1. ಆನಿ ಬೆಸೆಂಟ್ – 1847-1933 – ಇಂಗ್ಲೆಂಡ್ ನಲ್ಲಿ ಜನನ. ಭಾರತ ಮತ್ತು ಐರ್ಲ್ಯಾಂಡ್‍ನ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿನಲ್ಲಿದ್ದಾಗಲೇ ದನಿಯೆತ್ತಿದ್ದರು. 1893ರಲ್ಲಿ ಭಾರತಕ್ಕೆ ಆಗಮಿಸಿದ ಅವರು ಥಿಯೊಸೊಫಿಕಲ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸ್ವರಾಜ್ಯಕ್ಕಾಗಿನ ರಾಜಕೀಯ ಚಳುವಳಿಯನ್ನು ಮತ್ತು ಮಹಿಳಾ ಹಕ್ಕುಗಳಿಗಾಗಿನ ಹೋರಾಟವನ್ನು ಬೆಂಬಲಿಸಿದರು. ವಾರಣಾಸಿ ಮತ್ತು ಚೆನ್ನೈನಲ್ಲಿ ಶಾಲೆಗಳನ್ನು ತೆರೆದರು. ಭಾರತ್ ಸ್ಕೌಟ್ ಮತ್ತು ಗೈಡ್ ಸಂಘಟನೆಯನ್ನು ಸ್ಥಾಪಿಸಿದರು. 1917ರಲ್ಲಿ ಕಾಂಗ್ರೆಸ್‍ನ ಕಲ್ಕತ್ತಾ ಅಧಿವೇಶನದ ಅಧ್ಯಕ್ಷರಾದರು.
2. ಡೆರೋಜಿಯೊ – 1809 – 1831 – ಇಂಗ್ಲೆಂಡಿನಿಂದ ಇಲ್ಲಿಗೆ ಆಗಮಿಸಿದ ಇವರು ‘ಯಂಗ್ ಬೆಂಗಾಲ್’ನ್ನು ಸ್ಥಾಪಿಸಿದರು. ಹಿಂದೂ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಿದರು. ಭಾರತದ ಮೇಲೆ ಇಂಗ್ಲಿಷ್‍ನಲ್ಲಿ ದೇಶಭಕ್ತಿ ಗೀತೆಯನ್ನು ರಚಿಸಿದ ಮೊದಲಿಗರು.
3. ಮಾರ್ಗರೆಟ್ ಕಸಿನ್ಸ್ – 1878-1954- ಇಂಗ್ಲೆಂಡ್ ನ ಇವರು ಭಾರತೀಯ ಮಹಿಳಾ ಚಳುವಳಿಯ ಮುಂದಾಳತ್ವ ವಹಿಸಿದ್ದರು. ಅಖಿಲ ಭಾರತೀಯ ಮಹಿಳಾ ಸಮ್ಮೇಳನವನ್ನು ಸ್ಥಾಪಿಸಿದರು. ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು ಮತ್ತು ಹಲವಾರು ಶಾಲೆಗಳನ್ನು ಆರಂಭಿಸಿದರು.
4. ನೆಲ್ಲೀ ಸೇನ್ ಗುಪ್ತಾ – 1886-1973- 1886ರ ಜನವರಿ 12ರಂದು ಕೇಂಬ್ರಿಡ್ಜ್‍ನಲ್ಲಿ ಜನಿಸಿದ ಇವರು, ಜತೀಂದ್ರಮೋಹನ್ ಸೇನ್‍ಗುಪ್ತಾರನ್ನು 1910ರಲ್ಲಿ ಮದುವೆಯಾದರು. ಅವರ ಪತಿಯ ಜೊತೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿ, 1921ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿತರಾದರು. ಚಳುವಳಿಗಳಲ್ಲಿ ತೊಡಗಿದ್ದಕ್ಕಾಗಿ ಹಲವಾರು ಬಾರಿ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾನಂತರ ಅವರು ತಮ್ಮನ್ನೇ ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
5. ಸಿಸ್ಟರ್ ನಿವೇದಿತಾ – 1867 – 1957 –ಮಾರ್ಗರೆಟ್ ನೊಬೆಲ್ ಐರ್ಲೆಂಡ್‍ನ ಡಂಕನ್ನಾನ್‍ನಲ್ಲಿ 1867ರ ಅಕ್ಟೋಬರ್ 28ರಂದು ಜನಿಸಿದರು. ಇವರು ಸ್ವಾಮಿ ವಿವೇಕಾನಂದರ ವಿಚಾರದಿಂದ ಪ್ರೇರೇಪಿತರಾಗಿ ಭಾರತಕ್ಕೆ 1896ರಲ್ಲಿ ಆಗಮಿಸಿದರು. ಭಾರತೀಯ ಮಹಿಳೆಯರನ್ನು ಜಾಗೃತಿಗೊಳಿಸಿ ಅವರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು ಶ್ರಮಿಸಿದರು. ಕಲ್ಕತ್ತಾದಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. ಅನುಶೀಲನ ಸಮಿತಿಯನ್ನು ಸೇರಿ ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದರು. 1957ರ ಅಕ್ಟೋಬರ್ 7ರಂದು ನಿಧನ ಹೊಂದಿದರು. 6. ಬೆಥೂನ್ – ಇವರು ಇಂಗ್ಲಿಷ್ ಶಿಕ್ಷಣ ತಜ್ಞರಾಗಿದ್ದರು. ಈಶ್ವರಚಂದ್ರ ವಿದ್ಯಾಸಾಗರರ ಜೊತೆಗೂಡಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದರು. ಹೆಣ್ಣುಮಕ್ಕಳಿಗಾಗಿ ಶಾಲೆಯನ್ನೂ ತೆರೆದರು.
- ಅಶ್ವಿನಿ ವಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ