[Maya Angelou ಅವರ Still I Rise ಎಂಬ ಪದ್ಯದ ಭಾವಾನುವಾದ]
ನಿಮ್ಮ ಕಹಿಯಾದ, ತಿರುಚಿದ ಸುಳ್ಳುಗಳಿಂದ
ಇತಿಹಾಸದ ಪುಟಗಳಿಂದ ನನ್ನ ಅಳಿಸಬಹುದು
ಕಸದ ರಾಶಿಯಲ್ಲಿ ನನ್ನ ಹೊಸಕಬಹುದು,
ಆದರೂ ಆ ಧೂಳಿನ ಕಣದಂತೆ ನಾ ಏಳುವೆ
ಸೂರ್ಯ ಚಂದ್ರರಂತೆ
ಸಮುದ್ರದ ಅಲೆಗಳಂತೆ
ಭರವಸೆಗಳು ಚಿಮ್ಮುವಂತೆ
ನಾ ಏಳುವೆ
ತಲೆ ಭಾಗಿ, ಕಣ್ಣುಗಳು ಕಳಾಹೀನವಾಗಿ ನಾನು ಕುಸಿಯುವುದನ್ನು
ಕಣ್ಣಾಳಿಗಳಲ್ಲಿ ನೀರು ತುಂಬಿ
ಭುಜಗಳು ಕುಂದುವುದನ್ನು,
ಭಾವಾತ್ಮಕ ಅಳುವಿನಿಂದ ದುರ್ಬಲಗೊಂಡಿರುವುದನ್ನು
ನೀವು ನೋಡಬಯಸಿದರೇನು ?
ನಿಮ್ಮ ಮಾತುಗಳಿಂದ ನನ್ನ ಚುಚ್ಚಬಹುದು
ನಿಮ್ಮ ಕಣ್ಣುಗಳಿಂದ ಕತ್ತರಿಸಬಹುದು
ನಿಮ್ಮ ದ್ವೇಷಾಸೂಯೆಯಿಂದ
ಕೊಲ್ಲಲೂಬಹುದು
ಆದರೂ ನಾ ಏಳುವೆ
ನನ್ನ ಪೂರ್ವತಿಹಾಸದ ಅಪಮಾನದ ಗುಡಿಸಲುಗಳಿಂದ,
ನೋವು ತುಂಬಿದ ಜೀವನದಿಂದ
ನೋವು ತುಂಬಿದ ಜೀವನದಿಂದ
ನಾ ಏಳುವೆ
ಹಿಂಸೆ ಮತ್ತು ಭಯದ ರಾತ್ರಿಗಳನ್ನು ಹಿಂದಕ್ಕಿಕ್ಕುತ್ತಾ,
ನಾಳಿನ ಸುಂದರ ಬೆಳಕಿಗಾಗಿ
ನಾಳಿನ ಸುಂದರ ಬೆಳಕಿಗಾಗಿ
ನಾ ಏಳುವೆ
ನನ್ನ ಪೂರ್ವಜರು ನೀಡಿದ ಉಡುಗೊರೆಗಳನ್ನು
ಸಂತಸದಿ ನೋಡುತ್ತಾ,
ಸಂತಸದಿ ನೋಡುತ್ತಾ,
ನನ್ನ ಕನಸುಗಳು ಸಾಕಾರಗೊಳಿಸುವ,
ಎಲ್ಲ ದಮನಿತರ ಭರವಸೆಯಾಗಿ
ಎಲ್ಲ ದಮನಿತರ ಭರವಸೆಯಾಗಿ
ನಾ ಏಳುವೆ
ನಾ ಏಳುವೆ
- ಡಾ. ಗಿರಿಜಾ ಕೆ. ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ