ನೊಂದ ಜೀವಿಯ ಕಥೆಯ
ಪಡಿಯಚ್ಚು ನೀನು
ಜೀನ್ ವಾಲ್ ಜೀನ್ ನಾಗಿ
ನೀನುಳಿಯಲಿಲ್ಲ!
ಉಳಿಯದೇ ಅಚ್ಚಳಿಯದೇ
ಆದ ಸಾವುಗಳೆಷ್ಟೋ!
ರಣಹದ್ದಿಗೂ ಕೂಡ
ಕಂಬನಿಯ ನೋವು!!
ನೀರವದ ಕತ್ತಲೆಯೊಳು
ಮೋಡಿ(ದಿ) ಮಾತದು ಸಾಕು
ವಜ್ರದಾ ಪ್ರಖರತೆಯು
ಕಣ್ತೆರೆಯಲಿ
ಭೂತಾಟ್ಟಹಾಸದಿ
ಮೆರೆದಂತ ರಕ್ಕಸರೆ
ನಿಮಗಿದೋ ನಮ್ಮ
ಧಿಕ್ಕಾರವಿರಲಿ
ದಾನವತ್ವವ ನಾವು
ಮೆಟ್ಟಿ ನಡೆಯಲು ಮುಂದೆ
ಮಧು-ಮಲ್ಲಿಕಾ
ನಮ್ಮ ಜೊತೆಗೂಡಲಿ
- ಸಂಧ್ಯಾ ಪಿ ಯಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ