ಸ್ವಾಮಿ ವಿವೇಕಾನಂದರು ಒಮ್ಮೆ ರಾಜಸ್ಥಾನಕ್ಕೆ ತೆರಳಿದ್ದರು. ಅವರು ಅಲ್ಲಿ ತಂಗಿದ್ದಾಗ ಜನರು ಬಂದು ಅವರನ್ನು ಹಲವಾರು ಧಾರ್ಮಿಕ ಪ್ರಶ್ನೆಗಳನ್ನು ಕೇಳತೊಡಗಿದರು. ವಿವೇಕಾನಂದರು ಸಹ ನಿದ್ರಾಹಾರಗಳನ್ನು ಮರೆತು ಜನರ ಸಂದೇಹಗಳನ್ನು ಪರಿಹರಿಸಿತೊಡಗಿದರು. ಜನರೂ ಸಹ ಅವರ ಊಟದ ಬಗ್ಗೆ ವಿಚಾರಿಸಲಿಲ್ಲ. ಮೂರನೆಯ ದಿನ ರಾತ್ರಿ ಬಡವನೊಬ್ಬ ಬಂದು “ಸ್ವಾಮಿ ನೀವು ಏನನ್ನೂ ತಿನ್ನದೆ ಮೂರು ದಿನದಿಂದ ಮಾತನಾಡುತ್ತಿರುವುದನ್ನು ಕಂಡು ನನಗೆ ದುಃಖವಾಗುತ್ತಿದೆ” ಎಂದ. ವಿವೇಕಾನಂದರು ಆ ವ್ಯಕ್ತಿಯ ಕಡೆ ತಿರುಗಿ “ನನಗೇನಾದರೂ ತಿನ್ನಲು ಕೊಡುತ್ತೀಯಾ?” ಕೇಳಿದರು. ಆಗ ಆ ವ್ಯಕ್ತಿ “ನಿಮಗೆ ಕೊಡಬೇಕೆಂಬ ಇಚ್ಛೆಯೇನೋ ಇದೆ. ಆದರೆ ನಾನು ಚಮ್ಮಾರ. ನಾನು ರೊಟ್ಟಿಗಳನ್ನು ಮುಟ್ಟಿಬಿಟ್ಟಿದ್ದೇನೆ. ನೀವು ಒಪ್ಪುವುದಾದರೆ ಹಿಟ್ಟು, ಬೇಳೆ ತರುತ್ತೇನೆ. ನೀವೇ ತಯಾರಿಸಿಕೊಳ್ಳಬಹುದು” ಎಂದ. “ನೀನು ತಯಾರಿಸಿದ ರೊಟ್ಟಿಯನ್ನೇ ತಿನ್ನುತ್ತೇನೆ ಕೊಡು” ಎಂದರು ಸ್ವಾಮೀಜಿ. ಆ ಬಡವ ಸಂತೋಷದಿಂದ ತಂದುಕೊಟ್ಟ ರೊಟ್ಟಿಯನ್ನು ಸ್ವಾಮೀಜಿ ಕೃತಜ್ಞತೆಯಿಂದ ಸೇವಿಸಿದರು. ಕೆಲವು ವ್ಯಕ್ತಿಗಳು ಇದನ್ನು ಕಂಡು ಸ್ವಾಮೀಜಿಯವರನ್ನು “ನೀವು ಕೀಳು ಜಾತಿಯ ವ್ಯಕ್ತಿಯ ಕೈಯಿಂದ ಆಹಾರ ಸ್ವೀಕರಿಸಿದ್ದೀರಿ, ಇದು ತಪ್ಪಲ್ಲವೇ?” ಎಂದು ಕೇಳಿದರು. ಆಗ ಸ್ವಾಮೀಜಿಯವರು, “ಮೂರು ದಿನಗಳಿಂದ ನೀವು ಸತತವಾಗಿ ನನ್ನನ್ನು ಮಾತಾಡುವಂತೆ ಮಾಡಿದ್ದೀರಿ. ಆದರೆ ಯಾರೂ ನನ್ನ ಆಹಾರ, ವಿಶ್ರಾಂತಿಯ ಬಗ್ಗೆ ವಿಚಾರಿಸಲಿಲ್ಲ. ನೀವು ಉನ್ನತ ವರ್ಗದವರು ಎಂದು ಹೆಮ್ಮೆ ಪಡುತ್ತೀರಿ. ಆದರೆ ಮಾನವೀಯತೆಯನ್ನು ಮೆರೆದು ನನಗೆ ಆಹಾರ ತಂದುಕೊಟ್ಟ ಈ ವ್ಯಕ್ತಿಯನ್ನು ಕೀಳು ವರ್ಗದವನು ಎನ್ನುತ್ತೀರಿ. ಇದು ನಾಚಿಕೆಗೇಡು” ಎಂದುತ್ತರಿಸಿದರು.
Pages
- ಮುಖಪುಟ
- ಜುಲೈ 2018ರ ಆವೃತ್ತಿ
- ಮಾಸಿಕ ಪತ್ರಿಕೆ
- ಏಪ್ರಿಲ್ 2019ರ ಆವೃತ್ತಿ
- Regular Columns
- ಜನವರಿ 2019ರ ಆವೃತ್ತಿ
- ಅಕ್ಟೊಬರ್ 2018 ರ ಆವೃತ್ತಿ
- ಆಗಸ್ಟ್ -ಸೆಪ್ಟೆಂಬರ್ 2018 ರ ಆವೃತ್ತಿ
- Contributors
- ಜೂನ್ 2018 ರ ಆವೃತ್ತಿ
- ಮೇ 2018 ರ ಆವೃತ್ತಿ
- ಏಪ್ರಿಲ್ 2018 ರ ಆವೃತ್ತಿ
- ಮಾರ್ಚ್ 2018 ರ ಆವೃತ್ತಿ
- ಫೆಬ್ರವರಿ 2018 ರ ಆವೃತ್ತಿ
- ಜನವರಿ 2018ರ ಆವೃತ್ತಿ
- ಡಿಸೆಂಬರ್ 2017 ರ ಆವೃತ್ತಿ
- ನವೆಂಬರ್ ೨೦೧೭ರ ಆವೃತ್ತಿ
- ಅಕ್ಟೋಬರ್ - 2017 ರ ಆವೃತ್ತಿ
- ಸೆಪ್ಟೆಂಬರ್ 2017 ಆವೃತ್ತಿ
- ಆಗಸ್ಟ್ ೨೦೧೭ ರ ಆವೃತ್ತಿ
- ಜುಲೈ ೨೦೧೭ ಆವೃತ್ತಿ
- ಮೇ - ಜೂನ್ - ೨೦೧೭ ರ ಆವೃತ್ತಿ
- ಏಪ್ರಿಲ್ ೨೦೧೭ ರ ಆವೃತ್ತಿ
- ಮಾರ್ಚ್ 2017ರ ಆವೃತ್ತಿ
- ಫ್ರೆಬ್ರವರಿ ೨೦೧೭ ಆವೃತ್ತಿ
- ಜನವರಿ ೨೦೧೭ರ ಆವೃತ್ತಿ
- ಡಿಸೆಂಬರ್ ೨೦೧೬ರ ಆವೃತ್ತಿ
- ನವೆಂಬರ್ ೨೦೧೬ರ ಆವೃತ್ತಿ
- ಅಕ್ಟೋಬರ್ ೨೦೧೬ ಆವೃತ್ತಿ
- ಸೆಪ್ಟಂಬರ್ ೨೦೧೬ ಆವೃತ್ತಿ
- ಜುಲೈ ೨೦೧೬ರ ಆವೃತ್ತಿ
- ಜೂನ್ ೨೦೧೬ ಆವೃತ್ತಿ
- ಮೇ ೨೦೧೬ ಆವೃತ್ತಿ
- ಏಪ್ರಿಲ್ ಆವೃತ್ತಿ
- ಮಾರ್ಚ್ ಆವೃತ್ತಿ
- ಫೆಬ್ರವರಿ ಆವೃತ್ತಿ
- ಬಳಪದ ಕುರಿತು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ