Pages

ಕವನ - ಹರಿವು

ಹರಿವು

ಹಳೆಯ ಹಳಸಿದ ರಕ್ತವನೆಲ್ಲ
ಹರಿಯ ಬಿಟ್ಟು ಚರಂಡಿಗೆ
ಕೀವು, ಹೆಪ್ಪುಗಟ್ಟಿದ ಗಡ್ಡೆಗಳ
ಬಿಸುಟಿ ಕಸದ ತೊಟ್ಟಿಗೆ
ನನ್ನೀ ದೇಹದಲಿ
ಹೊಸ ನೆತ್ತರ ಹರಿವು

ಕಷ್ಟದಲಿ ಮೊರೆ ಹೋಗುತ್ತಿದ್ದ
ಮೌನ-ಸ್ತಬ್ದತೆಗಳು ಸರಿದು ಹಿಂದೆ
ತರ್ಕಗಳ ಸಾಲು ಸಾಲು
ಕೆಚ್ಚೆದೆಯ ಹೊಳೆಯ ಹರಿವು

ದಿನವೂ ಹುಟ್ಟುವ ಸೂರ್ಯ
ಇಂದು ಮತ್ತೆ ಹೊಸತಾಗಿ
ಬೀರಿದ ಕಿರಣಗಳು
ಹೊಸ ಹೊಳಪು ಮೂಡಿ
ನನ್ನೊಳಗಿದೀಗ 
ಹೊಸ ತಿಳಿವಿನ ಹರಿವು....

- ಮಹಾಂತೇಶ ಬಿ ಬಿ

ಕಾಮೆಂಟ್‌ಗಳಿಲ್ಲ: