ಈ ಪ್ರಯಾಣದಲ್ಲಿ ನಾವೆಲ್ಲ ಮುಖಾಮುಖಿಯಾಗುತ್ತೇವೆ.. ಪರಿಚಿತರಾಗು ತ್ತೇವೆ. ಸಮಾನ ಮನಸ್ಕತೆಯೋ, ಸಂವೇದನೆಗಳ ಪ್ರಭಾವವೋ, ಮತ್ತೇನು ಕಾರಣವೋ ಮಿತ್ರರೂ, ಆತ್ಮೀಯರೂ ಆಗಬಹುದು. ಕೆಲವರು ಸಿಕ್ಕಾಗ ನಾಲ್ಕು ಮಾತು, ಬೊಗಸೆ ನಗು ಹಂಚಿಕೊಳ್ಳಬಹುದು. ಮನಸ್ಸು, ಸಮಯ ಅನುಕೂಲಿಸಿದಾಗ ಪರಸ್ಪರ ಮೆಸೇಜುಗಳೂ ಹರಿದಾಡಬಹುದು.(ಆರೋಗ್ಯಕರ ಸಂದೇಶಗಳೂ ಇರುತ್ವೆ!!) ಬದುಕು ಇದೆಲ್ಲದಕ್ಕಿಂತ ದೊಡ್ಡದಲ್ವ!? ಮಾತು ಮೌನವಾಗತ್ತೆ.. ದುಃಖಗಳು ಶಕುನ ಹಾಡುತ್ವೆ! ಕ್ರಿಯಾಶೀಲ ಮನಸ್ಸಿನೊಳಗೊಬ್ಬ ಸೋಮಾರಿಯಪ್ಪನೋ, ಸೋಮಾರಿಯವ್ವನೋ ನೆಲೆ ನಿಲ್ತಾರೆ!! ಗುಂಪು ರೇಜಿಗೆ ಅನ್ನಿಸ್ತವೆ...ಇನ್ಬಾಕ್ಸ್ ಇಣುಕೋದು ಬೇಡ ಅನ್ಸತ್ತೆ! ಕಮೆಂಟುಗಳು ಅಸಮಾಧಾನ ತರಿಸ್ತವೆ! ಒಂದು ಮೌನದ ಗೆರೆ ಹಾದುಹೋಗತ್ತೆ.
ಕಾಡೋದು ಇದ್ಯಾವುದೂ ಅಲ್ಲ, ಆತ್ಮೀಯರಾದವರ ಮಧ್ಯೆಯೂ ಒಂದು ಮೌನ ಸುಳಿದಿರುತ್ತದೆ ಅಂತಿಟ್ಕೊಳ್ಳೋಣ. ಅಂಥದ್ದೊಂದು ಗೆಳೆತನದ ಮಧ್ಯೆ ಮತ್ತಾರೋ ಇಣುಕಿ 'ನೀವು ಮುಂಚಿನಂತಿಲ್ಲವಾ!? ಸಿಟ್ಟಾ? ಯಾರದ್ದು ತಪ್ಪು?ಹೀಗೇಕಾಯ್ತು? ಓ,ಅದಕ್ಕೇನಾ ಅಂತಹ ಸ್ಟೇಟಸ್ (ಸ್ಟೇಟಸ್ ಹಾಕಿದವರಿಗೂ ಆ ಅರ್ಥದ ಕಲ್ಪನೆಗಳೇ ಬಂದಿರುವುದಿಲ್ಲ!) ಅಂತಹ ಚಿತ್ರಗಳು....ಇತ್ಯಾದಿತ್ಯಾದಿ..!!
ದುರ್ಬಲ ಮನಸ್ಸುಗಳಾದರೆ ಅದೆಲ್ಲ ನಿಜವೆಂದೇ ಭಾವಿಸಿ ಮತ್ತೇನೋ ಘಟಿಸಬಹುದು. ಅಕಾರಣವಾಗಿ ಮಧುರ ಬಂಧಗಳು ಹಳಸಲೂಬಹುದು.
ಯಾರೂ ಯಾರ ಆಸ್ಥಾನದಲ್ಲಿಯೂ ಗೊತ್ತಿಲ್ಲದ್ದನ್ನು ಹೇಳುವ ಅಥವಾ ಇರುವುದನ್ನು ತಿರುಚಿ ಸಾರುವ ಕೆಲಸ ಮಾಡಬಾರದು ಅನ್ನುವುದನ್ನು ನಮಗೆ ಯಾರು ಹೇಳಿಕೊಡಬೇಕು!?
ಗೆರೆಯನ್ನು ನಾವು ನಾವೇ ಅಳಿಸಿಕೊಂಡು ಮತ್ತದೇ ಪ್ರೀತಿಯ ಪರಿಮಳದ ಹಾಡ ದಿಕ್ಕು ದಿಕ್ಕಿಗೆ ಚೆಲ್ಲಬೇಕು!!
ಮತ್ತೂ ಮನುಷ್ಯರು ಗೆರೆ ಅಳಿಸುವ ,ಗೋಡೆ ಕೆಡವುವ ಕ್ರಿಯೆಯನ್ನಷ್ಟೇ ಮಾಡಬೇಕು!!
ಏನಂತೀರಿ....!?
- ರಂಗಮ್ಮ ಹೊದೇಕಲ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ