23/02/2018 ರಂದು ನಮ್ಮನ್ನಗಲಿದ
ಕರ್ನಾಟಕದ ಮಹಿಳಾ ಹೋರಾಟಗಾರ್ತಿ, ಸ್ತ್ರೀವಾದಿ ಲೇಖಕಿ,
ಪ್ರಗತಿಪರ ಚಿಂತಕಿ, ಖ್ಯಾತ ಸಾಹಿತಿ,
ನೂರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕನ್ನಡ ಪ್ರೊಫೆಸರ್ ಆದ
ಡಾ. ವಿಜಯಾ ದಬ್ಬೆಯವರಿಗೆ ಗೌರವಪೂರ್ವಕ ನಮನಗಳು
[ಇದು ಅವರ ಪ್ರಸಿದ್ಧ ಕವನ.
ಮಹಿಳಾ ಹೋರಾಟಗಳಲ್ಲಿ, ಸಭೆಗಳಲ್ಲಿ, ಕಾಲೇಜುಗಳಲ್ಲಿ, ಕಾರ್ಯಾಗಾರಗಳಲ್ಲಿ,
ಸಾವಿರಾರು ಬಾರಿ ಹಾಡಲ್ಪಟ್ಟ
ಈ ಕವನದಲ್ಲಿರುವಂತೆ ನಾವು ಬದುಕಲಾದರೆ
ಅದು ನಾವು ಅವರಿಗಾಗಿ ನೀಡಬಹುದಾದ
ನಿಜವಾದ ನಮನ]
ಮಹಿಳಾ ಹೋರಾಟಗಳಲ್ಲಿ, ಸಭೆಗಳಲ್ಲಿ, ಕಾಲೇಜುಗಳಲ್ಲಿ, ಕಾರ್ಯಾಗಾರಗಳಲ್ಲಿ,
ಸಾವಿರಾರು ಬಾರಿ ಹಾಡಲ್ಪಟ್ಟ
ಈ ಕವನದಲ್ಲಿರುವಂತೆ ನಾವು ಬದುಕಲಾದರೆ
ಅದು ನಾವು ಅವರಿಗಾಗಿ ನೀಡಬಹುದಾದ
ನಿಜವಾದ ನಮನ]
ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ ?
ಕಡಿಮೆ ಯಾರಿಗೆ ।।ತೂರಬೇಡಿ ಗಾಳಿಗೆ।।
ನಾಚಬೇಡಿ ಹೆಣ್ತನಕೆ
ತಲೆ ಎತ್ತಿ ನಿಲ್ಲಿರಿ
ನಾಚಬೇಕು ತುಳಿದವರು
ಮನುಜಾತಿಗೆ ಸೇರಿದವರು ।।ತೂರಬೇಡಿ ಗಾಳಿಗೆ।।
ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವ
ಬೆಳಕಿಗೊಮ್ಮೆ ಈಚೆ ಬಾ ಕಂಡೀತು ಜೀವನ
ಕಂಡೀತು ಜೀವನ ।।ತೂರಬೇಡಿ ಗಾಳಿಗೆ।।
ನಾನು ನೀನು ಅವಳು ಇವಳು
ಹೆಣ್ಣಾಗಿ ನೊಂದವರು
ಕೈಗೆ ಕೈ ಜೋಡಿಸೋಣ
ಹೊಸ ಜಗತ್ತು ನಮ್ಮದು (೩) ।।ತೂರಬೇಡಿ ಗಾಳಿಗೆ।।
- ಪ್ರೊ. ವಿಜಯ ದಬ್ಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ