ಮಾತು ಬಂದರೂ ನಾ ಮೂಕ ಪಕ್ಷಿಯಾದೆ
ಮಾತನಾಡಿದರೆ ನನ್ನವರಿಗದು ಜಗಳ
ಆತಂಕ ತೋರ್ಪಡಿಸಿದರದು ಕಿರುಕುಳ
ಮಗನಿಗೆ ಬುದ್ಧಿ ಹೇಳಿದರೆ
ಅವನ ಸ್ವಾತಂತ್ರ್ಯಕ್ಕೆ ಧಕ್ಕೆಯಂತೆ
ತಪ್ಪು ದಾರಿ ಹಿಡೀದಂತೆ ತಡೆದರೆ
ಅದು ನನ್ನ ದರ್ಪವಂತೆ
ಅದಕೇ ಮಾತು ಬಂದರೂ ಸುಮ್ಮನಾದೆ
ಮಾತನಾಡಬೇಕೆನಿಸಿದರೂ ಮೌನವಾದೆ
ಎಲ್ಲವ ನೋಡುತ್ತ ಪ್ರತಿ ಹೇಳದೆ
ಮೂಕಿಯಾದೆ
ಆದರೆ ಪ್ರಶ್ನೆಯೊಂದು ಕಾಡುತ್ತದೆ ಯಾವಾಗಲೂ
ಹೀಗೆಯೇ ಇರಬೇಕೆ ನಾ ರಾತ್ರಿ ಹಗಲು?
ನಾನೇಕೆ ಮೂಕಿಯಾಗಬೇಕು?
ಮೌನವಾಗಿ ಕಲ್ಲುಬಂಡೆಯಂತಿರಬೇಕು?
ನನಗೂ ಸ್ವಂತಿಕೆಯಿಲ್ಲವೇ?
ನನಗೊಂದು ಅಸ್ತಿತ್ವ ಬೇಡವೇ?
ಇನ್ನು ಮೌನಿಯಾಗಿರಲಾರೆ
ನಾನಿನ್ನು ಮೂಕಪಕ್ಷಿಯಾಗಿರಲಾರೆ!!
- ಕೆ ಎಸ್ ಗಿರಿಜಾ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ