ದಿನಾ ನಡೆಯೋಕೆ ಹೋಗುವಾಗೆಲ್ಲಾ ಅರಳಿಕಟ್ಟೆಯಲ್ಲಿ ಕೂತಿರುವ ವಯಸ್ಸಾದ ಆ ಅಮ್ಮನ
ನೋಡುವಾಗ, ಮತ್ತೆ ನನ್ನ ಯೋಚನೆಯೆಲ್ಲಾ ಅವರ ಸುತ್ತಾನೆ ಇರುತ್ತೆ. ನನ್ ಮನಸ್ಸಲ್ಲಿ
ನಾನು ಅವರಿಗೆ ನನ್ನ ತಾಯಿಯ ಸ್ಥಾನ ಕೊಡೊದು. ಎಷ್ಟು ಕಷ್ಟಗಳು ನನ್ನ ಅಮ್ಮ ಅನುಭವಿಸಿದರು
ಎಂದು ಹೇಳೋದಿಕ್ಕಿಂತ, ಜೀವನದಲ್ಲಿ ಏನು ಪಡೆಯೋಕೆ ಆಗದೆ ಹೋದ ಜನ್ಮ ಎನ್ನುವುದೆ
ನಿಜ.ತುಂಬ ಮಕ್ಕಳಿರುವ, ಬಡತನದಲ್ಲು ಬೆಳೆದ ಅಮ್ಮನನ್ನು ತುಂಬ ಚಿಕ್ಕ ವಯಸ್ಸಲ್ಲಿ ಮದುವೆ
ಎಂಬ ದಾರಿಯಲ್ಲಿ ಕಳಿಸಿಕೊಟ್ಟರು. ಮದುವೆ ಎನ್ನೋದು ಬರಿ ಜೀವನದ ಹೋರಾಟ ಎನ್ನುವುದ
ಬಿಟ್ಟು ತನ್ನ ಮಗಳ ಕಷ್ಟಗಳನ್ನು ನೋಡಿ ಗೊತ್ತಾಗದೆ ಅಲ್ಲ, ಬದಲು ವಾಪಸ್ಸು ಕರಕೊಂಡು
ಬಂದು ನೋಡಿಕೊಳ್ಳೋಕೆ ಮನೆಯಲ್ಲಿ ಯಾರು ಮುಂದೆ ಬಂದಿಲ್ಲ.
ಎಲ್ಲವನ್ನು ಅವಳ ಹಣೆಬರಹ ಎಂದು ಹೇಳಿ ಮುಗಿಸಿದರು.ಕಾಲ ಯಾರಿಗೂ ಕಾಯದೆ ಮುಂದೆ ಹೋದಾಗ
ಬರಿ ಕಷ್ಟಗಳು ಮಾತ್ರವಲ್ಲ ಅಮ್ಮನಿಗೆ, ಎರಡು ಮಕ್ಕಳು ಕೂಡ ಹುಟ್ಟಿದವು.ಬಾಳಬೇಕ, ಸಾಯಬೇಕ
ಎನ್ನುವ ಪ್ರಶ್ನೆ ಅವರ ಮುಂದೆ ಇರಲಿಲ್ಲ...
ಏಕೆಂದರೆ ಏನು ಕಷ್ಟ ಬರಲಿ,ತನ್ನ ಮಕ್ಕಳನ್ನು ಬೆಳೆಸಬೇಕು ಎನ್ನುವ ದೃಢ
ನಿಶ್ಚಯವಿತ್ತು.ಅದರಿಂದ ತನ್ನ ಗಂಡ ಬಿಟ್ಟು ಹೋದ ಮೇಲೆ ಇನ್ನೊಬ್ಬರನ್ನು ತನ್ನ
ಜೀವನದಲ್ಲಿ ಸ್ವೀಕರಿಸಿದರು.ಯಾರು ಬರಲಿ....ಏನೊ ಆಗಲಿ......
ತನ್ನ ಹಣೆಬರಹ ಯಾರಿಂದಲು ಬದಲಾಯಿಸೋಕೆ ಆಗಲ್ಲ ಎನ್ನುವ ಸತ್ಯ ಗೊತ್ತಾಗುವುದಕ್ಕೆ ಇನ್ನು
ಎಷ್ಟು ವರ್ಷಗಳು ಬೇಕಾಗಿ ಬಂತು.
ಆದರು ಮನಸ್ಸಲ್ಲಿ ತನ್ನ ಮಕ್ಕಳನ್ನು ಒಳ್ಳೆತನದಲ್ಲಿ ಬೆಳೆಸಬೇಕು ಎನ್ನವ ಆಸೆ ಅಮ್ಮನನ್ನ
ಜೀವನದ ಗಾಡಿ ತಳ್ಳೋಕೆ ಪ್ರೋತ್ಸಾಹಿಸಿತು.ಅದನ್ನೆ ಒಂದು ಜೀವನದ ಗುರಿಯಾಗಿ
ತೆಗೆದುಕೊಂಡರು. ಕಾಲ ಯಾರಿಗು ಏನು ಉಳಿಸಿಲ್ಲ
......ಬೆಳೆಯಬೇಕಾಗಿದ್ದು ಬೆಳೆಯಿತು...ಬಾಡಿಹೋಗಿರುವುದು ಬಾಡಿಹೋಗಿತ್ತು.
ಬೆಳೆದವರು ತಮಗೆ ನೆರಳಾಗುತೆ ಎನ್ನುವ ಆಸೆ ಸುಮ್ಮನೆ ಹಾಗೇಯಿತ್ತು ಎಂದು ಅಮ್ಮನಿಗೆ
ಗೊತ್ತಾಗಿರುವುದಕ್ಕೆ ಏನೋ ಆ ಮನಸಿನ ಮಾನಸಿಕ ತಾಳಾನೆ ತಪ್ಪೋಗಿತ್ತು.ಅದು ಏನಿಕೆ ಇಂದು
ಎಷ್ಟು ಯೋಚನೆ ಮಾಡಿದರು ನನಗು ಕಂಡು ಹಿಡಿಯುವುದಕ್ಕೆ ಆಗಿಲಿಲಾ಼.
ವಿಶಾಲವಾದ ವಿವೇಕಾನಂದ ಸರ್ಕಾಲ್ ಕಾನುವ ತುಂಬ ಚುರುಕು ಆಗಿರುವ ಯುವಕನನ್ನು,ಯಾವತ್ತು
ಅಂದುಕೊಂಡಿರಲಿಲ್ಲ ಅವರಿಗೆ ಮಾನಸಿಕ ವಿಭ್ರಾಂತಿ ಎಂದು.ಯಾರೋ ಬಿಸಾಕಿದ
ಹೆಲ್ಮೆಟ್,ಕೈಯಲ್ಲಿ ಎರಡಿ ಮೂರು ಪ್ಲಾಸ್ಟಿಕ್ ಬ್ಯಾಗಲ್ಲಿ ತುಂಬಿಸಿದ ಹಳೆ ವಸ್ತುಗಳು
...ಎಲ್ಲಾನು ಆ ರೂಪಕ್ಕೆ ಒಂದು ಚೂರು ಮ್ಯಾಚ್ ಆಗಿಲ್ಲ. ಯಾವುದೊ ದೋಟದನದಲಿ
ಉಟಿದವನಾಗಿರಬಹುದು, ಇಲ್ಲ ತುಂಬಾ ಓದಿದಕ್ಕೆ ತಲೆ ಕೆಟ್ಟೋಗಿದೆಯೊ ಎಂದು ಜನ ಹೇಳುವ
ಮಾತು......ಅದಕ್ಕೆ ಅವನನ್ನು ಒಬ್ಬ ಹುಚ್ಚನನ್ನಾಗಿ ಕಾಣುವುದಕ್ಕೆ ನನ್ನ ಮನಸು
ಒಪ್ಪಿಕೊಂಡಿಲ್ಲ.ಆ ಮುಖದಲ್ಲಿ ಇರುವ ಭಾವ,ಅದು ಯಾವತ್ತು ಒಬ್ಬ ಅಬ್ ನಾರ್ಮಲ್ ಎಂದು
ಕಾಣಲಿಲ್ಲ.ಉದ್ದಕ್ಕೆ ಬಿಟ್ಟಿದ್ದ ಗಡ್ಡವನ್ನು ಸವರುತ್ತ,ಆ ಕಣ್ಣಲ್ಲಿ ತುಂಬಿರುವ
ಪ್ರಕಾಶವು ..ನನ್ನ ನೆನಪುಗಳು ನನ್ನ ಅಣ್ಣನ ಮೇಲೆ ಹೋಗುತ್ತೆ.ಬಾಲ್ಯದ ಯಾವ
ತುಂಟಾಟಗಳನ್ನು ಮಿಸ್ ಮಾಡದೆ ಆಟವಾಡಿ ಬೆಳೆದವನು.ಅಪ್ಪನಿಗು ಅಮ್ಮನಿಗು ಮಧ್ಯ ದಿನ
ಜಗಳಕ್ಕೆ ಕಾರಣವಾಗುವನು.ಯುವತ್ತು ಅವನಲ್ಲಿ ಮನೆಯಲ್ಲಿ ದುಡ್ಡು ಇಲ್ಲದ ಯೋಚನೆ
ತುಂಬಿರುತ್ತಿತ್ತು.ಅದೆ ಕಾರಣ ಹೇಳಿ ಊರು ಬಿಟ್ಟಿ ಹೊರಗೆಲ್ಲೊ ಸುತ್ತಾಡುತ್ತ,ಅವನಿಗೇನೆ
ಅವನ ವಿಳಾಸ ಗೊತ್ತಿಲ್ಲದೆ,ಎಲ್ಲೊ ಯಾವ ರೀತಿಯಲ್ಲು ತನ್ನ ಜೀವನದ ಗಮನ
ಕೊಡದೆ...ಎಲ್ಲದಕ್ಕು ಕಾರಣ ಅಮ್ಮನೆ ಎಂದು ಕೊನೆಗೆ ಹೇಳಿದ ಆ ಸುಪುತ್ರ. ಆಮೇಲೆ ಎಲ್ಲಾ
ಗೊತ್ತಾಗಿ ಬುದ್ಧಿ ಬರುವಷ್ಟರಲ್ಲಿ ನನ್ನ ಮನಸಿನ ತಾಳ ತಪ್ಪಾಗಿದು?ಅವನು ತುಂಬ ಒಳ್ಳೆಯ
ಹೃದಯ ಎಂದು ನಮಗೆ ಮಾತ್ರ ಗೊತ್ತಿತ್ತು.
ನನ್ನ ಯೋಚನೆ ಅತಿ ಆಯ್ತು. ತನ್ನ ಪಕ್ಕಕ್ಕೆ ಉರುಳಿ ಬಂದ ಕ್ರಿಕೆಟ್ ಬಾಲ್ ಅನ್ನು
ಎತ್ತಿಕೊಳ್ಳುವುದಕ್ಕೆ ಓಡಿ ಬಂದ ಚಿಕ್ಕ ಹುಡುಗ, ನನ್ನ ಪಕ್ಕದಲ್ಲಿ ಇದ್ದ....ಬಿದ್ದ
ಬಾಲನ್ನು ನಾನೆ ಎತ್ತು ಅವನಿಗೆ ಕೊಡುವುದಕ್ಕೆ ಕೈ ಹಾಕಿದಾಗ...ಜೊತೆಯಲ್ಲಿ ಗ್ರೌಂಡ್
ನಲ್ಲಿ ಆಟ ಆಡುವ ಹುಡುಗರು ಜೋರಾಗಿ ಕೂಗಿದರು ಬೇಡ ಕಣೊ..."ಅವಳೊಂದು
ಹುಚ್ಚಿ..ಹತ್ತಿರಕ್ಕೆ ಹೋಗಬೇಡ".......ಅವನ ಕಣ್ಣಲ್ಲಿ ಆ ಪದಕ್ಕೆ ಅರ್ಥ ಹುಡುಕುವ ಥರ
ಯೋಚನೆಯಿತ್ತು. ಅವನು ದಿನ ಕಾಣುವುದು ನನ್ನನ್ನು ಈ ಹುಣಸೆಮರದ ಕೆಳಗಡೆ ಮೂಟೇಗಳನನು
ಇಟುಇರುವ ನನ್ನನ್ನು......ಯಾರಿಗು ಏನು ತೊಂದ್ರೆನು ಕೊಡದೆ......ಇರುವ ನನ್ನನ್ನು.
....ಒಬ್ಬ ಹುಚ್ಚಿಯೆಂದು ಅವನಿಗೆ ಯೋಚನೆ ಮಾಡುವುದಕ್ಕೆ ಆಗುವುದಿಲ್ಲ. ನನ್ನ ಮನಸು
ಜೋರಾಗಿ ಹೇಳಬೇಕು ಅನಿಸಿತು..ಹೌದು ಮಗ ಯಾವುದನ್ನು ಕೆಟ್ಟದಾಗಿ ಕಾಣದೆ ಎಲ್ಲವನ್ನು
ಒಳ್ಳೆಯತನವಾಗಿ...ನಿಜವಾಗಿ ನಂಬಿಕೊಂಡು..ಸತ್ಯವಾಗಿ ಇದ್ದಿದ್ದಕ್ಕೆ..ನನಗೆ ಈಗ
ಹುಚ್ಚಿ ಎಂದು ನಾಮದಲ್ಲಿ ಬಾಳುತ್ತ ಇದ್ದೀನಿ ಇಂದು.
ಹೋಗಲಿ ಬಿಡು...ನನ್ನ ಮನಸು ನನ್ನ ಕೈಯಿಂದ ಇನ್ನು ಜಾರಿ ಹೋಗುತ್ತ ಇದ್ದರೆ ನನ್ನ
ರೋಗಕ್ಕೆ ಇನ್ನು ಅಪಾಯ.ಬಿಡು..ನಾನು ಈ ಮರದ ಕೆಳಗಡರ ಸ್ವಲ್ಪ ಸಮಯ ಮಲಕೊತ್ತೀನಿ ..ನನ್ನ
ಮನಸಿನ ಅಲೆಗಳು ಶಾಂತವಾಗಲಿ.
- ಶೀಬಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ