Pages

ಸ್ವಾತಂತ್ರ್ಯ ಯೋಧರು - ಚಂದ್ರಶೇಖರ್ ಆಜಾದ್


ನಿನ್ನ ಹೆಸರಿನಲ್ಲೇ ಆಜಾದಿ ಇದೆ
ಸಮಾಜವಾದವೇ ಆಜಾದಿಯೆಂದು ಸಂಘ ಕಟ್ಟಿದೆ
ಅದಕ್ಕಾಗಿ ದುಡಿದೆ ಮಡಿದೆ

ಇಂದು ದಮನಿತರಿಗೆ ಸಾವೇ ವಿಮೋಚನೆಯಾಗಿದೆ
ಸಮಾಜವಾದ ಸವಕಲು ನಾಣ್ಯವಾಗಿದೆ
ಆಜಾದಿ ದೇಶದ್ರೋಹಿಯಾಗಿದೆ

ಓ ಆಜಾದ ನಿನ್ನ ಮಾರುವೇಷದ ಜನಿವಾರ 
ನಕಲಿ ದೇಶಭಕ್ತರ ಮಾರುವೇಶದ ಅಸ್ತ್ರವಾಗಿದೆ
ಅದನ್ನು ಹರಿಯದ ಹೊರತು ನಮಗೂ ನಿನಗೂ ಆಜಾದಿಯಿಲ್ಲ

ನಿನ್ನ ಕೈಯ ಕೋವಿ, ಭಗತನ ಲೇಖನಿಯ ಹರಿತ 
ನಮ್ಮ‌ ತಲೆ‌ ತುಂಬಲಿ
ಅದೇ ನಮ್ಮ ಹಂಬಲ.

- ರವಿ. ಬಿ

ಕಾಮೆಂಟ್‌ಗಳಿಲ್ಲ: