Pages

ಕವನ

ಸೋತ ಮಾತು
ಹುಗಿದು
ಗಿಡ ನೆಡಬೇಕು
ಅರಳಿದ ಹೂವಾದರೂ
ಮಾತ ಕಲಿಸಿಯಾತು!!

ಒಳಗಿದ್ದೂ ಹೊರಬರದ
ಹಠಕ್ಕೆ ಬಿದ್ದ
ಮಾತುಗಳನ್ನು
ಗೆಲ್ಲಿಸಲಾಗದ ಸೋಲಿಗೆ
ಯಾವ ಹೆಸರು!?

ಇಟ್ಟಾಡುವ ಪದಗಳೇ
ಆದರೂ
ಎತ್ತಿ ಕಟ್ಟುವುದು
ಎಷ್ಟು ಕಷ್ಟ!!
 - ರಂಗಮ್ಮ ಹೊದೇಕಲ್

ಕಾಮೆಂಟ್‌ಗಳಿಲ್ಲ: