Pages

ಶಿಕ್ಷಣದ ಬಗ್ಗೆ ಸಮಾಜ ಸುಧಾರಕರ ಮತ್ತು ಸ್ವಾತಂತ್ರ್ಯ ಯೋಧರ ಅಭಿಪ್ರಾಯಗಳು


1. “ಅಜ್ಞಾನಿ ಮತ್ತು ಅನಕ್ಷರಸ್ಥ ರಾಷ್ಟ್ರವೆಂದು ಯಾವುದೇ ಸಾಮಾಜಿಕ ಪ್ರಗತಿಯನ್ನೂ ಸಾಧಿಸಲು      ಸಾಧ್ಯವಿಲ್ಲವೆಂಬುದನ್ನು ಮತ್ತು ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ ಎಂಬುದು ನಿರ್ವಿವಾದ”. – ಗೋಖಲೆ
2. “ಸುದೀರ್ಘ ಚಿಂತನೆ ನಂತರ ನಮ್ಮ ತಾಯ್ನಾಡಿನ ಮುಕ್ತಿ ಇರುವುದು ಶಿಕ್ಷಣದಲ್ಲಿ, ಜನತೆಯ ಶಿಕ್ಷಣದಲ್ಲಿ ಎಂಬ ತೀರ್ಮಾನಕ್ಕೆ ಬಂದಿದ್ದೇವೆ.” – ತಿಲಕ್
3. “ಶಿಕ್ಷಣವೆಂದರೆ ನಿಮ್ಮ ಮೆದುಳಿನಲ್ಲಿ ಸೇರಿಸಲಾಗುವ ಅಥವಾ ಮೆದುಳಿಗೆ ಹಾಕಲಾಗುವ ಮಾಹಿತಿಯ ಮೊತ್ತವಲ್ಲ, ಮತ್ತು ಅದು ಜೀವನದುದ್ದಕ್ಕೂ ಜೀರ್ಣವಾಗದೆ ಗೊಂದಲವನ್ನು ಸೃಷ್ಠಿಸುವುದಲ್ಲ, ಜೀವನ ಕಟ್ಟುವ, ಮನುಷ್ಯನನ್ನಾಗಿಸುವ ಚಾರಿತ್ರ್ಯವನ್ನು ಬೆಳೆಸುವ, ವಿಚಾರಗಳ ಸಂಗ್ರಹ ಹೌದು. ” – ವಿವೇಕಾನಂದ.
4. “ದೀಪವೊಂದು ತಾನು ಉರಿದು ಬೆಳಗದೆ ಇನ್ನೊಂದು ದೀಪವನ್ನು ಬೆಳಗಲಾರದು. ಅದೇ ರೀತಿ ಶಿಕ್ಷಕನು ತಾನು ಹೆಚ್ಚು ಹೆಚ್ಚು ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ ಹೊಸ ಹೊಸ ಜ್ಞಾನವನ್ನು ಸಂಪಾದಿಸಿ ತನ್ನ ಶಿಷ್ಯರ ಮೂಲಕ ಸಮಾಜಕ್ಕೆ ವರ್ಗಾಯಿಸದಿದ್ದರೆ, ಅಂತಹ ಶಿಕ್ಷಕ ನಿಷ್ಪ್ರಯೋಜಕ”. – ರವೀಂದ್ರನಾಥ ಠಾಗೂರ್
5. “ಶಾಲೆ, ಕಾಲೇಜು, ನ್ಯಾಯಾಲಯ ಮತ್ತು ಶಾಸನಸಭೆಗಳು ಜಾತಿ, ವರ್ಣ ಮತ್ತು ಕುಲದ ಬೇಧಭಾವವಿಲ್ಲದೆ ಎಲ್ಲರಿಗೂ ಪ್ರವೇಶಿಸಲಾಗುವ ಮತ್ತು ಪೂಜಿಸುವಂತಹ ಮುಕ್ತ ದೇವಾಲಯಗಳಾಗಲು ಇರುವ ಎಲ್ಲಾ ಸಾಮಾಜಿಕ ಅಡೆತಡೆಗಳನ್ನು ತೆಗೆದುಹಾಕಬೇಕು.” - ಲಾಲಾ ಲಜಪತ್ ರಾಯ್ 
೬. ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದ್ದರೆ, ನೀನು ಓದಿದ್ದು ವ್ಯರ್ಥ -
ಪ್ರೇಮ್ ಚಂದ್ 
೭. ಕೌಶಲ್ಯ ಮಾಧ್ಯಮದ ಮೂಲಕ ಮಕ್ಕಳನ್ನು ದೈಹಿಕವಾಗಿ, ಬೌದ್ಧಿಕವಾಗಿ ಹಾಗೂ ನೈತಿಕವಾಗಿ ಬೆಳೆಸುವುದೇ ನಿಜವಾದ ಶಿಕ್ಷಣ - ಗಾಂಧೀಜಿ 
೮. ಶಿಕ್ಷಣವೆಂದರೆ ಮನಸ್ಸು ದೇಹ ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ - ಹರ್ಡೆಕರ್  ಮಂಜಪ್ಪ   

   - ಲಕ್ಷ್ಮಿ ವಿ        

ಕಾಮೆಂಟ್‌ಗಳಿಲ್ಲ: