(Alfred Tennyson ರವರ THE BROOK ಕವನ)
ಪೊದೆಯಿಂದೆಡ ತಾಕುವ ಜಲಪಕ್ಷಿಯ ತೆರದೊಳು,
ನಾನೊಮ್ಮೆಯೆ ನಪಾತ ಮಾಡುತ ಬರುತಿಹೆನು.
ಥಳಥಳಿಸುತ ಜುಣುಜುಣುಗುತ ಮೇಲಿನ ಪೊದೆಯೊಳು
ಕಣಿವೆಯನತಿವೇಗದಿ ಸೇರಲು ಬರುತಿಹೆನು|| ....1
ಗಿರಿಗಳು ಮುವ್ವತ್ತು ಭರದಲಿ ಇಳಿಯುವೆ
ಗಿರಿಶಿಖರದ ನಡುವೆಯೊಳ್ಜಾರುವೆನು.
ಹಳ್ಳೀಯಿಪ್ಪತೋದೇ ನಗರವ ದಾಟುವೆನು,
ಮತ್ತೊಂದೈವತ್ಸೇತುವೆಯಲಿ ನಾ ತೂರುವೆನು|| ....2
ಮಾದೇಗೌಡನ ಬಯಳೊಳು ಹರಿಯುತ,
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನ್ವರತಾ ನಾ ಹರಿಯುವೆನು||....3
ಮುಮ್ಮಡೆ ವೇಗದಿ ಹರಿಯುತಲೊಂಂಎ
ನಿನಾದಗೈಯುವೆ, ಕಲ್ಲಿನೊಳು.
ಬುದ್ಬುದಗೈಯುವೆ ಕೊಲ್ಲಿಯ ಸುಳಿಯೊಳ್-
ಗುಗುಳ ನಾದವ ಬೆಣಚಿನೊಳು|| .....4
ಸವೆಸುವೆ ಬಾಗಿದ ತೀರವ ಕೊರೆಯುತ;
ಉಳುಮೆಯ ಬಯಲಲಿ ಹರಿಯುವೆನು.
ಮೋಹಿನಿ ನೆಲೆಸಿಹ ನಾಡಿನ ಕಳೆಯನು
ನಯವಾಗರಿಯುತ ತೊಳೆಯುವೆನು||....5
ಜುಳುಜುಳು ನಾದದಿ ಮೊರೆಯುತ ಹರಿವೆನು
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....6
ಸುತ್ತುವೆ ಒಳಗಡೆ, ಸುತ್ತುವೆನೊರಗಡೆ
ವಿಕಸಿಸುತಾ ನಾ ತೇಲುವೆನು.
ಅಲ್ಲಲ್ಲಿರುತಿಹ ಕೊಬ್ಬಿದ ಮೀನ್ಗಳ
ಉಲ್ಲಾಸದಾಟ ನೋಡುವೆನು|| .....7
ಪಯಣದ ವೇಳೆಯೊಳ್ ತೆಳಪೊರೆಯಾಗಿ,
ಬಿಳಿನೊರೆ ತೇಲುವುದಲ್ಲಲ್ಲಿ;
ಥಳಥಳ ಹೊಳೆಯುವ ಜಲ್ಲಿಯು ಬಾಗಿ
ಅಳುವೆಯೊ? ಜೊನ್ನದ ರೀತಿಯಲಿ:-|| ....8
ಕೊಚ್ಚುವೆನೆಲ್ಲವ, ಜೊತೆಯೊಳು ಹರಿಯುತ
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....9
ಹರಿಯುವೆ, ಅರಿಯದೆ ಹಸುರಿನ ಬಯಲಿಗೆ;
ಜಿನುಗುವೆ ಮಂಜಿನ ಮುಸುಕಿನೊಳು;
ಪ್ರೇಯಸಿಯೊಂದಿಗೆ ನಲ್ಲನ ನಲವಿಗೆ
ಚಲಿಸುವೆ, ಬೆಳೆದಿಹ ಹಸುರಿನೊಳು.|| ....10
ಜಾರುವೆ, ಜಿನುಗುವೆ, ಮಬ್ಬಿನೊಳ್ ಮಿಣುಕುವೆ;
ಕಟ್ಟಿಹ ನೊರೆಯನು ಕರಗಿಸುವೆ.
ಕಿರಣದಿ ಹೊಳೆಯುವ ಮರಳಿನ ಗುಡ್ಡೆಯ
ಎದುರಲಿ, ಬಲೆಯೊಳು ನರ್ತಿಸುವೆ||.....11
ಬಾನಿನ ಚಂದಿಅರ ತಾರೆಯ ತಳದಲಿ;
ಅಡವಿಯೊಳ್ ಕಲರವಗೈಯುವೆನು.
ಕಲ್ಲರಳಡ್ಡಿಯ ಬಿಡಿಸಲು, ಬೆಳೆಯುತ
ತುದಿಯಲೆ ಸುತ್ತುತಲಲೆಯುವೆನು|| ....12
ಕಡೆಯಲಿ ಹೊರಳುತ ಬಾಗುತ ಹರಿಯುತ
ಕಡೆಯೊಳು, ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....13
(ಅನುವಾದ - ಗಂಗಾಧರಯ್ಯ ಜಿ)
ಬ್ರಿಟಿಷ್ ಕವಿ ಆಲ್ಫ್ರೆಡ್ ಟೆನ್ನಿಸನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ