Pages

ಕವನ - ಅಂತರರಾಷ್ಟ್ರೀಯ ಮಹಿಳಾ ದಿನ


ಬಂದಿದೆ ಮಾರ್ಚ್ ಎಂಟು ಮತ್ತೆ
ನೆನಪಿಸಲು ನಮ್ಮೆಲ್ಲರಿಗೆ
ನಮ್ಮ ಹೋರಾಟದಿತಿಹಾಸವ
ನಂನಮ್ಮ ಹೊಣೆಗಾರಿಕೆಯ

ಕಳೆದವೆರಡು ಶತಮಾನಗಳು
ಆರಂಭವಾಗಿ ಚಳುವಳಿ
ಬೀದಿಗಿಳಿದರು ಸ್ತ್ರೀಯರಂದು
ತಮ್ಮ ಹಕ್ಕು ಸ್ವಾತಂತ್ರ್ಯಗಳಿಗಾಗಿ


ಹಲವು ಖಂಡ, ದೇಶಗಳಲಿ
ನಡೆದವು ಹೋರಾಟಗಳು
ಮತದ ಹಕ್ಕು, ದುಡಿವ ಹಕ್ಕು
ನಾನು ನಾನಾಗಿ ಬಾಳೊ ಹಕ್ಕು


ಎಲ್ಲ ಮಹಿಳೆಯರ ಕೂಡಿಸಲು 
ವಿಶ್ವ ಒಕ್ಕೂಟವನ್ನು ಸ್ಥಾಪಿಸಲು
ಹೊತ್ತರು ಹೊಣೆಗಾರಿಕೆಯನು
ರೋಸಾ, ಕ್ಲಾರಾ ಎಂಬಿಬ್ಬರು


100 ಜನರ ಸಭೆ ಸೇರಿತು
ಗೊತ್ತುವಳಿಯ ಅಂಗೀಕರಿಸಿತು
ಮಾರ್ಚ್ 8 – ಮಹಿಳಾ ದಿನವಾಯಿತು
1911ರಿಂದ ಆಚರಣೆ ಶುರುವಾಯಿತು

ಘೋಷಣೆಗಳು ಬೇಕಾದಷ್ಟು
ಹೋರಾಟಗಳು ಬಹಳಷ್ಟು
ಮತಚಲಾಯಿಸುವ ಹಕ್ಕು ಬೇಕು
8 ಘಂಟೆ ಮಾತ್ರ ದುಡೀಬೇಕು

ದೊರೆತವು ಹಲವು, ಪಡೆದೆವು ಕೆಲವು
ಸ್ವಾತಂತ್ರ್ಯ , ಸಮಾನತೆ ಸಿಕ್ಕವು
ಆದರಿನ್ನೂ ಹೋರಾಟ ಬಾಕಿಯಿದೆ
ಸಾಧಿಸಬೇಕಾದದ್ದು ಅಪಾರವಿದೆ

ಎಲ್ಲರಿಗೂ ಶಿಕ್ಷಣ, ಉದ್ಯೋಗ ಬೇಕು
ಕೌಟುಂಬಿಕ ದೇಹ ಸ್ವಾತಂತ್ರ್ಯ ಬೇಕು
ಅತ್ಯಾಚಾರ ದೌರ್ಜನ್ಯಗಳ ವಿರುದ್ಧದ ಹಕ್ಕು
ಆತ್ಮಗೌರವಕ್ಕೆ ಚ್ಯುತಿ ಬಾರದ ಹಕ್ಕು

ಒಂಟಿ ಹೋರಾಟಕದು ಸಾಧ್ಯವಿಲ್ಲ
ಒಟ್ಟಿಗೆ ಸೇರದಿರೆ ಬದುಕಿಲ್ಲ
ಕೈಗೆ ಕೈ ಕೂಡಿಸಿದಿರೆ ಉಳಿಗಾಲವಿಲ್ಲ
ಜೊತೆಯಾಗದಿದ್ದರೆ ದಡ ಸೇರೋಲ್ಲ

ಬನ್ನಿರೆಲ್ಲಿ ಗೆಳತಿಯರೇ 
ಕಟ್ಟೋಣ ಹೋರಾಟ
ನಾವೆಲ್ಲರೂ ನೊಂದವರು 
ದನಿಗೂಡಿಸಿ ಹೆಜ್ಜೆ ಹಾಕೋಣ

ಸಂಕಲೆಗಳ ಮುರಿಯುವ ಹೋರಾಟ
ವಿಮುಕ್ತಿ ಪಯಣದ ಕಾದಾಟ
ಒಂಟಿಯಾಗಿ ಸಾಧಿಸಲು ಸಾಧ್ಯವಿಲ್ಲ
ಒಟ್ಟುಗೂಡಿಸೆಲ್ಲರ ಮುಂದೆ ಸಾಗಲೇಬೇಕಲ್ಲ
ಸುಧಾ ಜಿ  

2 ಕಾಮೆಂಟ್‌ಗಳು:

sreelakshmi ಹೇಳಿದರು...

ಸುಧಾ ಅವರೇ.. ಬಹಳ ಚೆನ್ನಾಗಿದೆ... Informative ಆಗಿದೆ ಕೂಡಾ...

Somashekarappa ಹೇಳಿದರು...

ತುಂಬಾ ಚೆನ್ನಾಗಿದೆ. ಕವನ ಇತಿಹಾಸವನ್ನೂ ದಾಖಲಿಸಿದೆ.