ಹುಟ್ಟುತ್ತಲೇ ಬೇಡದವಳಾಗಿ
ಬೆಳೆದ ನನಗೆ ನಾನೆ ಆಸರೆ
ಯಾರೇಕೆ ಬೇಕು ಬಾಳಿಗಾಸರೆ
ಒಡಹುಟ್ಟಿದವರು ದೂರಾದರು
ಕೈಹಿಡಿದವರು ದೂರಿದರು
ಆಪ್ತಮಿತ್ರರು ಹೊರನಡೆದರು
ಒಬೊಂಟಿಗಳಾದೆ,
ನನಗೆ ನಾನೆ ಆಸರೆಯಾದೆ
ಬದುಕೆಂಬ ಮಹಾಪ್ರವಾಹದಿ
ನೂರಾರು ಸಂಕಷ್ಟಳೆದುರಾಗಲು
ದಿಕ್ಕೆಟ್ಟು ಚಿಂತಿತಳಾದೆ
ಪ್ರವಾಹಕ್ಕೆ ಸಿಕ್ಕಿ ಮುಳುಗುತ್ತಿರಲು
ಈಜಿ ಎದ್ದು ಬಂದು ಸೇರುವೆನೆ
ಎಂಬನುಮಾನಗಳು ಮೂಡಲು
ಬೇಕಲ್ಲವೇ ಬಾಳಿಗಾಸರೆ ಎಂದೆನಿಸಿತು ಒಮ್ಮೆ
ಆದರೂ,
ಎಲ್ಲರೂ ಬೇಗುದಿಗೆ ಸರಿದಾಗ
ಯಾರು ಇಲ್ಲದಿರುವಾಗ
ಮನದಲ್ಲಿ ಸಂಕಟ ಮೂಡಿದಾಗ
ಯಾರಾಸರೆ ನನಗೇಕೆಂದು
ಮನ ದೃಢ ನಿಶ್ಚಯದಿ ಹೇಳಿತು
ಬದುಕಿನುದ್ದಕ್ಕೂ ಹೋರಾಡುವೆ,
ಮುಂದಕೆ ನಾ ಸಾಗುವೆ,
ಯಾರಾಸರೆಯ ಗೊಡವೆಯಿಲ್ಲದೆ!!
- ಡಾ. ಗಿರಿಜಾ. ಕೆ. ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ