Pages

ವ್ಯಕ್ತಿ ಪರಿಚಯ - ಗೋಪರಾಜು ರಾಮಚಂದ್ರರಾವ್ (ಗೋರಾ)

ಸರಸ್ವತಿ ಗೋರಾ ಮತ್ತು ಗೋಪರಾಜು ರಾಮಚಂದ್ರರಾವ್

"ನಾಸ್ತಿಕನಾದವನು ತೆರೆದ ಮನಸ್ಸಿನವನಾಗಿರುತ್ತಾನೆಅವನು ಎಲ್ಲವನ್ನೂ  ವೈಜ್ಞಾನಿಕ ದೃಷ್ಟಿಯಿಂದ ನೋಡುವ ಕ್ರಾಂತಿಕಾರಿಯಾಗಿರುತ್ತಾನೆ. ಮಾನವನ   ಪ್ರಗತಿಗೆ ಅನುಗುಣವಾಗಿಲ್ಲದಅಡ್ಡಯಾಗಿರುವ ಹಳೆಯ ಗೊಡ್ಡು ಮೌಲ್ಯಗಳನ್ನು  ತಿರಸ್ಕರಿಸುತ್ತಾನೆಹೊಸ ಮೌಲ್ಯಗಳನ್ನು ಸರ್ವ ಸಮಾನತೆಯ ಮೌಲ್ಯಗಳನ್ನು  ಸೃಷ್ಟಿಸುತ್ತಾನೆಎಂದು ಹೇಳುತ್ತಾ ಎಲ್ಲೆಡೆ ಹೊಸ ಅಲೆಯನ್ನು ಎಬ್ಬಿಸಿದ  ಗೋರಾರವರ ಬಗ್ಗೆ  ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್ದೊರೆಸ್ವಾಮಿ ಮತ್ತು ಪರ್ತಕರ್ತರಾದ ಸಿ.ಆರ್ ಕೃಷ್ಣರಾವ್ ರವರು "ಪ್ರವಾಹಕ್ಕೆದರು  ಈಜಿದ ಮಹನೀಯರುಮಾಲೆಯ ಪ್ರಥಮ ಕೃತಿಯಲ್ಲಿ ಬರೆದಿದ್ದಾರೆ
ಜಾತಿ ನಿರ್ಮೂಲನೆಗೆ ನಾಸ್ತಿಕವಾದವೇ ಸರಿಯಾದ ಮಾರ್ಗವೆಂದು ನಂಬಿದ್ದ  'ಗೋರಾಎಂದು ಪ್ರಸಿದ್ಧರಾದ ಗೋಪರಾಜು ರಾಮಚಂದ್ರರಾವ್ ರವರು 1902 ನವೆಂಬರ್ 15 ರಂದು ಮಧ್ಯಮವರ್ಗದ ಸಂಪ್ರದಾಯ ಕುಟುಂಬದ ವೆಂಕಟಸುಬ್ಬರಾವ್ ಮತ್ತು ರಾಜಲಕ್ಷ್ಮಿರವರ ಮಗನಾಗಿ ಈಗಿನ ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲಿನಛತ್ರಪುರಂ ಗ್ರಾಮದಲ್ಲಿ ಜನಿಸಿದರು.
ಇಂತಹ ವಾತಾವರಣದಲ್ಲಿ ಬೆಳೆದ ಗೋರಾರವರು ಸಹಜವಾಗಿಯೇ ದೇವರಲ್ಲಿ  ನಂಬಿಕೆಯಿಟ್ಟಿದ್ದರುಮೂಢನಂಬಿಕೆಗಳನ್ನು ನಂಬಿದ್ದರುಸ್ವತಃ ಇವರ  ಮನೆಯಲ್ಲಿಯೇ ಗೋರಾರವರ ಅತ್ತೆಯ ಮೈಮೇಲೆ ದೇವರು ಬರುವುದೆಂಬ ನಂಬಿಕೆಯಿತ್ತು ಸಮಯದಲ್ಲಿ ಆಕೆ ಕೊಡುವ ಭಸ್ಮವನ್ನು ತಮ್ಮ ಬಳಿಯಲ್ಲಿರಿಸಿಕೊಂಡರೆ ಒಳ್ಳೆಯದಾಗುವುದೆಂದು ನಂಬಿ ತಮ್ಮ ಬಳಿಯಲ್ಲಿರಿಸಿಕೊಳ್ಳುತ್ತಿದ್ದರು.
ಹೈಸ್ಕೂಲು ಶಿಕ್ಷಣವನ್ನು ಮುಗಿಸಿದ ಗೋರಾರವರು ಇಂಟರ್ ಓದಲು ಪಿ.ಆರ್  ಕಾಲೇಜಿಗೆ ಸೇರಿದರುಹೈಸ್ಕೂಲ್ ನಲ್ಲಿದ್ದಾಗಲೇ ಗಾಂಧೀಜಿಯವರ ವಿಚಾರಧಾರೆಗಳಿಗೆ ಮನಸೋತಿದ್ದ ಗೋರಾರವರು ಕ್ರಮೇಣ ಜಾತಿಪದ್ಧತಿಅದರ ದುಷ್ಪರಿಣಾಮಗಳನ್ನು ಅರಿತರುನಂತರ ಅವರ ನಂಬಿಕೆಗಳು ಬದಲಾಗುತ್ತಾ ಹೋದವುಇದಕ್ಕೆ ಪೂರಕವಾಗಿ ದೈವಭಕ್ತರಾಗಿದ್ದ ಅವರ ಅಕ್ಕನ ಮಕ್ಕಳು ಒಂದರ ಹಿಂದೆ  ಒಂದೊಂದಾಗಿ ಅಸು ನೀಗಿದವು ಘಟನೆಯಿಂದ ಅವರು ದೇವರ ಮೇಲಿನ  ನಂಬಿಕೆಯನ್ನು  ಪೂರ್ಣವಾಗಿ ಕಳೆದುಕೊಂಡರು.
1922 ಮೇ 7ರಂದು  ಸರಸ್ವತಿಯೊಂದಿಗೆ ಇವರ ವಿವಾಹವಾಯಿತುನಂತರ  ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ 1925ರಲ್ಲಿ ಎಂಎ ಪದವಿಯನ್ನು  ಮುಗಿಸಿದರುನಂತರ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರೂ ತಮ್ಮ  ನಾಸ್ತಿಕವಾದದ ಕಾರಣದಿಂದ ಅದನ್ನು ಬಿಡಬೇಕಾಯಿತು.
ನಂತರ 1940 ಆಗಸ್ಟ್ ನಲ್ಲಿ ಮುಡನೂರಿನಲ್ಲಿ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರುಶಿಕ್ಷಣದ ಮಹತ್ವವನ್ನು ತಿಳಿದ ಇವರು ವಯಸ್ಕರ ಶಾಲೆಯನ್ನು ಪ್ರಾರಂಭಿಸುವುದರ ಮೂಲಕ ಜಾತಿ ನಿರ್ಮೂಲನ ಕಾರ್ಯಕ್ರಮಕ್ಕೆ ಚಾಲನೆನೀಡಿದರುಇಲ್ಲಿ ವಿದ್ಯೆ ಕಲಿಯಲು ಎಲ್ಲಾ ಮತದವರೂ ಬರುತ್ತಿದ್ದರುಹಾಗು ಇಲ್ಲಿ '''ಚಹಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಪ್ರತಿಯೊಬ್ಬರೂ ಭಾಗವಹಿಸುವಂತೆ  ನಿಯಮವನ್ನು ತಂದರುಸಂಪ್ರದಾಯಸ್ಥರಿಂದ ವಿರೋಧವನ್ನು ಎದುರಿಸಿದರೂ  ಬಿಡದೆ ಮುಂದುವರಿಸಿದರುನಂತರ ಅಸ್ಪೃಶ್ಯರ ಮನೆಯಲ್ಲಿ ಮನೆಯಲ್ಲಿ ಭೋಜನಕೂಟವನ್ನು ಏರ್ಪಡಿಸುವುದರ ಮೂಲಕ ಜಾತಿ ನಿರ್ಮೂಲನಕ್ಕೆ ಇನ್ನಷ್ಟು ಒತ್ತು  ಕೊಟ್ಟರು ಹಾಗೂ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು.
1941 ರಲ್ಲಿ ಗೋರಾರವರು ನಾಸ್ತಿಕ ಸಮ್ಮೇಳನವನ್ನು ನಡೆಸಿದರುಇವರು  ಜನರಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರುಬೆಂಕಿಯ ಮೇಲೆ ನಡೆಯುವುದು ಹೇಗೆ ಎಂದು ವೈಜ್ಞಾನಿಕ ವಿವರಣೆ ನೀಡಿತಾವು ನಡೆಯುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಇವರು ತಮ್ಮ ಮನೆಯಲ್ಲಿಯೇ ನಡೆಯುತ್ತಿದ್ದ ಅವರ ಅತ್ತೆಯ ಮೇಲೆ ದೇವರು  ಬರುತ್ತಿದ್ದ ವಿಷಯವನ್ನು ಸುಳ್ಳು ಎಂದು ಬಯಲು ಮಾಡಿದರು
ಇದೆಲ್ಲದರ ಜೊತೆಗೆ ಗೋರಾರವರು ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ  ನೀಡುತ್ತಿದ್ದರು ಹಾಗೂ ವಿಧವಾ ವಿವಾಹಕ್ಕೂ ಸಹ ಪ್ರೋತ್ಸಾಹ ನೀಡುತ್ತಿದ್ದರುಸ್ವತಃಇವರ ತಮ್ಮ ವಿಧವಾ ವಿವಾಹ ಮಾಡಿಕೊಂಡಿದ್ದರು
ಗೋರಾರವರ ಮಡದಿ ಮತ್ತು ಮಕ್ಕಳು ಸಹ ಇವರ ಮಾರ್ಗದಲ್ಲೇ ನಡೆದು  ಬಂದರು.  ಸಂಪ್ರದಾಯ ಕುಟುಂಬದಿಂದ ಬಂದಿದ್ದ ಮಡದಿ ಸರಸ್ವತಿಯವರು  ಮಾಂಸಾಹಾರವನ್ನು ಸೇವಿಸುವುದರ ಮೂಲಕ ಪತಿಯ ಜಾತಿ ನಿರ್ಮೂಲನ  ಕಾರ್ಯಕ್ರಮಕ್ಕೆ ಕೈ ಜೋಡಿಸಿದರುಅಲ್ಲದೆ ಇವರು ತಮ್ಮ ಮಂಗಳಸೂತ್ರವನ್ನು  ತೆಗೆದರು ಮತ್ತು ಕುಂಕುಮವನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿ ಪತಿಯ  ವಿಚಾರಗಳನ್ನು ಜನರಿಗೆ ತಿಳಿಸಲು ನೆರವಾದರು.
ಗೋರಾರವರು ಮೌಢ್ಯತೆಯ ವಿರುದ್ಧ ನಡೆಸುತ್ತಿದ್ದ ಹೋರಾಟದ ಜೊತೆಗೇ ಸಾಮಾಜಿಕ ಹಿತಾಸಕ್ತಿಯನ್ನು ಹೊಂದಿದ್ದರುಅಪರಾಧಿಗಳಿಗೆ ನೆರವಾಗಲು ಉದ್ಯಮವನ್ನು ಸ್ಥಾಪಿಸಿದರುಇಲ್ಲಿ ಮುದ್ರಣಕೆಲಸಟೈಪಿಂಗ್ಹೊಲಿಗೆಮರಗೆಲಸ   ಇತ್ಯಾದಿಗಳನ್ನು ಕೆಲಸಗಳನ್ನು ಕಲಿಸಿಕೊಡುತ್ತಿದ್ದರು.
ಗೋರಾರವರು ಮತ್ತೊಂದು ಅನಿಷ್ಟ ಪದ್ಧತಿಯಾದ ಅವಿವಾಹಿತ ತಾಯಂದಿರ  ಗರ್ಭಪಾತದ ಬಗ್ಗೆ ಲೇಖನಗಳನ್ನು ಬರೆದರುಅದರಲ್ಲಿ "ಯಾವುದೇ ಅಂಕೆಯಿಲ್ಲದೆ ಗಂಡು ಸಮಾಜದಲ್ಲಿ ತಲೆಯೆತ್ತಿ  ತಿರುಗುವಾಗ ಹೆಣ್ಣಿಗೇಕೆ  ಶಿಕ್ಷೆಅಪವಾದದ ಹೊರೆಇದು ಅನ್ಯಾಯಇಬ್ಬರಿಗೂ ಸಮಾನ ಹೊಣೆಯಿರಬೇಕುಎಂದು  ಬರೆಯುವುದರ ಮೂಲಕ ಸ್ತ್ರೀಯರನ್ನು ಸಮಾನ ದೃಷ್ಟಿಯಿಂದಗೌರವದಿಂದ  ಕಾಣುತ್ತಿದ್ದರು ಎಂಬುವುದನ್ನು ಕಾಣಬಹುದು.
1949 ರಲ್ಲಿ ಗೋರಾರವರು ನಾಸ್ತಿಕತೆಯ ಪ್ರಚಾರಕ್ಕಾಗಿ "ಸಂಘಂಪತ್ರಿಕೆಯನ್ನು ಸ್ಥಾಪಿಸಿದರುಇದು ದೇಶದಲ್ಲಿಯೇ ನಾಸ್ತಿಕವಾದದ ಪ್ರಥಮ ಪತ್ರಿಕೆಯಾಗಿತ್ತು
ಗೋರಾರವರು ಮತ್ತು ಗಾಂಧೀಜಿಯವರಲ್ಲಿ ವಿಚಾರ ಬಿನ್ನಾಭಿಪ್ರಾಯಗಳಿದ್ದರೂ  ಒಬ್ಬರನೊಬ್ಬರು ಪರಸ್ಪರ ಗೌರವದಿಂದ ಕಾಣುತ್ತಿದ್ದರು.
ಗೋರಾರವರು ಸಾಮಾಜಿಕ ಕಳಕಳಿಯ ಜೊತೆಗೆ ರಾಜಕೀಯವಾಗಿಯೂ ತಮ್ಮ ಹೋರಾಟವನ್ನು ನಡೆಸಿದರುಹೈದರಾಬಾದಿನ ನಿಜಾಮ ಆಳ್ವಿಕೆಯ ವಿರುದ್ಧ  ಹೋರಾಟದಲ್ಲಿ ಭಾಗವಹಿಸಿದ್ದರು.
1947 ರಲ್ಲಿ ಭಾರತ ಸ್ವತಂತ್ರಗೊಂಡಾಗ ಗೋರಾರವರು ಸಂತಸಗೊಂಡರೂ  ಅದು ಅವರಲ್ಲಿ ಹೆಚ್ಚು ಕಾಲ ಉಳಿಯಲಿಲ್ಲಏಕೆಂದರೆ ನಂತರ ಅಧಿಕಾರಕ್ಕೆ ಬಂದ ನಾಯಕರ ಆಡಂಬರ ಜೀವನದುಂದುವೆಚ್ಚಗಳನ್ನು ನೋಡಿದ ಇವರು  "1947 ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ  ಬಂದಿತು ಆದರೆ ಅದು  ನಿಜವಾದ ರಾಜಕೀಯ ಬೆಳವಣಿಗೆ ತರುವುದರ ಬದಲು ಶಕ್ತಿ ರಾಜಕಾರಣ ತಂದಿದೆ"ಎಂದು ಅಭಿಪ್ರಾಯ ಪಟ್ಟರುಇವರಿಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ  ಹೆಚ್ಚಿನ ಒಲವಿತ್ತು.
1948 ರಲ್ಲಿ ಗಾಂಧೀಜಿ ಮರಣಾನಂತರ ಇವರು ಕಾಂಗ್ರೆಸ್ಸಿನೊಂದಿಗೆ ಇದ್ದ ಎಲ್ಲಾ ಸಂಬಂಧವನ್ನು ಕಳೆದುಕೊಂಡರುನಂತರ ಯಾವುದೇ ಪಕ್ಷಕ್ಕೂ ಸೇರಲಿಲ್ಲ. "ಆರ್ಥಿಕ  ಮಂಡಲಎಂಬ ಸಂಘಟನೆಯನ್ನು ಸ್ಥಾಪಿಸಿ ಸರ್ಕಾರದ ದಂದುವೆಚ್ಚ,  ಆಡಂಬರದ ವಿರುದ್ಧ ಚಳವಳಿಯನ್ನು ಪ್ರಾರಂಭಿಸಿದರು.
ಹೈದರಾಬಾದಿನಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ  ಭೂಸುಧಾರಣೆಗಾಗಿ ನಡೆದ ಭೂದಾನ ಚಳವಳಿಯಲ್ಲಿ ಗೋರಾರವರು ಪ್ರಮುಖ  ಪಾತ್ರ ವಹಿಸಿದರು.
ರಾಜಕೀಯ ಅಧಿಕಾರಕ್ಕಾಗಿ ಪಕ್ಷಗಳ ನಡುವಿನ ಪೈಪೋಟಿಯೇ ಸಮಾಜದಲ್ಲಿನ  ಭ್ರಷ್ಟಾಚಾರಕ್ಕೆ ಮೂಲ ಕಾರಣಎಲ್ಲಿಯವರೆಗೆ ಪಕ್ಷ ರಾಜಕಾರಣವಿರುವುದೋ  ಅಲ್ಲಿಯವರೆಗೆ ಸಮಾನ ಅವಕಾಶವಿರುವ ವ್ಯವಸ್ಥೆ ಸ್ಥಾಪನೆಯಾಗದು ಎಂಬುದು ಗೋರಾರವರ ನಿಲುವಾಗಿತ್ತು.
ಗೋರಾರವರ ನಾಸ್ತಿಕವಾದಿ ಚಳವಳಿ ಭಾರತದಲ್ಲದೆ ವಿದೇಶಿ ಸಂಸ್ಥೆಗಳನ್ನು  ಆಕರ್ಷಿಸಿತು.1968 ರಲ್ಲಿ " ದಿ ಎಥೀಸ್ಟ್ಪ್ರಾರಂಭವಾದ ಆಂಗ್ಲ ಮಾಸಪತ್ರಿಕೆಯುವಿದೇಶಿ ಸಂಸ್ಥೆಗಳ ಜೊತೆ ಸಂಪರ್ಕ ಬೆಳೆಸಲು ನೆರವಾಯಿತು. 1970 ರಲ್ಲಿ ವಿಜಯವಾಡದಲ್ಲಿ ನಾಸ್ತಿಕವಾದಿ ಸಮ್ಮೇಳನವನ್ನು ನಡೆಸಲಾಯಿತು. ಇದರಲ್ಲಿ ವಿದೇಶೀ ಪ್ರತಿನಿಧಿಗಳು ಭಾಗವಹಿಸಿದ್ದರುನಂತರ ಬಾಸ್ಟನ್  ನಲ್ಲಿ ನಡೆದ"ಇಂಟರ್ ನ್ಯಾಷನಲ್  ಹ್ಯೂಮನಿಸ್ಟ್ ಅಂಡ್ ಎಥಿಕಲ್  ಯೂನಿಯನ್" ಸಮ್ಮೇಳನದಲ್ಲಿ ಭಾಗವಹಿಸುವಂತೆ ಗೋರಾರವರಿಗೆ ಆಹ್ವಾನ ನೀಡಲಾಯಿತು
ಇದರ ಫಲವಾಗಿ 1970 ರಲ್ಲಿ ಗೋರಾರವರು ನಾಲ್ಕು ತಿಂಗಳ ವಿದೇಶಿ ಪ್ರವಾಸ ಕೈಗೊಂಡು ಇಟಲಿಫ್ರಾನ್ಸ್ಜರ್ಮನಿಸ್ವೀಡನ್ಡೆನ್ಮಾರ್ಕ್ಪೋಲೆಂಡ್, ಬೆಲ್ಜಿಯಂ ,ಇಂಗ್ಲೆಂಡ್,ಕೆನಡಾಹವಾಯಿ ಮೊದಲಾದ ದೇಶಗಳಿಗೆ ಭೇಟಿ ನೀಡಿದರುಆಸ್ಟ್ರೇಲಿಯಾದ rationalist society ಗೋರಾರವರಿಗೆ ವಿಶೇಷ ಸದಸ್ಯತ್ವ  ನೀಡಿ ಗೌರವಿಸಿತು.1974 ರಲ್ಲಿ ಗೋರಾರವರು ಯುರೋಪ್ ಮತ್ತು ಅಮೆರಿಕಾಗಳಲ್ಲಿ ಪ್ರವಾಸ   ಮಾಡಿದರು.
1972 ರಲ್ಲಿ ಗೋರಾರವರು ವಿಜಯವಾಡದಲ್ಲಿ ಪ್ರಥಮ ವಿಶ್ವ ನಾಸ್ತಿಕ  ಸಮ್ಮೇಳನವನ್ನು ಏರ್ಪಡಿಸಿದರುವಿಶ್ವದ ಎಲ್ಲಾ ನಾಸ್ತಿಕವಾದಿ ಸಂಘಟನೆಗಳನ್ನು ಒಂದುಗೂಡಿಸಿ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಇದರ ಪ್ರಮುಖ  ಉದ್ದೇಶವಾಗಿತ್ತು.
ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿ ನಾಸ್ತಿಕರಾದ ಗೋರಾರವರು ಸಮಾಜದಲ್ಲಿದ್ದ ಜಾತಿಪದ್ಧತಿಮೂಢನಂಬಿಕೆ ಮೊದಲಾದ ಅನಿಷ್ಟಪದ್ಧತಿಗಳ ವಿರುದ್ಧ ಹೋರಾಟ  ನಡೆಸುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ಸ್ವತಃ ತಾವೇ ಅನುಸರಿಸುವುದರ  ಮೂಲಕ ಶ್ರಮಿಸಿದ  ಮಹಾನ್ ಚೇತನ 1975 ಜುಲೈ 26 ರಂದು "ಭಾರತ  ಗ್ರಾಮೀಣ ಸಮಾಜದಲ್ಲಿ ಮಾರ್ಪಾಟುಗಳನ್ನು ಯಾವ ರೀತಿ ಮಾಡಬೇಕು" ಎಂಬುವುದರ ಬಗ್ಗೆ ಭಾಷಣ ಮಾಡುತ್ತಿರುವಾಗಲೇ ನಿಧನರಾದರು.
ಮರಣಾನಂತರವೂ ಸಹ ಗೋರಾರವರು ಚಿಂತನೆಗಳಿಗೆ ಅಡ್ಡಿಯಾಗದಂತೆ ಅವರ ಅಂತ್ಯಕ್ರಿಯೆಯನ್ನು ಮಾಡಲಾಯಿತುಅವರ ಹಿರಿಯ ಮಗ "ಗೋರಾರವರಿಂದಲೇನಾಸ್ತಿಕವಾದ ಅಸ್ತಿತ್ವಕ್ಕೆ  ಬಂದಿದ್ದಲ್ಲ, ಅದಕ್ಕೂ ಮೊದಲೇ ಇತ್ತುಇವರ ನಿಧನದಿಂದಇದು ಅಂತ್ಯವಾಗುವುದಿಲ್ಲಆದರೆ ಆಧುನಿಕ ನಾಸ್ತಿಕ ಆಂದೋಲನದ  ಪ್ರವರ್ತಕರಾಗಿ ಗೋರಾರವರು ಸದಾ ನಮ್ಮೊಂದಿಗಿರುತ್ತಾರೆನಾವು  ಪ್ರತಿಯೊಬ್ಬರೂ ಅವರ ನಾಸ್ತಿಕವಾದದ ವಾರಸುದಾರರು ಅವರ ಕೆಲಸವನ್ನು  ಮುಂದುವರಿಸಿಕೊಂಡು ಹೋಗಲು  ಪಣ ತೊಡುತ್ತೇವೆ " ಎಂದು ಘೋಷಿಸುವುದರ ಮೂಲಕ ಜನರ ಮನದಲ್ಲಿ ಗೋರಾರವರು ಚಿಂತನೆಗಳು ಉಳಿದುಕೊಳ್ಳುವಂತೆ ಮಾಡಿದರು.

- ವಿಜಯಲಕ್ಷ್ಮಿ  ಎಂ ಎಸ್

ಕಾಮೆಂಟ್‌ಗಳಿಲ್ಲ: