ನಾವೆಲ್ಲಾ ಹೊರಟೆವು
ಒಂದು ದಿನದ ಪ್ರವಾಸ
ಹೊರಡುವಾಗ ನಮಗೆಲ್ಲಾ
ಉಲ್ಲಾಸವೊ ಉಲ್ಲಾಸ
ನಡುದಾರಿಯಲ್ಲಿ ಕೆಟ್ಟು
ನಿಂತ ಬಸ್ಸಿನ ಸಹವಾಸ
ಮಂಗಮಾಯವಾಯಿತು ನಮ್ಮ ಉತ್ಸಾಹ
ಸುಡುಬಿಸಿಲಿನ
ತಾಪಕಾಯ್ತು ಎಲ್ಲರಿಗೂ ಆಯಾಸ
ಹಿಂಡು ಕೋತಿಗಳ ದಾಳಿಯಿಂದ ನಮಗೆಲ್ಲ ಉಪವಾಸ
ಸರಿಹೋಗದು ಬಸ್ ಗಾಗಿ
ಕಾದುಕಾದು ನಮಗೆಲ್ಲ ವನವಾಸ
ಎಲ್ಲರ ಹೊಟ್ಟೆಯಲ್ಲಿ
ಶುರುವಾಯ್ತು ಹಸಿವೆಂಬ ಗರಗಸ
ಅಲ್ಲಿದ್ದ ತೋಟದ
ಮನೆಯೋರು ಮಾಡಿ ಬಡಿಸಿದ್ರು ಅನ್ನರಸ
ಅದನು ತಿಂದು
ರಿಪೇರಿಯಾದ ಬಸ್ಸಲ್ಲಿ ಕೂತದ್ದೇ ಸಾಹಸ
ಅಂತೂಇಂತೂ ಮತ್ತೆ
ಪ್ರಯಾಣ ಶುರುವಾದಾಗ ಎಲ್ಲರಿಗೂ ಉಲ್ಲಾಸ
ನಡುರಾತ್ರಿಯಲ್ಲಿ
ಎಲ್ಲರೂ ಸೇರಿದ್ರು ಅವರವರ ಮನೆ ವಿಳಾಸ
ಪಾಪಿ ಸಮುದ್ರಕ್ಕೋದ್ರು
ಮೊಳಕಾಲುದ್ದ ನೀರು ಅನ್ನೋ ಹಾಗಾಯ್ತು ನಮ್ಮ ಕೆಲಸ.
- ವಿಶಾಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ