ಕೈಬಿಡದ ಗೆಳತಿಯೆ, ನಾನಂದು ಮೊದಮೊದಲು
ಬಾಯ್ಬಿದದೆ ಮರುಳಾಗಿ ನುಡಿಯುತ್ತ ತೊದತೊದಲು
ನಿನ್ನ ನಾ ಬಯಸಿದೆ, ನನ್ನ ನೀನೆಳದಿದೆ
ಮನದೊಳಗೆ ನಿನ್ನ ಬಾಳೆಬೆಳಕ ಬಿತ್ತಿದೆ || 1
ನಿನ್ನ ಕಂಡರೆ ನಾನು ಹೆದರಿದ್ದೆ ಬಾಲ್ಯದಲಿ
ಎನ್ನ ಮೊಗವೇ ನಿನ್ನ ನೋಟ ನೋಡಿದರಲ್ಲಿ
ತಲೆ ತಿರುಗಿ ಜುಮ್ಮೆಂದು ನಡುಗುವೆಡೆಯಲ್ಲಿ
ನನ್ನನೀನಾದರಿಸಿ ಅಪ್ಪಿದೆಯ ನೇಹದಲಿ? 2
ಅಂದಿನಿಂದಲು ನಾನು ನಿನ್ನಲಿ ಮನವೂರಿ
ಹೃದಯದಾ ರಸವನ್ನು ಹೀರಿದೇ ಮಿತಿಮೀರಿ
ಅನವರತ ಸಂಗವನು ಬಯಸಿದಾ ಮುಕುದನನು
ಚಿಂಇಸಿದೆ ಆದರದಿ ಈ ಬಲ್ಯ ಗೆಳೆಯನನು|| 3
ಕರೆದೊಯ್ದು ಕೈಬಿಡದೆ ಎಡೆಗೊಟ್ಟು ಹತ್ತಿಸಿದೆ;
ಗಿರಿಶಿಖರದಾಳವನು ಧೃತಿಗೆಡದೆ ತೋರಿಸಿದೆ;
ಕಣಿವೆ ಇಕ್ಕೆಲದಲ್ಲಿ ಸೊಬಗನ್ನು ಸವಿಯಿಸಿದೆ
ಚಂದ್ರ ತಾರೆಯೊಳು ಮನವನ್ನು ಹರಿಯಿಸಿದೆ|| 4
ಜಲದಲೆಯ ನಡುವಿನೊಳು ನಾಕೈಯ ಬಿಟ್ಟಾಗ
ಝಲ್ಲೆಂದು ಭರದಿಂದ ಭಯಭೀತನಾದಾಗ
ಅಭಯಹಸ್ತವ ನೀಡಿ ಈಸುವುದ ಕಲಿಯಿಸಿದೆ
ಮೈಮನಕೆ ಹಾಯಿಸಿದೆ ಸಾಗರವ ತೋರುತಲಿ|| 5
ಉಲ್ಲಾಸವೆಡರುಗಳ ನೀನಂದು ಬೋಧಿಸಿದೆ
ಬಲವಿನಿಂ ಮರ್ಮಗಳ ನಾನಂದು ಬೇಧಿಸಿದೆ
ಎನ್ಮನವು ನಿನ್ನೊಳಗೆ ರಸಸ್ವಾದ ಬಯಸುತಿದೆ
ಕೈಬಿಡದ ಸರಸ್ವತಿಯೆ ಬಯಕೆಯನು ಸಲಿಸುವೆಯಾ|| 6
-- ಜಿ ಗಂಗಾಧರಯ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ