Pages

ಕವನ - ಸಮಸ್ಯೆಗಳ ಮೂಲ


ನನ್ನೆಲ್ಲ ಸಮಸ್ಯೆಗಳ ಮೂಲ
ನನ್ನೊಳಗಿರಲು
ಪರಿಹಾರ ಹೊರಗಡೆ
ಬೇರೆಯವರಲ್ಲಿ ಹುಡುಕಿದರೆ
ಸಿಗುವುದೆಂತು
ಅಸಹನೆ ಅಹಂ ನಿರೀಕ್ಷೆ ಅಪೇಕ್ಷೆ
ಸಂಕುಚಿತ ಮನಸ್ಸು
ಒಡ್ಡುವುದು ಸಂಕಷ್ಟದ
ಗೂಡಿಗೆ 
ಹೊರಬರಲು
ಚಡಪಡಿಸುತ ಅಂತರ್
ವಿಶ್ಲೇಷಣೆಗೆ ಒಳಪಡಲು
ಕಂಡಿತು ದಾರಿ
ನನ್ನೊಳಗಿನ ಗುಣಾವಗುಣಗಳನು
ಅವಲೋಕಿಸಲು ಕಂಡಿತು
ಎಲ್ಲರಂತೆ ನಾನೆಂಬ ಪ್ರತಿಬಿಂಬ
ಇತರರ ಗುಣಾವಗುಣಗಳನು
ಅವಲೋಕಿಸಲು ಕಂಡಿತು
ನನ್ನಂತೆ ಎಲ್ಲರು. 
ನನ್ನನ್ನು ಟೀಕಿಸಿಕೊಳ್ಳಲು
ತಯಾರಿಲ್ಲದಾಗ ಇತರರ
ಟೀಕಿಸಲು ನನಗೆಲ್ಲಿಯ ಹಕ್ಕು
ಮನ ಮುಂದಾಗುವುದು
ಆತ್ಮ ಪ್ರಶಂಸೆಗೆ
ಕುಗ್ಗುವುದು 
ಪರರ ಟೀಕೆಗೆ, 
ನಿಂದನೆಯ ಸ್ವೀಕರಿಸುತ 
ವಿನಯವ ತೋರುತ
ಪರಿಶುಧ್ಧವಾಗಲು
ನಿರ್ವಾಣ ಹೊಂದುವುದು
ಮನವು ಆಗ

ಡಾ. ಹೇಮಲತ ಎಚ್.ಎಮ್

ಮಹಿಳಾ ಅಧ್ಯಯನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಮಂಡ್ಯ

ಕಾಮೆಂಟ್‌ಗಳಿಲ್ಲ: