ಚಿತ್ರ ಕೃಪೆ: http://community.pencils.com |
ನಾ ಹುಟಿದಾಗ ಅಮ್ಮನಂದು
ದುಃಖಿಸಿದಳು ಬಹಳ
ನನ್ನ ಜನ್ಮದಾತನಂತು
ಬರಲೆ ಇಲ್ಲ ನೋಡಲು
ಬೆಳೆಯುತ್ತಲೆ ಹೇಳಿದರೆಲ್ಲರೂ
ಹೆಣ್ಣು ಮಗಳು ನೀನು
ತಗ್ಗಿಬಗ್ಗಿ ನಡೆಯಬೇಕು
ನಗಲೆ ಬಾರದು ನೀನು
ನಕ್ಕರೆ ನೋಡುವರೆಲ್ಲರು
ಅತ್ತರೂ ದನಿ ಕೇಳಬಾರದು
ಮದುವೆಯಾದ ಮೇಲೆ
ಅತ್ತೆಮಾವರ ಸೇವೆ ಮಾಡಬೇಕು
ಮನೆಯ ಬೆಳಗಬೇಕು
ವಿರಾಮವಿಲ್ಲದೆಯೇ ದುಡಿಯಬೇಕು
ಗೆಳತಿ ಹೇಳಿದಳು,
ನಿನಗಾಗಿ ಸ್ವಲ್ಪ ಸಮಯವಿರಲಿ
ಆರೋಗ್ಯದ ಕಡೆ ಗಮನವಿರಲಿ
ನೀ ಸಂತೋಷದಿಂದಿದ್ದರೆ ತಾನೆ
ನೆಮ್ಮದಿ ತಾಣವಾಗುವುದು ಮನೆ
ನಾ ಕೇಳಿದೆ,
ಹುಟ್ಟುವಾಗ ಬೇಡದಾದೆ
ಬೆಳೆಯುತ್ತಾ ದನಿ ಇಲ್ಲದಾದೆ
ಸ್ವಚ್ಛಂದವಾಗಿ ಓಡಾಡದಾದೆ
ಸ್ವತಂತ್ರವಾಗಿ ಕೆಲಸ ಮಾಡದಾದೆ
ನನಗೂ ನನ್ನ ಜಗತ್ತು ಇಲ್ಲವಾಯಿತಲ್ಲ
ನನಗೂ ಕನಸುಗಳಿಲ್ಲವಾಯಿತಲ್ಲ
ನಾ ಹೀಗೆ ಇದ್ದು ಬಿಟ್ಟರೆ
ಬದುಕ್ಕಿದ್ದೂ ಸತ್ತಂತಲ್ಲವೆ
ಕನಸ ನನಸಾಗಿಸಲು
ನಾ ಬದುಕಬೇಕು
ನಾ ಬಾಳಿ ತೋರಿಸಬೇಕು
ದುಃಖಿಸಿದಳು ಬಹಳ
ನನ್ನ ಜನ್ಮದಾತನಂತು
ಬರಲೆ ಇಲ್ಲ ನೋಡಲು
ಬೆಳೆಯುತ್ತಲೆ ಹೇಳಿದರೆಲ್ಲರೂ
ಹೆಣ್ಣು ಮಗಳು ನೀನು
ತಗ್ಗಿಬಗ್ಗಿ ನಡೆಯಬೇಕು
ನಗಲೆ ಬಾರದು ನೀನು
ನಕ್ಕರೆ ನೋಡುವರೆಲ್ಲರು
ಅತ್ತರೂ ದನಿ ಕೇಳಬಾರದು
ಮದುವೆಯಾದ ಮೇಲೆ
ಅತ್ತೆಮಾವರ ಸೇವೆ ಮಾಡಬೇಕು
ಮನೆಯ ಬೆಳಗಬೇಕು
ವಿರಾಮವಿಲ್ಲದೆಯೇ ದುಡಿಯಬೇಕು
ಗೆಳತಿ ಹೇಳಿದಳು,
ನಿನಗಾಗಿ ಸ್ವಲ್ಪ ಸಮಯವಿರಲಿ
ಆರೋಗ್ಯದ ಕಡೆ ಗಮನವಿರಲಿ
ನೀ ಸಂತೋಷದಿಂದಿದ್ದರೆ ತಾನೆ
ನೆಮ್ಮದಿ ತಾಣವಾಗುವುದು ಮನೆ
ನಾ ಕೇಳಿದೆ,
ಹುಟ್ಟುವಾಗ ಬೇಡದಾದೆ
ಬೆಳೆಯುತ್ತಾ ದನಿ ಇಲ್ಲದಾದೆ
ಸ್ವಚ್ಛಂದವಾಗಿ ಓಡಾಡದಾದೆ
ಸ್ವತಂತ್ರವಾಗಿ ಕೆಲಸ ಮಾಡದಾದೆ
ನನಗೂ ನನ್ನ ಜಗತ್ತು ಇಲ್ಲವಾಯಿತಲ್ಲ
ನನಗೂ ಕನಸುಗಳಿಲ್ಲವಾಯಿತಲ್ಲ
ನಾ ಹೀಗೆ ಇದ್ದು ಬಿಟ್ಟರೆ
ಬದುಕ್ಕಿದ್ದೂ ಸತ್ತಂತಲ್ಲವೆ
ಕನಸ ನನಸಾಗಿಸಲು
ನಾ ಬದುಕಬೇಕು
ನಾ ಬಾಳಿ ತೋರಿಸಬೇಕು
- ಗಿರಿಜಾ ಕೆ ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ