Pages

ಕವನ - ಗ್ರಹಣ

ಕವನ - ೧

ಕಡು 
ಕಗ್ಗತ್ತಲ
ಮಧ್ಯರಾತ್ರಿಯಲ್ಲಿ
ಬೆಳ್ಳ
ಬೆಳ್ಳನೆಯ
ಚಂದಿರ
ಕೆಂಪು 
ಹೊದಿಕೆ
ಹೊದ್ದು
ಕಡು
ಕೆಂಪಾಗುವ
ಹೊತ್ತಿಗೆ
ಶಾಂತಿಯ 
ಜಪದ 
ಜೊತೆ
ಕ್ರಾಂತಿಯ
ಮಂತ್ರ 
ನೆನಪಾದೀತು
- ರಾಹುಲ ಬೆಳಗಲಿ


ಕವನ - ೨
ಗಗನದಲ್ಲಿಂದು  ನಡೆಯುವುದು ಅಪರೂಪದ ವಿಸ್ಮಯ
ವೀಕ್ಷಿಸಿರೆಲ್ಲರೂ ಅದ ಮರೆಯದೆ ಆ ಸಮಯ
ಸಂಭವಿಸುವುದಿಂದು ರಕ್ತಚಂದ್ರಗ್ರಹಣ
ಗ್ರಹಗಳ ಚಲನೆಯೇ ಇದಕೆ ಕಾರಣ
ಅರಿತು ನಾವು ಖಗೋಳವಿಜ್ಞಾನದ ‌ವಿಚಾರಗಳ
 ತೊರೆಯೋಣ ನಮ್ಮ ಅಜ್ಞಾನದ ಆಚಾರಗಳ
  - ವಿಜಯಲಕ್ಷ್ಮಿ ಎಂ ಎಸ್

ಕಾಮೆಂಟ್‌ಗಳಿಲ್ಲ: