ಪರಿಶ್ರಮಕ್ಕೆ ಸಲ್ಲುವುದು ಗೆಲುವು,
ಪರಿವರ್ತನೆಯೆ ಅದರ ನಿಲುವು,
ಪರಿಪಕ್ವತೆಯೆ ಜೀವನದ ಒಲವು,
ಪರಿಮತಿಯಲ್ಲಿ ಇದ್ದರೆ ತಕ್ಕ ಫಲವು.
ಪರಿಗಣಿಸು
ಜೀವನೋದ್ದೇಶದ ಛಲವು,
ಪರಿಚಯಿಸು ಸಾಧನೆಯ ಬಲವು,
ಪರಿಸರದಲ್ಲೆ ಒಳಿತು, ಕೆಡಕುಗಳೆಲ್ಲವು,
ಪರೀಕ್ಷಿಸಿ ಮುನ್ನಡೆದರೆ, ಹಾದಿಗಳು ಹಲವು.
ಪರಿಚಯಿಸು ಸಾಧನೆಯ ಬಲವು,
ಪರಿಸರದಲ್ಲೆ ಒಳಿತು, ಕೆಡಕುಗಳೆಲ್ಲವು,
ಪರೀಕ್ಷಿಸಿ ಮುನ್ನಡೆದರೆ, ಹಾದಿಗಳು ಹಲವು.
ಪರಿಶುದ್ಧತೆಯೆ
ಜೀವಾತ್ಮದ ಚೆಲುವು,
ಪರಿಕರ್ತನ ಮಾಡಿದರೆ ಮನಸ್ಸಿಗೆ ನಲಿವು,
ಪರಿಕಲ್ಪನೆಗು ಮೀರಿದವು ಇವುಗಳೆಲ್ಲವು,
ಪರಿಜ್ಞಾನದಿಂದ ಸಾಗಿದರೆ ದಕ್ಕುವವೆಲ್ಲವು.
ಪರಿಕರ್ತನ ಮಾಡಿದರೆ ಮನಸ್ಸಿಗೆ ನಲಿವು,
ಪರಿಕಲ್ಪನೆಗು ಮೀರಿದವು ಇವುಗಳೆಲ್ಲವು,
ಪರಿಜ್ಞಾನದಿಂದ ಸಾಗಿದರೆ ದಕ್ಕುವವೆಲ್ಲವು.
- ಮಹೇಶ್ವರಿ.ಎಸ್.ಎಸ್.
2 ಕಾಮೆಂಟ್ಗಳು:
Very cute n meaningful...
Very cute n meaningful...
ಕಾಮೆಂಟ್ ಪೋಸ್ಟ್ ಮಾಡಿ