ಮತ್ತೆ ಕ್ರಿಸ್‍ಮಸ್ ಬಂದಿತು. ಎಲ್ಲಾ ಹಬ್ಬಗಳಲ್ಲಿ ಅದು ಅತ್ಯುತ್ತಮ ಹಬ್ಬವೆನಿಸುತ್ತದೆ. ಏಕೆಂದರೆ ಇಡೀ ಪ್ರಪಂಚ ಅದನ್ನು ಆಚರಿಸುತ್ತದೆ. ಕಾಲೇಜಿನಲ್ಲಿ . . . ಎಂದಿನಂತೆಯೇ, ನನ್ನನ್ನು ಕೇಳಿದರು “ಈ ಕ್ರಿಸ್ಮಸ್‍ಗೂ ನೀನು ಚರ್ಚ್‍ಗೆ ಹೋಗುವುದಿಲ್ಲವೇ???” ನನ್ನ ಜೀವನದಲ್ಲಿ ಇಲ್ಲಿಯವರೆಗೂ ಹೇಳಿಕೊಂಡು ಬಂದಂತೆ, ನಾನು ವಿನೀತಳಾಗಿ ಉತ್ತರಿಸಿದೆ, “ಇಲ್ಲ ಹೋಗುವುದಿಲ್ಲ.” ತಕ್ಷಣವೇ ಮತ್ತೊಂದು ಕಾಮೆಂಟ್ ಕೇಳಿ ಬಂತು, “ಅದೆಂತಹ ಕ್ರಿಶ್ಚಿಯನ್ ನೀನು.” ನಾನು ಕೇವಲ ನಕ್ಕೆ.
ಈ ಬಾರಿ ಸ್ವಲ್ಪ ಭಿನ್ನವಾಗಿತ್ತು. ನಾನು ಸೇಂಟ್ ಥಾಮಸ್ ಚರ್ಚ್‍ಗೆ ಹೋದೆ. ಹೋಗಬೇಕೆನ್ನುವ ಭಾವನೆಯೊಂದಿಗೆ. “ನಾನು ನಿನ್ನ ಮುಂದೆ ಮಂಡಿಯೂರಿ ಕುಳಿತು, ತಲೆ ಬಾಗಿಸಿದಾಗ ನಾನು ಮಾತನಾಡಿದ್ದು ಯಾರೊಂದಿಗೆ?
ನನಗೆ ಗೊತ್ತು ನೀನು ಸ್ವರ್ಗದಲ್ಲಿ ಅಥವಾ ಮೋಡಗಳ ಹಿಂದೆಯಿಲ್ಲವೆಂದು. ಆದರೂ ಯಾರೋ ನನ್ನ ಮಾತನ್ನು ಕೇಳುತ್ತಿರುವರೆಂದು ಭಾಸವಾಯಿತು. ಯಾರದು? ನಾನು ನಿನಗೆ ಪ್ರಾರ್ಥನೆ ಮಾಡುವಾಗ ನಾನು ಇಷ್ಟನ್ನು ಹೇಳುವಷ್ಟು ನಿರ್ಭೀತಳು - ನನಗೆ ಗೊತ್ತು ನೀನು ಅಸ್ತಿತ್ವದಲ್ಲಿಲ್ಲವೆಂದು. ಆದರೆ ನನಗೆ ಇದನ್ನು ಮಾಡಲು ಸಹಾಯ ಮಾಡು. ಅದರ ಬದಲಿಗೆ ನಾನು ಸಮಾಜಕ್ಕೆ ಏನನ್ನದರೂ ಒಳ್ಳೆಯದನ್ನು ಮಾಡುವ ಭರವಸೆ ನೀಡುತ್ತೇನೆಂದು.

ಇದನ್ನು ನಾನು ಯಾರೊಂದಿಗೆ ಹೇಳಿಕೊಳ್ಳುತ್ತಿದೆ?
ಹೊರಗೆ ಬಂದಾಗ ನನ್ನ ಮನಸ್ಸಿನಲ್ಲೊಂದು ನೆಮ್ಮದಿ ಮೂಡಿತ್ತಲ್ಲ ಏಕೆ?
ಎಲ್ಲೊ ಒಂದು ಕಡೆ ನೀ ನನ್ನನ್ನು ಇಷ್ಟಪಡುವೆ ಎಂದು ನನಗನಿಸುತ್ತದೆ, ನಾನು ನಿನಗೆ ತುಂಬಾ ಹತ್ತಿರ ಎಂದು ಭಾವಿಸುತ್ತೇನೆ. ಆದರೆ ಹಾಗೇಕೆ? ನೀನು ಎಲ್ಲಿರುವೆ?
ಚರ್ಚ್ ಫಾದರ್‍ಗಳೊಂದಿಗೆ ತಮ್ಮ ಪಾಪಗಳನ್ನು ನಿವೇದಿಸಿಕೊಂಡ ನಂತರ ಜನಕ್ಕೆ ಹೀಗೆಯೇ ಅನಿಸುತ್ತದೆಯೇ?
ಅವರು ನಿನಗೆ ಏಕೆ ನಿವೇದಿಸಿಕೊಳ್ಳಲಾರರು? ನಾನು ಮಾಡುವಂತೆ.
ನೀನು ನನ್ನ ಒಳಗೇ ಇರುವೆಯಾ? ನನ್ನ ಸುಪ್ತ ಪ್ರಜ್ಞೆಯಲ್ಲಿರುವೆಯಾ? ನೀನು ಎಲ್ಲರಲ್ಲಿಯೂ ಇರುವೆಯಾ?

ಅಥವಾ ಕೆಲವರು ಅದನ್ನು ಗುರುತಿಸುತ್ತಾರೆ, ಕೆಲವರು ಗುರುತಿಸಲಾರರೆಂದೇ.
ನೀನು ಯಾವಾಗಲೂ ನನ್ನನ್ನು ಕ್ಷಮಿಸುವೆ ಎಂದು ನನಗನಿಸುತ್ತದೆ ಅಥವಾ ಅದು ನನ್ನ ಭಾವನೆ ಮಾತ್ರವೇ?
ನನಗೆ ಇದು ಅರಿವಾಗುವುದಿಲ್ಲ
ನಾನು ನನ್ನೊಂದಿಗೇ ಮಾತನಾಡಿಕೊಳ್ಳುತ್ತಿದ್ದೇನೆಯೇ?
ನನಗೆ ಬ್ಯಾಪ್ಟಿಸಂ ಆಗಿಲ್ಲ
ನಾನು ಕ್ಯಾಟಿಕಿಸಂಗೆ ಹೋಗಿಲ್ಲ
ನನ್ನ ಹೋಲಿ ಕಮ್ಯೂನಿಯನ್ ಮುಗಿದಿಲ್ಲ
ಆದರೆ ನಾನು ಯಾವಾಗಲೂ ಕೆಟ್ಟದ್ದನ್ನು ಆಲೋಚಿಸುವುದಿಲ್ಲ
ಎಂದಿಗೂ ಇತರರ ಒಳಿತನ್ನೇ ಬಯಸುತ್ತೇನೆ
ಸಮಾಜ ಸೇವೆ ಮಾಡಲಿಚ್ಛಿಸುತ್ತೇನೆ
ಬಡವರಿಗೆ ನೆರವು ನೀಡಬಯಸುತ್ತೇನೆ
ನನ್ನ ಭಾಗದೊಂದು ಭಾಗವನ್ನು ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳಲು ಸಮಸ್ಯೆಯೇನೂ ಇಲ್ಲ
ನಾನು ಚರ್ಚ್‍ಅನ್ನು ಅನುಸರಿಸದಿರಬಹುದು
ಆದರೆ ಕ್ರಿಸ್ತನನ್ನು ಅನುಸರಿಸುತ್ತಿಲ್ಲವೇ?
ಅಷ್ಟು ಸಾಲದೇ?
ನಾನು ಕ್ರಿಶ್ಚಿಯನ್ ಅಲ್ಲವೇ????
- ನಿಲೀನಾ ಥಾಮಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ