Pages

ಪುಸ್ತಕ ಪ್ರೀತಿ - ಏತೋ ಮುಂಡಾ ಯುದ್ಧವನ್ನು ಗೆದ್ದ


ಮಹಾಶ್ವೇತಾದೇವಿ

ಹಾಥೀಘರ್ ಅಥವಾ ಸಾಲಗೇರಿಯಾ ಹಳ್ಳಿಯ ಆದಿವಾಸಿ ಪುಟ್ಟ ಬಾಲಕ ಏತೋ ಕಥೆಯ ನಾಯಕ. ಆದಿವಾಸಿಗಳು ಅನಕ್ಷರಸ್ಥರಾಗಿದ್ದರೂ ತಮ್ಮ ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ವಿದೇಶಿಯರ ಜೊತೆ  ನಡೆದ ಯುದ್ಧದಲ್ಲಿ ಸೋತು ತಮ್ಮ ನೆಲೆಯನ್ನು ಬಿಟ್ಟು ಬರಬೇಕಾಯಿತು. ಹೀಗೆ ಬಂದ ಇವರು ಸ್ವಲ್ಪ ಭಾಗ ಅರಣ್ಯವನ್ನು ಕಡಿದು ಹಸನುಗೊಳಿಸಿ ತಮ್ಮ ನೆಲೆಯನ್ನು ಮಾಡಿಕೊಂಡರು. ಇವರು ಕಾಡನ್ನು ತಮ್ಮ ದೇವರೆಂದು ತಿಳಿದಿದ್ದರು. ಇವರು ಹಲವಾರು ಹಬ್ಬಗಳನ್ನು ಆಚರಿಸುತ್ತಿದ್ದರು. ಪ್ರಮುಖವಾಗಿ ಕೃಷಿಯ ಸಮೃದ್ಧಿಗಾಗಿ "ಕರಮ್" ಹಬ್ಬವನ್ನು, ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ "ಬಂಧ್ನಾ ಅಥವಾ ಸೊಹ್ರಾಯ್" ಹಬ್ಬವನ್ನು ಆಚರಿಸುತ್ತಿದ್ದರು. ಇವರಲ್ಲಿ ವಧುದಕ್ಷಿಣೆ ಪದ್ಧತಿ ರೂಢಿಯಲ್ಲಿತ್ತು.
ಆದಿವಾಸಿಗಳು ಮಕ್ಕಳಿಗೆ ಹೆಸರಿಡಲು ತಮ್ಮದೇ ಆದ ರೀತಿಯನ್ನಿರಿಸಿಕೊಂಡಿದ್ದರು. ಮಕ್ಕಳು ಯಾವ ದಿನದಂದು ಹುಟ್ಟುತ್ತಾರೋ ದಿನದ ಹೆಸರನ್ನು ಇಡುತ್ತಿದ್ದರು. ಹಾಗೆಯೇ ಕಥೆಯ ನಾಯಕ ಏತವಾರ ಅಂದರೆ ಭಾನುವಾರ ಜನಿಸಿದ್ದರಿಂದ ಅವನಿಗೆ 'ಏತೋ' ಎಂದು ಹೆಸರಿಟ್ಟರು

ಏತೋ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಿದ್ದನು. ಏತೋ ತನ್ನ ಅಜ್ಜನನ್ನು " ಹಳ್ಳಿಗೆ ಹಾಥೀಘರ್ ಹೆಸರು ಬರಲು ಕಾರಣವೇನು?" "ಅದನ್ನು ಬದಲಾಯಿಸಿದ್ದು ಏಕೆ?" "ಮೋತೀಬಾಬು ನಮ್ಮನ್ನು ಕಾಡು ನಾಶ ಮಾಡಿದವರು ಎನ್ನುವರಲ್ಲ ಏಕೆ?" ಎಂದೆಲ್ಲಾ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದನು
ಇವನ ಗುಣವನ್ನು ನೋಡಿದ ಅಜ್ಜ ಇವನನ್ನು ಶಾಲೆಗೆ ಕಳುಹಿಸಿ ವಿದ್ಯಾವಂತನನ್ನಾಗಿಸಬೇಕೆಂದು ಕೊಂಡಿದ್ದನು.
ಆದರೆ ಏತೋ ತನ್ನ ಅಜ್ಜನೊಬ್ಬನೇ ಕಷ್ಟ ಪಡುತ್ತಾನೆಂದು ಮೋತೀಬಾಬುವಿನ ಮನೆಗೆಲಸಕ್ಕೆ ಹೋಗುತ್ತಿದ್ದನು. ಜೊತೆಗೆ ಊರಿನಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗೆ ಹೋಗಿ ಅಂಗಡಿಗಳನ್ನು ಗುಡಿಸಿ ಬದಲಾಗಿ ಗೋಣೀಚೀಲವನ್ನು ಪಡೆಯುತ್ತಿದ್ದನುಅವನು ಎಲ್ಲಿಗೆ ಹೋದರೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದನು. ದಾರಿಯಲ್ಲಿ ಸಿಕ್ಕಂತಹ ಮರದ ತುಂಡುಸೊಪ್ಪು, ತರಕಾರಿ ಎಲ್ಲವನ್ನು ಚೀಲಕ್ಕೆ ಹಾಕಿಕೊಂಡು, ಮಾರಿ ತನಗೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತಿದ್ದನು. ಇದೇ ಚೀಲವನ್ನು ಮಳೆಗಾಲದಲ್ಲಿ ತಲೆಗೆ ಹಾಕುವ ಗೊರಗುವಿನಂತೆ ಉಪಯೋಗಿಸುತ್ತಿದ್ದನು. ಚಳಿಗಾಲದಲ್ಲಿ ಕಂಬಳಿಯಂತೆ ಹೊದೆಯುತ್ತಿದ್ದನು
ಏತೋ, ಬಾಬುವಿನ ಮನೆಗೆಲಸವನ್ನು ಮುಗಿಸಿ, ಹಸು, ಆಡುಗಳನ್ನು ಮೇಯಿಸಲು ಹೊರಗಡೆ ಹೋಗುತ್ತಿದ್ದನು. ಅಲ್ಲಿ ಸ್ವತಂತ್ರನಾಗಿ ಪ್ರಕೃತಿಯ ಜೊತೆ ಮಾತನಾಡುತ್ತ ಸಂತಸದಿಂದಿರುತ್ತಿದ್ದನು. ಹಾಗೆ ಅವನು ಕಾಡಿಗೆ ಹೋಗುವಾಗ ಶಾಲೆಯೊಂದಿತ್ತು. ಅಲ್ಲಿ ಮಾಸ್ತರು ಯುದ್ಧ ಕುರಿತು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ನಿಲ್ಲುತ್ತಿದ್ದನು.

ಹೀಗೆ ಕಾಲ ಕಳೆಯುತ್ತಿರಬೇಕಾದರೆ ಅಜ್ಜ ಅವನನ್ನು ಶಾಲೆಗೆ ಸೇರಿಸಲು ಕರೆದುಕೊಂಡು ಹೋದನು. "ನನಗೆ ಇವನ ತಂದೆಯನ್ನೇ ಓದಿಸಬೇಕೆಂಬ ಆಸೆಯಿತ್ತು. ಆದರೆ ಹೊಟ್ಟೆಪಾಡಿಗಾಗಿ ಬಾಬುವಿನ ಹತ್ತಿರ ಕೆಲಸಕ್ಕೆ ಸೇರಿಸಬೇಕಾಯಿತು. ಆದರೆ ಇವನನ್ನಾದರೂ ಓದಿ ವಿದ್ಯಾವಂತನನ್ನಾಗಿ ಮಾಡಬೇಕು " ಎಂದು ಮಾಸ್ತರಿಗೆ ಹೇಳಿದನು.
"
ಚಿಂತಿಸಬೇಡ ಚಾಚ ಎಲ್ಲಾ ಆದಿವಾಸಿಗಳದೂ ಇದೇ ಸಮಸ್ಯೆ. ನಾನೂ ಸಹ ಹೋರಾಟ ಮಾಡಿಯೇ ಸ್ಥಾನಕ್ಕೆ ಬಂದಿರುವುದು. ಕೆಲಸ ಮಾಡಿಕೊಂಡುವಿದ್ಯಾರ್ಥಿವೇತನದ ಸಹಾಯದಿಂದ ವಿದ್ಯಾಭ್ಯಾಸ ಮಾಡಿದೆ. ಪ್ರೈಮರಿ ಪರೀಕ್ಷೆಯಲ್ಲಿ 2ನೇ ಸ್ಥಾನ ಗಳಿಸಿದಾಗ ನನ್ನ ತಂದೆ ಮನಸ್ಸು ಬದಲಾಯಿಸಿದರು" ಎಂದು ಮಾಸ್ತರು ಅಜ್ಜನಿಗೆ ಹೇಳಿದರು.
ಕೇಳಿದ ಅಜ್ಜ "ನಿಜ ನಮಗೆ ಓದು ಬರಹ ಬರಲಿಲ್ಲವಾದ್ದರಿಂದ ನಮಗೆ ಸೇರಿದ ಆಸ್ತಿಯನ್ನು ಕಳೆದುಕೊಳ್ಳಬೇಕಾಯಿತು ಮತ್ತು ಸರಕಾರ ನಮಗಾಗಿ ತರುವ ಯೋಜನೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಏತೋನನ್ನ ವಿದ್ಯಾವಂತನನ್ನಾಗಿ ಮಾಡುವ ಜವಾಬ್ದಾರಿ ನಿನ್ನದು" ಎಂದು ಮಾಸ್ತರಿಗೆ ಹೇಳಿದ ಅಜ್ಜ. ಹೀಗೆ ಶಾಲೆಗೆ ಸೇರಿದ ಏತೋ, ಬಾಬುವಿನ ಕೋಪಕ್ಕೆ ಗುರಿಯಾದನು.
ಆದರೂ ರಜಾದಿನಗಳಲ್ಲಿ ಏತೋ ಬಾಬುವಿನ ಮನೆಗೆಲಸಕ್ಕೆ ಹೋಗುತ್ತಿದ್ದನು. ಅಂತಹ ಸಮಯದಲ್ಲಿ ಬಾಬು ಅವನಿಗೆ ಆಸೆ ತೋರಿಸಿ ಶಾಲೆಗೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದನು.  "ಹಿಂದಿನ ಕಾಲದಲ್ಲಿ ಬಿಲ್ಲು ಬಾಣವಿದ್ದರೆ ಸಾಕಾಗಿತ್ತುಆದರೆ ಈಗ ನಮ್ಮ ಅಸ್ತಿತ್ವಕ್ಕೆ ಬೇಕಾದ ಅಸ್ತ್ರವೆಂದರೆ ವಿದ್ಯೆಎನ್ನುತ್ತಿದ್ದ ಮಾಸ್ತರ ಮಾತುಗಳನ್ನು ನೆನೆಸಿಕೊಂಡು 
 ಏತೋ ಏನೂ ಮಾತನಾಡದೆ ಸುಮ್ಮನಾಗುತ್ತಿದ್ದನು.
ಆದಿವಾಸಿಗಳೆಲ್ಲಾ ಸೇರಿ ಒಂದು ಕ್ಲಬ್ ಅನ್ನು ಮಾಡಿಕೊಂಡಿದ್ದರು. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜಯಂತಿಯನ್ನು ಆಚರಿಸುತ್ತಿದ್ದರು. ಸಂದರ್ಭದಲ್ಲಿ  ಪಂದ್ಯಗಳನ್ನು ನಡೆಸುತ್ತಿದ್ದರು ಮತ್ತು ಸಂಜೆಯ ಸಮಯದಲ್ಲಿ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದುತ್ತಿದ್ದರು. ಅಲ್ಲದೆ ವ್ಯಾಯಾಮ, ಅಂಗಸಾಧನೆಯನ್ನು ಕಲಿಸುತ್ತಿದ್ದರು ಹಾಗೂ ಸಂಗೀತನೃತ್ಯ, ಕಂಠಪಾಠ ಸ್ಪರ್ಧೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
ಹೀಗೆ ದೊಡ್ಡವರಿಗಾಗಿ ಇದ್ದ ಕ್ಲಬ್ ನಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಆಸಕ್ತಿ ಮೂಡಿಸುವ ಸಲುವಾಗಿ ಮಾಸ್ತರು ಪಾಠ ಹೇಳಿಕೊಡಲು ಪ್ರಾರಂಭಿಸಿದರು. ಜೊತೆಗೆ ಹಾಡುವುದುಕೊಳಲು ನುಡಿಸುವುದನ್ನು ಹೇಳಿಕೊಡುವುದಾಗಿ ಮಾಸ್ತರು ತಿಳಿಸಿದರು.
ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದ ಏತೋ ಅಜ್ಜನ ಕಾರಣದಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಅಂದರೆ ಅಜ್ಜ ಮರದ ಕೆಳಗೆ ಕುಳಿತ್ತಿದ್ದಾಗ ಮರ ಅವನ ಮೇಲೆ ಬಿದ್ದು ಕಾಲಿನ ಮೂಳೆ ಮುರಿಯಿತು. ಚಿಕಿತ್ಸೆಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಇದರಿಂದ ಏತೋ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮತ್ತೆ ಬಾಬುವಿನ ಮನೆಗೆಲಸಕ್ಕೆ ಹೋಗಲು ಪ್ರಾರಂಭಿಸಿದನು. ಜೊತೆಗೆ ಸಂಜೆ ಕ್ಲಬ್ ಪಾಠ ಕೇಳಲು ಹೋಗುತ್ತಿದ್ದುದ್ದನ್ನು ನಿಲ್ಲಿಸಿದನುಆದರೆ ಮಾಸ್ತರು ಹೇಳುತ್ತಿದ್ದ ಯುದ್ಧ ಕತೆಗಳನ್ನು ತಪ್ಪದೆ ಕೇಳುತ್ತಿದ್ದನು.
ಇದನ್ನು ನೋಡಿದ ಮಾಸ್ತರು ಒಂದು ದಿನ ಏತೋಗೆ "ನಿನಗೆ ಯುದ್ಧ ಕಥೆಗಳು ಇಷ್ಟ ಅಲ್ಲವೇ?" ಎಂದು ಅವನಿಗೆ ಸ್ವಾತಂತ್ರ್ಯ ಹೊರಾಟಗಾರ ಬಿರಸಾ ಚಿತ್ರವನ್ನು ತೋರಿಸಿ, "ನೀನೆ ವಿದ್ಯೆ ಕಲಿತರೆ ಸಿದ್ಧು, ಕನ್ಹು, ಬಿರಸಾರವರ ಕಥೆಗಳನ್ನು ಓದಬಹುದು" ಎಂದರು. ಇದನ್ನು ಕೇಳಿದ ಏತೋ ಮತ್ತೆ ಶಾಲೆಗೆ ಹೋಗಲು ನಿರ್ಧರಿಸಿದನು.
ನಂತರ ಬಾಬುವಿನೊಂದಿಗೆ  ಬಿರಸಾ ಜಯಂತಿ ನಂತರ ಕೆಲಸಕ್ಕೆ ಬರುವುದಿಲ್ಲ ಎಂದನು. ಕೋಪಗೊಂಡ ಬಾಬು "ನೀವೆಲ್ಲಾ ಕೊಬ್ಬಿಬಿಟ್ಟೀದ್ದೀರಿ. ಆದರೆ ಕಾಲ ಕೆಟ್ಟದ್ದು ನಾವು ಸುಮ್ಮನಿರಬೇಕಾಗಿದೆ. ಬಿರಸಾ ಜಯಂತಿಯಂತೆ, ದೊಡ್ಡ ಆನೆಯಂತೆ, ಅನಾಗರಿಕ ಕಾಡುಮನುಷ್ಯರ ಅಧಿಕಪ್ರಸಂಗಿತನ " ಎಂದನು.
ಕೇಳಿದ ಏತೋಗೆ ಕೋಪ ಬಂದರೂ ಸುಮ್ಮನಾಗಿ ಮನೆಗೆ ಅಜ್ಜನ ಜೊತೆ ನಾಳೆಯಿಂದ ಕೆಲಸಕ್ಕೆ ಹೋಗುವುದಿಲ್ಲವೆಂದನು. ಬಿರಸಾ ಜಯಂತಿಯಂದು ಮಾಸ್ತರು ಹೇಳಿದ ಸಿದ್ಧು ಮತ್ತು ಕನ್ಹು ರವರ ಕಥೆಗಳನ್ನು ಕೇಳಿ ಸ್ಫೂರ್ತಿಗೊಂಡನು. "ನಾನು ಶಾಲೆಗೆ ಹೋಗಿ ವಿದ್ಯೆ ಕಲಿತರೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದು ಶಾಲೆಗೆ ಹೋಗುವ ತನ್ನ ನಿರ್ಧಾರವನ್ನು ದೃಢಪಡಿಸಿಕೊಂಡನು.
ನಂತರ ಆದಿವಾಸಿಗಳು ಹೋರಾಟ ನಡೆಸಿ ತಮ್ಮ ಊರಿಗೂ ಶಾಲೆಯನ್ನು ಮಂಜೂರು ಮಾಡಿಸಿಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದರು. ಹೀಗೆ ಏತೋ ಯುದ್ಧ ಕಥೆಗಳನ್ನು ಕೇಳುತ್ತಾವಿದ್ಯೆಗಾಗಿ ತಾನೇ ಒಂದು ಯುದ್ಧವನ್ನು ಮಾಡಿ ಗೆದ್ದನು.
ತುಳಿತಕ್ಕೊಳಗಾದ ಹಾಗೂ ಕೆಳವರ್ಗದವರ ಹಕ್ಕಿನ ಹೋರಾಟಕ್ಕಾಗಿ ಬಹಳವಾಗಿ ಶ್ರಮಿಸಿದ ಮಹಾನ್ ಹೋರಾಟಗಾರ್ತಿ ಮಹಾಶ್ವೇತಾದೇವಿಯವರು ಆದಿವಾಸಿಗಳ "ಏತೋ ಮುಂಡಾ ಯುದ್ಧವನ್ನು ಗೆದ್ದ" ಕಥೆಯನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಇಲ್ಲಿ ಆದಿವಾಸಿಗಳು ತಮ್ಮ ಶಿಕ್ಷಣಕ್ಕಾಗಿ ಮಾಡಿದ ಹೋರಾಟ, ಹಾಗೂ ಏತೋ ಮನೆಗೆಲಸ ಬಿಟ್ಟು ಶಾಲೆಯ ಕಡೆ ನಡೆದುದು ಒಂದು ಯುದ್ಧವನ್ನೇ ಗೆದ್ದಂತೆ ಎಂದು ಸೊಗಸಾಗಿ ಬರೆದಿದ್ದಾರೆಇದನ್ನು ಕನ್ನಡಕ್ಕೆ ಗೊರೂರು ಶ್ರೀನಿವಾಸಮೂರ್ತಿಯವರು ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ
.

ವಿಜಯಲಕ್ಷ್ಮಿ ಎಂ. ಎಸ್    

ಕಾಮೆಂಟ್‌ಗಳಿಲ್ಲ: