Pages

ಅನುವಾದಿತ ಅನಾಮಿಕ ಕೃತಿ

ಅನಾಮಿಕ (ವಾಟ್ಸಾಪ್ ನಲ್ಲಿ ಬಂದ ಒಂದು ಬರವಣಿಗೆಯ ಅನುವಾದ)                      

ನಿಲ್ಲಿಸಿನ್ನ ಊದುವುದ 
ಅದೇ ಕಿಲುಬು ಕಹಳೆಯ
'ಯಶಸ್ವಿಗನ ಹಿಂದೆ ಓರ್ವ ಸ್ತ್ರೀ' ಎಂಬ ಬೊಗಳೆಯ
ಇನ್ನಾದರೂ ಪ್ರಶಂಸಿಸಿ 
ಅವಳದೇ ಪ್ರಗತಿಯ

ಹೆಣ್ಣು ಪುಣ್ಯತಾಯಿ ...
..ಮಹಾ ತ್ಯಾಗಮಯಿ
ಎಂದು ಕಸಿದಿದ್ದು ಸಾಕಿನ್ನು
ಇಳಿಸೆಲ್ಲವ ಭಾರವನ್ನು
ಹಗುರಾಗಿಸಿ ಅವಳನ್ನು 

ಅಂಗನೆ ನೀ ಅಂದಗಾತಿ 
ಎಂಬ ಪದವ ಪಾಡದಿರಿ 
ಅಂದವೆ ಪ್ರಧಾನವಲ್ಲ
ವೆಂಬ ತತ್ವ ಸಾರಿರಿ

ಅವ್ವ ಅಕ್ಕ ಮಡದಿ ಮಗಳ 
ಪಾತ್ರವಿನ್ನು ಸಾಕು ಮಾಡಿ
ಯಾರಿಗೂ ಅಧೀನಳಲ್ಲ 
ಬಂಧಮುಕ್ತ ಪಟ್ಟ ನೀಡಿ

ಹೆಣ್ಣಿಗಿದೆ,
ಎಲ್ಲ ತೂಗಬಲ್ಲ ಶಕ್ತಿ
ಈ ಹೊರೆಯಿಂದ 
ಇನ್ನಾದರೂ ಕೊಡಿ ಮುಕ್ತಿ
ದುಡಿಮೆ ಸಾಕು ವಿರಮಿಸಲಿ
ನೀಡಿ ಅವಳ ಬಡ್ತಿ

ನಿಮ್ಮ ಫಾಯದೆಗಾಗಿ
'ಪದ್ದತಿ' ಯ ಹೆಸರಲ್ಲಿ
ಉಸಿರುಗಟ್ಟಿಸಿದ್ದು ಸಾಕು
ಏತಕಾಗಿ ಇರಬೇಕು
ಅವಳಲ್ಲೆ ಪರಿಪೂರ್ಣತೆ
ಅವಳಿಗೇನೆ ನೀತಿ ಕಥೆ
ಇರಲಿ ಬಿಡಿ ಕಠಿಣತೆ
ಬಿಟ್ಟುಬಿಡಲಿ ಸಹಿಷ್ಣುತೆ
ಇನ್ನಾದರು ಕೊನೆಯಾಗಲಿ
ಅನ್ಯರ ಆಶ್ರಯಿಸೊ ವ್ಯಥೆ

ಕಳೆಯಲಿ ಕಾಲ 
ಸೋಮಾರಿಯಾಗಿ
ತಿರುಗಲಿ ಬಿಡಿ ಸ್ವೇಚ್ಛೆಯಾಗಿ
ನಕ್ಕರೇನು ಗಟ್ಟಿಯಾಗಿ 
ಮಾತಾಡಲಿ ಜೋರಾಗಿ
ಇದ್ದರೇನು ಮುಖವು ಸುಕ್ಕಾಗಿ
ಕಣ್ಣ ಸುತ್ತ ಕಪ್ಪಾಗಿ
ಇರಲಿ ಬಿಡಿ ಅವಳಾಗಿ
ಆಕಾಶದಿ ಹಕ್ಕಿಯಾಗಿ
..,...ಆಕಾಶದಿ ಹಕ್ಕಿಯಾಗಿ

                   - ಉಷಾಗಂಗೆ


If we must celebrate a day for women, let us celebrate freedom from stereotypes, from expectations, from idolisation, from sacrifice...

Stop congratulating women for being the secret behind a successful man...  Start saluting them for being successful.  😊

Stop saying the mother is sacred for all the sacrifices she makes...  Try to reduce those sacrifices! 😊

Stop telling women they are beautiful... Try telling them it's not important to be beautiful! 😊

Stop praising her roles as mother, wife, daughter, sister...  Celebrate her as an individual, a person, independent of relationships. 😊

Stop justifying her necessity to multi task....  Give her a chance not to! 😊

Stop these constructs which are aimed at making her strive for an impossible balance... Let her be inadequate... And happy! 😊

Stop making her look at herself through a conveniently male viewpoint. 

Let her be imperfect, whimsical, irresponsible, boorish, lazy, fierce, opinionated, loud, flabby, ungroomed, adventurous, unpredictable, unprepared, impractical....      

ಕಾಮೆಂಟ್‌ಗಳಿಲ್ಲ: