ಗೋಡೆ ಕೆಡವಬೇಕಣ್ಣ
ನಾವು ಗೋಡೆ ಕೆಡವಬೇಕಣ್ಣ||2||
ಜಾತಿ-ಜಾತಿಗಳ ನಡುವಿನ ಗೋಡೆ
ಧರ್ಮ-ಧರ್ಮಗಳ ನಡುವಿನ ಗೋಡೆ
ಭಾಷೆ- ಭಾಷೆಗಳ ನಡುವಿನ ಗೋಡೆ
ಬೇಗ ಕೆಡವಬೇಕಣ್ಣ
ಈ ಗೋಡೆ ಕೆಡವಬೇಕಣ್ಣ
ಮೇಲು-ಕೀಳು ಎನ್ನುವ ಗೋಡೆ
ಬಡವ-ಬಲ್ಲಿದ ಎನ್ನುವ ಗೋಡೆ
ಗಂಡು-ಹೆಣ್ಣು ಎನ್ನುವ ಗೋಡೆ
ಕುಟ್ಟಿ ಕೆಡವಬೇಕಣ್ಣ
ಈ ಗೋಡೆ ಕೆಡವಬೇಕಣ್ಣ
ತಮ್ಮ ಬೇಳೆಯನು ಬೇಯಿಸಿಕೊಳ್ಳಲು
ಕೆಲವು ಕಳ್ಳರು ಕಟ್ಟುವ ಗೋಡೆ
ನಾವು ನೀವು ಒಂದಾಗದೆ ಇರಲು
ನಮ್ಮಯ ನಡುವೆ ಕಟ್ಟಿದ ಗೋಡೆ
ಒಡೆದು ಕೆಡವಬೇಕಣ್ಣ
ಈ ಗೋಡೆ ಕೆಡವಬೇಕಣ್ಣ
ಊರು ಎನ್ನದೆ, ಕೇರಿ ಎನ್ನದೆ
ಮೇಲು ಎನ್ನದೆ,ಕೀಳು ಎನ್ನದೆ
ಒಡೆದು ಹೋದ ಜನರೆಲ್ಲರು ಸೇರಿ
ನಮ್ಮ ಒಗ್ಗಟ್ಟು ಮುರಿಯೋ ಹುಳಗಳ
ಹೊಸಕಿ ಹಾಕಬೇಕಣ್ಣ,ಇವರ ಗೋರಿ ಕಟ್ಟಬೇಕಣ್ಣ
ಗೋರಿ ಕಟ್ಟಬೇಕಣ್ಣ, ದುರುಳರ ಗೋರಿ ಕಟ್ಟಬೇಕಣ್ಣ
- ರಘುನಂದನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ