Pages

ಮೇ ೨೦೧೬ ಆವೃತ್ತಿ



ಮೇ ತಿಂಗಳು ಪರೀಕ್ಷೆಗಳ ಫಲಿತಾಂಶ ಹೊರತಂದ ತಿಂಗಳು. ಕೆಲವರಿಗೆ ಸಂತಸ, ಕೆಲವರಿಗೆ ಬೇಸರ ತಂದ ಫಲಿತಾಂಶಗಳು. ಆದರೆ ನಮ್ಮಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಯೆಂದರೆ ಮಕ್ಕಳು ಫಲಿತಾಂಶದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗುವುದು. ಜೀವನದ ಅನುಭವಕ್ಕಿಂತಲೂ ಒಂದು ಪರೀಕ್ಷೆಯ ಫಲಿತಾಂಶಕ್ಕೆ ಹೆಚ್ಚು ಬೆಲೆಕೊಡುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಬೆಳೆಸಿರುವುದು ಒಂದು ಸಮಾಜವಾಗಿ ನಮ್ಮ ವೈಫಲ್ಯ. ವಿಶಾಲ ದೃಷ್ಟಿಕೋನ ಬೆಳೆಸಲಾಗದಿರುವುದು ನಮ್ಮ ಸೋಲು. ಶಾಲೆ-ಕಾಲೇಜು-ವಿಶ್ವವಿದ್ಯಾಲಯ-ಕಲಿಕೆ ಎಂದರೆ ಪರೀಕ್ಷೆಯಲ್ಲಿ ಪಡೆವ ಅಂಕಗಳಲ್ಲ, ಮಗುವೊಂದು ವ್ಯಕ್ತಿಯಾಗಿ ರೂಪಗೊಳ್ಳುವಿಕೆ. ಅನುಭವ, ನಿಲುವು, ದೃಷ್ಟಿಕೋನ, ವ್ಯಾವಹಾರಿಕ ಕಾರ್ಯವಿಧಾನ, ನೈಪುಣ್ಯ ಮುಂತಾದ ಜೀವನಸ್ತಂಭಗಳನ್ನು ಕಟ್ಟಿಕೊಳ್ಳುವ ನಿರ್ಣಾಯಕ ಅವಧಿ. ಆದರೆ ಇದೆಲ್ಲವನ್ನು ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಮಾನದಂಡದಲ್ಲೇ ಅಳೆಯುವುದು ನಮ್ಮ ಸಂಕುಚಿತತೆ ಅಲ್ಲವೇ? 

ಇಂದಿನ ವ್ಯವಸ್ಥೆಯಲ್ಲಿ ಇರುವ ಹಲವು ಅವಕಾಶಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ, ಅವರ ಅರಿವಿನ ಪರಿಮಿತಿಯನ್ನು ವಿಸ್ತರಿಸುವ ಕಾರ್ಯ ನಮ್ಮದಾಗಬೇಕು. ಜೀವನ ಸೌಂದರ್ಯವನ್ನು ಸವಿಯುವ, ಬದುಕಿಗೆ ಅಂಕಗಳನ್ನು ಮೀರಿದ ಪ್ರಾಶಸ್ತ್ಯ ಇದೆ ಎಂಬುದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮದಾಗಬೇಕು. 

ಹಾರವರ್ಡ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞ ಡಾನ್ ಗಿಲ್ಬರ್ಟ ತನ್ನ 'Surprsining Science of Happiness'ಎಂಬ ಭಾಷಣದಲ್ಲಿ "From field studies to laboratory studies, we see that winning or losing an election, gaining or losing a romantic partner, getting or not getting a promotion, passing or not passing a college test, on and on, have far less impact, less intensity and much less duration than people expect them to have." ಎನ್ನುತ್ತಾನೆ. ಅಂದರೆ ಈ ಪರೀಕ್ಷೆಗಳು, ಇವುಗಳ ಫಲಿತಾಂಶಗಳು - ಇವು ನಮ್ಮ ಜೀವನದ ಸುಖ - ದುಖದ ನಿರ್ಣಾಯಕ ಘಟ್ಟಗಳಲ್ಲ. ವಿಶಾಲ ಜೀವನದ ಸೊಬಗನ್ನು ಚಿಕ್ಕ ಏರು ಪೇರುಗಳಿಂದಾಗಿ ಹಾಳು ಮಾಡಿಕೊಳ್ಳದೆ ಧೈರ್ಯವಾಗಿ ವಿಶ್ವಾಸದಿಂದ ಬದುಕುವ, ಮಕ್ಕಳನ್ನು ಮತ್ತಷ್ಟು ಆತ್ಮವಿಸ್ವಾಸದಿಂದ ಬೆಳೆಸೋಣ.


ಮೇ ೨೦೧೬ ಆವೃತ್ತಿಯ ವಿಷಯ ಸೂಚಿ -

ಮೇ ದಿನದ ವಿಶೇಷ - ಶವಸಂಸ್ಕಾರದ ಧರ್ಮಪ್ರವಚನ
- ಡಾ।। ಸುಧಾ.ಜಿ 


ವ್ಯಕ್ತಿ ಪರಿಚಯ: "ಕಾಜಿ ನಜ್ರುಲ್ ಇಸ್ಲಾಂ" 
 - ಡಾ।। ಸುಧಾ.ಜಿ 


ಕಥೆ: "ಯಾರು ಧನ್ಯ?"
- ದೀಪಶ್ರೀ ಜೆ 


ತಿಂಗಳ ವಿಶೇಷ: "ನಾಟಕ - ಅಮ್ಮನ ದಿನ" 
-  ಡಾ।। ಸುಧಾ.ಜಿ


 
ಅನುವಾದ: "ಹೂಗುಚ್ಛವೊಂದು ನನಗಿಂದು ಬಂತು"
- ಗಿರಿಜಾ.ಕೆ.ಎಸ್
http://balapamagazine.blogspot.com/2016/06/blog-post_3.html

 
ನಾನು ಕ್ರಿಶ್ಚಿಯನ್ ಅಲ್ಲವೇ?
- ನಿಲೀನಾ ಥಾಮಸ್
http://balapamagazine.blogspot.com/2016/06/blog-post_46.html

  

ಸಿನಿಮಾ ವಿಮರ್ಶೆ: ಸತ್ಯಜಿತ್ ರೇರವರ "ಗಣಶತ್ರು" 

- ಉಷಾಗಂಗೆ 

ಕವನ: "ಬಡವನ ಸೇವೆ ಭಗವಂತನ ಸೇವೆ" 
- ಜಿ.ಗಂಗಾಧರಯ್ಯ 



ಅನುವಾದ: "ದುಡ್ಡು" 
 - ಡಾ।। ಸುಧಾ.ಜಿ 

2 ಕಾಮೆಂಟ್‌ಗಳು:

ರಂಗಮ್ಮ ಹೊದೇಕಲ್ ಹೇಳಿದರು...

ತುಂಬ ಚೆನ್ನಾಗಿದೆ ಮೇಡಂ.ಸಾರ್ಥಕ ಪ್ರಯತ್ನ

ರಂಗಮ್ಮ ಹೊದೇಕಲ್ ಹೇಳಿದರು...

ತುಂಬ ಚೆನ್ನಾಗಿದೆ ಮೇಡಂ.ಸಾರ್ಥಕ ಪ್ರಯತ್ನ