Pages

ಕವನ - ನವೆಂಬರ್ ಕ್ರಾಂತಿ



ಛಿದ್ರವಾಗಿದೆ ಇಂದು ಆ ಮಹಾನ್ ದೇಶ
ದುಷ್ಟಕೂಟದ ತಂತ್ರಕ್ಕೆ ಬಲಿಯಾಗಿ
ದುಡಿವ ಜನರ ಆಶೆ-ಆಕಾಂಕ್ಷೆಗಳೆಲ್ಲಾ
ಕುಸಿದುಹೋಗಿದೆ ಮಣ್ಣಲ್ಲಿ ಮಣ್ಣಾಗಿ.

ಅಸಂಖ್ಯಾತ ಕಾರ್ಮಿಕರ ತ್ಯಾಗ ಬಲಿದಾನಗಳ
ಲೆನಿನ್ - ಸ್ಟಾಲಿನ್ ರ ದಶಕಗಳ ಶ್ರಮವ
ಧೂಳೀಪಟಗೊಳಿಸಿ ಪಾತಾಳಕ್ಕಿಳಿದ ರಷ್ಯಾ
ಇಂದು ನಮದಲ್ಲ, ಶ್ರಮಜೀವಿಗಳದ್ದಲ್ಲ

ನವೆಂಬರ್ ಏಳು ಬಂದಿಹುದು ಮತ್ತೆ
ಸಂಘಟಿತರಾಗಬೇಕಿದೆ ದುಡಿವ ಜನತೆ
ಘೋಷಿಸಿದೆ – “ಏಳಿ, ಎದ್ದೇಳಿ 
ಸಂಕೋಲೆ ತೊಡೆಯಲು ಸನ್ನದ್ಢರಾಗಿ”

ಚಿಂತಿಲ್ಲ, ಆಗುವುದು ಇನ್ನೊಮ್ಮೆ ಕ್ರಾಂತಿ
ಭೋರ್ಗರೆಯುತ ಬರುವುದು ಶ್ರಮಿಕವರ್ಗ
ಸ್ಥಾಪಿಸುವುದು ಮತ್ತೊಮ್ಮೆ ಸಮಾನತೆಯ 
ಮೇಲಕೇರಿಸುವುದು ಕೆಂಪು ಪತಾಕೆಯ
  - ಸುಧಾ ಜಿ    

ಕಾಮೆಂಟ್‌ಗಳಿಲ್ಲ: