ಕನ್ನಡ ನಾಡು ನಮ್ಮಯ ನಾಡು
ಕನ್ನಡ ಕಂಪಿನ ನುಡಿ ನಾಡು
ಹಸಿರು ವನಗಳ ಸುಂದರನಾಡು
ಚೆಲುವಿನ ಒಲವಿನ ಸಿರಿನಾಡು.
ಬಸವ ಪಂಪರು ಹುಟ್ಟಿದ ನಾಡು
ಅಕ್ಕ ಷರೀಫರ ನೆಲೆ ನಾಡು
ಅಬ್ಬಕ್ಕ ಟಿಪ್ಪು ಉಳಿಸಿದ ನಾಡು
ಸರ್ ಎಂವಿ ಕಟ್ಟಿದ ಕರುನಾಡು
ಕಲೆಯನು ಶಿಲೆಯಲಿ ಬೆಳೆಸಿದ ನಾಡು
ಸಾರಿದೆ ನಮ್ಮಯ ಸಂಸ್ಕೃತಿ ನೋಡು
ಕಾವೇರಿ ತುಂಗೆ ಹರಿಯುವ ನಾಡು
ಗಂಧದನಾಡಿದು ಚಂದದ ಬೀಡು.
ವೆಂಕಟರಾಯರು ಕನಸಿನ ನಾಡು
ನಾರಾಯಣರ ಚೆಲುವಿನ ನಾಡು
ಜಯದೇವಿ ತಾಯಿಯ ಕಂಡಂತ ನಾಡು
ಇದುವೆ ನಮ್ಮಯ ಕರುನಾಡು.
- ವಿಜಯಲಕ್ಷ್ಮಿ ಎಂ ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ