Pages

ಸೂಕ್ತಿಗಳು



1. “ಒಳ್ಳೆಯ ಸರ್ಕಾರವೆಂದೂ ಸ್ವ- ಸರ್ಕಾರಕ್ಕೆ ಪರ್ಯಾಯವಲ್ಲ.” – ದಯಾನಂದ ಸರಸ್ವತಿ

2. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು. ಅದನ್ನು ನಾನು ಪಡದೇ ತೀರುತ್ತೇನೆ .”– ತಿಲಕ್
3. “ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ.” - ನೇತಾಜಿ
4. “ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದೇ ನಮ್ಮ ಗುರಿ.” - ಗಾಂಧೀಜಿ
5. “ರಾಜಕೀಯ ಹಕ್ಕುಗಳೆಂದೂ ಭಿಕ್ಷೆ ಬೇಡುವುದರಿಂದ ದೊರೆಯುವುದಿಲ್ಲ.” - ತಿಲಕ್
6. “ಜನ ಮೌನವಾಗಿದ್ದಾರೆ. ಮಾತು ಬಾರದವರ ಪ್ರತಿನಿಧಿಯಾಗುತ್ತೇನೆ.” - ಅನಿ ಬೆಸೆಂಟ್
7. “ಭಾರತ್ ಬದುಕಬೇಕಾದರೆ ವ್ಯಕ್ತಿ ಸಾಯಬೇಕು. ಇಂದು ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ನಾನು ಸಾಯಬೇಕು.” – ಮದನ್‍ಲಾಲ್ ಧಿಂಗ್ರಾ
8. “ನಾನು ಜೀವನದಲ್ಲಿ ಮಾಡಿದ ಅತ್ಯಂತ ಒಳ್ಳೆಯ ಕಾರ್ಯವೆಂದರೆ ಅದು ವಿಧವಾ ವಿವಾಹವನ್ನು ಜಾರಿಗೆ ತಂದದ್ದು.” - ವಿದ್ಯಾಸಾಗರ್
9. “ಸತಿ ಪದ್ಧತಿ ಈ ದೇಶದ ಅನಿಷ್ಟ ಪದ್ಧತಿಗಳಲ್ಲೊಂದು”.- ರಾಜಾ ರಾಮ್‍ಮೋಹನ್ ರಾಯ್ 
10. “ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಆವರಿಸಿಕೊಂಡಿರುವ ಬಂಡಾಯದ ಸ್ಫೂರ್ತಿಯ ಸಂಕೇತ ಭಗತ್ ಸಿಂಗ್. ಆ ಸ್ಫೂರ್ತಿ ಹೊತ್ತಿಸಿದ ಜ್ವಾಲೆಗಳು ಆರುವುದಿಲ್ಲ.” - ನೇತಾಜಿ.
11. “ಭಾರತವು ಬದುಕಬೇಕಾದರೆ, ವ್ಯಕ್ತಿ  ಸಾಯಬೇಕು. ಇಂದು ಭಾರತವು ಸ್ವಾತಂತ್ರ್ಯ ಹೊಂದಬೇಕಾದರೆ, ನಾನು ಸಾಯಬೇಕು.” – ಮದನ್ ಲಾಲ್ ಧಿಂಗ್ರ


- ಉಷಾಗಂಗೆ        

ಕಾಮೆಂಟ್‌ಗಳಿಲ್ಲ: