Pages

ಅನುಭವ - ನನ್ನ ಗೆಳತಿ



ಬಾಲ್ಯದಿಂದಲೂ ತುಂಟತನದ ಹಾಗೂ ನಿರ್ಧಾರ ತೆಗೆದುಕೊಂಡರೆ ಪಟ್ಟುಬಿಡದ  ಉಡದ ಸ್ವಭಾವ! ಮುಂದೆ ಕಾಲೇಜಿನಲ್ಲಿ ಮಿಸ್ ವಿಟ್ಟಿ!! 
ಯಾವುದೇ ವಿಷಯವೊಂದು ಹೃದಯಕ್ಕೊಮ್ಮೆ ತಟ್ಟಿತೆಂದರೆ ಮುಗಿಯಿತು. ಬಗೆಹರಿಯದೆ ಬಿಡುವ ಜಾಯಮಾನವಲ್ಲ! ಆಕೆಯ ಆತ್ಮೀಯರು, ಗಂಡ ಎಲ್ಲರ ಸ್ನಾಯುಗಳನ್ನು ಸಡಿಲಿಸಬಲ್ಲವಳು! 
ಎಲ್ಲಾ ಮಧ್ಯ ವಯಸ್ಸಿನ ಹೆಣ್ಣು ಮಕ್ಕಳಂತೆ ಇರದೆ ವಿಭಿನ್ನ ಪ್ರವೃತ್ತಿಯವಳು. ದಿನದಿನವೂ ಹೊಸ ಕನಸುಗಳ ಬೆಂಬತ್ತಿ ಆಶಾಭಾವನೆಯನ್ನು ಮೂಡಿಸಬಲ್ಲವಳು! 
ಮಾರ್ದವತೆಯಿಂದ ಸ್ಪಂದಿಸಬಲ್ಲವಳು. ವೈಯಕ್ತಿಕ ಜೀವನದಲ್ಲಿ ಕಷ್ಟಗಳ ಅರಿವಿಲ್ಲ! ಆದರೆ ನಮ್ಮೊಂದಿಗೆ ಮಿಡಿಯುವ ಸ್ವಭಾವ! ಆದರೆ ಕಥಾಸಾಹಿತ್ಯ, ಸಿನಿಮಾಗಳ ಪಾತ್ರಗಳಲ್ಲಿ ಆಕೆಯೂ ಒಂದಾಗಿ ಬಿಡುತ್ತಾಳೆ

- ಸಂಧ್ಯಾ ಪಿ ಯಸ್

ಕಾಮೆಂಟ್‌ಗಳಿಲ್ಲ: