Pages

ಪುಸ್ತಕಪ್ರೀತಿ - ಬಸವಣ್ಣನವರ ಸಾಮಾಜಿಕ ಧಾರ್ಮಿಕ ಚಳುವಳಿ ಹೀಗೆ ಸಾಗಬಹುದಿತ್ತು


ಚಂದ್ರಶೇಖರ ವಸ್ತ್ರದ ಅವರು ಬರೆದ ‘ಮಾನವತಾವಾದಿ ಬಸವಣ್ಣನವರು’ ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಬಸವಣ್ಣನವರ ಬದುಕು, ಹೋರಾಟ, ತತ್ವ ಸಿದ್ದಾಂತಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟದ್ದಾರೆ. ಬಸವಣ್ಣನವರ ಬಗ್ಗೆ ಮೇಲುಸ್ತರದಲ್ಲಿ ಕೇಳೀದ್ದೆ, ಓದಿದ್ದೆ, ನಾಡಕ ಸಿನೆಮಾಗಳನ್ನು ನೋಡಿದ್ದೆ. ಅವರಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿಸಲ್ಪಟ್ಟಿದ್ದೇನೆ ಕೂಡ. ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವುದು ಕಷ್ಟ ಸಾದ್ಯವಾದರೂ ನಿರಂತರ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಅನುಸರಿಸಬಹುದು. ಬಸವಣ್ಣನವರ ವಿಚಾರಧಾರೆ, ನಿಲುವು ಧೋರಣೆಗಳ ಕುರಿತು ಮಾತನಾಡಲು ಚೆನ್ನ, ಉಪದೇಶೀಸಲು ಅಪ್ಯಾಯಮಾನವಾಗುತ್ತದೆ. ಆದರೆ  ನಮ್ಮ ವೈಯಕ್ತಿಕ ಜೀವನದಲ್ಲಿ ಆಚರಣೆಗೆ ತರಲು ಹೊರಟರೆ ಹುಚ್ಚುತನವೆನಿಸುತ್ತದೆ. ಉದಾಹರಣೆಗೆ, ನಮ್ಮ ಮನೆಯಲ್ಲಿ ಕಳ್ಳತನವಾಗಿ ಕಳ್ಳ ಸಿಕ್ಕಿಬಿದ್ದರೆ ಅವನು ಕದಿದ್ದನ್ನು ಅವನಿಗ ಎಕೊಟ್ಟುಕಳುಹಿಸಲು ಸಾದ್ಯವೆ ? ಸಂಪತ್ತಿನ ಅಸಂಗ್ರಹ, ಬಡವರು, ದೀನದಲಿತರನ್ನು ಸಂಪೂರ್ಣವಾಗಿ ಸಮಾನರೆಂದು ಒಪ್ಪಿಕೊಳ್ಳುವ ಮನಸ್ಸು, ದೇವರಲ್ಲಿ ಅಪರಿಮಿತವಾದ ಭಕ್ತಿ, ಜಾತಿ ಬೇಧವನ್ನು ಬಿಡುವುದು ಮುಂತಾದವು ಅನುಕರಣೆಗೆ ಯೋಗ್ಯವಾದರೂ ಆಚರಿಸುವುದು ಕಷ್ಟಸಾದ್ಯ.
ಪುಸ್ತಕದಲ್ಲಿ ಅವರ ಕೊನೆಯ ದಿನಗಳ ಚಿತ್ರಣವನ್ನು ಓದಿದ ನಂತರ, ಎಲ್ಲಾ ಕಾರ್ಯಗಳನ್ನು ಹೋರಾಟದಿಂದ , ಸಂಪೂರ್ಣ ವೈಯಕ್ತಕ ಬದ್ದತೆ ಮತ್ತು ಜನ ಬೆಂಬಲದಿಂದ ಯಶಸ್ವಯಾಗಿ ನಡೆಸಿಕೊಂಡು ಹೋದವರು ಕೊನೆ ಹಂತದಲ್ಲಿ ಯಾಕೆ ಸೋತವರಂತೆ ಪರಿಸ್ಥಿಯನ್ನು ಎದುರಿಸಿ ಸುಧಾರಿಸದೆ ಪಲಾಯನಗೈದರು ಎಂಬ ಪ್ರಶ್ನೆ ನನ್ನಲ್ಲಿ ಎದ್ದಿತು. ಏನಾಯಿತೊ ಅದನ್ನು ತಡೆಯಲು ಸಾದ್ಯವಾಗುತಿರಲಿಲ್ಲವೆ ? ಮುಂದಾಲೋಚನೆ, ಮುಂಜಾಗ್ರತೆವಹಿಸಿ ಇಡೀ ಕ್ರಾಂತಿಯೆ ಕುಸಿಯುವುದನ್ನು ತಪ್ಪಿಸಲಾಗುತ್ತಿರಲಿಲ್ಲವೆ ? ಬೇರೆ ಏನು ಮಾಡಬಹುದಿತ್ತು ಅನ್ನುವುದನ್ನು ಚರ್ಚಿಸುವುದು ಈ ಲೇಖನದ ಮುಖ್ಯ ಉದ್ದೇಶ. ಬಹುಶ: ಈಗಿನ ಆಲೋಚನಾಕ್ರಮ, ಪರಿಸ್ಥಿತಿ ಮತ್ತು ದೃಷ್ಟಿಕೋನವನ್ನಿಟ್ಟುಕೊಂಡು 800 ವರ್ಷ ಹಿಂದಿನ ಪರಿಸ್ಥಿತಿಯನ್ನು ವಿಶ್ಲೇಶೀಸುವುದು ಸರಿಯಲ್ಲವೇನೋ.  ಆದರೂ ಆಗಿನ ಕಾಲದ ಅನೇಕ ವಿಚಾರ ಘಡನೆಗಳು ಈಗಲೂ ನಡೆಯುತ್ತಿರುವುದರಿಂದ ವ್ಯವಸ್ಥೆ ಪರಿಸ್ಥತಿ ಮತ್ತು ಘಟನೆಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಪರಿಶೀಲಿಸದರೆ ಹೊಸ ಸಾದ್ಯತೆಗಳನ್ನು ಹುಡುಕಬಹುದು ಅನ್ನು ಆಶಯವಷ್ಟೆ.
ಬಸವಣ್ಣನವರು ಆಗಿನ ಕಾಲಕ್ಕೆ ಸಮಾಜ ವಿರೋಧಿ ಕ್ರಾಂತಿಕಾರಕ ಕಾರ್ಯಗಳನ್ನು ಅನೇಕ ಅಡ್ಡಿ ಆತಂಕಗಳ ನಡುವೆಯೂ ನಡೆಸಿಕೊಂಡು ಹೋದರು. ಅವು ಒಂದು ವರ್ಗದ ಜನರಿಗೆ ಅಪಥ್ಯವಾಗಿದ್ದರೆ ಬಹುಜನರಿಗೆ ಅದರಲ್ಲೂ ಶೋಷಿತರಿಗೆ ಕಲ್ಯಾನವನ್ನುಂಡುಮಾಡುವಂತಿದ್ದವು. ಅವರು ಮುಖ್ಯವಾಗಿ ವಿರೋಧಿಸಿದ್ದು ಬದಲಾವಣೆ ತರಲು ಪ್ರಯತ್ನಸಿದ್ದು, ಮೂಡನಂಬಿಕೆ, ಜೀವ ವಿರೋಧಿ ಸಂಪ್ರದಾಯ, ಶಾಸ್ತ್ರ, ಸ್ತ್ರೀ ಪುರುಷರ ನಡುವಿನ ಅಸಮಾನತೆ, ಜಾತಿ ವರ್ಣ ಬೇಧ, ಹಣ ಸಂಪತ್ತಿನ ಸಂಗ್ರಹ ಹಾಗು ವರ್ಗ ಅಸಮಾನತೆ. ಜೊತೆಗೆ, ಕಾಯಕವೇ ಕೈಲಾಸ ದಯವೇ ಧರ್ಮದ ಮೂಲ, ಪ್ರತಿಯೊಬ್ಬರೂ ದುಡಿದು ಬದುಕಬೇಕು, ಅಂತರಂಗ ಶುಧ್ಧಿ, ಎಲ್ಲರೂ ಸಮಾನರು ಎಂಬ ತತ್ವಗಳನ್ನು ಸಾರಿದರು. ಈವುಗಳನ್ನು ಜಾರಿಗೆ ತರಲು ನಿರಂತರ ಪ್ರಯತ್ನ ನಡೆಸಿದರು. ಅವರನ್ನು ಸಮಾಜ ವಿಮುಖರನ್ನಾಗಿ ಮಾಡಿದ ಕಟ್ಟ ಕಡೆಯ ಘಟನೆ  ಅಂತಾರ್ಜಾತಿ ವಿವಾಹ. ಬೇರೆಲ್ಲಾ ಸುಧಾರಣೆಯನ್ನು ವಿರೋಧದನಡುವೆಯು ಒಪ್ಪಕೊಂಡ ಸಮಾಜ ವರ್ಣಸಂಕರವನ್ನು ಮಾತ್ರ ತೀವ್ರವಾಗಿ ವಿರೋಧೀಸಿತು. ಇದನ್ನು ಉಹೆ ಮಾಡಬಹುದಾಗಿದ್ದ ಬಸವಣ್ಣನವರು ಕೆಲವು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬಹುದಾಗಿತ್ತು. ಅಂದರೆ ಉಂಟಾದ ಅತ್ಯಂತ ಧಾರುಣ ಅಂತ್ಯವನ್ನು ತಡೆದು ಅವರು ಕೈಗೊಂಡ ಚಳುವಳಿಯು ಪೂರ್ಣವಾಗಿ ನಾಶಹೊಂದದೆ ನಿಧಾನಗತಿಯಲ್ಲಾದರೂ ಎಲೆಮರೆಯಲ್ಲಾದರು ಮುಂದುವರೆಯುವಂತೆ ಮಾಡಬಹುದಿತ್ತು. ಏನು ಮಾಡಬಹುದಾಗಿತ್ತು ಅನ್ನುವುದನ್ನು  ನನ್ನ ಸೀಮಿತ ವೈಯಕ್ತಿಕ ಆಲೋಚನೆಗಳೊಂದಿಗೆ ತಿಳಿಸಲು ಇಚ್ಚಿಸುತ್ತೇನೆ
- ಅಂತಾರ್ಜಾತಿ ವಿವಾಹ ನೆರವೇರಿಸಿದ ತಕ್ಷಣ ವಧೂವರರನ್ನು ಮತ್ತು ಅವರ ಕುಟುಂಬದವರನ್ನು ಸ್ವಲ್ಪ ಕಾಲದ ಮಟ್ಟಿಗೆ ಬೇರೆ ಊರಿಗೆ ಕಳುಹಿಸಿ ರಕ್ಷಿಸಬಹುದಿತ್ತು
- ರಾಜನು ಕೈಗೊಳ್ಳಬಹುದಾದ ನಿರ್ಧಾರ ಮತ್ತು ಕಾರ್ಯಗಳನ್ನು ಅಂದಾಜು ಮಾಡಿ (ಅವರು ರಾಜಾಡಳಿತದಲ್ಲಿ ಇದ್ದುದರಿಂದ) ತಮ್ಮ ಗಡಿಪಾರು ಆದೇಶ ನೀಡುವ ಮೊದಲೆ ರಾಜಿನಾಮೆ ನೀಡಿ ಹೊರಬರಬಹುದಿತ್ತು.
- ತಮ್ಮ ಬೆಂಬಲಿಗರು ಮತ್ತು ಶರಣ ಸಮೂಹದ ಜೀವ ರಕ್ಷಣೆಗೆ, ಸಾಹಿತ್ಯ ಕೃತಿಗಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕಿತ್ತು.
- ರಾಜಾಜ್ಞ್ನೆ ಮತ್ತು ವಿರೋಧಿಗಳ ಕುತಂತ್ರಗಳಿಂದ ರೋಷಗೊಂಡ ಶರಣರನ್ನು ನಿಯಂತ್ರಿಸಿ ಅವರನ್ನು ಮೊದಲೆ ಚಳುವಳಿ ಪ್ರಚಾರಕ್ಕೆ ಬೇರೆ ಬೇರೆ ಸ್ಥಳಗಳಿಗೆ ನಿಯೋಜಿಸಬೇಕಿತ್ತು
- ತಮ್ಮ ಚಳುವಳಿ ಸಿದ್ದಾಂತ ತತ್ವಗಳನ್ನು ಭವಿಷ್ಯದ ಧೀರ್ಘಕಾಲದಲ್ಲಿ ಆಚರಣೆಂiÀಲ್ಲಿ ಉಳಿಸಿ ಬೆಳೆಸುವಂತಹÀ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕಿತ್ತು ( 800 ವರ್ಷಗಳ ನಂತರವೂ ಅವು ಉಳಿದಿವೆ ಆದರೆ ಮಾತಿಗೆ, ಉಪದೇಶಕ್ಕೆ, ರಾಜಕೀಯ ಲಭಕ್ಕಷ್ಟೆ ಬಳಸಿಕೊಳ್ಳಲಗುತ್ತಿದೆ ಆಚರಣೆಯಲ್ಲಿ ಇಲ್ಲ) 
- ಬಸವಣ್ಣನವರಿಗೆ ತುಂಬ ವಯಸ್ಸು ಆಗಿರಲಿಲ್ಲ. ಎಲ್ಲವನ್ನು ತೊರೆದು ಕೂಡಲಸಂಗಮದಲ್ಲಿ ಐಕ್ಯವಾಗುವ ಬದಲು ಸಳಾಂತರಗೊಂಡು ತಮ್ಮ ಚಳುವಳಿಯನ್ನು ಮುಂದುವರೆಸಬಹುದಿತ್ತು
ಬಹುಶ: ಹೋರಾಟ ಕ್ರಾಂತಿಗಳಲ್ಲಿ ತೊಡಗುವವರು, ಅದರ ನೇತ್ರತ್ವವನ್ನು ವಹಿಸುವವರು ತಮ್ಮ ಶ್ರಮ, ಸಮಯ, ಬೌಧ್ದಿಕ ಸಾಮಥ್ರ್ಯಗಳನ್ನು ಸಂಪೂಣಶವಾಗಿ ಧಾರೆ ಎರೆದಿರುತ್ತಾರೆ. ಅದರ ಪ್ರಖರತೆ ತೀವ್ರವಾಗಿರುವುದರಿಂದ ಕಡಿಮೆ ಅವಧಿಯಲ್ಲೆ ಕ್ಷೀಣಿಸಲಾರಂಬಿಸುತ್ತದೆ. ಕ್ರಾಂತಿಯ ಲಕ್ಷಣವೆ ಅಂತದ್ದು. ಎಷ್ಟು ಕ್ಷಿಪ್ರವಾಗಿ  ಬೆಳೆಯುತ್ತದೋ ಅಷ್ಟೇ ವೇಗದಲ್ಲಿ ಕ್ಷೀಣಿಸುತ್ತದೆ. ಆದರೆ ಅದರ ಪ್ರಭಾವ, ಪರಿಣಾಮ ಮತ್ರ ಧೀರ್ಘಕಾಳದಾಗಿರುತ್ತದೆ. ಬಸವಣ್ಣನವರ ಕ್ರಾಂತಿ 25-30 ವರ್ಷಗಳು ನಡೆದಿರಬಹುದು. ಇತಿಹಾಸದ ಕಾಲಘಟ್ಟದಲ್ಲಿ ಅದು ಅತ್ಯಂತ ಅಲ್ಪಾವಧಿ. 800 ವರ್ಷಗಳ ನಂತರವೂ ಅದು ಂಉಳಿದಿದೆ ಎಂದರೆ ಅದರೆ ಪ್ರಭಾವದ ತೀಕ್ಷಣತೆಯನ್ನು ಸೂಚಿಸುತ್ತದೆ. ಒಂದು ವೇಳೆ ಬಸವಣ್ಣನವರು ಕ್ರಾಂತಿಯನ್ನು ಇನ್ನೂ ಕೆಲವು ವರ್ಷ ಮುಂದುವರೆಸಿ ತತ್ವ ಸಿದ್ದಾಂತಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಿದಿದ್ದರೆ ಮುಂದಿನ ಶತಮಾನಗಳಲ್ಲಿ ಅವುಗಳ ಅನುಕರಣೆ ಆಚರಣೆಯ ಸಾದ್ಯತೆ ಹೆಚ್ಚುತ್ತಿತ್ತು ಎಂದು ನನ್ನ ಭಾವನೆ. ನಾನು ಹೇಳಿರುವುದೆಲ್ಲ ನನ್ನ ಅನಿಸಿಕೆಗಳಷ್ಟೆ ಅದನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ.
ಹೇಮಲತ ಎಚ್.ಎಮ್
# 79/7 ಸಣ್ಣಪ್ಪ ಮಾರ್ಗ
ಟೆಲಿಕಾಂ ಬಡಾವಣೆ
ಬೋಗಾದಿ ಮೊದಲನೆ ಹಂತ
ಮೈಸೂರು 570009
9449662032

1 ಕಾಮೆಂಟ್‌:

ರಾಜೀವ್ ಮಾಗಲ್ ಹೇಳಿದರು...

ತಮ್ಮ ವಿಶ್ಲೇಷಣೆ ತು೦ಬಾ ಸೊಗಸಾಗಿದೆ. ಒ೦ದು ರೀತಿ ಸ೦ಪೂರ್ಣ ಅಧ್ಯಯನ ಮಾಡಿದ ಹಾಗೆ ತೋರುತ್ತೆ.
ಈ ರೀತಿ ಗಮನ ಹರಿಸಿ ವಿಮರ್ಶೆ ಮಾಡುವುದು ಅಪರೂಪ.ಶುಭವಾಗಲಿ.