ಸೂರ್ಯೋದಯವಾಗುವುದೇ ತಡ ನಮ್ಮನ್ನು ಎಬ್ಬಿಸುವುದು ಅದು. ಎಲ್ಲೋ ದೂರದಲ್ಲಿರುವವರನ್ನು ಸಂಪರ್ಕಿಸುವುದು ಅದು. ತಿಳಿಯಿತಾ ಯಾವುದರ ಬಗ್ಗೆ ಎಂದು?
ಅದೇ ನಮ್ಮ ಇಂದಿನ ಸ್ಮಾರ್ಟ್ ಫೋನ್. ಈ ಫೋನ್ ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತದೆ ಎಂದು ಊಹಿಸಲಸಾಧ್ಯ. ಈ ಬಹು ಉಪಯೋಗಿ ಉಪಕರಣದ ಸಂಶೋಧನೆ ಮಾಡಿದವರ ಬಗ್ಗೆ ಸ್ವಲ್ಪ ತಿಳಿಯೋಣ.
ಅದೇ ನಮ್ಮ ಇಂದಿನ ಸ್ಮಾರ್ಟ್ ಫೋನ್. ಈ ಫೋನ್ ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತದೆ ಎಂದು ಊಹಿಸಲಸಾಧ್ಯ. ಈ ಬಹು ಉಪಯೋಗಿ ಉಪಕರಣದ ಸಂಶೋಧನೆ ಮಾಡಿದವರ ಬಗ್ಗೆ ಸ್ವಲ್ಪ ತಿಳಿಯೋಣ.
ಅಲೆಗ್ಸಾಂಡರ್ ಬೆಲ್ 1847 ಮಾರ್ಚ್ 3 ರಂದು ಇಂಗ್ಲೆಂಡಿನಲ್ಲಿ ಅಲೆಗ್ಸಾಂಡರ್ ಮೆಲ್ವಿಲ್ಲೆ ಬೆಲ್ ಮತ್ತು ಏಲಿಜಾ ಗ್ರೇಸ್ ಸೈಮಂಡ್ ಬೆಲ್ ರವರ ಮಗನಾಗಿ ಜನಿಸಿದನು. ಅಲೆಗ್ಸಾಂಡರ್ ಬೆಲ್ ಎಂಬುವುದು ಹುಟ್ಟಿದ ಹೆಸರು. ತನ್ನ 11 ನೇ ವಯಸ್ಸಿನಲ್ಲಿ "ಗ್ರಹಾಂ" ಎಂಬುವುದನ್ನು ಸೇರಿಸಿಕೊಂಡನು.
ಬಾಲ್ಯದಿಂದಲೇ ಕುತೂಹಲ ಸ್ವಭಾವದ ಬೆಲ್ ಸಸ್ಯ ಮಾದರಿಗಳನ್ನು ಸಂಗ್ರಹಿಸುತ್ತಿದ್ದನು. ಬೆಲ್ ಗೆ ಓದುವುದರಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ ಹಲವಾರು ಪ್ರಯೋಗಗಳನ್ನು. ಮಾಡುತ್ತಿದ್ದನು. ಗೆಳೆಯ ಬೆನ್ ಹೆರ್ಡ್ ಮನ್ ನ ಹಿಟ್ಟಿನ ಗಿರಣಿಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದನು. ಹೊಟ್ಟು ತೆಗೆಯಲು ಕಷ್ಟ ಪಡುತ್ತಿರುವುದನ್ನ ಕಂಡನು. ತನ್ನ 12ನೇ ವಯಸ್ಸಿನಲ್ಲಿ ಹೊಟ್ಟನ್ನು ಬೇರ್ಪಡಿಸುವ ಯಂತ್ರವನ್ನು ಸಂಶೋಧಿಸಿದನು.
ಬೆಲ್ ಕಲೆ ಸಂಗೀತ ಮತ್ತು ಸಾಹಿತ್ಯದಲ್ಲೂ ಆಸಕ್ತಿಯನ್ನು ಹೊಂದಿದ್ದನು. ಪಿಯಾನೋ ನುಡಿಸುವುದನ್ನು ಕಲಿತನು. ಅಲ್ಲದೆ ಧ್ವನಿ ಅನುಕರಣೆ ಮಾಡುತ್ತಿದ್ದನು. ಕ್ರಮೇಣ ತಾಯಿಯ ಶ್ರವಣ ಶಕ್ತಿ ಕಡಿಮೆಯಾಗುತ್ತಿರುವುದನ್ನು ಕಂಡು ಕೈಬೆರಳುಗಳ ಸಂಜ್ಞೆಯ ಭಾಷೆಯನ್ನು ಕಲಿತನು. ಇದರ ಸಹಾಯದಿಂದ ತಾಯಿಯ ಜೊತೆ ಮಾತನಾಡುತ್ತಿದ್ದನು. ಪರಿಣಾಮವಾಗಿ ಬೆಲ್ ನ ಗಮನ ಶ್ರವಣ ವಿಜ್ಞಾನದ ಕಡೆಗೆ ಹರಿಯಿತು.

ಪ್ರಾರಂಭದಲ್ಲಿ ಬೆಲ್ ಕಲಿಯುವಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿದ್ದರೂ ತಾತನ ಜೊತೆಯಲ್ಲಿ ವಾಸಿಸಲು ಪ್ರಾರಂಭಿಸಿದ ಮೇಲೆ ಕಲಿಕೆಯಲ್ಲಿನ ಆಸಕ್ತಿ ಹೆಚ್ಚಿತು. ಅಲ್ಲದೆ ತಾತ ತಂದೆ ಮತ್ತು ಸೋದರರು ವಾಕ್ ಶಕ್ತಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದರು. ಇದರಿಂದ ಬೆಲ್ ಗೂ ಸಹ ಆ ಕ್ಷೇತ್ರದಲ್ಲಿ ಆಸಕ್ತಿ ಬಂದಿತು. ತಂದೆಯ ಪ್ರೋತ್ಸಾಹ ಹಾಗು ಅಣ್ಣನ ನೆರವಿನಿಂದ ಮಾತನಾಡಬಲ್ಲ ಯಂತ್ರ ಮಾನವನನ್ನು ಸಿದ್ಧ ಪಡಿಸಿದನು.
ತನ್ನ 16 ನೇ ವಯಸ್ಸಿನಲ್ಲಿ ವೆಸ್ಟರ್ನ್ ಹೌಸ್ ನ ಅಕಾಡೆಮಿಯಲ್ಲಿ ಬೋಧಕನ ಸ್ಥಾನ ಗಳಿಸಿದನು. ಸೇರಿದ್ದು ವಿದ್ಯಾರ್ಥಿಯಾಗಿ ಆದರೆ ಪಡೆದದ್ದು ಬೋಧಕನ ಸ್ಥಾನ. ನಂತರ ಲಂಡನ್ ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ಪರೀಕ್ಷೆಯನ್ನು ತೆಗೆದುಕೊಂಡು ಬಿಡುವಿನ ವೇಳೆಯಲ್ಲಿ ತಂದೆಗೆ ನೆರವಾಗುತ್ತಿದ್ದನು. ಕಿವುಡು ಮೂಗರಿಗೆ ಬೋಧಿಸಿ ಅವರ ಪ್ರಗತಿಗೆ ಕಾರಣರಾದನು.

ಕುಟುಂಬದವರ ಅನಾರೋಗ್ಯದ ಕಾರಣ ಇಂಗ್ಲೆಂಡ್ ನಿಂದ ಕೆನಡಾಗೆ ಬಂದರು. ಇಲ್ಲಿ ಮೊಹಾವ್ಕ್ ಭಾಷೆಯನ್ನು ಕಲಿತು ಅದರ ಅಲಿಖಿತ ಶಬ್ದ ಭಂಡಾರವನ್ನು ಗೋಚರಿಸುವ ಸಂಕೇತಗಳಾಗಿ ಅನುವಾದಿಸಿದರು. ಇದಕ್ಕಾಗಿ ಬೆಲ್ ರವರನ್ನು ಗೌರವಿಸಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ನಂತರ ಅಮೆರಿಕದ ಶಾಲೆಯಲ್ಲಿ ಬೋಧಕರಿಗೆ ತರಬೇತಿ ನೀಡುವಲ್ಲಿ ಬೆಲ್ ಯಶಸ್ವಿಯಾದರು.
1872ರಲ್ಲಿ ಸ್ಕೂಲ್ ಆಫ್ ವೋಕಲ್ ಫಿಸಿಯಾಲಜಿ ಅಂಡ್ ಮೆಕಾನಿಕ್ಸ್ ಆಫ್ ಸ್ಪೀಚ್ ಎಂಬ ಶಾಲೆಯನ್ನು ಬಾಸ್ಟನ್ ನಲ್ಲಿ ಪ್ರಾರಂಭಿಸಿದರು. ಪ್ರಖ್ಯಾತ ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆ ಹೆಲನ್ ಕೆಲ್ಲರ್ ಸಹ ಬೆಲ್ ರವರ ವಿದ್ಯಾರ್ಥಿ ಗಳಲ್ಲಿ ಒಬ್ಬಳಾಗಿದ್ದಳು.

ನಂತರ ಬೆಲ್ ಧ್ವನಿ ಶರೀರ ವಿಜ್ಞಾನ ಮತ್ತು ವಾಗ್ವೈಖರಿ ವಿಷಯಗಳ ಪ್ರಾಧ್ಯಾಪಕರಾದರು. ಆಗಲೂ ಸಹ ವಿದ್ಯುತ್ ಮತ್ತು ಶಬ್ಧತರಂಗಗಳ ಮೇಲೆ ನಡೆಸುತ್ತಿದ್ದ ಪ್ರಯೋಗವನ್ನು ಮುಂದುವರಿಸುತ್ತಿದ್ದರು. 1874 ರಲ್ಲಿ ಬೆಲ್ ಸಹಯೋಗಿ ಥಾಮಸ್ ವಾಟ್ಸನ್ ರೊಡನೆ ವಿದ್ಯುತ್ ಉಪಕರಣಗಳ ಅಂಗಡಿಯಲ್ಲಿ ಧ್ವನಿ ತರಂಗಗಳನ್ನು ಒಂದೇ ತಂತಿಯಲ್ಲಿ ಒಂದು ವಿಶಿಷ್ಟ ಸ್ಥಿತಿಯಲ್ಲಿ ಹಲವಾರು ಶಬ್ಧಗಳು ಬರುವುದನ್ನು ಗಮನಿಸಿದರು. ನಂತರ ತಮ್ಮ ಪ್ರಯೋಗಶಾಲೆಯಲ್ಲಿ ಪ್ರಯೋಗವನ್ನು ಮುಂದುವರಿಸಿ ಅಂತಿಮವಾಗಿ 1876 ಮಾರ್ಚ್ 10 ರಂದು "ಮಿಸ್ಟರ್ ವಾಟ್ಸನ್ ಇಲ್ಲಿಗೆ ಬನ್ನಿ, ನಿಮ್ಮನ್ನೊಮ್ಮೆ ನೋಡಬೇಕಿದೆ" ಎಂಬ ಕರೆಯೊಂದಿಗೆ ದೂರವಾಣಿಯನ್ನು ಸಂಶೋಧಿಸಿದರು. 1877 ರಲ್ಲಿ ಬೆಲ್ ಟೆಲಿಫೋನ್ ಕಂಪನಿಯು ಸ್ಥಾಪನೆಯಾಯಿತು. ನಂತರ ಬೆಲ್ ರವರು ಮೇಬಲ್ ಹಬಾರ್ಡ್ ರವರನ್ನು ವಿವಾಹವಾದರು.
ತಮ್ಮ ತಾಯಿ ಮತ್ತು ಪತ್ನಿ ಕಿವಡರಾಗಿದ್ದ ಕಾರಣ ಅವರ ಅನುಕೂಲಕ್ಕಾಗಿ ಉಪಕರಣವೊಂದರ ಸಂಶೋಧನೆ ಅವರ ಉದ್ದೇಶವಾಗಿತ್ತು. ಆದರೆ ಆವಿಷ್ಕಾರವಾದದ್ದು ದೂರವಾಣಿ.
ಸದಾ ಚಿಂತನೆಯಲ್ಲಿಯೇ ಇರುತ್ತಿದ್ದ ಬೆಲ್ ದೂರವಾಣಿಯಲ್ಲದೆ ಫೋಟೋಫೋನ್, ಲೋಹಶೋಧಕ, ಹೈಡ್ರೋಫಾಯಿಲ್ ಮತ್ತು ಆಡಿಯೋಮೀಟರ್ ಗಳನ್ನು ಕಂಡು ಹಿಡಿದಿದ್ದಾರೆ. ಈ ಆವಿಷ್ಕಾರಗಳಿಂದ ಬೆಲ್ ರವರ ಹೆಸರು ಪ್ರಸಿದ್ಧಿಯಾಯಿತು. ಇಂಗ್ಲೆಂಡ್, ಕೆನಡಾ ಮತ್ತು ಅಮೆರಿಕ ಮೂರು ರಾಷ್ಟ್ರಗಳು ಇವರನ್ನು ಹೆಮ್ಮೆಯಿಂದ ತಮ್ಮ ದೇಶದ ಮಗ ಎಂದು ಹೇಳಿಕೊಳ್ಳುತ್ತವೆ. ಇವರು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಎರಡನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇಷ್ಟೆಲ್ಲಾ ಆವಿಷ್ಕಾರಗಳನ್ನು ಮಾಡಿದ ಬೆಲ್ ರವರು 1922 ಆಗಸ್ಟ್ ನಲ್ಲಿ ಮಧುಮೇಹ ರೋಗದಿಂದ ಸಾವನ್ನಪ್ಪಿದರು. ಅಂದು ಇವರ ಗೌರವಾರ್ಥವಾಗಿ ಅಮೆರಿಕ ಮತ್ತು ಕೆನಡಾದ ಟೆಲಿಫೋನ್ ಗಳು ಕೆಲಕಾಲ ಮೌನವಾಗಿದ್ದವು.
ಹೀಗೆ ಕೇವಲ ಅಂಗೈಯಗಲದ ಇಂದಿನ ಸ್ಮಾರ್ಟಫೋನ್ ಗಳ ಸಹಾಯದಿಂದ ಇಡೀ ವಿಶ್ವದ ವಿಚಾರಗಳನ್ನು ತಿಳಿಯಲು ಕಾರಣರಾದ ಮೂಲಪುರುಷ ಅಲೆಗ್ಸಾಂಡರ್ ಗ್ರಹಾಂ ಬೆಲ್ ರವರಿಗೆ ಮನಃಪೂರ್ವಕವಾಗಿ ನಮಿಸೋಣ.
- ವಿಜಯಲಕ್ಷ್ಮಿ ಎಂ ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ