ಬಿರುಗಾಳಿಯ ಮಾತಿದೆ
ನಿತ್ಯ ಕರ್ಣಗಳಿಗೆ ಸಿಹಿಯ ಹೂರಣ,
ಮನಸಿರದ ಮನಸಿಗೆ ಮನಸೋತು ಕುಳಿತೆವು
ಮಾತಿಗೆ ಚಂಚಲ ಮನಸುಗಳು.
ಇದು ನಿಮದೊಂದು ಲೋಕ
ಮಧುರ ಭಾವಗಳ ಬಂಧಿನಾಕ,
ಕೂಡಿಬಿಡಲು ಕ್ಷಣಕ್ಷಣಕೂ ಕಾತುರತೆ ಮನದ ತವಕ
ಇಲ್ಲಿ ಆಸೆಗಳೇ ಹಾಜರಾತಿ.
ಪ್ರತಿಯೊಂದು ದಿನಕೂ ಸೂಟಿಯೇ ಬೇಡ
ಬೇಟಿಗೆ ಮನಸು ಕಾಯುವ ಸಂಗತಿ
ಜೀವನ ವಚನಗಳ ತರಗತಿ
ಬೆರವ ಸಮಯಕೆ ಖುಷಿಯೇ ಎಲ್ಲ.
ನೆನಪಿನ ಸಂಗಡಗಳು
ಹುದುಗಿಯಾವು ಅಂತರಂಗದಲ್ಲಿ,
ಮರು ಚಿಗುರೊಡೆಯಲಿ ಚಿಗುರು
ಮನಸ್ಸಿನಲ್ಲುಳಿದ ನಿಮ್ಮ ಮಾತುಗಳ ನವಿರು....
- ಹರ್ಷಿತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ