Pages

ಕವನ: "ಕ್ಷಣಭಂಗುರ ಹನಿಯೊಂದರಲಿ"

ಚಿತ್ರ ಕೃಪೆ: ಮಂಜುನಾಥ್ ಎ  ಎನ್

ಕಣ್ರೆಪ್ಪೆ ಮಿಟುಕಿದಷ್ಟೇ ಕ್ಷಣಿಕ
ತುಂತುರು ಹನಿ ಅಸ್ತಿತ್ವ.

ಮುತ್ತಿನಂತೆ ಹನಿ ಮೂಡುವುದು
ಬರಿ ಭೌತಿಕ ಆಕಸ್ಮಿಕ.
ಮೂಡಿ ಮಿನುಗಿದ ಆನಂತರ
ಒಡೆವುದದು ಅನಿವಾರ್ಯ.

ಮೂಡುವಲ್ಲಿ ಮುಗ್ಧ ನಗುವು,
ಬೀಳುವಲ್ಲಿ ಭವ್ಯ ಬೈರಾಗಿ,
ಬಿದ್ದು ಒಡೆಯುವಲ್ಲಿ ಬುದ್ಧನಂತೆ
ಪ್ರಶಾಂತ ಪ್ರಕಾಶಮಾನ! 

ಕ್ಷಣಭಂಗುರ ಹನಿಯೊಂದರಲಿ
ಚಿತ್ರಿಸಿಹಳಾ ಪ್ರಕೃತಿ
ಸಮಚಿತ್ತದ ಸಮ್ಯಕ ಚಿತ್ರಣ,
ಸತ್ಯದ ಅನಾವರಣ!

ಮಂಜುನಾಥ್ ಎ  ಎನ್

ಕಾಮೆಂಟ್‌ಗಳಿಲ್ಲ: