ಬಿ.ಜಿ.ಎಲ್. ಸ್ವಾಮಿಯವರು ತಮ್ಮ ಹಾಸ್ಯದ ಧಾಟಿಯಲ್ಲೇ "ಅಮೆರಿಕಾದಲ್ಲಿ ನಾನು" ಪ್ರವಾಸ ಕಥನವನ್ನು ಬರೆದಿದ್ದಾರೆ. ಸ್ವಾಮಿಯವರಿಗೆ ಸರ್ಕಾರವು ವಿದೇಶದಲ್ಲಿ ವ್ಯಾಸಂಗ ಮಾಡಲು ವೇತನವನ್ನು ನೀಡಿತು. ಜೊತೆಗೆ ಎರಡು ಷರತ್ತುಗಳನ್ನು ಹಾಕಿತು. ಮೊದಲನೆಯದು ವ್ಯಾಸಂಗ ಮಾಡುವ ಸಂಸ್ಥೆಯಲ್ಲಿ ಅವರಿಗೊಂದು ಸ್ಥಳವನ್ನು ಮೀಸಲಿಡಬೇಕು ಹಾಗೂ ಹೊರದೇಶಕ್ಕೆ ಪ್ರಯಾಣಕ್ಕೆಂದಿರುವ ವಾಹನಗಳಲ್ಲಿ ಇವರಿಗೊಂದು ಸ್ಥಳ ಕೊಡಬೇಕು. ಪ್ರಯಾಣದ ಏರ್ಪಾಡನ್ನು ಸರ್ಕಾರವೇ ವಹಿಸಿಕೊಂಡಿತು. "ನಿಮ್ಮ ಪ್ರಯಾಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರಿ ಒಂಟಿ ಕಾಲಿನ ಮೇಲೆ ನಿಂತಿರಿ! ನಾಳೆ ಹೊರಡಿರೆಂದು ಹೇಳಿದರೂ ಹೊರಡುವುದಕ್ಕೆ ಸಿದ್ಧರಾಗಿರಿ!! ನಾವು ನಿರ್ದೇಶಿಸಿದ ವಾಹನದಲ್ಲಿ ನೀವು ಯಾನ ಮಾಡುವುದಕ್ಕೆ ಸಿದ್ಧರಿಲ್ಲವಾದರೆ ನಿಮಗೆ ಕೊಟ್ಟಿರುವ ವೇತನ ದಕ್ಕದೆ ಹೋದೀತು!!! ಜೋಕೆ" ಎಂದು ಸ್ವಾಮಿಯವರು ಹಾಸ್ಯದ ಧಾಟಿಯಲ್ಲಿ ಹೇಳಿದ್ದಾರೆ.
ವಿಮಾನಯಾನ ದುಬಾರಿಯಾಗಿದ್ದರಿಂದ ಸರ್ಕಾರ ಇವರಿಗೆ ಸಮುದ್ರಯಾನದ ಏರ್ಪಾಟು ಮಾಡಿಕೊಡಲು ಒಪ್ಪಿಕೊಂಡಿತು. ಆಗ ಎರಡನೇ ಮಹಾಯುದ್ಧದ ಸಮಯವಾದ್ದರಿಂದ ಎಲ್ಲ ಹಡಗುಗಳಲ್ಲಿ ಸೈನಿಕರು ತಾಯ್ನಾಡಿಗೆ ಹಿಂದಿರುಗುತ್ತಿದ್ದರು. ಆದ್ದರಿಂದ ಎಲ್ಲಾ ಹಡಗುಗಳು ಪ್ರಯಾಣಿಕರಿಂದ ತುಂಬಿತ್ತು. ಮುನ್ನೂರು ಜನರು ಹೋಗಬಹುದಾದ ಹಡಗಿನಲ್ಲಿ ಐನೂರು ಜನರು ಪ್ರಯಾಣಿಸುತ್ತಿದ್ದರು. ಇಂತಹ ಹಡಗಿನಲ್ಲಿ ಸೈನಿಕರೊಡನೆ ಸ್ವಾಮಿಯವರು ತಮ್ಮ ಪ್ರಯಾಣವನ್ನು ಬೆಳೆಸಿದರು.
ಒಂದು ದೇಶದಿಂದ ಮತ್ತೊಂದು ದೇಶದಲ್ಲಿ ಸಂಸ್ಕೃತಿಯು ಬೇರೆ ಬೇರೆಯದಾಗಿರುತ್ತದೆ. ಉಡುಗೆತೊಡುಗೆಗಳು ಬೇರೆಬೇರೆಯಾಗಿರುತ್ತವೆ. ಅಮೆರಿಕಾದಲ್ಲಿ ಗಂಡಸರು ಚರ್ಚಿಗೆ ಹೋದಾಗ ತಮ್ಮ ಹ್ಯಾಟ್ ತೆಗೆಯಬೇಕು. ಹೆಂಗಸರು ಹ್ಯಾಟ್ ಇಲ್ಲದೆ ಹೋದರೆ ಅಗೌರವ ಎನ್ನುವರು. ಹಾಗೆಯೇ ಹಿರಿಯರಿಗೆ ನಮಸ್ಕರಿಸುವಾಗ ಹ್ಯಾಟ್ ತೆಗೆದು ನಮಸ್ಕರಿಸಬೇಕು. ಈ ರೀತಿ ಹ್ಯಾಟಿಗೆ ಪ್ರಾಮುಖ್ಯತೆ ಇರುವ ನಾಡಿನಲ್ಲಿ ಸ್ವಾಮಿಯವರಿಗೆ ಹ್ಯಾಟು ಹಾಕಿಕೊಳ್ಳಲು ಬೇಸರ. ಆದ್ದರಿಂದ ತಮ್ಮ ಉಡುಗೆಗೆ ತಕ್ಕನಾದ ಕಾಶ್ಮೀರಿ ಕಸೂತಿ ಕಲೆಯ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು. ಇವರ ಟೋಪಿ ಅಮೆರಿಕನ್ನರಿಗೆ ಆಕರ್ಷಣೀಯವಾಗುತ್ತು. ಹಲವರು ಇವರ ಟೋಪಿಯನ್ನು ನೋಡುವ ಸಲುವಾಗಿ ಇವರನ್ನು ಹಿಂಬಾಲಿಸುತ್ತಿದ್ದರು. ಇದನ್ನು ನೋಡಿದ ಪೋಲಿಸ್ ಇವರನ್ನು "ನಿಮಗೇನಾದರು ತೊಂದರೆ ಕೊಡುತ್ತಿದ್ದಾರಾ?" ಎಂದು ಕೇಳಿದರು. ಇದರಿಂದ ಅನಾವಶ್ಯಕವಾಗಿ ಬೇರೆಯವರ ಕುತೂಹಲವನ್ನು ಕೆರಳಿಸಬಾರದು ಎಂದು ಟೋಪಿಯ ಬಳಕೆಯನ್ನು ಕಡಿಮೆ ಮಾಡಿದರು. ಒಮ್ಮೆ ಪಾರ್ಟಿಯೊಂದರಲ್ಲಿ ಇವರ ಟೋಪಿಯ ಮೋಡಿಗೆ ಒಳಗಾದ ಅಮೆರಿಕಾದ ಮಹಿಳೆಯು ಇವರ ಟೋಪಿಯನ್ನು ಎರವಲಾಗಿ ತೆಗೆದುಕೊಂಡಿದ್ದರು.
ಏಪ್ರಿಲ್ 18 ಅಮೆರಿಕನ್ನರಿಗೆ ಪವಿತ್ರ ದಿನವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಪಾಲ್ ರಿವೀರ್ ಬ್ರಿಟಿಷರ ವಿರುದ್ಧ ಹೋರಾಡಿ ಗೆಲವು ಸಾಧಿಸಿದ ದಿನ. ಪ್ರತಿವರ್ಷವೂ ಈ ದಿನದಂದು ಹಾರ್ವರ್ಡ್ ವಿದ್ಯಾಪೀಠದ ವಿದ್ಯಾರ್ಥಿಗಳು ಅದರ ನೆನಪಿಗೋಸ್ಕರ ಅದರ ಅಣಕು ದೃಶ್ಯವನ್ನು ಪ್ರದರ್ಶಿಸುತ್ತಿದ್ದರು. ಅದರಂತೆ ಸ್ವಾಮಿಯವರು ಸೇರಿದ ವರ್ಷ ಅದರ ಉಸ್ತುವಾರಿ ಇವರ ತಂಡದವರದಾಗಿತ್ತು. ಎಲ್ಲರೂ ತಯಾರಾಗಿ ಅದನ್ನು ನಿರ್ವಹಿಸಿದರು.
ಸ್ವಾಮಿಯ ಗೆಳೆಯರೊಬ್ಬರು ತಮ್ಮ ಮಡದಿಯೊಂದಿಗೆ ಅಮೆರಿಕಾಗೆ ಬಂದರು. ಗೆಳೆಯನ ಮಡದಿ ಎಲ್ಲಿಗೆ ಹೋದರೂ ಸೀರೆಯನ್ನೇ ಧರಿಸುತ್ತಿದ್ದರು. ಇಲ್ಲಿಯೂ ಸಹ ಅವರು ಸೀರೆಯನ್ನು ಧರಿಸಿಕೊಂಡು ಆಮಂತ್ರಣ ಕೂಟಕ್ಕೆ ಹೋದರು. ಅಮೆರಿಕನ್ ಮಹಿಳೆಯರು ಸೀರೆಯ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಲವರು ಬಣ್ಣಕ್ಕೆ ಸೋತರು. ಕೆಲವರು ಅದರ ಉದ್ದವನ್ನು ಕೇಳಿ ಗಾಬರಿಯಾದರು. ಮತ್ತೆ ಕೆಲವರು ಅದನ್ನು ಧರಿಸುವ ರೀತಿ ಕೇಳಿ ಆಶ್ಚರ್ಯಪಟ್ಟರು. ಕೊನೆಗೆ ಅವರು ಭಾರತಕ್ಕೆ ಹಿಂದಿರುಗುವಾಗ ನೆನಪಿಗಾಗಿ ಇಲ್ಲಿಯವರಿಗೆ ಸೀರೆಯೊಂದನ್ನು ಕೊಟ್ಟು ಹೋದರು. ಅದರ ಉಪಯೋಗ ತಿಳಿಯದ ಅಮೆರಿಕಾದ ಗೆಳತಿಯರು ಸೀರೆಯನ್ನು ತಮಗೆ ತೋಚಿದಂತೆ ಕತ್ತರಿಸಿಕೊಂಡು ತಮ್ಮ ಉಡುಪಿನ ಜೊತೆ ಸೇರಿಸಿ ಬೇಕಾದ ವಿನ್ಯಾಸವನ್ನು ಮಾಡಿಕೊಂಡರು.
ಅಭಿವೃದ್ಧಿ ಹೊಂದಿದ ಅಮೆರಿಕಾದಂತಹ ದೇಶದಲ್ಲೂ ಸಹ ಕಳ್ಳತನ, ದರೋಡೆ ನಡೆಯತ್ತದೆ ಎಂದರೆ ಆಶ್ಚರ್ಯ. ಇಂತಹ ಒಂದು ಅನುಭವ ಸ್ವಾಮಿಯವರಿಗೂ ಆಗಿತ್ತು. ಕೆಲಸದ ಬೇಸರ ಕಳೆಯಲು ಬೆಳದಿಂಗಳ ರಾತ್ರಿಯಲಿ ಸುತ್ತಾಡಲು ಹೊರಗೆ ಹೋಗಿದ್ದ ಇವರನ್ನು ಮೂವರು ಯುವಕರು ತಡೆದು ಪಿಸ್ತೋಲ್ ತೋರಿಸಿ ಪರ್ಸನ್ನು ಕಸಿದುಕೊಂಡು ಓಡಿ ಹೋದರು. ಸ್ವಾಮಿಯವರು ಇವರನ್ನು ನಿಜವಾದ ಕಳ್ಳರೆಂದುಕೊಂಡಿದ್ದರು. ಮಾರನೇ ದಿನ ಆ ಮೂವರೂ ಬಂದು ಅವರನ್ನು ಕ್ಷಮಾಪಣೆ ಕೇಳಿದರು. ಆ ಯುವಕರು ಬೇರಾರೂ ಅಲ್ಲ ಇವರ ವಿದ್ಯಾರ್ಥಿಗಳೇ. ಇವರಿಗೆ ಅಮೆರಿಕಾದ ಇನ್ನೊಂದು ಕಪ್ಪು ಮುಖದ ಬಗ್ಗೆ ಅರಿವುಂಟು ಮಾಡಲು ಈ ರೀತಿ ಮಾಡಿದೆವು ಎಂದರು.
ಅಮೆರಿಕಾದಲ್ಲಿ ಸುಲಭವಾಗಿ ಹಣ ಗಳಿಸುವ ಇನ್ನೊಂದು ಮಾರ್ಗವೆಂದರೆ rocket ಅಂದರೆ ವರ್ತಕರನ್ನು ಹೆದರಿಸಿ ಅವರಿಂದ ಹಣ ಕೇಳುವುದು. ಇದು ಎಲ್ಲಾ ಕ್ಷೇತ್ರದಲ್ಲೂ ಕಾಣುತ್ತಿತ್ತು. ರಾಜಕೀಯದಲ್ಲೂ ಇದರ ಹಾವಳಿಯಿತ್ತು. ಅಮೆರಿಕಾದಲ್ಲಿ 1949 ರಲ್ಲಿ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿತ್ತು. ಸ್ವಾಮಿಯವರಿಗೆ ಹುಷಾರಿಲ್ಲದ ಕಾರಣ ವೈದ್ಯರಲ್ಲಿಗೆ ಬಂದಿದ್ದರು. ಆ ಸಮಯದಲ್ಲಿ ಅಪರಿಚಿತ ಧಾಂಡಿಗನೊಬ್ಬ ಒಳ ಬಂದು ವೈದ್ಯರನ್ನು ತಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಕೇಳಿದ. ಹಾಗೆಯೇ ಸ್ವಾಮಿಯವರನ್ನು ಏನೂ ಮಾತನಾಡಬಾರದು ಎಂದು ಹೆದರಿಸಿ ಕುಳ್ಳರಿಸಿದ್ದನು. ವೈದ್ಯರಿಗೆ " ನಿನ್ನ ಮಗಳಿಗೆ ಕೆಲಸ ಕೊಡಿಸುತ್ತೇನೆ ನಮ್ಮ ಪಕ್ಷಕ್ಕೆ ಮತ ಹಾಕು ಇಲ್ಲದಿದ್ದರೆ ನಿನಗೆ ನಿನ್ನ ಮಗಳು ಸಿಗುವುದಿಲ್ಲ" ಎಂದು ಹೆದರಿಸಿದ. ಹೇಗೋ ಪೋಲಿಸರಿಗೆ ವಿಷಯ ತಿಳಿಸಿ ಇಬ್ಬರೂ ಪಾರಾದರು.
ಅಮೆರಿಕಾದಲ್ಲಿ ಸುಲಭವಾಗಿ ಹಣ ಗಳಿಸುವ ಇನ್ನೊಂದು ಮಾರ್ಗವೆಂದರೆ rocket ಅಂದರೆ ವರ್ತಕರನ್ನು ಹೆದರಿಸಿ ಅವರಿಂದ ಹಣ ಕೇಳುವುದು. ಇದು ಎಲ್ಲಾ ಕ್ಷೇತ್ರದಲ್ಲೂ ಕಾಣುತ್ತಿತ್ತು. ರಾಜಕೀಯದಲ್ಲೂ ಇದರ ಹಾವಳಿಯಿತ್ತು. ಅಮೆರಿಕಾದಲ್ಲಿ 1949 ರಲ್ಲಿ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿತ್ತು. ಸ್ವಾಮಿಯವರಿಗೆ ಹುಷಾರಿಲ್ಲದ ಕಾರಣ ವೈದ್ಯರಲ್ಲಿಗೆ ಬಂದಿದ್ದರು. ಆ ಸಮಯದಲ್ಲಿ ಅಪರಿಚಿತ ಧಾಂಡಿಗನೊಬ್ಬ ಒಳ ಬಂದು ವೈದ್ಯರನ್ನು ತಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಕೇಳಿದ. ಹಾಗೆಯೇ ಸ್ವಾಮಿಯವರನ್ನು ಏನೂ ಮಾತನಾಡಬಾರದು ಎಂದು ಹೆದರಿಸಿ ಕುಳ್ಳರಿಸಿದ್ದನು. ವೈದ್ಯರಿಗೆ " ನಿನ್ನ ಮಗಳಿಗೆ ಕೆಲಸ ಕೊಡಿಸುತ್ತೇನೆ ನಮ್ಮ ಪಕ್ಷಕ್ಕೆ ಮತ ಹಾಕು ಇಲ್ಲದಿದ್ದರೆ ನಿನಗೆ ನಿನ್ನ ಮಗಳು ಸಿಗುವುದಿಲ್ಲ" ಎಂದು ಹೆದರಿಸಿದ. ಹೇಗೋ ಪೋಲಿಸರಿಗೆ ವಿಷಯ ತಿಳಿಸಿ ಇಬ್ಬರೂ ಪಾರಾದರು.
ಅಮೆರಿಕಾದಲ್ಲಿ ಸ್ವಾಮಿಯವರಿಗೆ ಅನೇಕ ಗೆಳೆಯರು ದೊರೆತರು. ಅವರಲ್ಲಿ ಟಬ್ ದಂಪತಿಗಳು ಒಬ್ಬರು. ಬಾಸ್ಟನ್ ಗೆ ಬಂದ ಮೇಲೆ ಸ್ವಾಮಿಯವರಿಗೆ ಫೋನ್ ಕರೆಯೊಂದು ಬಂದಿತು." ನಾನು ಟಬ್ ನಿನ್ನನ್ನು ನೋಡಲು ಬರುತ್ತಿದ್ದೇನೆ" ಎನಲು ನಿದ್ದೆಯಲ್ಲಿದ್ದ ಸ್ವಾಮಿಯವರಿಗೆ ಮನೆಯೊಡತಿ ಸ್ನಾನದ ಟಬ್ ಕೊಡುತ್ತೇನೆ ಎಂದು ಹೇಳಿರಬೇಕು ಎಂದುಕೊಂಡರು. ಆದರೆ ಅಮೆರಿಕನ್ನರ ಹೆಸರುಗಳು ಇದೇ ರೀತಿಯಿವೆ ಎಂದು ಯಾರೋ ನೋಡಲು ಬರುತ್ತಿರಬೇಕು ಎಂದುಕೊಂಡರು. ಬಂದ ಟಬ್ ಇವರನ್ನು ನೋಡಿ" ನೀನು ನನ್ನ ಸ್ವಂತ ಮಗನಂತೆ ಇದ್ದೀಯ ನಾನು ನಿನಗೆ ತಂದೆ, ಮಿಸೆಸ್ ಟಬ್ ನಿನ್ನ ತಾಯಿಯಂತೆ" ಎಂದರು. ಟಬ್ ದಂಪತಿಗಳು ಇವರನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಜೊತೆಯಲ್ಲಿ ಕರೆದುಕೊಂಡು ಹೋದರು. ಒಮ್ಮೊಮ್ಮೆ ಟಬ್ ನ ಮರೆಗಳಿತನದಿಂದ ಆ ದಂಪತಿಗಳಲ್ಲಿ ಕಲಹ ನಡೆಯುತ್ತಿತ್ತು ಸ್ವಾಮಿಯವರು ಮೂಕಪ್ರೇಕ್ಷಕರಂತೆ ಇರುತ್ತಿದ್ದರು.
ಕ್ರಿ.ಶ 1620 ರಲ್ಲಿ ಅಮೆರಿಕನ್ ಸಂಸ್ಕೃತಿ ಪ್ರಾರಂಭವಾಯಿತು. ಚರ್ಚ್ ಆಫ್ ಇಂಗ್ಲೆಂಡ್ ನ ಮತಸಂಪ್ರದಾಯವನ್ನು ಒಪ್ಪದ ಹಲವು ಮಂದಿ "ಇಂಡಿಪೆಂಡೆಂಟ್"ಎಂಬ ಪಂಗಡವನ್ನು ಕಟ್ಟಿಕ್ಕೊಂಡು 'ಮೇ ಫ್ಲವರ್' ಎಂಬ ಹಡಗಿನಲ್ಲಿ ಅಮೇರಿಕಾಕ್ಕೆ ಬಂದು ಪ್ಲೀಮತ್ ಎಂಬಲ್ಲಿ ನೆಲೆಸಿದರು. ಇವರುಗಳೇ ಅಮೆರಿಕನ್ ಸಂಸ್ಕೃತಿಯ ಮಾತಾಪಿತೃಗಳು. ಅಂದೇ ಅಮೆರಿಕಾದ ಸಂಸ್ಕೃತಿಯ ಆರಂಭ ಎನ್ನಬಹುದು. ಇವರನ್ನು ಮೇ ಫ್ಲವರ್ ಮನೆತನದವರು ಎನ್ನುತ್ತಾರೆ. ಇವರು ಹಠಮಾರಿತನ, ಪ್ರತಿಷ್ಠೆ, ದುರಹಂಕಾರಗಳಿ ಗೆ ಹೆಸರಾದವರು. ಇವರನ್ನು ಹದಿನಾರಾಣೆ ಬಾಸ್ಟೋನಿಯರ್ ಎನ್ನುತ್ತಾರೆ. ಇವರು ಇತರರ ಜೊತೆ ಬೆರೆಯುವುದಿಲ್ಲ. ಈ ಅನುಭವ ಸ್ವಾಮಿಯವರಿಗೂ ಆಗಿದೆ. ಒಮ್ಮೆ ಇವರು ಮನೆಗೆ ಹಿಂತಿರುಗಿ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಅಲ್ಲೇ ವಯಸ್ಸಾದ ಮಹಿಳೆಯೊಬ್ಬಳು ಕುಳಿತ್ತಿದ್ದಳು. ಇವರು ಆಕೆಯನ್ನು ಬಸ್ಸಿನ ಬಗ್ಗೆ ಕೇಳಿದಾಗ ಆಕೆ ಉತ್ತರಿಸದೆ "ಎದುರು ಅಂಗಡಿಗೆ ಹೋಗಿ ಮ್ಯಾಪ್ ತೆಗೆದುಕೊಂಡು ನಿನ್ನ ಸಂಶಯವನ್ನು ನಿವಾರಿಸಿಕೋ" ಎಂದಳು.
ಕ್ರಿ.ಶ 1620 ರಲ್ಲಿ ಅಮೆರಿಕನ್ ಸಂಸ್ಕೃತಿ ಪ್ರಾರಂಭವಾಯಿತು. ಚರ್ಚ್ ಆಫ್ ಇಂಗ್ಲೆಂಡ್ ನ ಮತಸಂಪ್ರದಾಯವನ್ನು ಒಪ್ಪದ ಹಲವು ಮಂದಿ "ಇಂಡಿಪೆಂಡೆಂಟ್"ಎಂಬ ಪಂಗಡವನ್ನು ಕಟ್ಟಿಕ್ಕೊಂಡು 'ಮೇ ಫ್ಲವರ್' ಎಂಬ ಹಡಗಿನಲ್ಲಿ ಅಮೇರಿಕಾಕ್ಕೆ ಬಂದು ಪ್ಲೀಮತ್ ಎಂಬಲ್ಲಿ ನೆಲೆಸಿದರು. ಇವರುಗಳೇ ಅಮೆರಿಕನ್ ಸಂಸ್ಕೃತಿಯ ಮಾತಾಪಿತೃಗಳು. ಅಂದೇ ಅಮೆರಿಕಾದ ಸಂಸ್ಕೃತಿಯ ಆರಂಭ ಎನ್ನಬಹುದು. ಇವರನ್ನು ಮೇ ಫ್ಲವರ್ ಮನೆತನದವರು ಎನ್ನುತ್ತಾರೆ. ಇವರು ಹಠಮಾರಿತನ, ಪ್ರತಿಷ್ಠೆ, ದುರಹಂಕಾರಗಳಿ
ಹೀಗೆ ಸ್ವಾಮಿಯವರು ತಮ್ಮ ವಿದೇಶಿ ಅನುಭವವನ್ನು ನವಿರಾದ ಹಾಸ್ಯದಲ್ಲಿ ಹೇಳಿದ್ದಾರೆ. ಹಾಸ್ಯಜೀವಿಯಾದ ಇವರು ತಮ್ಮ ಬರವಣಿಗೆಯಲ್ಲೂ ಹಾಸ್ಯವನ್ನು ತರುತ್ತಿದ್ದರು. ಇವರ 'ಹಸುರು ಹೊನ್ನು', 'ಪ್ರಾಧ್ಯಾಪಕನ ಪೀಠದಲ್ಲಿ', 'ತಮಿಳು ತಲೆಗಳ ನಡುವೆ', 'ಕಾಲೇಜುರಂಗ' ಮೊದಲಾದ ಕೃತಿಗಳು ನಮ್ಮ ಅರಿವಿಲ್ಲದೇ ಓದಿಸಿಕೊಂಡು ಹೋಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ