆ ಸಂಪಾದಕರಾದ ಸೋಹನ್‍ಸಿಂಗ್ ಜೋಶ್ ನಿರ್ಧರಿಸಿದ್ದರು. ಭಗತ್‍ರು ಅವರನ್ನು ಭೇಟಿ ಮಾಡಿ, ತಾವೂ ಅದರಲ್ಲಿ ಭಾಗಿಯಾಗುವುದಾಗಿ ಹೇಳಿದರು. ಭಗತ್‍ರ ಸಲಹೆಯನ್ನು ಸ್ವೀಕರಿಸಿದ ಸಭೆ ಹೊಸ ಸಂಘಟನೆಗೆ “ಪಂಜಾಬಿನ ನೌಜವಾನ್ ಭಾರತ್ ಸಭಾ” ಎಂದು ಕರೆಯಬೇಕೆಂದು ತೀರ್ಮಾನಿಸಿತು. ಸೈಮನ್ ಆಯೋಗವನ್ನು ವಿರೋಧಿಸುವ, ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಂಡಿತು. ಶ್ರಮಿಕರ ಮತ್ತು ರೈತರ ನಾಯಕತ್ವದಲ್ಲಿ ಸಂಪೂರ್ಣವಾಗಿ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸುವುದು ಸಭಾದ ಆದ್ಯ ಕರ್ತವ್ಯವೆಂದು ಘೋಷಿಸಿತು. ಅಲ್ಲಿಯೂ ಸಹ ಭಗತ್‍ರ ತಂಡ ಮತ್ತು ‘ಕೀರ್ತಿ’ ತಂಡ, “ಧಾರ್ಮಿಕ ಮತ್ತು ಮತೀಯ ಸಂಘಟನೆಗಳಲ್ಲಿ ಐಕ್ಯಗೊಂಡ ಯುವಕರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಬಾರದೆಂದು ಮತ್ತು ಧರ್ಮ ಖಾಸಗಿ ವಿಷಯ, ಆದರೆ ಮತೀಯ ಚೌಕಟ್ಟಿನಲ್ಲಿ ಹೊರಬರುವ ದುಷ್ಟ ಪ್ರವೃತ್ತಿಗಳನ್ನು ಸರ್ವಥಾ ಎದುರಿಸುವುದು ನಮ್ಮ ಕರ್ತವ್ಯ,” ಎಂದು ತೀರ್ಮಾನಿಸಿತು. 

- ಸುಧಾ ಜಿ
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)

ಕವನ: " ಮೂಕಪಕ್ಷಿಯಾಗಬೇಕೆ?"


ಮಾತು ಬಂದರೂ ನಾ ಮೂಕ ಪಕ್ಷಿಯಾದೆ
ಮಾತನಾಡಿದರೆ ನನ್ನವರಿಗದು ಜಗಳ
ಆತಂಕ ತೋರ್ಪಡಿಸಿದರದು  ಕಿರುಕುಳ
ಮಗನಿಗೆ ಬುದ್ಧಿ ಹೇಳಿದರೆ
ಅವನ ಸ್ವಾತಂತ್ರ್ಯಕ್ಕೆ  ಧಕ್ಕೆಯಂತೆ
ತಪ್ಪು ದಾರಿ ಹಿಡೀದಂತೆ ತಡೆದರೆ
ಅದು ನನ್ನ ದರ್ಪವಂತೆ

ಅದಕೇ ಮಾತು ಬಂದರೂ ಸುಮ್ಮನಾದೆ
ಮಾತನಾಡಬೇಕೆನಿಸಿದರೂ ಮೌನವಾದೆ
ಎಲ್ಲವ ನೋಡುತ್ತ ಪ್ರತಿ ಹೇಳದೆ
ಮೂಕಿಯಾದೆ

ಆದರೆ ಪ್ರಶ್ನೆಯೊಂದು ಕಾಡುತ್ತದೆ ಯಾವಾಗಲೂ
ಹೀಗೆಯೇ ಇರಬೇಕೆ ನಾ ರಾತ್ರಿ ಹಗಲು?
 ನಾನೇಕೆ ಮೂಕಿಯಾಗಬೇಕು?
ಮೌನವಾಗಿ ಕಲ್ಲುಬಂಡೆಯಂತಿರಬೇಕು?
ನನಗೂ ಸ್ವಂತಿಕೆಯಿಲ್ಲವೇ?
ನನಗೊಂದು ಅಸ್ತಿತ್ವ ಬೇಡವೇ?
ಇನ್ನು ಮೌನಿಯಾಗಿರಲಾರೆ
ನಾನಿನ್ನು ಮೂಕಪಕ್ಷಿಯಾಗಿರಲಾರೆ!!
- ಕೆ ಎಸ್ ಗಿರಿಜಾ,

ಅನುವಾದ: "ಒಂದು ಸಣ್ಣ ಘಟನೆ"

ಅನುವಾದ : (ಇಂಗ್ಲಿಷ್ ಭಾಷೆಗೆ ಅನುವಾದವಾಗಿರುವ ರಷ್ಯಾ ಭಾಷೆಯ ಕಥೆ)

ಒಂದು ಸಣ್ಣ ಘಟನೆ

ಸೋವಿಯತ್ ಅಧಿಕಾರಕ್ಕಾಗಿ ನಡೆದ ಹೋರಾಟದ ಉಚ್ಛ ಘಟ್ಟದಲ್ಲಿದ್ದಾಗ ಪೆಟ್ರೊಗ್ರಾಡ್‍ನಲ್ಲಿ ನಡೆದ ಒಂದು ಘಟನೆಯಿದು. ಆ ಕಾಲದ ಮಹಾನ್ ಐತಿಹಾಸಿಕ ಘಟನೆಗಳಲ್ಲಿ ಈ ಘಟನೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ, ಏಕೆಂದರೆ ಕೇವಲ ದೊಡ್ಡ ಘಟನೆಗಳ ಮೇಲಷ್ಟೇ ಅಲ್ಲದೆ ಬಹಳ ಸಣ್ಣ ಘಟನೆಗಳ ಮೇಲೂ ಸಹ ಕಾಲ ಮಹಾನ್ ಕ್ರಾಂತಿಯ ಛಾಪನ್ನು ಮೂಡಿಸುತ್ತದೆ.
ಘಟನೆ ನಡೆದದ್ದು ಹೀಗೆ.
ಪ್ರಾಂತೀಯ ಸರ್ಕಾರವನ್ನು ಉರುಳಿಸಿದ 2-3 ದಿನಗಳ ನಂತರ ನಾರ್ವಾ ಜಿಲ್ಲೆಯಿಂದ ಕಾರ್ಮಿಕನೊಬ್ಬ, ಸೋವಿಯತ್ ಅಧಿಕಾರದ ಕೇಂದ್ರ ಸ್ಥಾನವಾದ ಸ್ಮಾಲ್ನಿಗೆ ಬಂದ. ಅವನೊಂದು ತುಕ್ಕು ಹಿಡಿದ, ಸೀಮೆಎಣ್ಣೆ ಡಬ್ಬವನ್ನು ತಂದಿದ್ದ. ಗೇಟಿನ ಬಳಿ ಕಾವಲುಗಾರರು ಕೇಳಿದಾಗ, ಸರ್ಜಿಯೆವ್ ಎಂಬ ಆ ಕಾರ್ಮಿಕ ಹೇಳಿದ್ದಿಷ್ಟು : “ನಾನು ಪುಟಿಲೊವ್ ಕಾರ್ಖಾನೆಯಿಂದ ಬರುತ್ತಿದ್ದೇನೆ. ನಮ್ಮ ಹಾಸ್ಟೆಲ್‍ನಲ್ಲಿ ಬಹಳ ದಿನಗಳಿಂದಲೂ ಬೆಳಕಿಲ್ಲ. ನಮಗೆ ಸೀಮೆಎಣ್ಣೆ ಸಿಗುತ್ತಿಲ್ಲ. ಈಗ ನಮ್ಮದೇ ಜನರ ಅಧಿಕಾರವಿರುವುದರಿಂದ, ನನ್ನ ಸಂಗಾತಿಗಳು ನನ್ನನ್ನು ಲೆನಿನ್‍ರನ್ನು ಕಂಡು ಈ ಡಬ್ಬದ ತುಂಬ ಸೀಮೆಎಣ್ಣೆ ತರಲು ಕಳಿಸಿದ್ದಾರೆ.”
“ನಿನಗೇನೂ ತಲೆ ಕೆಟ್ಟಿದೆಯೇ?” ಕೇಳಿದರು ಕಾವಲುಗಾರರು. “ಕಾಮ್ರೇಡ್ ಲೆನಿನ್‍ರಿಗೆ ನಿನ್ನ ಸೀಮೆಎಣ್ಣೆ ಬಗ್ಗೆ ಚಿಂತಿಸುವುದಕ್ಕಿಂತ ಮುಖ್ಯವಾದ ಹಲವಾರು ಚಿಂತೆಗಳಿವೆ. ಅವರು ವಿಶ್ವವ್ಯಾಪಿ ಕ್ರಾಂತಿಯ ಬಗ್ಗೆ ಯೋಚನೆ ಮಾಡಬೇಕಿದೆ. ನೀನು ನೋಡಿದರೆ ನಿನ್ನ ಡಬ್ಬದೊಂದಿಗೆ ಅವರನ್ನು ತೊಂದರೆ ಮಾಡಲು ಬಂದಿದ್ದೀಯ!”
ಆದರೆ ಆ ಕಾರ್ಮಿಕ ಸರ್ಜಿಯೆವ್ ಅಷ್ಟು ಸುಲಭವಾಗಿ ಮಾತನ್ನು ಕೇಳುವವನಾಗಿರಲಿಲ್ಲ. ಬಹುಶಃ ಅದಕ್ಕಾಗಿಯೇ ಅವನ ಸಂಗಾತಿಗಳು ಅವನನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು.
“ಏನೇ ಆಗಲಿ, ಸ್ನೇಹಿತರೇ,” ಅವನು ಉತ್ತರಿಸಿದ, “ವಿಂಟರ್ ಪ್ಯಾಲೆಸ್‍ಅನ್ನು ವಶಪಡಿಸಿಕೊಂಡ ನಾವು ನಮ್ಮ ಸಂಜೆಗಳನ್ನು ಕತ್ತಲೆಯಲ್ಲಿ ಕಳೆಯುವುದು ಹೇಗೆ? ನಾನು ಬರಿಗೈಲಿ ಹೋಗುವವನಲ್ಲ. ನೀವು ಏನೇ ಹೇಳಿದರೂ, ನಾನು ಲೆನಿನ್‍ರವರನ್ನು ನೋಡಬೇಕು.”
“ಸರಿ, ಅವರನ್ನು ನೋಡಲೇಬೇಕೆಂದಿದ್ದರೆ, ನೀನೇ ಹೋಗಿ ಹುಡುಕು.”
ಅವನು ಕಛೇರಿಯ ಒಳಹೊಕ್ಕು ಲೆನಿನ್ ಎಲ್ಲಿ ಎಂದು ಸಿಕ್ಕಸಿಕ್ಕವರನ್ನೆಲ್ಲಾ ಕೇಳಿದ. ಲೆನಿನ್‍ರವರು ಕೊಠಡಿ 6 ರಲ್ಲಿ ಇದ್ದಾರೆಂದು ಯಾರೋ ಹೇಳಿದರು.
ಸರ್ಜಿಯೆವ ಕೊಠಡಿ 6ರ ಒಳಹೊಕ್ಕ. ಅದು ಜನರಿಂದ ತುಂಬಿಹೋಗಿತ್ತು. ಕೆಲವರು ಡೆಸ್ಕ್‍ನ ಮೇಲೆ, ಕೆಲವರು ಕುರ್ಚಿಗಳ ಮೇಲೆ ಕುಳಿತಿದ್ದರೆ, ಇನ್ನೂ ಕೆಲವರು ಬಾಗಿಲ ಬಳಿ ನಿಂತಿದ್ದರು.
 ಅಲ್ಲಿ ಅವರು ವಿಶ್ವವ್ಯಾಪಿ ಕ್ರಾಂತಿಯ ಬಗ್ಗೆ ಚರ್ಚೆ ಮಾಡುತ್ತಿದ್ದುದ್ದನ್ನು ತನ್ನ ಕಿವಿಯಾರೆ ಕೇಳಿದ. ಅವರು ಕೈಸರ್ ವಿಲ್ಹೆಲ್ಮ್ ಮತ್ತು ಜರ್ಮನಿಯ ಬಗ್ಗೆ, ಹಿಂಡೆನ್‍ಬರ್ಗ್ ಬಗ್ಗೆ ಮತ್ತು ವಿಶ್ವದಾದ್ಯಂತ ಕಾರ್ಮಿಕರ ಐಕ್ಯತೆಯ ಬಗ್ಗೆ ಮಾತನಾಡುತ್ತಿದ್ದದ್ದನ್ನು ಕೇಳಿಸಿಕೊಂಡ.
ತನ್ನ ಡಬ್ಬದೊಂದಿಗೆ ಒಳಗೆ ಬಂದಿದ್ದರ ಬಗ್ಗೆ ನಾಚಿಕೆಪಡುತ್ತಾ, ಮೌನವಾಗಿ ಹಿಂತಿರುಗಲು ಯತ್ನಿಸುತ್ತಿದ್ದಾಗ, ಡೆಸ್ಕ್‍ನ ಕಡೆಯಿಂದ ತಿರುಗಿ ವ್ಯಕ್ತಿಯೊಬ್ಬರು “ಅದೇನು ಡಬ್ಬ ಕಾಮ್ರೇಡ್?” ಕೇಳಿದರು.
ಸರ್ಜಿಯೆವ್ ಹಿಂಜರಿದರೂ, ಮಾತನಾಡಿದ: “ನಾನು ಒಮ್ಮೆ ಲೆನಿನ್‍ರವರನ್ನು ಕಾಣಬಯಸುತ್ತೇನೆ.”
ಆ ವ್ಯಕ್ತಿಗಳು ಪಕ್ಕಕ್ಕೆ ಸರಿಯುತ್ತಿದ್ದಂತೆ ಅವನಿಗೆ ಲೆನಿನ್ ಕಂಡರು.
ಅವರು ಸರ್ಜಿಯೆವ್ ಕಡೆ ಪ್ರಶ್ನಾರ್ಥಕ ದೃಷ್ಟಿಯನ್ನು ಬೀರಿ, “ಏನು ಬೇಕು ಕಾಮ್ರೇಡ್?” ಎಂದರು.
“ನೋಡಿ, ಇದು ಹೀಗಿದೆ. ಪುಟಿಲೊವ್‍ನ ಕಾರ್ಖಾನೆಯ ನನ್ನ ಸಂಗಾತಿಗಳು ನನ್ನನ್ನು ಇಲ್ಲಿ ಕಳಿಸಿದ್ದಾರೆ. ನಮ್ಮ ಕಾರ್ಮಿಕರ ರಾಜ್ಯದ ಮುಖ್ಯಸ್ಥರಾದ ನಿಮ್ಮ ಬಳಿ ಸ್ವಲ್ಪ ಸೀಮೆಎಣ್ಣೆ ಕೇಳಲು, ಏಕೆಂದರೆ ನಾರ್ವಾ ಜಿಲ್ಲೆಯ ನಮ್ಮ ಹಾಸ್ಟೆಲ್‍ನಲ್ಲಿ ಸೀಮೆಎಣ್ಣೆ ಇಲ್ಲ, ಮತ್ತು ನಾವು ಸಂಜೆಯ ವೇಳೆ ಸಂಪೂರ್ಣ ಕತ್ತಲೆಯಲ್ಲಿ ಕಳೆಯಬೇಕಿದೆ.”
ಲೆನಿನ್ ಸ್ವಲ್ಪ ಕಾಲ ಯೋಚಿಸಿ, ತಮ್ಮ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬರ ಹತ್ತಿರ ಕೇಳಿದರು, “ಸ್ಮಾಲ್ನಿಯಲ್ಲಿ ನಮ್ಮ ಬಳಿ ಸೀಮೆಎಣ್ಣೆ ಇದೆಯೇ?”
ಅದೇ ವೇಳೆಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬ ಎದ್ದು ಜೋರಾಗಿ ಕೂಗಾಡಲಾರಂಭಿಸಿದ, “ವ್ಲಾದಿಮಿರ್ ಇಲ್ಯಿಚ್, ಈ ಘಳಿಗೆಯಲ್ಲಿ ನಾವು ಪ್ರಪಂಚದ ಭವಿಷ್ಯದ ಬಗ್ಗೆ ಚರ್ಚಿಸಲು ಕುಳಿತಿರುವಾಗ, ಒಂದು ಡಬ್ಬ ಸೀಮೆಯೆಣ್ಣೆಯ ಸಮಸ್ಯೆಯ ಬಗ್ಗೆ ಪರಿಗಣಿಸಲು ಇತಿಹಾಸ ನಮ್ಮನ್ನಿಲ್ಲಿ ಕೂರಿಸಿಲ್ಲ!”
ಸರ್ಜಿಯೆವ್ ಒಂದು ಘಳಿಗೆ ಆಘಾತಕ್ಕೊಳಗಾದರೂ, ಲೆನಿನರವರು ಈ ಎಲ್ಲಾ ಕೂಗಾಟವನ್ನು ಕೇಳಿಸಿಕೊಳ್ಳದೆ ತಮ್ಮ ಬರಹದ ಪ್ಯಾಡ್‍ನಲ್ಲಿ ಬರೆಯುತ್ತಿರುವುದನ್ನು ಗಮನಿಸಿ ಸುಮ್ಮನಾದ. ಲೆನಿನ್‍ರವರು ಬರೆದದ್ದನ್ನು ಮುಗಿಸಿದ ನಂತರ ಆ ಹಾಳೆಯನ್ನು ಸರ್ಜಿಯೆವ್‍ಗೆ ನೀಡುತ್ತಾ, “ಈ ಪತ್ರ ತೆಗೆದುಕೊ ಕಾಮ್ರೇಡ್, ಪೆಟ್ರೊವ್‍ನನ್ನು ನೋಡು, ಅವನು ನಿನಗೆ ಸೀಮೆಎಣ್ಣೆ ಕೊಡುತ್ತಾನೆ.”
ಸರ್ಜಿಯೆವ್‍ಗೆ ಲೆನಿನ್‍ರನ್ನು ವಂದಿಸಬೇಕಿತ್ತು, ತನ್ನ ಸಂಗಾತಿಗಳ ಪರವಾಗಿ ಕೃತಜ್ಞತೆ ಅರ್ಪಿಸಬೇಕಿತ್ತು. ಆದರೆ ಈಗಾಗಲೇ ಅವರ ಸಾಕಷ್ಟು ಸಮಯವನ್ನು ತಾನು ತೆಗೆದುಕೊಂಡದ್ದರಿಂದ, ಕೇವಲ ಲೆನಿನರಿಗೆ ಧನ್ಯವಾದಗಳನ್ನು ಹೇಳಿ, ಚೀಟಿಯನ್ನು ತೆಗೆದುಕೊಂಡು ಬಾಗಿಲಿನತ್ತ ತರಳಿದ.
ಕೋಣೆ ಈಗ ಶಾಂತವಾಗಿತ್ತು. ಬಾಗಿಲನ ಬಳಿಗೆ ಬಂದಾಗ ಲೆನಿನ್‍ರು ಆ ಇನ್ನೊಬ್ಬ ವ್ಯಕ್ತಿಗೆ ಹೇಳುತ್ತಿರುವುದು ಕೇಳಿಸಿತು, “ ಹೌದು, ಇತಿಹಾಸ ನಮ್ಮನ್ನು ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಲೆಂದೇ ಇಲ್ಲಿ ಸೇರಿಸಿದೆ, ಆದರೆ ನೀವು ನಂಬಿ ಅಥವಾ ಬಿಡಿ, ಸೀಮೆಎಣ್ಣೆ ಸಹ ನಮ್ಮ ಕಾಳಜಿಯೇ. ಅದಕ್ಕಿಂತ ಮುಖ್ಯವಾಗಿ, ನಾವು ಯಾವುದೇ ಒಬ್ಬ ಸಾಮಾನ್ಯ ಕಾರ್ಮಿಕನ ಒಂದು ಸರಳ ಆಶೆಯನ್ನೂ ಸಹ ನಿರಾಶೆಗೊಳಿಸದಿರುವುದು, ಒಂದು ಸಣ್ಣ ಅವಶ್ಯಕತೆಯನ್ನೂ ಸಹ ಅಲ್ಲಗೆಳೆಯದಿರುವುದು.”
ಸರ್ಜಿಯೆವ್ ಈ ಮಾತುಗಳನ್ನು ಕೇಳಿಸಿಕೊಂಡಾಗ ತನ್ನಷ್ಟಕ್ಕೆ ತಾನು ಅಂದುಕೊಂಡ: “ ಆಹಾ! ಸೀಮೆ ಎಣ್ಣೆಗಿಂತಲೂ ಮುಖ್ಯವಾದದ್ದು ಇದೆಯಂತೆ!”
ಅವನಿಗೆ ಸ್ಟೋರ್ ರೂಮ್‍ನಲ್ಲಿ ಸೀಮೆಎಣ್ಣೆ ಅಂದೇ ಸಿಕ್ಕಿತು, ಆತ ಬರಿಗೈಲಿ ಹಿಂತಿರುಗುವ ಪರಿಸ್ಥಿತಿ ಬರಲಿಲ್ಲ. ಇಷ್ಟು ಸಣ್ಣ ವಿಚಾರ ಸುಲಭವಾಗಿ ಪರಿಹಾರವಾಗಿದ್ದು ಎಲ್ಲರಿಗೂ ತೃಪ್ತಿಯನ್ನು ನೀಡಿತ್ತು.


(ಅನುವಾದ - ಸುಧಾ ಜಿ)

ಕವನ: "ಕಾಲಕ್ರಮ"

(ವಾಟ್ಸಾಪ್ ನಲ್ಲಿ ಕಂಡ ಕಥೆಯಿಂದ ಪ್ರೇರಿತ)

ಒಟ್ಟು ನಾಕು ಸುತರರಿದ್ದ
ಪಿತನು ಎಣಿಸುತ್ತಿದ್ದನು.
ಅವರಾತುರ ನಿರ್ಧಾರಕ್ಕೆ
ಪಾಠ ಕಲಿಸಲಿದ್ದನು

ದೂರವಿದ್ದ ಪೇರುಮರವ
ನೋಡಿಬನ್ನಿ ಎಂದನು
ಋತುವಿಗೊಬ್ಬನಂತೆ ಅವರು
ಮರವ ನೋಡಿಬಂದರು

ತಂದೆ ಕರೆದು ಸುತರನುಭವ
ಕೇಳಿ ತಿಳಿಯಲಿಚ್ಛಿಸಿದನು
ಅವರು ತಮ್ಮ ಮರವರ್ಣನೆ
ಇನಿತು ಎಂದು ಶುರುಹಚ್ಚಿದರು

ಶಿಶಿರದಲ್ಲಿ ಮರ ಕರಾಳ
ವಕ್ರವದು... ಪ್ರಥಮನು.
ವಸಂತದಲ್ಲಿ ಎಲ್ಲ ಮೊಗ್ಗು
ಭರವಸೆಯದು.. ದ್ವಿತೀಯನು

ವೈಶಾಖದಿ ಘಮಿಸುವ ಹೂ
ದಯೆಸ್ವರೂಪಿ..ತೃತೀಯನು
ವರ್ಷಾಕಾಲ ಬಲಿತ ಹಣ್ಣು
ಪರಿಪಕ್ವತೆ... ಕೊನೆಯವನು

ನೀವು ನುಡಿದುದೆಲ್ಲ ದಿಟವು
ನಸುನಕ್ಕುತ ನುಡಿದ ಪಿತನು
ಕಾಲಕೊಂದರಂತೆ ರೂಪ
ಅಂತೆಯೇ ಈ ಜೀವನವು

ಕಷ್ಟಕ್ಹೆದರಿ ಓಡುವೆಯೋ
ಬೆಳೆಸಲಾರೆ ಭರವಸೆಯ
ಸವಿಯಲಾರೆ ಸುಂದರತೆಯ
ಪಡೆಯಲಾರೆ ಪರಿಪೂರ್ಣತೆಯ

- ಉಷಾಗಂಗೆ

ಅನುವಾದ: "ಲೆನಿನ್ ರವರ ಭಾಷಣ"

ಶ್ರಮಿಕ ಮಹಿಳೆಯರ ಮೊದಲ ಅಖಿಲ ರಷ್ಯ ಕಾಂಗ್ರೆಸ್ ನಲ್ಲಿ ಲೆನಿನ್ ರವರು ಮಾಡಿದ ಭಾಷಣ

ಕಾಮ್ರೇಡರೇ ಒಂದರ್ಥದಲ್ಲಿ ಶ್ರಮಿಕರ ಸೈನ್ಯದ ಮಹಿಳಾ ವಿಭಾಗದ ಈ ಕಾಂಗ್ರೆಸ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಪ್ರತಿ ದೇಶದಲ್ಲಿಯೂ ಮಹಿಳೆಯರನ್ನು ಕಾರ್ಯಾಚರಣೆಗೆ ಇಳಿಸುವುದು ಅತ್ಯಂತ ಕಷ್ಟಕರವಾದದ್ದು . 
ಬಹಳಷ್ಟು ಜನ ದುಡಿಯುವ ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಸಮಾಜವಾದಿ ಕ್ರಾಂತಿಯಾಗಲು ಸಾಧ್ಯವಿಲ್ಲ.

ಎಲ್ಲಾ ನಾಗರಿಕ ದೇಶಗಳಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲಿಯೂ ಸಹ ಮಹಿಳೆಯರು ಗೃಹಕೃತ್ಯದ ಗುಲಾಮರಲ್ಲದೆ ಇನ್ನೇನು ಅಲ್ಲ. ಮಹಿಳೆಯರು ಯಾವುದೆ ಬಂಡವಾಳಶಾಹಿ ರಾಜ್ಯದಲ್ಲಿ, ಅತ್ಯಂತ ಸ್ವತಂತ್ರ ಗಣರಾಜ್ಯದಲ್ಲಿಯು ಸಹ ಸಂಪೂರ್ಣವಾದ ಸಮಾನತೆಯನ್ನು ಅನುಭವಿಸುತ್ತಿಲ್ಲ. 

ಸೋವಿಯತ್ ಗಣರಾಜ್ಯ ಮಾಡಿದ ಪ್ರಾಥಮಿಕ ಕಾರ್ಯಗಳಲ್ಲಿ ಒಂದೆಂದರೆ, ಮಹಿಳೆಯರ ಹಕ್ಕುಗಳ ಮೇಲಿರುವ ಎಲ್ಲಾ ನಿರ್ಬಂಧಗಳನ್ನು ನಿಷೇಧಿಸಿರುವುದು.  ಸೋವಿಯತ್ ಸರ್ಕಾರ  ಬೂರ್ಜ್ವ ಅವನತಿಯ, ತುಳಿತದ  ಮತ್ತು ಅವಮಾನದ ಮೂಲವಾದ ವಿಚ್ಛೇದನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಸಂಪೂರ್ಣ ವಿಚ್ಛೇದನ ಸ್ವಾತಂತ್ರ್ಯದ ಕಾನೂನನ್ನು ಜಾರಿಗೊಳಿಸಿ ಒಂದು ವರ್ಷವಾಗುತ್ತಾ ಬಂದಿದೆ ನಾವು ಕಾನೂನುಬದ್ಧ ಮತ್ತು ಕಾನೂನುಬಾಹಿರ ಮಕ್ಕಳ ನಡುವಿನ ಎಲ್ಲಾ ಅಂತರಗಳನ್ನು ತೆಗೆದುಹಾಕುವ ಆದೇಶವನ್ನು ಹೊರಡಿಸಿದ್ದೇವೆ. ಎಲ್ಲಾ ರಾಜಕೀಯ  ನಿರ್ಬಂಧಗಳನ್ನು ತೆಗೆದುಹಾಕಿದ್ದೇವೆ. ವಿಶ್ವದಲ್ಲಿ ಇನ್ನೆಲ್ಲಿಯು ಸಹ ದುಡಿಯುವ ಮಹಿಳೆಯರ ಸಮಾನತೆಯನ್ನು ಇಷ್ಟು ಸಂಫೂರ್ಣವಾಗಿ ಸ್ಥಾಪಿಸಲಾಗಿಲ್ಲ.

ಈ ಪುರಾತನ ನಿಯಮಗಳಿಂದ ಅತ್ಯಂತ  ಹೆಚ್ಚು ತೊಂದರೆಗೊಳಗಾಗುವುದು ದುಡಿಯುವ ಶ್ರಮಿಕ ಮಹಿಳೆಯೆಂಬುದು ನಮಗೆಲ್ಲರಿಗೂ ತಿಳಿದಿದೆ.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಕಾನೂನು ಮಹಿಳೆಯರ ಹಕ್ಕುಗಳನ್ನು ನಿರಾಕರಿಸುವ ಎಲ್ಲವನ್ನು  ತೆಗೆದುಹಾಕಿದೆ. ಆದರೆ ಮುಖ್ಯವಾದದ್ದು ಕಾನೂನಲ್ಲ. ನಗರಗಳಲ್ಲಿ  ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಿವಾಹದ ಸಂಪೂರ್ಣ ಸ್ವಾತಂತ್ರ್ಯದ ಕಾನೂನು ಚೆನ್ನಾಗಿ ಕೆಲಸಮಾಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈ ಕಾನೂನು ಸತ್ತ ಅಕ್ಷರವಾಗಿ ಉಳಿದುಬಿಡುತ್ತದೆ. ಅಲ್ಲಿ ಧಾರ್ಮಿಕ ವಿವಾಹಗಳು ಜಾರಿಯಲ್ಲಿದೆ.  ಇದು ಪುರೋಹಿತರ ಪ್ರಭಾವದಿಂದ; ಈ ಪಿಡುಗನ್ನು ತೊಡೆದುಹಾಕುವುದು ಹಳೆಯ ಕಾನೂನನ್ನು ತೆಗೆದುಹಾಕುವುದಕ್ಕಿಂತ ಕಠಿಣ .

ನಾವು ಧಾರ್ಮಿಕ ಪೂರ್ವಗ್ರಹಗಳನ್ನು ಹೋರಾಡುವಾಗ ಅತ್ಯಂತ  ಜಾಗರೂಕರಾಗಿರಬೇಕು ; ಕೆಲವರು ಈ ಹೋರಾಟವನ್ನು ನಡೆಸುವಾಗ ಧಾರ್ಮಿಕ  ಭಾವನೆಗಳಿಗೆ ನೋವುಂಟು ಮಾಡಿ ಹೋರಾಟಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ನಾವು ಪ್ರಚಾರ ಮತ್ತು ಶಿಕ್ಷಣವನ್ನು  ಬಳಸಬೇಕು.ಅತಿ ತೀವ್ರವಾದ ಹೋರಾಟ ಅನಗತ್ಯವಾಗಿ  ಜನತೆಯ ಆಗ್ರಹಕ್ಕೆ ಕಾರಣವಾಗಬಹುದು. ಇಂತಹ ಹೋರಾಟದ ವಿಧಾನಗಳು ಧರ್ಮದ  ಆಧಾರದ  ಮೇಲೆ ಜನತೆಯ ವಿಭಜಿಸುವಿಕೆಯನ್ನು ಮುಂದುವರಿಸುತ್ತದೆ. ಆದರೆ ನಮ್ಮ ಶಕ್ತಿಯಿರುವುದು, ಐಕ್ಯತೆಯಲ್ಲಿ. ಧಾರ್ಮಿಕ ಪೂರ್ವಗ್ರಹದ ಆಳವಾದ ಮೂಲವೆಂದರೆ ಬಡತನ ಮತ್ತು ಅಜ್ಙಾನ; ಈ ಪಿಡುಗುಗಳನ್ನು ನಾವು ಎದುರಿಸಲೇಬೇಕು.

ಇಲ್ಲಿಯವರೆಗು ಮಹಿಳೆಯ ಸ್ಥಾನವನ್ನು ಗುಲಾಮರೊಂದಿಗೆ ಹೋಲಿಸಲಾಗಿದೆ; ಮಹಿಳೆಯರನ್ನು ಗೃಹಬಂಧಿಯನ್ನಾಗಿಸಿದೆ. ಸಮಾಜವಾದ ಮಾತ್ರವೇ  ಇದರಿಂದ ಮಹಿಳೆಯರನ್ನು ಮುಕ್ತಗೊಳಿಸಬಹುದಾಗಿದೆ. ನಾವು ಸಣ್ಣ ಪ್ರಮಾಣದ ವೈಯುಕ್ತಿಕ ಕೃಷಿಯಿಂದ ಸಾಂಘಿಕ ಕೃಷಿಗೆ, ಸಾಂಘಿಕ  ಕೃಷಿಯಿಂದ  ಸಾಮೂಹಿಕ ಕೃಷಿಗೆ ಬದಲಾಯಿಸಿದಾಗ ಮಾತ್ರ ಮಹಿಳೆಯರನ್ನು ಸಂಪೂರ್ಣವಾಗಿ ವಿಮೋಚನೆಗೊಳಿಸಬಹುದು. ಅದು ಕಷ್ಟಕರವಾದ ಕೆಲಸ. ಆದರೆ ಈಗ ಬಡರೈತರ ಸಮಿತಿಗಳನ್ನು ರಚಿಸಲಾಗುತ್ತಿದೆ, ಸಮಾಜವಾದಿ ಕ್ರಾಂತಿ ಸಘನೀಕರಣವಾಗುತ್ತಿರುವ ಕಾಲ ಬಂದಿದೆ. 

ಗ್ರಾಮೀಣ ಜನತೆಯ ಅತ್ಯಂತ  ಬಡವರ್ಗ ಈಗ ತನ್ನನ್ನೇ  ಸಂಘಟಿಸಿಕೊಳ್ಳಲಾರಂಭಿಸಿದೆ ಮತ್ತು ಸಮಾಜವಾದ ಬಡರೈತರ ಸಂಘಟನೆಗಳಲ್ಲಿ ಸಧೃಡವಾಗಿ ಸ್ಥಾಪಿತವಾಗುತ್ತಿದೆ.

ಮೊದಲು, ಸಾಮಾನ್ಯವಾಗಿ ಪಟ್ಟಣವು ಕ್ರಾಂತಿಕಾರಕವಾಗುತ್ತಿತ್ತು. ತದನಂತರ ಗ್ರಾಮೀಣ ಭಾಗ .

ಆದರೆ ಪ್ರಸಕ್ತ ಕ್ರಾಂತಿಯು ಹೆಚ್ಚು ಗ್ರಾಮೀಣ ಭಾಗದ ಮೇಲೆ ಆಧಾರ ಪಟ್ಟಿದೆ ಮತ್ತು ಅದರಲ್ಲಿ ಕ್ರಾಂತಿಯ ಮಹತ್ವ ಮತ್ತು ಶಕ್ತಿಯಡಗಿದೆ. ಮಹಿಳೆಯರು ಕ್ರಾಂತಿಯಲ್ಲಿ ಎಷ್ಟರ ಮಟ್ಟಿಗೆ ಭಾಗವಹಿಸುತ್ತಾರೆ ಎಂಬುದರ ಆಧಾರದ ಮೇಲೆ ಕ್ರಾಂತಿಯ ಯಶಸ್ಸು ನಿಂತಿದೆ ಎನ್ನುವುದನ್ನು ಎಲ್ಲಾ ವಿಮೋಚನಾ ಚಳುವಳಿಗಳ ಅನುಭವವು ತೋರಿಸಿಕೊಟ್ಟಿದೆ. ಮಹಿಳೆಯರು ಸ್ವತಂತ್ರವಾಗಿ ಕಾರ್ಮಿಕವರ್ಗದ ಸಮಾಜವಾದಿ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸೋವಿಯತ್  ಸರ್ಕಾರ  ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸೋವಿಯತ್ ಸರ್ಕಾರ ಈಗ ಕಷ್ಟಕರ ಪರಿಸ್ಥಿತಿಯಲ್ಲಿದೆ , ಏಕೆಂದರೆ ಎಲ್ಲಾ ದೇಶಗಳ ಸಾಮ್ರಾಜ್ಯಶಾಹಿಗಳು ಸೋವಿಯತ್ ರಷ್ಯಾ ಅನ್ನು ದ್ವೇಷಿಸುತ್ತಾರೆ ಮತ್ತು ನಮ್ಮೊಂದಿಗೆ ಯುದ್ಧ ಮಾಡಲು ಸಜ್ಜಾಗುತ್ತಿದ್ದಾರೆ; ನಾವು ಹಲವು ದೇಶಗಳಲ್ಲಿ ಕ್ರಾಂತಿಯ ಕಿಡಿಯನ್ನು ಹರಡಲು ಕಾರಣವಾಗಿದ್ದೇವೆ ಎಂದು ಮತ್ತು ಸಮಾಜವಾದದೆಡೆಗೆ ದೃಢವಾದ ಹೆಜ್ಜೆ ಹಾಕುತ್ತಿದ್ದೇವೆ ಎಂದು. 

ಕ್ರಾಂತಿಕಾರಿ  ರಷ್ಯಾವನ್ನು ವಿನಾಶಗೊಳಿಸಲು ಹೊರಟಿರುವವರಿಗೆ ಈಗ ತಮ್ಮದೆ ಕಾಲಡಿಯಲ್ಲಿ ಭೂಮಿ ಉರಿಯುತ್ತಿರುವ  ಅನುಭವವಾಗುತ್ತಿದೆ. ಜರ್ಮನಿಯಲ್ಲಿ ಹೇಗೆ ಕ್ರಾಂತಿಕಾರಿ  ಚಳುವಳಿ ಹರಡುತ್ತಿದೆ ಎಂಬುದು ನಿಮಗೆಲ್ಲ ಗೊತ್ತು. ಡೆನ್ಮಾರ್ಕ್ ನಲ್ಲಿಯೂ ಕಾರ್ಮಿಕರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸ್ವಿಟ್ಸರ್ಲೆಂಡಿನಲ್ಲಿ  ಮತ್ತು ಹಾಲೆಂಡ್ ನಲ್ಲಿ ಕ್ರಾಂತಿಕಾರಿ ಚಳುವಳಿ ಬಲಿಷ್ಟವಾಗುತ್ತಿದೆ. ಈ ಸಣ್ಣ ದೇಶಗಳಲ್ಲಿನ ಕ್ರಾಂತಿಕಾರಿ ಚಳುವಳಿ ತನ್ನಷ್ಟಕ್ಕೆ ತಾನೆ ಯಾವುದೆ ಮಹತ್ವವನ್ನು ಹೊಂದಿಲ್ಲದೆ ಇರಬಹುದು, ಆದರೆ ಅದು ನಿರ್ದಿಷ್ಟ ವಾಗಿ ಮಹತ್ವಪೂರ್ಣವಾಗಿದೆ. ಏಕೆಂದರೆ ಈ ದೇಶಗಳಲ್ಲಿ ಯಾವುದೆ ಯುದ್ಧವಿರಲಿಲ್ಲ ಮತ್ತು ಈ ದೇಶಗಳಲ್ಲಿ ಅತ್ಯಂತ" ಸಾಂವಿಧಾನಿಕ" ಪ್ರಜಾತಾಂತ್ರಿಕ ವ್ಯವಸ್ಥೆಯಿತ್ತು. ಇಂತಹ ದೇಶಗಳಲ್ಲಿಯೆ ಚಳುವಳಿಗಳು ನಡೆಯುತ್ತಿವೆ ಎಂದರೆ ವಿಶ್ವದಾದ್ಯಂತ  ಎಲ್ಲೆಡೆ ಕ್ರಾಂತಿಕಾರಿ ಚಳುವಳಿ ಹೆಚ್ಚುತ್ತಿದೆ ಎಂಬುದು ನಮಗೆ ಖಚಿತವಾಗಿದೆ.

ಇಲ್ಲಿಯವರೆಗೆ ಯಾವ ಗಣರಾಜ್ಯಕ್ಕೂ ಮಹಿಳೆಯನ್ನು ವಿವೇಚನೆಗೊಳಿಸಲಾಗಿಲ್ಲ. ಸೋವಿಯತ್ ಸರ್ಕಾರ ಆ ಕೆಲಸವನ್ನು ಮಾಡುತ್ತಿದೆ. ನಮ್ಮ ಧ್ಯೇಯ ಅಜೇಯ. ಏಕೆಂದರೆ ಅಜೇಯವಾದ ಕಾರ್ಮಿಕವರ್ಗ ಎಲ್ಲಾ ದೇಶಗಳಲ್ಲಿ  ಸಿಡಿದೇಳುತ್ತಿದೆ. ಈ ಚಳುವಳಿ ಅಜೇಯವಾದ ಸಮಾಜವಾದಿ ಕ್ರಾಂತಿಯ ಹರಡುವಿಕೆಯನ್ನು ತೋರಿಸುತ್ತಿದೆ.
(ನವೆಂಬರ್ ೧೯, ೧೯೧೮)