ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಸಮಾಜದ ಅಮಾನವೀಯ ಪಿಡುಗಾಗಿದ್ದ ಅಸ್ಪೃಶತಾ ಆಚರಣೆಯ ವಿರುದ್ಧ ಹಾಗೂ ದಲಿತರ ಜೀವನ ಸುಧಾರಣೆಗಾಗಿ ಅವಿರತ ಶ್ರಮಿಸಿದವರು ಕುದ್ಮಲ್ ರಂಗರಾವ್ ರವರು. ಇವರು ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದ ಕಾಸರಗೂಡಿನ ಕುದ್ಮುಲ್ ನಲ್ಲಿ 19 ಜೂನ್ 1859 ರಲ್ಲಿ ಜನಿಸಿದರು. ದೇವಪ್ಪಯ್ಯ ಮತ್ತು ಗೌರಿಯವರ ಹಿರಿಯ ಮಗನಾಗಿ ಜನಿಸಿದ ರಂಗರಾವ್ ರವರು ಪ್ರಾಥಮಿಕ ಶಿಕ್ಷಣವನ್ನು ಕುದ್ಮಲ್ ಮತ್ತು ಕಾಸರಗೂಡಿನಲ್ಲಿ ಮುಗಿಸಿದರು. ಮನೆಯಲ್ಲಿ ಕೊಂಕಣಿಯನ್ನು ಮಾತನಾಡುತ್ತಿದ್ದರು, ಶಿಕ್ಷಣವನ್ನು ಕನ್ನಡದಲ್ಲಿ ಪಡೆದರು.
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಸಂಸಾರದ ಜವಾಬ್ದಾರಿಯನ್ನು ತೆಗೆದುಕೊಳ್ಳ ಬೇಕಾಯಿತು. ಮುಂದೆ ಓದುವ ಆಸೆಯಿದ್ದರೂ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. ಮಕ್ಕಳನ್ನು ಪ್ರೀತಿಯಿಂದ ನೋಡುತ್ತಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದರು. ಅಲ್ಲದೆ ಬಡತನದಲ್ಲಿದ್ದ ಕುಟುಂಬಗಳಿಗೆ ಸಹಾಯ ಮಾಡಿ 'ಗುರು' ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು.
ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಂತೆಯೇ ತಮ್ಮ ಓದನ್ನು ಮುಂದುವರಿಸಿ ಖಾಸಗಿಯಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಬರೆದು ತೇರ್ಗಡೆಯಾದರು. ನಂತರ ಪ್ಲೀಡರ್ ಶಿಫ್ ( ವಕಾಲತ್ತು) ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದರು. ಸಮಾಜದಲ್ಲಿನ ಅಸಮಾನತೆಯನ್ನು ಕಂಡು ಸಮಾಜದ ಸುಧಾರಣೆಗಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು ವಕಾಲತ್ತು ವೃತ್ತಿಯನ್ನು ಪ್ರಾರಂಭಿಸಿದರು. ಬಡವರು, ಅಸಹಾಯಕರ, ನೊಂದವರ ಪರವಾಗಿ ವಕಾಲತ್ತು ಮಾಡುತ್ತಿದ್ದ ಇವರು " ಸತ್ಯ ನ್ಯಾಯ ಎಂದರೆ ಕುದ್ಮಲ್ ರಂಗರಾವ್" ಎಂದು ಹೆಸರುವಾಸಿಯಾಗಿದ್ದರು.
ಒಮ್ಮೆ ಸವರ್ಣೀಯನೊಬ್ಬನು ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆಗರ್ಭಿಣಿ ಯಾದಳು ರಂಗರಾವ್ ರವರು ಆಕೆಯ ಪರವಾಗಿ ದಾವೆ ಹೂಡಿ ಯುವತಿಗೆಜೀವನಾಂಶವನ್ನು ಕೊಡಿಸಿ, ಅತ್ಯಾಚಾರಿಗೆ ಜೈಲುಶಿಕ್ಷೆಯನ್ನು ಕೊಡಿಸಿದರು. ಹೀಗೆ ಸವರ್ಣೀಯರ ವಿರುದ್ಧ ವಕಾಲತ್ತು ಮಾಡಿ ಅವರ ಕೋಪಕ್ಕೆ ಗುರಿಯಾಗುತ್ತಿದ್ದರು.
ಒಮ್ಮೆ ಸವರ್ಣೀಯನೊಬ್ಬನು ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆಗರ್ಭಿಣಿ ಯಾದಳು ರಂಗರಾವ್ ರವರು ಆಕೆಯ ಪರವಾಗಿ ದಾವೆ ಹೂಡಿ ಯುವತಿಗೆಜೀವನಾಂಶವನ್ನು ಕೊಡಿಸಿ, ಅತ್ಯಾಚಾರಿಗೆ ಜೈಲುಶಿಕ್ಷೆಯನ್ನು ಕೊಡಿಸಿದರು. ಹೀಗೆ ಸವರ್ಣೀಯರ ವಿರುದ್ಧ ವಕಾಲತ್ತು ಮಾಡಿ ಅವರ ಕೋಪಕ್ಕೆ ಗುರಿಯಾಗುತ್ತಿದ್ದರು.
ಆಂಗ್ಲ ಸರ್ಕಾರ ಅಸ್ಪೃಶ್ಯರಿಗಾಗಿ ಶಾಲೆಯೊಂದನ್ನು ತೆರೆಯಿತು. ಆದರೆ ಅವರಿಗೆ ಪಾಠ ಕಲಿಸಲು ಯಾವ ಸವರ್ಣೀಯ ಶಿಕ್ಷಕರೂ ಮುಂದೆ ಬರಲಿಲ್ಲ ಮತ್ತು ಕಲಿಯದಂತೆ ಅವರಿಗೆ ಹಲವಾರು ತೊಂದರೆಗಳನ್ನು ಕೊಡುತ್ತಿದ್ದರು. ಇವೆಲ್ಲದರ ನಡುವೆಯೂ ಬೆಂದೂರು ಬಾಬು ಎಂಬುವವರು ನಾಲ್ಕನೇ ತರಗತಿಯವರೆಗೆ ಓದಿ ನ್ಯಾಯಾಲಯದಲ್ಲಿ ಪೇದೆ ಕೆಲಸಕ್ಕೆ ಆಯ್ಕೆಯಾದರು. ಆದರೆ ಸವರ್ಣೀಯರ ವಿರೋಧದಿಂದ ಬಾಬು ನೌಕರಿ ಮಾಡಲಾಗಲಿಲ್ಲ. ಈ ಘಟನೆಯಿಂದ ನೊಂದ ರಂಗರಾವ್ ರವರು ತಮ್ಮ ವಕೀಲ ವೃತ್ತಿಯನ್ನು ಬಿಟ್ಟು "ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವೆ" ಎಂಬ ಗಟ್ಟಿ ನಿರ್ಧಾರವನ್ನು ಮಾಡಿದರು.
ರಂಗರಾವ್ ರವರ ಎಲ್ಲಾ ಕೆಲಸ ಕಾರ್ಯಗಳಿಗೂ ಪತ್ನಿ ರುಕ್ಮಿಣಿಯವರು ನೆರವಾಗುತ್ತಿದ್ದರು. ಇವರು ತಮ್ಮ ಮಕ್ಕಳನ್ನು ಎಲ್ಲರಂತೆ ಸಾಮಾನ್ಯ ಶಾಲೆಯಲ್ಲೇ ಸೇರಿಸಿದ್ದರು. ಅಸ್ಪೃಶ್ಯರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಅವರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಅವರ ಮಕ್ಕಳಿಗೆ ಸ್ವತಃ ಇವರೇ ಸ್ನಾನ ಮಾಡಿಸುತ್ತಿದ್ದರು.ಅವರಿಗೆ ಶಿಕ್ಷಣದ ಕೊರತೆಯಿಂದ ಏನೆಲ್ಲಾ ತೊಂದರೆಗಳಾಗುತ್ತವೆಎಂಬುದನ್ನು ತಿಳಿಸಿ, ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಹಗಲು ರಾತ್ರಿಯನ್ನದೆ ಶ್ರಮಿಸುತ್ತಿದ್ದರು.
ರಂಗರಾವ್ ರವರು 1892 ರಲ್ಲಿ ಮಂಗಳೂರಿನ ಉರ್ವಚಿಲಂಬಿಯಲ್ಲಿ ಪ್ರಥಮ ಬಾರಿಗೆ ದಲಿತ ಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಆದರೆ ಸವರ್ಣೀಯರ ಕಿರುಕುಳದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ಆದರೂ ಎದೆಗುಂದದೆ ರಂಗರಾವ್ "The Depressed Classes Mission (D.C.M) kodialbail, Mangalore ಎಂಬ ಸಂಸ್ಥೆಯನ್ನು ಸ್ಥಾಪಿಸಿ "ಪಂಚಮಶಾಲೆ" ಎಂಬ ಹೆಸರಿನಿಂದ ಮಂಗಳೂರಿನ ಹಲವಾರು ಕಡೆ ತೆರೆದರು. ಮಕ್ಕಳಿಗೆ ಊಟ ಮತ್ತು ಹಣವನ್ನು ನೀಡುವುದರ ಮೂಲಕ ಅವರನ್ನು ಶಾಲೆಗೆ ಬರಲು ಪ್ರೋತ್ಸಾಹಿಸುತ್ತಿದ್ದರು. ಆರ್ಥಿಕ ಪರಿಸ್ಥಿತಿಯಿಂದ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬುದನ್ನು ಮನಗಂಡ ಇವರು ರೆಸಿಡೆನ್ಷಿಯಲ್ ಸ್ಕೂಲ್ ಗಳನ್ನು ತೆರೆದರು.
"ಹೆಣ್ಣುಮಕ್ಕಳು ಅಕ್ಷರ ಕಲಿತರೆ ಇಡೀ ಕುಟುಂಬ ಪ್ರಗತಿಯನ್ನು ಸಾಧಿಸುತ್ತದೆ" ಎಂದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1899ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿದರು.
"ಹೆಣ್ಣುಮಕ್ಕಳು ಅಕ್ಷರ ಕಲಿತರೆ ಇಡೀ ಕುಟುಂಬ ಪ್ರಗತಿಯನ್ನು ಸಾಧಿಸುತ್ತದೆ" ಎಂದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1899ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿದರು.
ದಲಿತರ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡ ಇವರು ಅವರಿಗೆ ಮನೆಗಳಿಗಾಗಿನಿವೇಶನಗಳನ್ನು ಹಂಚಿದರು. ಜೀತಮುಕ್ತರನ್ನಾಗಿಸಲು ಸ್ವಂತ ಜಮೀನನ್ನು "ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಜಮೀನನ್ನು ಸವರ್ಣೀಯರು ಯಾವ ಕಾರಣಕ್ಕೂ ಕೊಳ್ಳಬಾರದು, ಕೊಂಡುಕೊಂಡರೂ ಅದು ಸಿಂಧುವಾಗುವುದಿಲ್ಲ" ಎಂಬ ಷರತ್ತಿನೊಂದಿಗೆ ಹಂಚಿದರು. ಜೊತೆಗೆ ಅವರಿಗೆ ಯಾವರೀತಿ ವ್ಯವಸಾಯ ಮಾಡಬೇಕೆಂಬುದನ್ನು ಸಹ ತಿಳಿಸಿಕೊಡುತ್ತಿದ್ದರು.
ಇದರ ಜೊತೆಗೆ ಆರ್ಥಿಕ ಸುಧಾರಣೆಗಾಗಿ ದಲಿತ ಜನಾಂಗದವರ ಕುಲಕಸುಬು ಮತ್ತು ಕೈಕಸುಬುಗಳಿಗೆ ಪ್ರೋತ್ಸಾಹ ನೀಡಿದರು. ಅದಕ್ಕಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದರು ಮತ್ತು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡಿದರು. ಅವರ ಆರ್ಥಿಕ ಭದ್ರತೆಗಾಗಿ "ಆದಿದ್ರಾವಿಡ ಸಹಕಾರ ಸಂಘ" ಎಂಬ ಸಂಘವನ್ನು ಸ್ಥಾಪಿಸಿದರು. ದಲಿತರನ್ನು ರಾಜಕೀಯವಾಗಿಯೂ ಮುಂದೆ ಬರುವಂತೆ ಬಹಳ ಶ್ರಮಿಸಿದರು.
ದಲಿತರ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದ ಇವರಿಗೆ ಹಲವರು ಧನಸಹಾಯವನ್ನು ಮಾಡಿದರು. ಹಲವಾರು ಇವರ ಶಾಲೆಗಳಿಗೆ ಪುಸ್ತಕಗಳನ್ನು ನೀಡಿದರು. ದೇಶೀಯರಲ್ಲದೆ ವಿದೇಶಿಯರು ಸಹ ಸಹಾಯಹಸ್ತವನ್ನು ಚಾಚಿದರು. ಇವರ ಈ ಸಾಮಾಜಿಕ ಕಳಕಳಿಯನ್ನು ಕಂಡ ಆಗಿನ ಸರ್ಕಾರ "ರಾವ್ ಸಾಹೇಬ್"ಎಂಬ ಬಿರುದು, ಪ್ರಮಾಣಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿದರು.
ಸರಳತೆ ಮತ್ತು ಸುಸಂಸ್ಕೃತರಾದ ಇವರು ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. "ಸರಳತೆ, ಪರಿಶುದ್ಧತೆ, ಪ್ರಾಮಾಣಿಕತೆ, ತ್ಯಾಗ, ಅಸಹಾಯಕರ, ಅಸ್ಪೃಶ್ಯರ ಕಣ್ಣೀರು ಒರೆಸುವುದು ಅವರ ಸುಧಾರಣೆಗಾಗಿ ಕೆಲಸ ಮಾಡುವುದೇ ನಿಜವಾದ ದೇವರ ಕೆಲಸ" ಎಂದು ನಂಬಿದ್ದ ಇವರು ಜಾತಿಪದ್ಧತಿಯನ್ನು ವಿರೋಧಿಸುತ್ತಿದ್ದರು. ತಮ್ಮ ಹೆಣ್ಣು ಮಕ್ಕಳಿಗೆ ಸರಳ ಮತ್ತು ಅಂತರಜಾತಿಯ ವಿವಾಹವನ್ನು ಮಾಡಿದರು.
"ದೀನೋದ್ಧರಣಂ ದೇಶೋದ್ಧರಣಂ"ಎಂಬ ತತ್ವದಂತೆ ದೀನದಲಿತರ ಉದ್ಧಾರಕ್ಕಾಗಿ ಹೋರಾಟ ನಡೆಸಿ ಅವರ ಬದುಕಿನ ದಾರಿದೀಪವಾಗಿದ್ದ ರಂಗರಾವ್ತಮ್ಮ ಜೀವನದ ಕೊನೆಯಲ್ಲಿ ಬ್ರಹ್ಮಸಮಾಜದಿಂದ ಪ್ರಭಾವಿತರಾಗಿ ತಮ್ಮ ಸಂಸ್ಥೆಗಳನ್ನು 'ಭಾರತ ಸೇವಾ ಸಂಘ'ಕ್ಕೆ ಒಪ್ಪಿಸಿದರು. 1927 ರಲ್ಲಿ ದೀಕ್ಷೆಯನ್ನುವ ಪಡೆದು " ಈಶ್ವರಾನಂದ ಸನ್ಯಾಸಿ" ಎಂದು ಹೆಸರನ್ನಿರಿಸಿಕೊಂಡರು.
"ತಮ್ಮ ಮರಣಾ ನಂತರ ತಮ್ಮ ಕಳೇಬರವನ್ನು 'ತೋಟಿ' ಜನಾಂಗದ ಬಂಧುಗಳುಹೊರಬೇಕು ಮತ್ತು ಅವರೇ ನನ್ನ ಶವಸಂಸ್ಕಾರವನ್ನು ಮಾಡಬೇಕು" ಎಂದು ಪತ್ರವನ್ನು ಬರೆದಿದ್ದರು.
"ತಮ್ಮ ಮರಣಾ ನಂತರ ತಮ್ಮ ಕಳೇಬರವನ್ನು 'ತೋಟಿ' ಜನಾಂಗದ ಬಂಧುಗಳುಹೊರಬೇಕು ಮತ್ತು ಅವರೇ ನನ್ನ ಶವಸಂಸ್ಕಾರವನ್ನು ಮಾಡಬೇಕು" ಎಂದು ಪತ್ರವನ್ನು ಬರೆದಿದ್ದರು.
ಹೀಗೆ ಸರಳ, ಪ್ರಾಮಾಣಿಕ, ಸ್ವಾಭಿಮಾನಿಯಾಗಿದ್ದು ದೀನದಲಿತರ ಪರವಾಗಿ ಹೋರಾಡಿದ ರಂಗರಾವ್ ರವರು 1928 ಜನವರಿ 30 ರಂದು ನಿಧನರಾದರು.
ಇವರ ಸಮಾಜಮುಖಿ ಕಾರ್ಯಗಳನ್ನು ನೋಡಿದ ಗಾಂಧೀಜಿ ಇವರನ್ನು "ನನ್ನ ಗುರುಗಳು" ಎಂದು ಬಹಿರಂಗ ಸಭೆಯೊಂದರಲ್ಲಿ ಘೋಷಿಸಿದರು.
2003ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ನೌಕರರ ಹಿತರಕ್ಷಣಾ ಸಮಿತಿಯು ಇವರ ಸ್ಮರಣಾರ್ಥವಾಗಿ "ಕುದ್ಮಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ"ಯನ್ನು ಸ್ಥಾಪಿಸಿದೆ. ಈ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇವರ ಹೆಸರಿನಲ್ಲಿ ಪ್ರತಿವರ್ಷವೂ ಸಮಾಜ ಸುಧಾರಣೆ ಮಾಡಿದಂತವರಿಗೆ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಮಾಡಿದೆ.
ಹೀಗೆ ಇಂತಹ ಮಹಾನ್ ವ್ಯಕ್ತಿಯು ತೋರಿದ ಮಾರ್ಗದಲ್ಲಿ ನಡೆದು ಸಮಾಜ ಸುಧಾರಣೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
- ವಿಜಯಲಕ್ಷ್ಮಿ ಎಂ. ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ